July 22, 2026
Mumbai News Kannada
ಮುಂಬಯಿ

ಎಲ್ಲರ ಬದುಕಲ್ಲಿ ಧರ್ಮ ಕಾರ್ಯಗಳು ನಡೆಯಲಿ: ಸಾಣೂರು ಸಾಂತಿಂಜ ಜನಾರ್ದನ ಭಟ್‌







ಮೀರಾ ರೋಡ್‌ನಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಮಹಾಪೂಜೆ

​ಚಿತ್ರ ವರದಿ: ದಿನೇಶ್ ಕುಲಾಲ್

ಮೀರಾ ರೋಡ್ (ಮುಂಬೈ): “ಮಾನವ ಜನ್ಮದಲ್ಲಿ ಧರ್ಮ ಕಾರ್ಯಗಳನ್ನು ಮಾಡುವ ಮನೋಭಾವ ಎಲ್ಲರಲ್ಲೂ ಜಾಗೃತವಾಗಲಿ. ಹೊಸ ವರ್ಷವು ಸರ್ವರಿಗೂ ಸುಖ, ಸಂಪತ್ತು ಹಾಗೂ ಆರೋಗ್ಯ ಭಾಗ್ಯವನ್ನು ಕರುಣಿಸಲಿ,” ಎಂದು ಸಾಣೂರು ಸಾಂತಿಂಜ ಜನಾರ್ದನ ಭಟ್ ಹಾರೈಸಿದರು.

​ಮೀರಾ ರೋಡ್ ಪೂರ್ವದ ಮೀರಾಗಾಂವ್, ಮೀರಾ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜನೆವರಿ 1ರಂದು ಆಯೋಜಿಸಲಾಗಿದ್ದ ನೂತನ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಅವರು ಮಾತನಾಡಿದರು.

ದೇವಸ್ಥಾನದ ಆಡಳಿತ ಟ್ರಸ್ಟಿ ಶೀಮಂತೂರು ಮಜಲಗುತ್ತು ಬಾಬಾ ರಂಜನ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ಕಾರ್ಯಕ್ರಮ ಜರುಗಿತು. ಬಸವರಾಜ್ ಮತ್ತು ಕುಟುಂಬಸ್ಥರು ಪೂಜೆಯ ಯಜಮಾನತ್ವ ವಹಿಸಿದ್ದರು. ಸಂಜೆ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಹಾಗೂ ವಿಜಯಶೆಟ್ಟಿ ಮೂಡುಬೆಳ್ಳೆ ಮತ್ತು ಬಳಗದವರಿಂದ ಭಜನಾ ಸಂಕೀರ್ತನೆ ನಡೆಯಿತು. ಅಶೋಕ್ ದೇವಾಡಿಗ ಬಳಗದ ಚೆಂಡೆ ವಾದನ ಹಾಗೂ ಹರೀಶ್ ಕೋಟ್ಯಾನ್ ಬಳಗದ ಸ್ಯಾಕ್ಸೋಫೋನ್ ಸಂಗೀತ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ಕಾರ್ಯಕ್ರಮದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಸಾಂತಿಂಜ ಮಾಧವ ಭಟ್, ಸ್ಥಾಪಕ ಕೃಷ್ಣ ಶೆಟ್ಟಿ ಹಾಗೂ ಪರಿವಾರದವರು ಉಪಸ್ಥಿತರಿದ್ದರು. ಶ್ರೀ ಮಹಾಲಿಂಗೇಶ್ವರ ಟ್ರಸ್ಟ್‌ನ ಟ್ರಸ್ಟಿಗಳಾದ ಪ್ರಸನ್ನ ಶೆಟ್ಟಿ ಕುರ್ಕಾಲ್, ಪ್ರಸನ್ನ ಶೆಟ್ಟಿ ಬೋಳ, ಸಾಯಿ ಪೂಂಜ ಹಾಗೂ ಚಂದ್ರ ಶೆಟ್ಟಿ ಶೀಮಂತೂರು ಭಾಗವಹಿಸಿದ್ದರು.

​ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳಾದ ಗಿರೀಶ್ ಶೆಟ್ಟಿ ತೆಳ್ಳಾರು, ಉದಯ ಶೆಟ್ಟಿ ಪೆಲತ್ತೂರು, ರಾಜೇಶ್ ಶೆಟ್ಟಿ ಕಾಪು ಸೇರಿದಂತೆ ಮಹಿಳಾ ಘಟಕದ ಸದಸ್ಯೆಯರು, ಸಮುದಾಯ ಸಂಘಟನೆಗಳ ಪದಾಧಿಕಾರಿಗಳು, ಮೀರಾ ಸೊಸೈಟಿ ಸಮಿತಿ ಸದಸ್ಯರು ಹಾಗೂ ಟ್ರಸ್ಟ್‌ನ ಸದಸ್ಯರು ಉಪಸ್ಥಿತರಿದ್ದರು.

​ತಡರಾತ್ರಿ ಶ್ರೀ ಮಹಾಲಿಂಗೇಶ್ವರ ಮತ್ತು ಪರಿವಾರ ದೇವರಿಗೆ ಮಹಾಪೂಜೆ ನಡೆದು, ಸತ್ಯನಾರಾಯಣ ದೇವರಿಗೆ ಮಂಗಳಾರತಿ ಬೆಳಗಲಾಯಿತು. ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ನೂರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.



Related posts

ಶ್ರೀ ಮೂಕಾಂಬಿಕಾ ಸೋಷಿಯಲ್ ವೆಲ್ಫೇರ್ ಫೌಂಡೇಶನ್ ನ ಮಹಿಳಾ ಭಚತ್ ಘಟಕ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮ

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸ ಮಂಡಳಿ ಮಂಗಳವಾರದ ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

2023/24 ಎಚ್ ಎಸ್ ಸಿ . ಪರೀಕ್ಷೆಯಲ್ಲಿ  ಆಶಿಶ್ ಅಶೋಕ್ ಕುಲಾಲ್ ಶೇ.84.33%

Mumbai News Desk

ಗೊರೆಗಾಂವ್ ಕರ್ನಾಟಕ ಸಂಘದ 67ನೇ ನಾಡಹಬ್ಬ ಹಾಗೂ ವಿಚಾರಗೋಷ್ಠಿ ಸಮಾರಂಭಕ್ಕೆ ಚಾಲನೆ,

Mumbai News Desk

ವಿದ್ಯಾ ವಿಹಾರದ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ ಹಾಗೂ ಸಮ್ಮಾನ ಕಾರ್ಯಕ್ರಮ

Mumbai News Desk

ಮಲಾಡ್ ಕನ್ನಡ ಸಂಘದ ವತಿಯಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ

Mumbai News Desk