September 6, 2026
Mumbai News Kannada
ಸುದ್ದಿ

ತುಳು ಸಂಘ ಬೊರಿವಲಿ, ವಿಹಾರ ಕೂಟ, ಸ್ನೇಹ ಮಿಲನ





 

ಮುಂಬಯಿ : ತುಳು ಸಂಘದ ಎಲ್ಲಾ ಕುಟುಂಬ ಸದಸ್ಯರು ಹಾಗೂ ಹಿತೈಷಿಗಳಿಗಾಗಿ ಜ. 18ರಂದು  ಘೋಡ್ಬಂದರ್ ರಸ್ತೆ, ಮೀರಾ ರೋಡ್ (ಪೂರ್ವ)ದಲ್ಲಿರುವ ಪಾಲಿ ವಿಲೇಜ್ (ಪಾಲಿ ರಿಸಾರ್ಟ್ & ಕ್ಲಬ್) ನಲ್ಲಿ ವಾರ್ಷಿಕ ವಿಹಾರ ಕೂಟ ಹಾಗೂ ಸ್ನೇಹ ಕೂಟವನ್ನು ಅಧ್ಯಕ್ಷರಾದ  ಹರೀಶ್ ಮೈಂದನ್  ಇವರ ನೇತೃತ್ವದಲ್ಲಿ ಆಯೋಜಿಸಲಾಯಿತು.

ಆಗಮಿಸಿದ ಎಲ್ಲರನ್ನು ಸಂಘದ ಗೌರವ ಪ್ರಧಾನ ಕಾರ್ಯದರ್ಶಿಕೃಷ್ಣರಾಜ ಸುವರ್ಣ ಸ್ವಾಗತಿಸಿದ್ದು ನಂತರ, 

ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಶೆಟ್ಟಿ, ಕಾರ್ಯದರ್ಶಿ ವಿಜಯಲಕ್ಷ್ಮಿ ದೇವಾಡಿಗ ಮತ್ತು ಜೊತೆ ಕಾರ್ಯದರ್ಶಿ ತಿಲೊತ್ತಮ ವೈದ್ಯ ಅವರು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. 

ಉಪಸ್ಥಿತರಿದ್ದ ಎಲ್ಲ ಹಿರಿಯರು ಮತ್ತು ಕಿರಿಯರು ಆಟೋಟ ಸ್ಪರ್ಧೆ ಹಾಗೂ ಮನೋರಂಜನಾ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು.  ನಂತರ ಸಂಘದ ಪರವಾಗಿ ಹಿರಿಯ ನಾಗರಿಕರಾದ ನರೇಂದ್ರ ಪುತ್ರನ್ ಮತ್ತು ಹೇಮಲತಾ ಸುವರ್ಣ  ಅವರನ್ನು ಸನ್ಮಾನಿಸಲಾಯಿತು.

ಸಂಘದ ಸ್ಥಾಪಕ ಅಧ್ಯಕ್ಷರಾದ  ವಾಸು ಪುತ್ರನ್ ಮಾತನಾಡಿ, ಸಂಘದ ಸ್ಥಾಪನೆಯ ಉದ್ದೇಶ, ಇದುವರೆಗೆ ನಡೆದ ಅಭಿವೃದ್ಧಿ ಕಾರ್ಯಗಳು ಹಾಗೂ ಮುಂದಿನ ದಿನಗಳಲ್ಲಿ ಸಂಘವನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ವಿವರಿಸಿದರು.

ಸಂಘದ ಅಧ್ಯಕ್ಷರಾದ  ಹರೀಶ್ ಮೈಂದನ್ ಮಾತನಾಡುತ್ತಾ ಸಂಘದ ಪ್ರಸ್ತುತ ಚಟುವಟಿಕೆಗಳು ಹಾಗೂ ಮುಂದಿನ ದಿನಗಳಲ್ಲಿ ಸದಸ್ಯರಿಗೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. 

ಕಾರ್ಯಕ್ರಮವನ್ನು ಸಂಘದ ಯುವ ವಿಭಾಗದ ಕಾರ್ಯಾಧಕ್ಷರಾದ ಅಡ್ವೊಕೇಟ್ ರಾಘವ ಎಂ. ಯಶಸ್ವಿಯಾಗಿ ನಿರ್ವಹಿಸಿದರು. ಸಂಘದ ಕೋಶಾಧಿಕಾರಿ ದಿವಾಕರ ಕರ್ಕೇರ ಅವರು  ಧನ್ಯವಾದಗಳನ್ನು ಅರ್ಪಿಸಿದರು. ಇತರ ಪದಾಧಿಕಾರಿಗಳಾದ  ಅನಿಲ್ ಕುಮಾರ್ ಶೆಟ್ಟಿ, ಟಿ.ವಿ. ಪೂಜಾರಿ, ಪ್ರಿಯಲಕ್ಷ್ಮಿ ಉಪ್ಪೂರ,  ಸರಸ್ವತಿ ರಾವ್,  ಪೂರ್ಣಿಮಾ ಪೂಜಾರಿ,  ರಾಜೇಶ್ವರಿ ಸುವರ್ಣ,  ಕೃಷ್ಣ ಸಾಲ್ಯಾನ್ ಹಾಗೂ ಅಶೋಕ್ ಪೂಜಾರಿ,  ವಸುದಾ ಪೈ,  ಲಕ್ಷ್ಮಿ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು.  



Related posts

ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣರಿಗೆ ಅತ್ಯುತ್ತಮ ಬ್ಯಾಂಕ್ ಕಾರ್ಯಧ್ಯಕ್ಷ ಪ್ರಶಸ್ತಿ.

Mumbai News Desk

ಶ್ರೀ ಲಕ್ಕಮ್ಮಾ ದೇವಿ ಕಲಾ ಪೋಷಕ ಸಂಘ (ರಿ) ಬ್ಯಾಕೂಡ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭ

Mumbai News Desk

ತುಳುರಂಗಭೂಮಿಯಲ್ಲಿ ಇತಿಹಾಸ ಸೃಷ್ಟಿಸಿದ ಜೋಡು ಜೀಟಿಗೆ, – ಒಂದೇ ದಿನ ಎರಡು ಮಹಾನಗರಿಯ ಭವ್ಯ ವೇದಿಕೆಯಲ್ಲಿ ನಾಟಕ ಪ್ರದರ್ಶನ

Mumbai News Desk

ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ, ಬ್ಯಾಂಕೊ ಬ್ಲೂ ರಿಬ್ಬನ್”- 2022- 2023 ಪ್ರಶಸ್ತಿ,

Mumbai News Desk

ಭವಾನಿ ಗಿರಿಯಾ ಪೂಜಾರಿ (ಭವಾನಿ ಟೀಚರ್) ನಿಧನ

Mumbai News Desk

ಒಮಾನ್ ಬಿಲ್ಲವಾಸ್ ಸೂಪರ್‌ಲೀಗ್ ಕ್ರೀಡಾಕೂಟ: ಕ್ರೀಡಾಪಟು ರಕ್ಷಾ ಪೂಜಾರಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಶಿವಾನಂದ ಕೋಟ್ಯಾನ್ ಗೆ ಸನ್ಮಾನ

Mumbai News Desk