September 6, 2026
Mumbai News Kannada
ಸುದ್ದಿ

ಕೃಷ್ಣನೂರು ಉಡುಪಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ: ಲಕ್ಷಾಂತರ ಜನರಿಂದ ಹೂಮಳೆ ಸುರಿಸಿ ಸ್ವಾಗತ





ದೇಶದ ಪ್ರಧಾನಮಂತ್ರಿಗಳಾದ ಬಳಿಕ ಇದೇ ಮೊದಲ ಬಾರಿಗೆ ಉಡುಪಿಗೆ ಆಗಮಿಸಿರುವ ನರೇಂದ್ರ ಮೋದಿಯವರನ್ನು ಕರಾವಳಿಯ ಮಂದಿ ಹೂಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತ ಕೋರಿದ್ದಾರೆ.

ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ ಮೋದಿಯವರು, ಅಲ್ಲಿಂದ ಸೇನಾ ಹೆಲಿಕಾಪ್ಟರ್’ನಲ್ಲಿ ಉಡುಪಿಯ ಹೆಲಿಪ್ಯಾಡ್’ಗೆ ಬಂದಿಳಿದರು.

ಅಲ್ಲಿಂದ ರೋಡ್ ಶೋ ಆರಂಭವಾಗಿದ್ದು, ದಾರಿಯುದ್ದಕ್ಕೂ ಲಕ್ಷಾಂತರ ಮಂದಿ ಹೂಮಳೆ ಸುರಿಸಿ, ನೆಚ್ಚಿನ ನಾಯಕನಿಗೆ ಸ್ವಾಗತ ಕೋರಿದ್ದಾರೆ.

ಉಡುಪಿಯಿಂದ ಕೃಷ್ಣ ಮಠದವರೆಗೂ ನಡೆಯುತ್ತಿರುವ ರೋಡ್ ಶೋದಲ್ಲಿ ಪ್ರಧಾನಿ ಮೋದಿಯವರು ಅಭಿಮಾನಿಗಳತ್ತ ಕೈ ಬೀಸಿ ಸಾಗಿದ್ದಾರೆ.

ರೋಡ್ ಶೋ ಆರಂಭವಾದಾಗಿನಿಂದಲೂ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಮಂದಿ ನಿಂತು ಜೈಘೋಷ ಹಾಕಿ, ಹೂಮಳೆ ಸುರಿಸಿ, ನೆಚ್ಚಿನ ನಾಯಕನನ್ನು ಹತ್ತರದಿಂದ ನೋಡಿ ಕಣ್ತುಂಬಿಕೊಂಡರು.

ವಿವಿಧ ಜಾನಪದ ಕಲಾತಂಡಗಳಿಂದ ಮೋದಿಗೆ ಅದ್ಧೂರಿ ಸ್ವಾಗತಕೋರಲಾಯ್ತು. ಮೋದಿ ಮೋದಿ ಅಂತ ಹರ್ಷೋದ್ಘಾರ ಮೊಳಗಿಸಿದ ಅಭಿಮಾನಿಗಳ ಮೋದಿ ಕಂಡು ಖುಷಿಪಟ್ಟರು.. ಈ ವೇಳೆ ಪ್ರಧಾನಿ ಮೋದಿ ಸಹ ಅಭಿಮಾನಿಗಳನ್ನ ಕೈಬೀಸಿ ಮಂದಹಾಸದ ನಗೆ ಬೀರಿದರು.



Related posts

ಮಸ್ಕತ್ – ಮಂಗಳೂರು ನೇರ ವಿಮಾನ ಸೇವೆ ಸ್ಥಗಿತ, ಸಂಸದರಿಗೆ ಮನವಿ

Mumbai News Desk

ಪತ್ರಕರ್ತ ರೋನ್ಸ್ ಬಂಟ್ವಾಳ್ ಅವರಿಗೆ ಪಿತೃ ವಿಯೋಗ.

Mumbai News Desk

ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ, ಏಪ್ರಿಲ್ 19ರಿಂದ ಜೂನ್ 1ರ ತನಕ ಏಳು ಹಂತಗಳಲ್ಲಿ ಚುನಾವಣೆ.

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಮುನಿರಾಜ್ ಜೈನ್ ಮತ್ತು ದಿ. ನ್ಯಾ. ಸುಭಾಷ್ ಶೆಟ್ಟಿ ಯವರಿಗೆ ನುಡಿ ನಮನ.

Mumbai News Desk

ಸೇವಾನಿಷ್ಠೆ ಮತ್ತು ಸಮಾಜಮುಖಿ ಚಿಂತನೆಯ ಸಾಕಾರಮೂರ್ತಿ ಭಾಸ್ಕರ್ ಎಂ. ಶ್ರೀಯಾನ್ ಇಂದು ಸೇವಾ ನಿವೃತ್ತಿ

Mumbai News Desk

ಯು.ಎ.ಇ. ನೆಲದಲ್ಲಿ “ಕುಲಾಲ ಫ್ಯಾಮಿಲಿ ದುಬೈ ಯು.ಎ.ಇ. ವಿಹಾರ ಕೂಟ 2025”

Mumbai News Desk