September 6, 2026
Mumbai News Kannada
ಸುದ್ದಿ

ಯು.ಎ.ಇ. ನೆಲದಲ್ಲಿ “ಕುಲಾಲ ಫ್ಯಾಮಿಲಿ ದುಬೈ ಯು.ಎ.ಇ. ವಿಹಾರ ಕೂಟ 2025”





​ದುಬೈ: ಕುಲಾಲ ಫ್ಯಾಮಿಲಿ ದುಬೈ ಯು.ಎ.ಇ. ವತಿಯಿಂದ ಆಯೋಜಿಸಲಾದ ವಿಹಾರ ಕೂಟ 2025, ದುಬೈನ ಜಬೀಲ್ ಪಾರ್ಕ್‌ನಲ್ಲಿ ಡಿಸೆಂಬರ್ 2 ರಂದು ಯಶಸ್ವಿಯಾಗಿ ನಡೆಯಿತು.

​ಸುಮಾರು 130ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸ್ವಜಾತಿ ಬಾಂಧವರು ಈ ಕೂಟದಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆ 9:00 ಗಂಟೆಗೆ ಉಪಾಹಾರದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಕುಮಾರಿ ದೇಶ್ನ ಪ್ರವೀಣ್ ಕುಲಾಲ್ ಹಾಗೂ ಧನ್ವಿ ಸಚಿನ್ ಕುಲಾಲ್ ಪ್ರಾರ್ಥನೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

​ದುಬೈನಲ್ಲಿ ಹಲವು ವರ್ಷಗಳಿಂದ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು, ಹಿರಿಯರು ಹಾಗೂ ಮಾರ್ಗದರ್ಶಕರಾಗಿರುವ ಶ್ರೀ ಪದ್ಮನಾಭ ಕುಲಾಲ್ ಎಕ್ಕಾರು ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿದಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.

​ಮಕ್ಕಳಿಗೆ ಹಾಗೂ ದೊಡ್ಡವರಿಗಾಗಿ ವಿವಿಧ ಮೋಜಿನ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು. ಮಧ್ಯಾಹ್ನ ಪ್ರೀತಿ ಭೋಜನವನ್ನು ಏರ್ಪಡಿಸಲಾಗಿತ್ತು. ಕೊನೆಯಲ್ಲಿ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು. ನೆರೆದಿದ್ದವರು ಅತ್ಯಂತ ಉತ್ಸಾಹದಿಂದ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಅಕ್ಷಯ ಕುಲಾಲ್, ಮುಖೇಶ್ ಕುಲಾಲ್, ಆನಂದ ಸಾಲ್ಯಾನ್, ಪ್ರವೀಣ್ ಕುಲಾಲ್, ನವನೀತ್ ಕುಲಾಲ್ ಹಾಗೂ ದಾಕ್ಷಾಯಿಣಿ ಕುಲಾಲ್ ಅವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವಲ್ಲಿ ಸಹಕರಿಸಿದರು.



Related posts

ಮುಂಬೈ ಕುಲಾಲ ಸಂಘದ ಕುಲಾಲ ಭವನಕ್ಕೆ ಎಸ್. ಆರ್. ಬಂಜನ್ ಅವರಿಂದ ರೂ. 20 ಲಕ್ಷ ದೇಣಿಗೆ

Mumbai News Desk

*ನಿವೃತ್ತ ಪೊಲೀಸ್ ಉಪ ಅಧೀಕ್ಷಕ ಹರಿಶ್ಚಂದ್ರ ಹೆಜಮಾಡಿ ಇನ್ನಿಲ್ಲ

Mumbai News Desk

ಇನ್ನಂಜೆ ಹಾಲು ಉತ್ಪಾದಕರ ಸಂಘ ದ ನೂತನ ಅಧ್ಯಕ್ಷರಾಗಿ ಶಿವರಾಮ್ ಜೆ ಶೆಟ್ಟಿ ಮಂಡೇಡಿ ಆಯ್ಕೆ,

Mumbai News Desk

ಮಂಗಳೂರು : ಮೂಲತ್ವ ಫೌಂಡೇಶನ್ ಮತ್ತು ವಿವಿಧ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಮಾದಕ ದ್ರವ್ಯ ವಿರೋಧಿ ಅಭಿಯಾನ

Mumbai News Desk

ಮಹಾರಾಷ್ಟ್ರ ದಲ್ಲಿ ಭೀಕರ ರೈಲು ಅಪಘಾತ – ರೈಲಿನಡಿ ಸಿಲುಕಿ 7 ಜನರ ದುರಂತ ಸಾವು

Mumbai News Desk

ಬೆಂಗಳೂರು : ರಾಜ್ಯಪಾಲರಿಂದ ಗೀತಾಲಕ್ಷ್ಮಿ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ: ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗೆ ಮನ್ನಣೆ

Mumbai News Desk