32 C
Mumbai
March 7, 2026
Mumbai News Kannada
ಪ್ರಕಟಣೆ

ನ.21 ರಂದು ಬಿಲ್ಲವರ ಅಸೋಸಿಯೇಷನ್, ಮುಂಬಯಿ – ಕಲ್ವಾ ಸ್ಥಳೀಯ ಕಛೇರಿಯ ರಜತ ಮಹೋತ್ಸವದ ಸಂಭ್ರಮ





​ ​’ಒಂದೇ ಜಾತಿ, ಒಂದೇ ಮತ ಹಾಗೂ ಒಂದೇ ದೇವರು’ ಎಂಬ ಸತ್ಯ ಸೂತ್ರವನ್ನು ಜಗತ್ತಿಗೆ ಸಾರಿದ ಜಗದ್ಗುರು ಶ್ರೀ ನಾರಾಯಣ ಗುರುಗಳ ತತ್ವಾದರ್ಶ ಹಾಗೂ “ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ” ಎನ್ನುವ ಮಹಾಸಂದೇಶವನ್ನು ಜೀವನಾದರ್ಶವಾಗಿರಿಸಿಕೊಂಡು, ಉದರ ಪೋಷಣೆಗಾಗಿ ಹೊರನಾಡು ಸೇರಿದ ನಮ್ಮ ಸಮಾಜದ ಹಿರಿಯರು ಸ್ಥಾಪಿಸಿದ ಮಹಾನ್ ಸಂಘಟನೆ, ಬಿಲ್ಲವರ ಎಸೋಸಿಯೇಶನ್ ಮುಂಬಯಿ, ಇದೀಗ ಶತಮಾನದತ್ತ ಹೆಜ್ಜೆ ಹಾಕುತ್ತಿದೆ.
​93 ವರುಷಗಳ ಸುದೀರ್ಘ ಇತಿಹಾಸದೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ನಿರತವಾಗಿರುವ ಈ ಸಂಘಟನೆಯು, ಪ್ರಾತಃಸ್ಮರಣೀಯರಾದ ಸ್ಥಾಪಕ ಅಧ್ಯಕ್ಷ ಎಮ್ ಅಪ್ಪಣ್ಣ ಅವರ ದ್ಯೋತಕವಾಗಿ, 1933ರಲ್ಲಿ ಶ್ರೀ ಗೋಕರ್ಣನಾಥ ಕ್ಷೇತ್ರ ಸಮಿತಿ, ಬಿಲ್ಲವ ಹಿತವರ್ಧಕ ಸಂಘ, ಬಿಲ್ಲವರ ಯೂತ್ ಲೀಗ್ ಮತ್ತು ಬಾರ್ಕೂರು ಬಿಲ್ಲವ ಚಾರಿಟಿ ಸಂಘ – ಹೀಗೆ ನಾಲ್ಕು ಸಂಘಗಳನ್ನು ಯಶಸ್ವಿಯಾಗಿ ಒಗ್ಗೂಡಿಸಿ ಸ್ಥಾಪನೆಗೊಂಡಿತು.

​🔱 ಸಂಘಟನೆಯ ವಿಸ್ತಾರ ಮತ್ತು ಪ್ರಗತಿ ಪರ್ವ 🔱
​ಬಿಲ್ಲವ ಸಮಾಜದ ಏಳಿಗೆಗಾಗಿ ಹಲವಾರು ಪ್ರಗತಿಪರ ಯೋಜನೆಗಳನ್ನು ಹಾಕಿಕೊಂಡು ಸ್ಥಾಪನೆಗೊಂಡ ಬಿಲ್ಲವರ ಎಸೋಸಿಯೇಶನ್ ಮುಂಬಯಿ, ದಿ. ಜಯ ಸಿ. ಸುವರ್ಣರಂತಹ ಮಹನೀಯರ ನೇತೃತ್ವದಲ್ಲಿ ವಧು-ವರರ ಹೊಂದಾಣಿಕೆ, ಕ್ರೀಡೆಗೆ ಪ್ರೋತ್ಸಾಹ ಸೇರಿದಂತೆ ಹತ್ತು-ಹಲವು ಚಟುವಟಿಕೆಗಳನ್ನು ಕಾರ್ಯಗತಗೊಳಿಸಿ, ಪ್ರತಿಯೊಬ್ಬ ಸಮಾಜ ಬಾಂಧವರಿಗೂ ಇದರ ಪ್ರಯೋಜನ ದೊರೆಯುವಂತಾಗಲು ಅಲ್ಲಲ್ಲಿ 22 ಸ್ಥಳೀಯ ಕಛೇರಿಗಳನ್ನು ಸ್ಥಾಪಿಸಿ, ಆ ಮುಖೇನ ಪ್ರಗತಿಯನ್ನು ಸಾಧಿಸಿದೆ.
​ಈ ನಿಟ್ಟಿನಲ್ಲಿ, 1992ರಲ್ಲಿ ಕಲ್ವಾ ಸ್ಥಳೀಯ ಕಛೇರಿ ರಚನೆಯಾಗಲು ಸಾಕ್ಷಿಯಾಯಿತು. 1992ರಲ್ಲಿ ದಿ. ಜಯ ಸಿ. ಸುವರ್ಣರ ನೇತೃತ್ವದಲ್ಲಿ ಹಾಗೂ ದಿ. ರವಿ ಆರ್. ಅಂಚನ್‌ರವರ ಮಹತ್ವಾಕಾಂಕ್ಷೆಯ ಯೋಜನೆಯಾದ ಬಿಲ್ಲವರ ಜನಗಣತಿಗಾಗಿ ಡೊಂಬಿವಲಿ ಸ್ಥಳೀಯ ಸಮಿತಿಯ ಕಾರ್ಯಕರ್ತರು ಕಲ್ವಾ ಪರಿಸರಕ್ಕೆ ಭೇಟಿ ನೀಡಿದ ಕಾರಣದಿಂದ, ಆರಂಭದಲ್ಲಿ ಕಲ್ವಾ ಪರಿಸರದ ಗಣ್ಯರಾದ ದಿ. ಶೇಖರ್ ಅಮಿನ್, ದಿ. ಮಾಧವ ಕೋಟ್ಯಾನ್, ಭೋಜ ಸಿ. ಅಮಿನ್, ರಾಮಕೃಷ್ಣ ಅಮಿನ್, ಕೃಷ್ಣ ಆರ್. ಪೂಜಾರಿ ಮುಂತಾದ ಕೆಲವು ಬಿಲ್ಲವರು ಬಿ ಸಿ ಅಮೀನ್, ಕೆ. ಆರ್ ಪೂಜಾರಿಯವರ ನೇತೃತ್ವದಲ್ಲಿ ಡೊಂಬಿವಲಿ ಸ್ಥಳೀಯ ಕಛೇರಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.
​ಸುಮಾರು 8 ವರ್ಷ ಡೊಂಬಿವಲಿ ಸ್ಥಳೀಯ ಸಮಿತಿಯೊಂದಿಗೆ ದುಡಿದು, 2001ರಲ್ಲಿ ದಿ. ಶೇಖರ್ ಅಮಿನ್ ಅವರ ಮುಂದಾಳುತ್ವದಲ್ಲಿ ಕಲ್ವಾದ ಬಿಲ್ಲವರಿಗೆ ತಮ್ಮದೇ ಆದ ಕಛೇರಿ ಇರಬೇಕೆಂಬ ಮಹದಾಸೆಯನ್ನು ಕೇಂದ್ರ ಕಛೇರಿಯ ಮುಂದಿಟ್ಟರು. ಅಂದಿನ ಅಧ್ಯಕ್ಷರಾದ ಜಯ ಸಿ. ಸುವರ್ಣ ಅವರು ಮನವಿಯನ್ನು ಮಂಜೂರಾತಿ ಮಾಡಿ, ಯೋಗ್ಯ ಸ್ಥಳ ಕಂಡು ಬಂದಲ್ಲಿ ಸ್ಥಳೀಯ ಕಛೇರಿಯನ್ನು ಸ್ಥಾಪಿಸುವುದಾಗಿ ಭರವಸೆ ಇತ್ತು, ದಿ. ಸಿ. ಟಿ. ಸಾಲ್ಯಾನ್ ಅವರನ್ನು ನಿರೀಕ್ಷಕರನ್ನಾಗಿ ನೇಮಿಸಿದರು. ಈ ಪ್ರಸಂಗದಲ್ಲಿ ರವಿ ಸನಿಲ್ ಅವರ ಶ್ರಮ ಸ್ಮರಣೀಯ.
​ಪ್ರಥಮವಾಗಿ ಕಲ್ವಾ ವಿವೇಕಾನಂದ ಅಕಾಡೆಮಿಯಲ್ಲಿ ಕಲ್ವಾ ಬಿಲ್ಲವ ಬಳಗದ ಕಾರ್ಯಕ್ರಮವು ಜರುಗುತ್ತಿತ್ತು. ನಂತರ ನಿರ್ದಿಷ್ಟ ಸ್ಥಳದ ಅವಶ್ಯಕತೆ ಇದ್ದು, 2001ನೇ ಇಸವಿ ಸೆಪ್ಟೆಂಬರ್ 3೦ರಂದು  ಪ್ರೇಮ್ ಕುಟೀರ್ ಸೊಸೈಟಿಯ ಒಂದು ಕೊಠಡಿಯನ್ನು ಖರೀದಿಸಿ, ಅಂದಿನ ಬಿಲ್ಲವರ ಎಸೋಸಿಯೇಶನ್ ಅಧ್ಯಕ್ಷ ಜಯ ಸಿ. ಸುವರ್ಣರವರ ನೇತೃತ್ವದಲ್ಲಿ ಕಲ್ವಾ ಸ್ಥಳೀಯ ಕಛೇರಿಯನ್ನು ಉದ್ಘಾಟಿಸಲಾಯಿತು.
​ಗತಕಾಲದ ಕಾರ್ಯಾಧ್ಯಕ್ಷರುಗಳು: 1996-2009ರ ಅವಧಿಯಲ್ಲಿ ದಿ. ಶೇಖರ್ ಎಸ್. ಅಮಿನ್, 2009-2015 ಅವಧಿಯಲ್ಲಿ ದಯಾನಂದ್ ಆರ್. ಪೂಜಾರಿ, 2015-2024ರ ಅವಧಿಯಲ್ಲಿ ನಾರಾಯಣ್ ಎಲ್. ಸುವರ್ಣ.
​ಗತಕಾಲದ ಕಾರ್ಯದರ್ಶಿಗಳು: 1996-2008ರ ಅವಧಿಯಲ್ಲಿ ಮಾಧವ ಕೋಟ್ಯಾನ್, 2008-2015ರ ಅವಧಿಯಲ್ಲಿ ಕೆ. ಆರ್. ಪೂಜಾರಿ, 2015-2024ರ ಅವಧಿಯಲ್ಲಿ ಭಾಸ್ಕರ್ ಜಿ ಪೂಜಾರಿ. ಪ್ರಸ್ತುತ ಕಾರ್ಯಾಧ್ಯಕ್ಷರಾಗಿ ಹರೀಶ್ ಡಿ ಸಾಲ್ಯಾನ್ ಬಜಗೋಳಿ, ಕಾರ್ಯದರ್ಶಿಯಾಗಿ ಮಮತಾ ಎಮ್ ಅಮೀನ್ ಸೇವೆ ಸಲ್ಲಿಸುತ್ತಿದ್ದಾರೆ.

​ಸಮಾಜಮುಖಿ ಚಿಂತನೆಯೊಂದಿಗೆ, ಪ್ರಸ್ತುತ ಅಧ್ಯಕ್ಷರಾಗಿರುವ ಹರೀಶ್ ಜಿ. ಅಮಿನ್ ಅವರು ಸಂಘಟನೆಯ ಕೀರ್ತಿಯನ್ನು ಬೆಳಗಿಸುವಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇದೀಗ ಕಲ್ವಾ ಸ್ಥಳೀಯ ಕಛೇರಿ 
ತನ್ನ 25ನೇ ಸಂವತ್ಸರದ ಹೆಜ್ಜೆ ಗುರುತುಗಳನ್ನು ಪೂರೈಸಿ ರಜತ ಮಹೋತ್ಸವದ ಸಡಗರದಲ್ಲಿದೆ.

​✨ ಹರೀಶ್ ಡಿ. ಸಾಲ್ಯಾನ್ ಬಜಗೋಳಿ: ಆದರ್ಶಪ್ರಾಯ ವ್ಯಕ್ತಿತ್ವ
​ರಜತ ಮಹೋತ್ಸವ ಸಂಭ್ರಮದ ಕಾರ್ಯಾಧ್ಯಕ್ಷರಾಗಿರುವ ಹರೀಶ್ ಡಿ. ಸಾಲ್ಯಾನ್ ಬಜಗೋಳಿ ಅವರು ಮೂಲತಃ ಉಡುಪಿ ಜಿಲ್ಲೆಯ ಮುಳಿಕಾರು ನೂರಾಲ್ ಬೆಟ್ಟು ದೇಜಪ್ಪ ಪೂಜಾರಿ ಮತ್ತು ಮಾಳ ಪೊಲ್ಲಡ್ಕ ಜೋಗಮ್ಮ ಪೂಜಾರಿ ದಂಪತಿಯ ಪುತ್ರ. “ಬೀಳುವುದು ಬದುಕಲ್ಲ, ಏಳುವುದು ಬದುಕು… ಅಳೆಯುವುದು ಬದುಕಲ್ಲ, ಉಳಿಯುವುದು ಬದುಕು” ಎನ್ನುವಂತೆ, ಛಲದ ಒಲದಿಂದ ಸಾಧನೆಯ ಶಿಖರವನ್ನೇರಿದ ಇವರು, ಕೇವಲ 6 ವರ್ಷಗಳಲ್ಲಿ ತಮ್ಮ ಸ್ವಂತ ಉದ್ಯಮ ಹೋಟೆಲ್ ಸಾಯಿನಾಥ್ ಅನ್ನು ಆರಂಭಿಸಿ ಯಶಸ್ಸಿನ ಮೆಟ್ಟಲೇರಿದ್ದಾರೆ.
​ಇವರು, ಘೋಡ್ ಬಂದರ್ ಕನ್ನಡ ಅಸೋಸಿಯೇಷನ್ ನ ಅಧ್ಯಕ್ಷರಾಗಿ, ಘೋಡ್ ಬಂದರ್ ಅಯ್ಯಪ್ಪ ಸಮಿತಿಯಲ್ಲಿ ಉಸ್ತುವಾರಿಯಾಗಿ ನವೋದಯ ಕನ್ನಡ ಸೇವಾ ಸಂಘ ಥಾಣೆಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ 2 ಬಾರಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ‘ಚಿಣ್ಣರ ಬಿಂಬ’ದ ಸಕ್ರಿಯ ಸದಸ್ಯರಾಗಿ, ಕಿಸನ್ ನಗರ ಅಯ್ಯಪ್ಪ ಸೇವಾ ಸಮಿತಿಯಲ್ಲಿ ಸ್ಥಾಪಕ ಸದಸ್ಯರಾಗಿ 25 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ, ಶ್ರೀ ಗೆಜ್ಜೆ ಗಿರಿ ಕ್ಷೇತ್ರದ ಕೋಶಾಧಿಕಾರಿಯಾಗಿ, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಮಾಜಿ ಉಪಾಧ್ಯಕ್ಷರಾಗಿ, ಬಜಗೋಳಿ ಬಿಲ್ಲವ ಸಂಘದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಸ್ಥಾಪಕರಾಗಿ ಪ್ರಸ್ತುತ ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ನ ನಿರ್ದೇಶಕರಾಗಿ ನೇಮಕಗೊಂಡಿರುವುದು ಇವರ ನಿಸ್ವಾರ್ಥ ಸಮಾಜ ಸೇವೆಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ರಂಗ ಕಲಾವಿದರಾಗಿಯೂ ಗುರುತಿಸಿಕೊಂಡಿರುವ ಇವರು, ನಾರಾಯಣ ಗುರುಗಳ ತತ್ವವನ್ನು ಜೀವನದಲ್ಲಿ ಪರಿಪಾಲಿಸುತ್ತಾ, ಪ್ರೀತಿ-ಸಹಬಾಳ್ವೆಯೊಂದಿಗೆ ದೀನರ ಕಷ್ಟ-ಕಾರ್ಪಣ್ಯಕ್ಕೆ ಸದಾ ಸ್ಪಂದಿಸುತ್ತಾ ಬಂದಿದ್ದಾರೆ. ಇವರ ಧರ್ಮಪತ್ನಿ ಪ್ರವೀಣಾ ಮತ್ತು ಪುತ್ರರಾದ ನಿಖಿಲ್ ಹಾಗೂ ಸಾಯಿ ನಿಶಾಂತ್ ಅವರೊಂದಿಗಿನ ಸಂತ್ರಪ್ತ ಜೀವನ ಹಸನಾಗಲಿ .

ಥಾಣೆಯ ಗಡ್ಕರಿ ಸಭಾಗೃಹದಲ್ಲಿ ಜಾನಪದ ನೃತ್ಯ ಸ್ಪರ್ಧೆ, ಆದರ್ಶ ದಂಪತಿ ಸ್ಪರ್ಧೆ ಹಾಗೂ ಚಾರಿತ್ರಿಕ ಕನ್ನಡ ನಾಟಕ ‘ಛತ್ರಪತಿ ಶಿವಾಜಿ’ ಪ್ರದರ್ಶನ –
:
​ ಬಿಲ್ಲವ ಸಮುದಾಯದ ಪ್ರಮುಖ ಸಂಘಟನೆಯಾದ ದಿ ಬಿಲ್ಲವರ ಅಸೋಸಿಯೇಷನ್, ಮುಂಬಯಿ ಅದರ ಕಲ್ವಾ ಸ್ಥಳೀಯ ಕಛೇರಿಯ ವತಿಯಿಂದ,  25ನೇ ವಾರ್ಷಿಕೋತ್ಸವ ಸಮಾರಂಭವನ್ನು ಥಾಣೆಯ ಶ್ರೀ ರಾಮ್ ಗಣೇಶ್ ಗಡ್ಕರಿ ರಂಗಾಯತನ ಸಭಾಂಗಣದಲ್ಲಿ 21-11-2025 ರ ಶುಕ್ರವಾರದಂದು ಅದ್ದೂರಿಯಾಗಿ ಆಯೋಜಿಸಲಾಗಿದೆ.
​ಬೆಳಿಗ್ಗೆ 9.೦೦ ರಿಂದ ರಾತ್ರಿ 8.೦೦ ರವರೆಗೆ ದಿನವಿಡೀ ವಿವಿಧ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಗಣ್ಯರು ಪಾಲ್ಗೊಳ್ಳುವ ಮೂಲಕ ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿವೆ.

​ಕಾರ್ಯಕ್ರಮವು ಬೆಳಿಗ್ಗೆ 9.೦೦ ಗಂಟೆಗೆ ಕೇಂದ್ರ ಕಛೇರಿ ಹಾಗೂ ಸ್ಥಳೀಯ ಕಛೇರಿಗಳ ಅರ್ಚಕರಿಂದ ದೀಪ ಪ್ರಜ್ವಲನೆಯೊಂದಿಗೆ ಶುಭಾರಂಭಗೊಳ್ಳಲಿದೆ. ದಿನವಿಡೀ ವೈವಿಧ್ಯಮಯ ಮನರಂಜನಾ ಸ್ಪರ್ಧೆಗಳು ನಡೆಯಲಿದ್ದು, ಇದರಲ್ಲಿ 12 ತಂಡಗಳು ಪಾಲ್ಗೊಳ್ಳುವ ಭಾರತೀಯ ಸಾಂಸ್ಕೃತಿಕ ಜಾನಪದ ನೃತ್ಯ ಸ್ಪರ್ಧೆ ಮತ್ತು 8 ಜೋಡಿಗಳು ಪಾಲ್ಗೊಳ್ಳುವ ಆದರ್ಶ ದಂಪತಿ/ಉತ್ತಮ ದಂಪತಿ ಸ್ಪರ್ಧೆ ಪ್ರಮುಖ ಆಕರ್ಷಣೆಯಾಗಿವೆ.

​ಸಂಜೆ 3.೦೦ ಗಂಟೆಯಿಂದ  ಐತಿಹಾಸಿಕ ಕನ್ನಡ ನಾಟಕವಾದ “ಛತ್ರಪತಿ ಶಿವಾಜಿ ಮಹಾರಾಜ್” ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ಖ್ಯಾತ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಅವರು ನಿರ್ದೇಶಿಸಿದ್ದಾರೆ. ಮದ್ಯಾಹ್ನ ಮತ್ತು ರಾತ್ರಿ ಎಲ್ಲರಿಗೂ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿದೆ.

​ಕಾರ್ಯಕ್ರಮಕ್ಕೆ ದಿ ಬಿಲ್ಲವರ ಅಸೋಸಿಯೇಷನ್, ಮುಂಬಯಿಯ ಅಧ್ಯಕ್ಷರಾದ ಶ್ರೀ ಹರೀಶ್ ಜಿ. ಅಮಿನ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
​ಮುಖ್ಯ ಅತಿಥಿಗಳಾಗಿ ವೀನಸ್ ಗ್ರೂಪ್, ಪುಣೆ, ಸಿಎಂಡಿ ಹಾಗೂ ರೋಟರಿ ಕ್ಲಬ್, ಪಿಂಪ್ರಿ ಪುಣೆ ಇದರ ಮಾಜಿ ಅಧ್ಯಕ್ಷರಾದ ಶ್ರೀ ಎಂ. ಸದಾನಂದ ನಾಯಕ್ ಅವರು ಆಗಮಿಸಲಿದ್ದಾರೆ.
​ಗೌರವ ಅತಿಥಿಗಳಾಗಿ:
​ಶ್ರೀ ವರದ ಉಲ್ಲಾಳ (ಮಾಜಿ ಅಧ್ಯಕ್ಷರು, ದಿ ಬಿಲ್ಲವರ ಅಸೋಸಿಯೇಷನ್ ಮುಂಬಯಿ; ಸಂಸ್ಥಾಪಕ ಅಧ್ಯಕ್ಷರು, ದಿ ಭಾರತ್ ಬ್ಯಾಂಕ್ (ಮುಂಬಯಿ) ಲಿ.)
​ಶ್ರೀ ಕಡಂದಲೆ ಸುರೇಶ್ ಭಂಡಾರಿ (ಉದ್ಯಮಿ, ಸಮಾಜ ಸೇವಕರು)
​ಪಂಡಿತ್ ನವೀನ್‌ಚಂದ್ರ ಸನಿಲ್ (ವಾಸ್ತು ಮಾರ್ತಾಂಡ, ವಾಸ್ತು ಸಲಹೆಗಾರರು)
​ಶ್ರೀ ರಾಜೇಶ್ ಪೂಜಾರಿ (ಎಂಡಿ ಪೂಜಾರಿ ಟ್ರಾವೆಲ್ಸ್)
​ಶ್ರೀ ದಯಾನಂದ ಎಸ್. ಶೆಟ್ಟಿ, ಯೆಳತ್ತೂರು ಗುತ್ತ್ತು (ಅಧ್ಯಕ್ಷರು, ನವೋದಯ ಇಂಗ್ಲಿಷ್ ಹೈಸ್ಕೂಲ್ ಮತ್ತು ಜೂನಿ. ಕಾಲೇಜು, ಥಾಣೆ)
​ಶ್ರೀ ಜಯರಾಮ್ ಪೂಜಾರಿ (ಅಧ್ಯಕ್ಷರು, ಶ್ರೀ ಅಯ್ಯಪ್ಪ ಸೇವಾ ಸಮಿತಿ, ಕಿಸಾನ್ ನಗರ, ಥಾಣೆ)
​ಶ್ರೀ ಮಹೇಶ್ ಆರ್. ಕರ್ಕೇರ (ಪ್ರಧಾನ ಕಾರ್ಯದರ್ಶಿ, ಕೆಮಿಕಲ್ ಮತ್ತು ಇಂಜಿನಿಯರಿಂಗ್ ವರ್ಕರ್ಸ್ ಅಸೋಸಿಯೇಷನ್)
​ಶ್ರೀ ಕುಶಲ್ ಸಿ. ಭಂಡಾರಿ (ಥಾಣೆ ಬಂಟ್ಸ್ ಸಂಘದ ಮಾಜಿ ಅಧ್ಯಕ್ಷರು, ಉದ್ಯಮಿ, ಸಮಾಜ ಸೇವಕರು)
​ಶ್ರೀ ಶೇಖರ್ ಕೆ. ಶೆಟ್ಟಿ (ಅಧ್ಯಕ್ಷರು, ಕನ್ನಡ ಸಂಘ, ವರ್ತಕ್ ನಗರ)
​ಶ್ರೀ ಚಂದ್ರಶೇಖರ್ ವಿ. ಶೆಟ್ಟಿ (ಅಧ್ಯಕ್ಷರು, ಘೋಡ್‌ಬಂದರ್ ಕನ್ನಡ ಅಸೋಸಿಯೇಷನ್)
​ಶ್ರೀ ಲಕ್ಷ್ಮಣ್ ಆರ್. ಮಾಣಿಯಾಣಿ (ಉದ್ಯಮಿ & ಸಮಾಜ ಸೇವಕರು)
​ಶ್ರೀ ಜಯ ಕೆ. ಪೂಜಾರಿ (ಉದ್ಯಮಿ & ಸಮಾಜ ಸೇವಕರು)
​ಶ್ರೀ ಮಹೇಶ್ ಶೆಟ್ಟಿ, ತೆಲ್ಲಾರ್ (ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರು)
​ಶ್ರೀ ಪೋಲ್ಯ ಉಮೇಶ್ ಡಿ. ಶೆಟ್ಟಿ (ಅಧ್ಯಕ್ಷರು, ಥಾಣೆ ಹೋಟೆಲ್ ಮಾಲೀಕರ ಸಂಘ)
​ಶ್ರೀ ವಿಶ್ವನಾಥ್ ಪೂಜಾರಿ, ಕಡತಲ (ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ, ಪುಣೆ & ಸಮಾಜ ಸೇವಕರು)
​ಶ್ರೀ ಗಂಗಾಧರ ಅಮಿನ್ (ಮಾಲೀಕರು, “ಕೊಂಕಣ್ ಸ್ವಾದ್” ಗ್ರೂಪ್ ಆಫ್ ಹೋಟೆಲ್ಸ್, ಗೋರೆಗಾಂವ್)

ಸಚಿವರು, ಶಾಸಕರು ಮತ್ತು ಗಣ್ಯ ರಾಜಕಾರಣಿಗಳ ಉಪಸ್ಥಿತಿ
​ಕಾರ್ಯಕ್ರಮಕ್ಕೆ ಮಹಾರಾಷ್ಟ್ರ ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ಹಲವು ಗಣ್ಯರು ಗೌರವಾನ್ವಿತ ಅತಿಥಿಗಳಾಗಿ ಆಗಮಿಸಲಿದ್ದಾರೆ:
​ಶ್ರೀ ಏಕನಾಥ್ ಸಂಭಾಜಿ ಶಿಂದೆ (ಉಪ ಮುಖ್ಯಮಂತ್ರಿ, ಮಹಾರಾಷ್ಟ್ರ ರಾಜ್ಯ)
​ಶ್ರೀ ಪ್ರತಾಪ್ ಬಾಬುರಾವ್ ಸರ್ನಾಯಕ್ (ಸಾರಿಗೆ ಸಚಿವರು, ಎಂಎಸ್‌ಆರ್‌ಟಿಸಿ ಅಧ್ಯಕ್ಷರು)
​ಡಾ. ಶ್ರೀಕಾಂತ್ ಏಕನಾಥ್ ಶಿಂದೆ (ಸಂಸದರು)
​ಶ್ರೀ ನರೇಶ್ ಗಣಪತ್ ಮ್ಹಾಸ್ಕೆ (ಶಾಸಕರು & ಥಾಣೆಯ ಮಾಜಿ ಮಹಾಪೌರರು)
​ಶ್ರೀ ಜಿತೇಂದ್ರ ಸತೀಶ್ ಅವ್ಹಾಡ್ (ಶಾಸಕರು, ಮಾಜಿ ವಸತಿ ಸಚಿವರು, ಮಹಾರಾಷ್ಟ್ರ ರಾಜ್ಯ)
​ಶ್ರೀ ಸಂಜಯ್ ಮುಕುಂದ್ ಕೇಳ್ಕರ್ (ಶಾಸಕರು, ಮಹಾರಾಷ್ಟ್ರ ರಾಜ್ಯ)
​ಶ್ರೀ ಸುನೀಲ್ ಕುಮಾರ್ ಕರ್ಕಳ (ಶಾಸಕರು, ಕಾರ್ಕಳ & ಮಾಜಿ ಗೌರವಾನ್ವಿತ ಸಚಿವರು)
​ಶ್ರೀ ಮಿಲಿಂದ್ ಲಕ್ಷ್ಮೀಕಾಂತ್ ಪಾಟೀಲ್ (ಮಾಜಿ ಕಾರ್ಪೊರೇಟರ್, ವಿರೋಧ ಪಕ್ಷದ ನಾಯಕರು)
​ಶ್ರೀ ನಜೀಬ್ ಮುಲ್ಲಾ (ಕಾರ್ಪೊರೇಟರ್ ಟಿಎಂಸಿ, ಮಾಜಿ ಅಧ್ಯಕ್ಷರು, ಕೊಂಕಣ್ ಮರ್ಕೆಂಟೈಲ್ ಕೋ-ಆಪ್. ಬ್ಯಾಂಕ್ ಲಿ.)
​ಶ್ರೀ ಸಂದೀಪ್ ಲೇಲೆ (ಜಿಲ್ಲಾಧ್ಯಕ್ಷರು, ಥಾಣೆ)
​ಶ್ರೀಮತಿ ಪ್ರಮೀಳಾ ಮುಕುಂದ್ ಕೇಣಿ (ಮಾಜಿ ಕಾರ್ಪೊರೇಟರ್)
​ಶ್ರೀ ಮಂದಾರ್ ಮುಕುಂದ್ ಕೇಣಿ (ಎಂಡಿ ಮಂದಾರ್ ಕನ್ಸ್ಟ್ರಕ್ಷನ್)
​ಶ್ರೀ ರವೀಂದ್ರ ದತ್ತಾತ್ರೇಯ ಚೌಹಾಣ್ (ಮಾಜಿ ಕ್ಯಾಬಿನೆಟ್ ಸಚಿವರು, ಶಾಸಕರು)
​ಶ್ರೀಮತಿ ಅಪರ್ಣಾ ಸಾಳ್ವಿ (ಮಾಜಿ ಕಾರ್ಪೊರೇಟರ್ ಟಿಎಂಸಿ)
​ಶ್ರೀ ಮನೋಜ್ ಲಾಸೆ (ಮಾಜಿ ಉಪ ಮಹಾಪೌರ ಟಿಎಂಸಿ)
​ಶ್ರೀ ಉಮೇಶ್ ಪಾಟೀಲ್ (ಮಾಜಿ ಕಾರ್ಪೊರೇಟರ್ ಟಿಎಂಸಿ)
​ಶ್ರೀ ಗಣೇಶ್ ಸಾಳ್ವಿ (ಮಾಜಿ ಉಪ ಮಹಾಪೌರ ಟಿಎಂಸಿ)
​ಅಡ್ವ. ಮನೋಜ್ ಸತ್ಪುತೆ (ನೋಟರಿ, ಭಾರತ ಸರ್ಕಾರ)

​ ಸಾಧಕರಿಗೆ ಸನ್ಮಾನ
​ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುವುದು:
​ಡಾ. ರಾಜಶೇಖರ್ ಕೋಟ್ಯಾನ್ (ಮಾಜಿ ಅಧ್ಯಕ್ಷರು, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ, ಸಮಾಜ ಸೇವಕರು, ಚಲನಚಿತ್ರ ನಟರು, ನಿರ್ಮಾಪಕರು, ನಿರ್ದೇಶಕರು)
​ಶ್ರೀ ಎನ್. ಟಿ. ಪೂಜಾರಿ (ಅಧ್ಯಕ್ಷರು, ಬಿಸಿಸಿಐ, ಉದ್ಯಮಿ)
​ಶ್ರೀಮತಿ ಮೀನಾಕ್ಷಿ ರಾಜೇಂದ್ರ ಶಿಂದೆ (ಥಾಣೆ ಮಹಾನಗರ ಪಾಲಿಕೆಯ ಮಾಜಿ ಮಹಾಪೌರರು, ಸಮಾಜ ಸೇವಕರು)
​ಶ್ರೀ ಗಣೇಶ್ ಪೂಜಾರಿ (ಎಂಡಿ ಏಷಿಯಾಟಿಕ್ ಕ್ರೇನ್ ಸರ್ವಿಸಸ್, ಥಾಣೆ)
​ಶ್ರೀಮತಿ ಪ್ರತಿಭಾ ಕುಳಾಯಿ (ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರು, ಮಾಜಿ ಕಾರ್ಪೊರೇಟರ್ ಮಂಗಳೂರು, ಕೆಪಿಸಿಸಿ ಸಹ ಸಂಯೋಜಕರು)

​ಸಮಾಜದ ಬಂಧು-ಬಾಂಧವರು, ಹಿತೈಷಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ದಿ ಬಿಲ್ಲವರ ಅಸೋಸಿಯೇಷನ್, ಮುಂಬಯಿಯ ಗೌರವ ಅಧ್ಯಕ್ಷರಾದ ಶ್ರೀ ಎಲ್.ವಿ. ಅಮಿನ್, ಉಪಾಧ್ಯಕ್ಷ ಶ್ರೀ ಪುರುಷೋತ್ತಮ್ ಎಸ್. ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಹರೀಶ್ ಜಿ. ಸಾಲಿಯಾನ್, ಗೌರವ ಪ್ರಧಾನ ಖಜಾಂಚಿ ಶ್ರೀ ರವಿ ಎಸ್. ಸನಿಲ್, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಶಕುಂತಲಾ ಕೆ. ಕೋಟ್ಯಾನ್ ಹಾಗೂ ಕಲ್ವಾ ಸ್ಥಳೀಯ ಕಛೇರಿ ಪರವಾಗಿ ಗೌರವ ಕಾರ್ಯಾಧ್ಯಕ್ಷರಾದ ಶ್ರೀ ಬಿ.ಸಿ. ಅಮಿನ್ ಮತ್ತು ಶ್ರೀ ಆರ್.ಕೆ. ಅಮಿನ್.​ ಕಾರ್ಯಾಧ್ಯಕ್ಷರಾದ ಶ್ರೀ ಹರೀಶ್ ಡಿ. ಸಾಲಿಯಾನ್, ಬಜಗೋಳಿ, ಉಪಾಕಾರ್ಯಾಧ್ಯಕ್ಷರಾದ ಶ್ರೀ ಉಮೇಶ್ ಟಿ. ಕರ್ಕೇರ, ಗೌರವ ಕಾರ್ಯದರ್ಶಿ ಶ್ರೀಮತಿ ಮಮತಾ ಎಂ. ಅಮಿನ್, ಗೌರವ ಖಜಾಂಚಿ ಶ್ರೀ ಆನಂದ ಎಸ್. ಬಂಗೇರ, ಸಹ ಕಾರ್ಯದರ್ಶಿ ಶ್ರೀ ಪ್ರಕಾಶ್ ಸಿ. ಪೂಜಾರಿ, ಸಹ ಖಜಾಂಚಿ ಶ್ರೀಮತಿ ಸುಕನ್ಯಾ ಸಿ. ಪೂಜಾರಿ ಹಾಗೂ ಪ್ರಧಾನ ಅರ್ಚಕರಾದ   ಶ್ರೀ ಕರುಣಾಕರ್ ಸಿ. ಬಂಗೇರ, ಅರ್ಚಕರಾದ ಶ್ರೀ ಸಂತೋಷ್ ಸುವರ್ಣ ಸೇರಿದಂತೆ ಎಲ್ಲ ಪದಾಧಿಕಾರಿಗಳು ಹಾಗೂ ಸಮಿತಿ ಸದಸ್ಯರು,ಮಹಿಳಾ ವಿಭಾಗದ ಮತ್ತು ಯುವ ವಿಭಾಗದ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಅವಧೂತ ಭಗವಾನ್ ಶ್ರೀ ನಿತ್ಯಾನಂದ ಸ್ವಾಮಿ ಧ್ಯಾನ ಮಂದಿರ ಪರೆಂಕಿಲ, ಶಿಮಂತೂರು : ಫೆ. 4ರಿಂದ 6, ನೂತನ ಶಿಲಾಬಿಂಬ ಪ್ರತಿಷ್ಠೆ ಹಾಗೂ ಕುಂಭಾಭಿಷೇಕ

Mumbai News Desk

ನ. 30 ರಂದು ಡೊಂಬಿವಲಿ ಶ್ರೀ ಜಗದಂಬಾ ಮಂದಿರದ ವಠಾರದಲ್ಲಿ “ಕುಲದೈವೋ ಬ್ರಹ್ಮ” ಯಕ್ಷಗಾನ ಪ್ರದರ್ಶನ

Mumbai News Desk

ಸೆ.5 ರಂದು ಅಂಧೇರಿ ಶ್ರೀ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ತುಳು ಹರಿಕಥೆಯ ನಾದ ಲಹರಿ

Mumbai News Desk

ಫೆಬ್ರವರಿ 1ರಂದು ಜಗಜ್ಯೋತಿ ಕಲಾವೃಂದದ 39ನೇ ವಾರ್ಷಿಕೋತ್ಸವ: ಸಾಮೂಹಿಕ ನೃತ್ಯ ಸ್ಪರ್ಧೆಗೆ ಆಹ್ವಾನ

Mumbai News Desk

ನ.18 ರಂದು ವಿಕ್ರೋಲಿ ಯಲ್ಲಿ “ಪುದರ್ ದಿದಾಂಡ್!!!!”

Mumbai News Desk

ಡಿ. 21: ಮುಂಬಯಿ ಕನ್ನಡ ಸಂಘದ ದತ್ತಿ ಉಪನ್ಯಾಸ ಕಾರ್ಯಕ್ರಮ

Mumbai News Desk