July 23, 2026
Mumbai News Kannada
ಸುದ್ದಿ

ಕಲ್ಯಾಣ್: ಧಾರ್ಮಿಕ, ಸಾಮಾಜಿಕ ಸಂಘಟಕ, ಭಜನಾ ಗಾಯಕ ದೇವಾನಂದ್ ಜೆ ಸುವರ್ಣ ನಿಧನ







ನಂದಿಕೂರು,ಕೊಳಚೂರು ಶ್ರೀಮತಿ ಯೋಗಿನಿ ಮತ್ತು ಅಡ್ವೇ ಜಯರಾಮ ಕೋಟ್ಯಾನರ ಸುಪುತ್ರ, ಗೊರೇಗಾoವ್ ಮತ್ತು ಕಲ್ಯಾಣ್ ನಿವಾಸಿ ದೇವಾನಂದ್ ಜೆ ಸುವರ್ಣ ಅಲ್ಪ ಕಾಲದ ಅಸೌಖ್ಯದಿಂದಾಗಿ ಇಂದು ಸಂಜೆ(ಡಿ. 14) ದೈವಾದೀನರಾದರು.

ಅವರು ಅಡ್ವೇ ಗರಡಿ ಕೋಟಿ ಚೆನ್ನಯರ, ಶ್ರೀ ನಾರಾಯಣ ಗುರು ಸ್ವಾಮಿಯ, ಶ್ರೀ ನಿತ್ಯಾನಂದ ಸ್ವಾಮಿಯ, ಶ್ರೀ ರಾಘವೇಂದ್ರ ಹಾಗೂ ಶ್ರೀ ಸಾಯಿಬಾಬಾ ಹಾಗೂ ತುಳುನಾಡ ದೈವ ದೇವರುಗಳ ಪರಮ ಭಕ್ತರಾಗಿದ್ದರು. ಶ್ರೀ ನಿತ್ಯಾನಂದ ಸ್ವಾಮಿಯ ಹೆಸರಲ್ಲೇ ಭಜನಾ ಮಂಡಳಿ ಕಟ್ಟಿಕೊಂಡು ಮಹಾರಾಷ್ಟ್ರದಲ್ಲೇ ಪ್ರಸಿದ್ದಿಯ ಭಜನಾ ಗಾಯಕರಾಗಿದ್ದರು. ಬಿಲ್ಲವರ ಎಸೋಸಿಯೇಷನ್ ಮುಂಬಯಿ ಕಲ್ಯಾಣ್ ಸ್ಥಳೀಯ ಕಚೇರಿಯ ಮಾಜಿ ಉಪ ಕಾರ್ಯಧ್ಯಕ್ಷರಾಗಿ, ಬದ್ಲಾಪುರ ಶ್ರೀ ನಿತ್ಯಾನಂದ ಭಜನಾ ಸಮಿತಿಯಲ್ಲಿ ಸೇವೆ ಗೈದು, ಸಮಾಜದ ಸಂಘಟನೆಯಲ್ಲಿ ಹಾಗೂ ತುಳು ಕನ್ನಡ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ದುಡಿದವರು. ಮೃತರು ತಾಯಿ, ತಂದೆ,ಪತ್ನಿ, ಇಬ್ಬರು ಪುತ್ರಿ, ಇಬ್ಬರು ತಮ್ಮಂದಿರು, ಇಬ್ಬರು ತಂಗಿ,-ಭಾವoದಿರನ್ನು, ದೊಡ್ಡ ಕುಟುಂಭ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರ ಕ್ರೀಯೆ ಯಾತ್ರೆ ನಾಳೆ, ದಿನಾಂಕ 15.12.2025 ರಂದು ಸಂಜೆ 4 ಗಂಟೆಗೆ ಅವರ ಕಲ್ಯಾಣ್ ಗೃಹದಿಂದ ಹೊರಟು ಕಲ್ಯಾಣ್ ರುದ್ರಭೂಮಿಯಲ್ಲಿ ನೆರವೇರಲಿದೆ.



Related posts

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (10/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ದೆಹಲಿ : ಕೆಂಪು ಕೋಟೆ ಬಳಿ ಸ್ಫೋಟ, 10 ಸಾವು; ದೆಹಲಿ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೈ ಅಲರ್ಟ್

Mumbai News Desk

ಲೋಕಸಭಾ ಚುನಾವಣೆ : ಉಡುಪಿ ಗೆ ಕೋಟಾ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡಕ್ಕೆ ಕ್ಯಾ. ಬ್ರಿಜೇಶ್ ಚೌಟ.

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (26/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಬಿಹಾರ ಚುನಾವಣಾ ಫಲಿತಾಂಶ 2025 : ಭರ್ಜರಿ ಗೆಲುವಿನತ್ತ ಎನ್ ಡಿ ಎ, ಇಂಡಿಯಾ ಬಣ, ಪ್ರಶಾಂತ್ ಕಿಶೋರ್ ಗೆ ಮುಖಭಂಗ

Mumbai News Desk

ಅಮೂಲ್ಯ ಪತ್ರಿಕೆಯ 25ರ ಸಂಭ್ರಮಾಚರಣೆಯಲ್ಲಿ ಸಂಭ್ರಮಿಸಿದ ಕವಿ ಗೋಷ್ಠಿ.

Mumbai News Desk