30.9 C
Mumbai
June 8, 2026
Mumbai News Kannada
ಮುಂಬಯಿ

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ: ನವಿ ಮುಂಬಯಿ ಶಾಖೆಯಲ್ಲಿ ದೀಪಾವಳಿಯ ಸಂಭ್ರಮಾಚರಣೆ





​​ವರದಿ: ಸೋಮನಾಥ ಎಸ್‌.ಕರ್ಕೇರ

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ನವಿ ಮುಂಬಯಿ ಶಾಖೆಯಲ್ಲಿ ತಾ 2/11/205 ರಂದು ದೀಪಾವಳಿ ಹಬ್ಬವನ್ನು ಆಚರಿಸಲಾಯ್ತು. ನ್ಯೂ ಪನ್ವೇಲ್‌ನ ಖಾಂದಾ ಕಾಲನಿಯಲ್ಲಿರುವ ಶಾಖೆಯ ಕಾರ್ಯಾಲಯದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಶಾಖೆಯ ಸದಸ್ಯರು ಹಾಗೂ ಅವರ ಕುಟುಂಬಸ್ಥರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡರು.
​ಮಹಿಳಾ ವಿಭಾಗದ ಸದಸ್ಯೆಯರಿಂದ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ನೆರೆದವರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಲಾಗಿತ್ತು. ಸ್ಪರ್ಧೆಯಲ್ಲಿ ಎಲ್ಲರೂ ಅತ್ಯುತ್ಸಾಹದಿಂದ ಭಾಗವಹಿಸಿದ್ದರು.


​ಸ್ಪರ್ಧೆಯಲ್ಲಿ ವಿಜೇತರ ಯಾದಿ ಈ ಕೆಳಗಿನಂತಿದೆ:
​ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ: ಉಷಾ ಕರ್ಕೇರ [ಪ್ರಥಮ], ಶಮ್ಮಿನ್‌ ಪುತ್ರನ್‌ [ದ್ವಿತೀಯ].
​ದೀಪಾಲಂಕಾರ ಸ್ಪರ್ಧೆ- ಶಮ್ಮಿನ್‌ ಪುತ್ರನ್‌ [ಪ್ರಥಮ], ತೇಜಸ್ವಿ ಮಲ್ಪೆ [ದ್ವಿತೀಯ].
​ಮಹಿಳೆಯರಿಗಾಗಿ ಕಸದಿಂದ ರಸ ಸ್ಪರ್ಧೆ- ಉಷಾ ಕರ್ಕೇರ [ಪ್ರಥಮ], ಶಮ್ಮಿನ್‌ ಪುತ್ರನ್‌ [ದ್ವಿತೀಯ].
​ಹುಡುಗಿಯರಿಗಾಗಿ ಕಸದಿಂದ ರಸ ಸ್ಪರ್ಧೆ -ಅದಿತಿ ಕುಂದರ್ [ಪ್ರಥಮ], ಶ್ರೀನಿಧಿ ಮೊಗವೀರ [ದ್ವಿತೀಯ].
​ಸಾಂಪ್ರದಾಯಿಕ ಉಡುಗೆ ಸ್ಪರ್ಧೆ -ಹೇಮಾ ಕೋಟ್ಯಾನ್‌ [ಪ್ರಥಮ], ಶಮ್ಮಿನ್‌ ಪುತ್ರನ್‌ [ದ್ವಿತೀಯ] ಮತ್ತು ಉಷಾ ಕರ್ಕೇರ [ತೃತೀಯ].
​ಪುರುಷರಿಗಾಗಿ ದೀಪ ಹಚ್ಚುವ ಸ್ಪರ್ಧೆ- ರತ್ನಾಕರ ಬಂಗೇರ [ಪ್ರಥಮ], ಬಾಬು ಮೊಗವೀರ [ದ್ವಿತೀಯ].
​ಕ್ವಿಜ್‌ ಸ್ಪರ್ಧೆ- ವಾಸುದೇವ ಬಂಗೇರ [ವಿಜೇತರು].


​ತದನಂತರ ಜರಗಿದ ಸಭಾ ಕಾರ್ಯಕ್ರದಲ್ಲಿ ಶಾಖೆಯ ಕಾರ್ಯದರ್ಶಿ ಶೇಖರ ಮೈಂದನ್‌ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಸಲಹೆಗಾರರಾದ ಸಿದ್ದಾರ್ಥ ಕೋಟ್ಯಾನ್‌ ಮಾತನಾಡುತ್ತಾ ಸ್ಪರ್ಧೆಗಳಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ. ಬಹುಮಾನ ಗಳಿಸುವುದೊಂದೇ ಸ್ಪರ್ಧೆಯ ಉದ್ದೇಶವಾಗಿರಬಾರದು. ಅದರಲ್ಲಿ ಭಾಗವಹಿಸುವುದು ಮುಖ್ಯ ಎಂದರು. ಅವರು ಮುಂದುವರಿಯುತ್ತಾ ಇಂದು ನಡೆದ ಬೇರೆ ಬೇರೆ ಸ್ಪರ್ಧೆಗಳಲ್ಲಿ ಸದಸ್ಯರು ಮತ್ತು ಅವರ ಕುಟುಂಬಸ್ಥರು ತೋರಿಸಿದ ಉತ್ಸಾಹವನ್ನು ನೋಡಿ ತುಂಬಾ ಆನಂದವಾಗಿದೆ ಎಂದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಾನಕಿ ಬಂಗೇರರು ಸ್ಪರ್ಧೆಯಲ್ಲಿ ಸದಸ್ಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ ಸಲುವಾಗಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ಶಾಖೆಯ ವತಿಯಿಂದ ಸಮಯ ಸಮಯಕ್ಕೆ ಜರಗಿಸಲಾಗುತ್ತಿರುವ ವಿವಿಧ ಕಾರ್ಯಕ್ರಮಗಳಲ್ಲಿ ಸದ;ಸ್ಯರು ಇದೇ ರೀತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿಕೊಂಡರು.
​ವಿಜೇತರಿಗೆ ಬಳಿಕ ಬಹುಮಾನಗಳನ್ನು ವಿತರಿಸಲಾಯ್ತು. ಶಾಖೆಯ ಜೊತೆ ಕಾರ್ಯದರ್ಶಿ ತೇಜಸ್ವಿ ಮಲ್ಪೆ ಕಾರ್ಯಕ್ರಮವನ್ನು ನಿರ್ವಹಿಸಿ ಕೊನೆಯಲ್ಲಿ ವಂದನಾರ್ಪಣೆಗೈದರು. ಲಘು ಉಪಾಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

​ವರದಿ: ಸೋಮನಾಥ ಎಸ್‌.ಕರ್ಕೇರ, ಫೋನ್‌: 9818321186



Related posts

ಬಂಟರ ಸಂಘ ಮುಂಬಯಿ ; ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿ ಯುವ ವಿಭಾಗದ ವತಿಯಿಂದ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ

Mumbai News Desk

ಚಿತ್ರಾಪು ಬಿಲ್ಲವರ ಸಂಘ ಮುಂಬಯಿಯ 80ನೇ ವಾರ್ಷಿಕ ಮಹಾಸಭೆ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟ ದ ಸಮಾಜ ಕಲ್ಯಾಣ ಸಹಾಯಹಸ್ತ

Mumbai News Desk

ಮರಾಠ ಕೋಟಾ ಬೇಡಿಕೆಗೆ ಸರ್ಕಾರದ ಒಪ್ಪಿಗೆ, ಪ್ರತಿಭಟನೆ ಅಂತ್ಯ

Mumbai News Desk

ಶ್ರೀನಿವಾಸ ಜೋಕಟ್ಟೆ ಮತ್ತು ಅನಿತಾ ತಾಕೊಡೆ ಅವರ ನಾಲ್ಕು ಕೃತಿಗಳ ಲೋಕಾರ್ಪಣೆ: ಜಯಲಕ್ಷ್ಮಿ ಜೋಕಟ್ಟೆಯವರ ನೆನಪಿನಲ್ಲಿ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭ

Mumbai News Desk

ಬಂಟರ ಸಂಘ, ಮುಂಬಯಿ: ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ: ಮಾತಾ ಕಿ ಚೌಕಿ ಭಕ್ತಿ ಪ್ರಧಾನ ಕಾರ್ಯಕ್ರಮ

Mumbai News Desk