July 23, 2026
Mumbai News Kannada
ಸುದ್ದಿ

ಜಯಪ್ರಕಾಶ್ ಪೂಜಾರಿ, ಮುಂಬೈ ಅವರಿಗೆ ತುಳುವರ್ಲ್ಡ್ ಸಮ್ಮಾನ್







ಬೆಂಗಳೂರು: ಅಲಯನ್ಸ್ ಯೂನಿವರ್ಸಿಟಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ತುಳು ವಿಚಾರ ಸಂಕಿರಣದ ವೇದಿಕೆಯಲ್ಲಿ, ಮುಂಬೈನಲ್ಲಿ ತುಳು ಭಾಷೆ–ಸಂಸ್ಕೃತಿ ಹಾಗೂ ಸಮುದಾಯ ಸಂಘಟನೆಯ ಕ್ಷೇತ್ರದಲ್ಲಿ ಸಲ್ಲಿಸಿದ ಮಹತ್ವದ ಸೇವೆಯನ್ನು ಗುರುತಿಸಿ ಶ್ರೀ ಜಯಪ್ರಕಾಶ್ ಪೂಜಾರಿ ಅವರಿಗೆ ಗೌರವಾನ್ವಿತ ತುಳುವರ್ಲ್ಡ್ ಸಮ್ಮಾನ್ ಪ್ರದಾನ ಮಾಡಲಾಯಿತು.

ಮುಂಬೈ ಮಹಾನಗರದಲ್ಲಿ ತುಳು ಸಮುದಾಯವನ್ನು ಒಂದೇ ವೇದಿಕೆಗೆ ತರುವಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಸಂಘಟನೆ ಮತ್ತು ಭಾಷಾ ಚಟುವಟಿಕೆಗಳ ಮೂಲಕ ತುಳು ನುಡಿಯನ್ನು ಜೀವಂತವಾಗಿ ಉಳಿಸುವಲ್ಲಿ ಜಯಪ್ರಕಾಶ್ ಪೂಜಾರಿ ಅವರು ವಹಿಸಿದ ಸಕ್ರಿಯ ಪಾತ್ರವನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.

ಸನ್ಮಾನ ಸಮಾರಂಭದಲ್ಲಿ ತುಳು ವರ್ಡ್ ಫೌಂಡೇಶನ್ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅಬುಧಬಿ, ಡಾ. ಮಾಧವ ಎಂ.ಕೆ., ಡಾ. ರಾಜೇಶ್ ಆಳ್ವ, ಅಲಯನ್ಸ್ ಯುನಿವರ್ಸಿಟಿಯ ರಿಜಿಸ್ಟರ್ ಜನರಲ್ ಸುರೇಖಾ ಶೆಟ್ಟಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದು ಗೌರವ ಸಲ್ಲಿಸಿದರು.
ತುಳುನಾಡಿನ ಮಣ್ಣು ಮತ್ತು ಮಾತನ್ನು ಮಹಾನಗರದಲ್ಲೂ ಜೀವಂತವಾಗಿ ಉಳಿಸುವ ಅವರ ಸೇವೆಗೆ ದೊರೆತ ಈ ಸಮ್ಮಾನ್, ತುಳು ಸಂಸ್ಕೃತಿಯ ವಿಸ್ತಾರ ಮತ್ತು ಸಮುದಾಯ ಬಾಂಧವ್ಯಕ್ಕೆ ಮಹತ್ವದ ಮಾನ್ಯತೆಯಾಗಿದೆ.



Related posts

ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಮುಂಬಯಿ ನಗರಕ್ಕೆ – ಭಕ್ತಿ ಪೂರ್ವಕ ಸ್ವಾಗತ

Mumbai News Desk

ಕುಂದಾಪುರ : ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ

Mumbai News Desk

ಓಟಗಾರ ಬಾಕಿಯಾದರೂ ಬಹುಮಾನ ಗೆದ್ದ ಹೊಸ್ಮಾರು ಸೂರ್ಯಶ್ರೀ ರತ್ನಾ ಸದಾಶಿವ ಶೆಟ್ಟರ ಕೋಣಗಳು. ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ಗುರುಪುರ ಕಂಬಳ.

Mumbai News Desk

ಸಾಂತಾಕ್ರೂಜ್ ಪೂರ್ವ: ಸಿ ಎ ಸುನಿಲ್ ಶೆಟ್ಟಿ ನಿಧನ.

Mumbai News Desk

ಮಲಾಡ್: ನಡಿಕೆರೆ ಕೃಷ್ಣ ಶೆಟ್ಟಿ ನಿಧನ

Mumbai News Desk

ನಮೋ ಮೊಯರ್ ಗ್ಲೋಬಲ್ ಫೌಂಡೇಶನ್ ವತಿಯಿಂದ ಹೊರ ರಾಜ್ಯದಲ್ಲೂ ಅಸಾಯಕರಿಗೆ ಸಹಾಯ ಹಸ್ತ

Mumbai News Desk