31 C
Mumbai
March 6, 2026
Mumbai News Kannada
ಮುಂಬಯಿ

ವಸಾಯಿ ತಾಲೂಕ ಹೋಟೆಲ್ ಅಸೋಸಿಯೇಷನ್ ಇದರ ನೂತನ ಅಧ್ಯಕ್ಷರಾಗಿ ಮೋಹನ್ ವಿ. ಶೆಟ್ಟಿ ಕಾಪು ಆಯ್ಕೆ,





ವಸಾಯಿ, – ಮುಂಬಯಿ ಮಹಾನಗರದ ಪ್ರತಿಷ್ಠಿತ ಹೋಟೆಲ್ ಉದ್ಯಮದ ಸಂಘಟನೆಯಲ್ಲಿ ಒಂದಾದ ವಸಾಯಿ ತಾಲೂಕ ಹೋಟೆಲ್ ಅಸೋಸಿಯೇಷನ್ ಇದರ ನೂತನ ಅಧ್ಯಕ್ಷರಾಗಿ ಸೆಂಟ್ರಲ್ ಪಾಯಿಂಟ್ ಇದರ ಮಾಲಕರಾದ ಕಾಪು ಮೋಹನ್ ವಿ ಶೆಟ್ಟಿ ಇವರು ಅವಿರೋಧವಾಗಿ ಆಯ್ಕೆಯಾಗಿರುವರು. ವಿರಾರ್‌ಪೂರ್ವದ ವಿಷ್ಣು ಕೃಪಾ ಬ್ಯಾಂಕ್ವೆಟ್ ಹಾಲ್ ಇಲ್ಲಿ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಪ್ರೀತಮ್ ಸಿಂಗ್ ಇವರ ಅಧ್ಯಕ್ಷತೆಯಲ್ಲಿ ಜರುಗಿದ 2026-27 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಪ್ರಸ್ತುತ ಉಪಾಧ್ಯಕರಾಗಿರುವ ಮೋಹನ್ ವಿ. ಶೆಟ್ಟಿ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಕಾಪು ಬಾಲಾಜಿ ಮೋಹನ್ ಶೆಟ್ಟಿ ಅವರು ತಮ್ಮ ಕಾಲೇಜು ಜೀವನದಿಂದಲೇ ನಾಯಕತ್ವದ ಗುಣವನ್ನು ಬೆಳೆಸಿಕೊಂಡವರು. ಅವರು ಮೂಲ್ಕಿ ಸುಂದರ ರಾಮ ಶೆಟ್ಟಿ ಕಾಲೇಜಿನಲ್ಲಿ 1986-87ನೇ ಸಾಲಿನಲ್ಲಿ ವಿದ್ಯಾರ್ಥಿ ನಾಯಕರಾಗಿ ಸೇವೆ ಸಲ್ಲಿಸಿದ್ದಲ್ಲದೆ, ಪ್ರಸ್ತುತ ಎಂ.ಎಸ್. ಆರ್.ಎಸ್. ಕಾಲೇಜು, ಶಿರ್ವ ಅಲುಮ್ಮಿ ಅಸೋಸಿಯೇಷನ್, ಮುಂಬಯಿ ಇದರ
ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ವಸಾಯಿ ತಾಲೂಕಾ ಹೋಟೆಲ್ ಅಸೋಸಿಯೇಷನ್‌ನಲ್ಲಿ ಅವರು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದರ ಜೊತೆಗೆ, ವಸಾಯಿ- ಡಹಾಣು ಬಂಟ್ಸ್ ಪ್ರಾದೇಶಿಕ ಸಮಿತಿಯ ಖಜಾಂಚಿಯಾಗಿ, ಉಪಾಧ್ಯಕ್ಷರಾಗಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ ಸಮೃದ್ದ ಅನುಭವವನ್ನು ಹೊಂದಿದ್ದಾರೆ. ಇದರೊಂದಿಗೆ ಕಾಪು ಹೊಸ ಮಾರಿಗುಡಿ ಜೀರ್ಣೋದ್ದಾರ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು, ಬಂಟರ ಸಂಘ ಮುಂಬಯಿಯ ಕಾರ್ಯಕಾರಿ ಸಮಿತಿಯಲ್ಲಿಯೂ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.ವಸಾಯಿ – ವಿರಾರ್‌ಪರಿಸರದಲ್ಲಿ ಜನಾನುರಾಗಿ ಹೋಟೆಲ್ ಉದ್ಯಮಿಯಾಗಿರುವ ಮೋಹನ್ ಶೆಟ್ಟಿ ಅವರಿಗೆ ಹೋಟೆಲ್‌ ಉದ್ಯಮದಲ್ಲಿ 38 ವರ್ಷಗಳ ಅನುಭವವಿದೆ. ಸೆಂಟ್ರಲ್ ಪಾಯಿಂಟ್ ಫ್ಯಾಮಿಲಿ ರೆಸ್ಟೋರೆಂಟ್ ಇದರ ಮಾಲೀಕರಾದ ಅವರು, ತಮ್ಮ ಪತ್ನಿ ಸರಳ ಹಾಗೂ ಸಹೃದಯಿ ವ್ಯಕ್ತಿತ್ವದ ಮಮತಾ ಶೆಟ್ಟಿ ಹಾಗೂ ಯುವ ಉದ್ಯಮಿ ಪುತ್ರ ಧ್ರುವ್ ಶೆಟ್ಟಿ ಅವರೊಂದಿಗೆ ನಾಲಾಸೋಪಾರಾದಲ್ಲಿ ವಾಸವಾಗಿದ್ದಾರೆ.



Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಅಂಕಿತಾ ಭಾಸ್ಕರ್ ಭಂಡಾರಿ ಗೆ ಶೇ 82.60 ಅಂಕ.

Mumbai News Desk

ಭಾರತ್ ಬ್ಯಾಂಕ್ ಕಾಂದಿವಿಲಿ ಪೂರ್ವ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Mumbai News Desk

ಕುಮಾರ ಕ್ಷತ್ರಿಯ ಸಂಘ ಮುಂಬಯಿ, 59ನೇ ವಾರ್ಷಿಕ ಮಹಾಸಭೆ , ಸತ್ಯನಾರಾಯಣ ಮಹಾಪೂಜೆ

Mumbai News Desk

ಮಲಾಡ್ ಪೂರ್ವ ದ  ಲಕ್ಷ್ಮಣ್ ನಗರದ ಶ್ರೀ ಶನೀಶ್ವರ ಮಹೋತಭಾರ  ದೇವಸ್ಥಾನದ ಟ್ರಸ್ಟಿನ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗು ಶಿಕ್ಷಣದ ನೆರವು.

Mumbai News Desk

ಬಂಟರ ಸಂಘ ವಸಯಿ ದಹಣು ಪ್ರಾದೇಶಿಕ ಸಮಿತಿ,ಹಾಗೂ ತುಳುಕೂಟ ಫೌಂಡೇಶನ್ ಇದರ ಜಂಟಿ ಅಶ್ರಯದಲ್ಲಿ ಶ್ರೀದೇವಿ ಯಕ್ಷ ಕಲಾ ನಿಲಯದ ಮಕ್ಕಳ ಸ್ನೇಹ ಸಮ್ಮಿಲನ

Mumbai News Desk

ದಿ ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್‌ ಬದ್ಲಾಪುರದ ಮೋಯಾ ನಗರಿಯಲ್ಲಿ ಗಣ-ಹೋಮ, ಸಾಮೂಹಿಕ ಸತ್ಯನಾರಾಯಣ ಮಹಾಪೂಜೆ

Mumbai News Desk