September 6, 2026
Mumbai News Kannada
ಮುಂಬಯಿ

ನಾರಾಯಣ ಗುರುಗಳ ತತ್ವದೊಂದಿಗೆ ಸಮಾಜ ಸಂಘಟನೆಯಾಗಲಿ: ಸೂರ್ಯಕಾಂತ್ ಜಯ ಸುವರ್ಣ





ಮುಂಬಯಿ: “ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಾವೆಲ್ಲರೂ ಒಗ್ಗಟ್ಟಿನಿಂದ ಸಮಾಜದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು,” ಎಂದು ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಹಾಗೂ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಕರೆ ನೀಡಿದರು.

​ಶ್ರೀ ನಾರಾಯಣ ಗುರು ಭಜನಾ ಮಂಡಳಿ (ರಿ), ಮುಂಬೈ, ಜಯ ಸಿ. ಸುವರ್ಣ ಅಭಿಮಾನಿ ಬಳಗ ಹಾಗೂ ಮುಂಬಯಿ ಬಿಲ್ಲವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಗೋರೆಗಾಂವ್ ಪೂರ್ವದ ಜಯಲೀಲಾ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಶನಿ ಪೂಜೆ ಮತ್ತು ಭಜನಾ ಸಂಧ್ಯಾ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

​ಬಿಲ್ಲವರ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್ ಶಾಂತಿ ಅವರ ಪೌರೋಹಿತ್ಯದಲ್ಲಿ ಕಲಶ ಪ್ರತಿಷ್ಠಾಪನೆ ನೆರವೇರಿತು. ಮುಂಬಯಿಯ ಖ್ಯಾತ ಕಲಾವಿದರು ಹಾಗೂ ವಿಶೇಷ ಅತಿಥಿ ಕಲಾವಿದರಿಂದ ಯಕ್ಷಗಾನ ಶೈಲಿಯಲ್ಲಿ ‘ಶ್ರೀ ಶನೀಶ್ವರ ಗ್ರಂಥ ಪಾರಾಯಣ’ ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿತು. ಶೇಖರ್ ಶಾಂತಿ, ಧನಂಜಯ ಶಾಂತಿ ಹಾಗೂ ರವೀಂದ್ರ ಶಾಂತಿ ಅವರ ಸಹಕಾರದಲ್ಲಿ ಮಹಾಮಂಗಳಾರತಿ ನಡೆದು, ಬಳಿಕ ತೀರ್ಥ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಿತು.

​ಇದೇ ಸಂದರ್ಭದಲ್ಲಿ ಬಿಲ್ಲವರ ಅಸೋಸಿಯೇಷನ್ ಸೇವಾದಳದ ಮಾಜಿ ಜಿಒಸಿ ಗಣೇಶ್ ಪೂಜಾರಿ ಅವರನ್ನು ದೇವರ ಪ್ರಸಾದ ನೀಡಿ ವಿಶೇಷವಾಗಿ ಗೌರವಿಸಲಾಯಿತು. ವೇದಿಕೆಯಲ್ಲಿ ಭಾರತ್ ಬ್ಯಾಂಕ್ ಉಪ ಕಾರ್ಯಾಧ್ಯಕ್ಷ ಅಡ್ವೊಕೇಟ್ ಸೋಮನಾಥ್ ಅಮೀನ್, ನಿರ್ದೇಶಕರುಗಳಾದ ಭಾಸ್ಕರ್ ಸಾಲಿಯನ್, ಗಂಗಾಧರ್ ಪೂಜಾರಿ, ಅಶೋಕ್ ಎಂ. ಕೋಟ್ಯಾನ್, ಮೋಹನ್ ಜಿ. ಪೂಜಾರಿ, ಸಂತೋಷ್ ಕೆ. ಪೂಜಾರಿ, ಸುರೇಶ್ ಸುವರ್ಣ, ನಾರಾಯಣ್ ಸುವರ್ಣ, ನರೇಶ್ ಪೂಜಾರಿ, ದಯಾನಂದ್ ಪೂಜಾರಿ, ಹರೀಶ್ ಪೂಜಾರಿ, ನಿರಂಜನ್ ಪೂಜಾರಿ, ನಿತ್ಯಾನಂದ್ ಕೋಟ್ಯಾನ್, ಪ್ರಜ್ವಲ್ ಪೂಜಾರಿ ಹಾಗೂ ಅಶೋಕ್ ಕೋಟ್ಯಾನ್ ಉಪಸ್ಥಿತರಿದ್ದರು.

​ಅಲ್ಲದೆ, ಬ್ಯಾಂಕ್ ಉಪ ಎಂ.ಡಿ. ದಿನೇಶ್ ಬಿ. ಸಾಲ್ಯಾನ್, ಜಿ.ಎಂ. ಜನಾರ್ಧನ್ ಪೂಜಾರಿ, ಮಹೇಶ್ ಕೋಟ್ಯಾನ್, ಸತೀಶ್ ಬಂಗೇರ, ಜ್ಯೋತಿಷಿ ಡಾ. ಪ್ರವೀಣ್ ಎಂ. ಭಟ್, ರಾಜಕೀಯ ಮುಖಂಡ ಲಕ್ಷ್ಮಣ್ ಪೂಜಾರಿ, ಸದಾಶಿವ ಕರ್ಕೇರ, ಉದ್ಯಮಿಗಳಾದ ಸುರೇಂದ್ರ ಎ. ಪೂಜಾರಿ, ಹರೀಶ್ ಎಸ್. ಪೂಜಾರಿ ವಡಾಲ, ಮಹೇಶ್ ಕರ್ಕೇರ, ರಾಮ ಜಿ. ಸುವರ್ಣ, ಉಮೇಶ್ ಕಾಪು, ಗಣೇಶ್ ಆರ್. ಪೂಜಾರಿ, ಪ್ರದೀಪ್ ಪೂಜಾರಿ, ಜೆ.ವಿ. ಕೋಟ್ಯಾನ್, ಎಂ.ಕೆ. ಹರೀಶ್, ನಾಗೇಶ್ ಪೂಜಾರಿ, ನರೇಶ ಪೂಜಾರಿ ಭಯಂದರ್ ಸೇರಿದಂತೆ ಜಯ ಸಿ. ಸುವರ್ಣ ಅವರ ಅಭಿಮಾನಿಗಳು, ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

​ಶ್ರೀ ನಾರಾಯಣ ಗುರು ಭಜನಾ ಮಂಡಳಿಯ ಅಧ್ಯಕ್ಷ ಅಶೋಕ್ ಸಸಿಹಿತ್ಲು, ಗೌರವ ಪ್ರಧಾನ ಕಾರ್ಯದರ್ಶಿ ಕೇಶವ ಪೂಜಾರಿ ಹಾಗೂ ಸಮಿತಿಯ ಪದಾಧಿಕಾರಿಗಳು, ಮಹಿಳಾ ಮತ್ತು ಯುವ ವಿಭಾಗದ ಸದಸ್ಯರು ಅತಿಥಿಗಳನ್ನು ಗೌರವಿಸಿದರು.

ವರದಿ: ದಿನೇಶ್ ಕುಲಾಲ್



Related posts

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ಸೆ. 5 ರಂದು ಜರಗಿದ 25ನೇ ಸಂಸ್ಥಾಪನಾ ದಿನಾಚರಣೆ, ಸಂಘ ಸಂಸ್ಥೆಗಳಿಗೆ ಗೌರವ ಪುರಸ್ಕಾರ ಸಮಾರಂಭದಲ್ಲಿ ಕರ್ನಾಟಕದ ಸ್ಪೀಕರ್ ಯು. ಟಿ. ಖಾದರ್ ಅವರ ಮನದಾಳದ ನುಡಿ

Mumbai News Desk

ಜೊಗೇಶ್ವರಿಯ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶಾಖೆಯಲ್ಲಿ  ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಸಂಪನ್ನ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ನೀಲ್ ರಾಜೇಶ್ ಶೆಟ್ಟಿ ಶೇ 91.20 ಅಂಕ.

Mumbai News Desk

ಭಂಡಾರಿ ಸೇವಾ ಸಮಿತಿ ಮುಂಬಯಿ 71ನೇ ವಾರ್ಷಿಕ ಮಹಾಸಭೆ.

Mumbai News Desk

ಭಾರತ್ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Mumbai News Desk

ಬಿಲ್ಲವರ ಅಸೋಸಿಯೇಶನ್‌ನ ಮೀರಾರೋಡ್ ಸ್ಥಳೀಯ ಕಚೇರಿಯಲ್ಲಿ, ‘ಮಕ್ಕಳ ಭಜನಾ ತಂಡ’ ದ ಉದ್ಘಾಟನೆ

Mumbai News Desk