32 C
Mumbai
March 7, 2026
Mumbai News Kannada
ಮುಂಬಯಿ

ಮುಂಬಯಿ: ಅಪ್ಪಾಜಿ ಬೀಡು ಫೌಂಡೇಶನ್‌ನಿಂದ 31ನೇ ವರ್ಷದ ಅಯ್ಯಪ್ಪ ಮಹಾಪೂಜೆ ಸಂಪನ್ನ





ಮುಂಬಯಿ: ಇಲ್ಲಿನ ಪಿ. ಬಿ. ಮಾರ್ಗ, ವರ್ಲಿ ಮಧುಸೂಧನ ಮಿಲ್ ಕಾಂಪೌಂಡ್‌ನಲ್ಲಿರುವ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ವತಿಯಿಂದ 31ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ಹಾಗೂ ಅನ್ನಸಂತರ್ಪಣಾ ಕಾರ್ಯಕ್ರಮವು ಭಾನುವಾರ (ಡಿ. 28) ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿತು.

​ಪಡುಬಿದ್ರೆ ಬೆಂಗ್ರೆ ರಮೇಶ್ ಗುರುಸ್ವಾಮಿಯವರು ಸ್ಥಾಪಿಸಿದ ಈ ಸಂಸ್ಥೆಯ ವಾರ್ಷಿಕ ಪೂಜಾ ಕಾರ್ಯಕ್ರಮಗಳು ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಸಂಕೀರ್ಣದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿದವು.

​ಬೆಳಿಗ್ಗೆ ಶರಣು ಘೋಷ ಮತ್ತು ಗಣಹೋಮದೊಂದಿಗೆ ಪೂಜಾ ವಿಧಿಗಳು ಆರಂಭಗೊಂಡವು. ಮಧ್ಯಾಹ್ನ ಅಪ್ಪಾಜಿ ಬೀಡು ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ‘ಭಕ್ತಿ ಭಜನಾ ಲಹರಿ’ ಕಾರ್ಯಕ್ರಮ ನಡೆಯಿತು. ಹಿರಿಯ ಗುರುಸ್ವಾಮಿ ಅಶೋಕ್ ಸಾಲಿಯನ್ ಪಡ್ಗ ಅವರ ನೇತೃತ್ವದಲ್ಲಿ ಮಹಾ ಮಂಗಳಾರತಿ ನೆರವೇರಿತು. ಈ ಸಂದರ್ಭದಲ್ಲಿ ಫೌಂಡೇಶನ್ ಸಂಸ್ಥಾಪಕಿ ಶಾಂಭವಿ ರಮೇಶ್ ಗುರುಸ್ವಾಮಿ, ಶಿಬಿರದ ಗುರುಸ್ವಾಮಿಗಳಾದ ಉದಯ್ ಶೆಟ್ಟಿ ಮುದ್ರಾಡಿ ಹಾಗೂ ಅರುಣ್ ಗುರುಸ್ವಾಮಿ ಪಡುಬಿದ್ರಿ ಬೆಂಗ್ರೆ ಉಪಸ್ಥಿತರಿದ್ದರು.

​ಇದೇ ಸಂದರ್ಭದಲ್ಲಿ 25ನೇ ವರ್ಷದ ಶಬರಿಮಲೆ ಯಾತ್ರೆ ಪೂರೈಸುತ್ತಿರುವ ಜಗನ್ನಾಥ್ ಗುರುಸ್ವಾಮಿ ಮತ್ತು ಜಯ ಗುರುಸ್ವಾಮಿ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಪೂಜೆಯಲ್ಲಿ ಪಾಲ್ಗೊಂಡಿದ್ದ ಸತೀಶ್ ಗುರುಸ್ವಾಮಿ (ರೇ ರೋಡು), ಜಯಶೀಲ ಗುರುಸ್ವಾಮಿ (ಮೀರಾ ರೋಡ್) ಹಾಗೂ ಮಂಟಪ ವಿನ್ಯಾಸಕಾರ ಅಶೋಕ್ ಆಚಾರ್ಯ ಕುಡ್ಯಡ್ಕ ಅವರಿಗೆ ಸನ್ಮಾನ ಮಾಡಲಾಯಿತು.

​ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಯುವ ವಿಭಾಗದ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್, ಬಂಟರ ಸಂಘ ಮೀರಾಬಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ದಾನಿಗಳು ಮತ್ತು ಭಕ್ತಾದಿಗಳನ್ನು ಪ್ರಸಾದ ನೀಡಿ ಗೌರವಿಸಲಾಯಿತು.

​ಸಂಜೆ ಶಿಬರೂರು ಸುರೇಶ್ ಎಲ್. ಶೆಟ್ಟಿ ನೇತೃತ್ವದಲ್ಲಿ ಬಂಟರ ಸಂಘ ಮುಂಬಯಿಯ ಶ್ರೀ ಮಹಾವಿಷ್ಣು ಭಜನಾ ಮಂಡಳಿಯಿಂದ ‘ಭಕ್ತಿ ಗಾನ ಸುಧೆ’ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಜರುಗಿತು.

​ಕಾರ್ಯಕ್ರಮದಲ್ಲಿ ಫೌಂಡೇಶನ್ ಟ್ರಸ್ಟಿಗಳಾದ ರಘುನಾಥ ಎನ್. ಶೆಟ್ಟಿ, ಬಿ. ದಿನೇಶ್ ಕುಲಾಲ್, ಪುಷ್ಪರಾಜ್ ಎಸ್. ಶೆಟ್ಟಿ, ರತ್ನಾಕರ್ ಆರ್. ಶೆಟ್ಟಿ, ಮೊಹನ್ ಟಿ. ಚೌಟ, ವಸಂತ್ ಪೂಜಾರಿ, ಮಾಜಿ ಅಧ್ಯಕ್ಷ ಸಂತೋಷ್ ವಿ. ಶೆಟ್ಟಿ ಉಪಸ್ಥಿತರಿದ್ದರು.

​ಕಾರ್ಯಕಾರಿ ಸಮಿತಿಯ ಪರವಾಗಿ ಗೌರವ ಅಧ್ಯಕ್ಷ ಸುರೇಶ್ ಎಸ್. ಶೆಟ್ಟಿ ಕೇದಗೆ, ಅಧ್ಯಕ್ಷ ಪದ್ಮನಾಭ ಎಸ್. ಶೆಟ್ಟಿ, ಉಪಾಧ್ಯಕ್ಷ ಉದಯ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಹರೀಶ್ ಶೆಟ್ಟಿ, ಕೋಶಾಧಿಕಾರಿ ಪ್ರಸಾದ್ ಶೆಟ್ಟಿ ಅರುವ, ಜೊತೆ ಕಾರ್ಯದರ್ಶಿ ವಿಜಯ ಬಿ. ಶೆಟ್ಟಿ, ಜೊತೆ ಕೋಶಾಧಿಕಾರಿ ಸತ್ಯನಾರಾಯಣ ಕುಚನ್, ಸಲಹೆಗಾರರಾದ ಅರುಣ್ ಆಳ್ವ ಕಾಂತಾಡಿಗುತ್ತು, ಬೋಜ ಎಸ್. ಶೆಟ್ಟಿ ಕೇದಗೆ, ಅರುಣ್ ಗುರುಸ್ವಾಮಿ ಭಯಂದರ್, ಸನತ್ ಕುಮಾರ್ ಶೆಟ್ಟಿ ಹಾಗೂ ಪಡಿಪೂಜಾ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಕುರ್ಕಾಲ್ ಸಹಕರಿಸಿದರು.

​ಸಮಿತಿಯ ಸದಸ್ಯರಾದ ರಾಜೇಶ್ ಶೆಟ್ಟಿ ತಿರುಪತಿ, ಬಾಲಚಂದ್ರ ಡಿ. ಶೆಟ್ಟಿ, ಶೇಖರ್ ಶೆಟ್ಟಿ ವರ್ಲಿ, ಭರತ್ ಶೆಟ್ಟಿ ಅತ್ತೂರು, ಗಣೇಶ್ ಸಾಲ್ಯಾನ್, ಗಣೇಶ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ಸಂತೋಷ್ ಸಾಲ್ಯಾನ್, ಪಾರ್ಥಸಾರಥಿ ಆರ್. ಶೆಟ್ಟಿ, ಅರವಿಂದ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಚಂದ್ರಕಾಂತ್ ಭಂಡಾರಿ, ಹರೀಶ್ ಶೆಟ್ಟಿ, ಜನಾರ್ಧನ ಮೊಗವೀರ, ಜಯಕರ್ ಶೆಟ್ಟಿ, ರಾಜೇಶ್ ಶೆಟ್ಟಿ, ಪ್ರಕಾಶ್ ಜಾಧವ, ಲೋಕೇಶ್ ತೋಳಾರ್, ದಿಲೀಪ್ ಮೊಗವೀರ, ಸತೀಶ್ ಪೂಜಾರಿ, ಅರುಣ್ ಸ್ವಾಮಿ ಸಿದ್ಧಿವಿನಾಯಕ, ಸಚಿನ್ ಶೆಟ್ಟಿ, ದಿನೇಶ್ ಶೆಟ್ಟಿ, ಸತೀಶ್ ಶೆಟ್ಟಿ, ಸಂತೋಷ್ ನಾಯಕ್, ಅಜಯ್ ಶೆಟ್ಟಿ, ಭಾವೇಶ್ ಕುಚನ್, ರಾಜ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯ ಕಾರ್ಯಾಧ್ಯಕ್ಷೆ ಕವಿತಾ ಜಿ. ಶೆಟ್ಟಿ, ಕಾರ್ಯದರ್ಶಿ ರೋಹಿಣಿ ಎಸ್. ಪೂಜಾರಿ, ಕೋಶಾಧಿಕಾರಿ ಶೋಭಾ ವಿ. ಶೆಟ್ಟಿ, ಉಪಕಾರ್ಯಾಧ್ಯಕ್ಷೆ ದಿವ್ಯಾ ಪಿ. ಶೆಟ್ಟಿ, ಸಹ ಕಾರ್ಯದರ್ಶಿ ಸುಜಾತಾ ಎನ್. ಪುತ್ರನ್, ಜೊತೆ ಕೋಶಾಧಿಕಾರಿ ನಿರ್ಮಲಾ ಕೆ. ಶೆಟ್ಟಿ ಹಾಗೂ ಸದಸ್ಯರಾದ ಶಾರದಾ ಜೆ. ಶೆಟ್ಟಿ, ರಾಗಿಣಿ ಆರ್. ಶೆಟ್ಟಿ, ಶರ್ಮಿಳಾ ಶೆಟ್ಟಿ, ಪ್ರಾಪ್ತಿ ಕರ್ಕೇರಾ, ವಿಜಯಶ್ರೀ ಎಸ್. ಶೆಟ್ಟಿ, ನಿಮಾ ಆರ್. ಶೆಟ್ಟಿ, ವೀಣಾ ಎಂ. ಹೆಗ್ಡೆ, ಆಶಾ ಎಸ್. ಶೆಟ್ಟಿ, ಪ್ರಜ್ಞಾ ಎಸ್. ಶೆಟ್ಟಿ, ಸುಮಿತ್ರಾ ಪಿ. ಶೆಟ್ಟಿ, ಶೈಲಾ ಎಲ್. ಶೆಟ್ಟಿ, ರಮಾ ಶೆಟ್ಟಿ, ರಮ್ಯಾ ಎಸ್. ಶೆಟ್ಟಿ, ಸಂಗೀತಾ ಪಿ. ಶೆಟ್ಟಿ, ಯಶಸ್ವಿ ಆರ್. ಶೆಟ್ಟಿ, ರಾಣಿ ಎ. ಶೆಟ್ಟಿ, ಸರೋಜಿನಿ ಕೆ. ಕರ್ಕೇರ, ಸುಪ್ರೀತಾ ಎ. ಶೆಟ್ಟಿ, ಮಾಲಾಶ್ರೀ ಎಸ್. ಶೆಟ್ಟಿ, ಸಲಹೆಗಾರರಾದ ಉಷಾ ಬಿ. ಶೆಟ್ಟಿ, ಪ್ರಮಿಳಾ ಜೆ. ಶೆಟ್ಟಿ, ವಿನೋದಾ ಜೆ. ಶೆಟ್ಟಿ ಮತ್ತು ಯಶೋದಾ ಎಸ್. ಶೆಟ್ಟಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

ಚಿತ್ರ ವರದಿ: ದಿನೇಶ್ ಕುಲಾಲ್



Related posts

ಬಿಲ್ಲವರ ಅಸೋಸಿಯೇಶನಿನ ಭಾಯಂದರ್ ಸ್ಥಳೀಯ ಕಚೇರಿಯಲ್ಲಿ ಗುರು ಪೂರ್ಣಿಮೆ ಆಚರಣೆ.

Mumbai News Desk

ಶಹಾಡ್‌ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಸಂಪನ್ನ

Mumbai News Desk

ನಿತ್ಯಾನಂದ ಸೇವಾ ಸಮಿತಿ ಮೀರಾಭಾಯಿಂದರಿನ ವಾರ್ಷಿಕ ಮಹಾಸಭೆ.

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ಪದ್ಮವಿಭೂಷಣ ಜಾರ್ಜ್ ಫರ್ನಾಂಡಿಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ-2025 ಪ್ರದಾನ ಸಮಾರಂಭ,

Mumbai News Desk

ಕುಲಾಲ ಸಂಘ ಮುಂಬಯಿ ; 93ನೇ ವಾರ್ಷಿಕ ಮಹಾಸಭೆ

Mumbai News Desk

ಕುಲಾಲ ಸಂಘ ಮುಂಬಯಿ ನವರಾತ್ರಿ ಉತ್ಸವ.ದುರ್ಗಾ ಪೂಜೆ, ಗರ್ಬಾ ನೃತ್ಯ

Mumbai News Desk