30.9 C
Mumbai
June 8, 2026
Mumbai News Kannada
ಮುಂಬಯಿ

ಕಾಪು ಮೊಗವೀರ ಮಹಿಳಾ ಮಂಡಳಿ, ಮುಂಬಯಿ ಇವರ ವತಿಯಿಂದ ಅರಿಶಿನ ಕುಂಕುಮ ಹಾಗೂ  ವಾರ್ಷಿಕ ಸಭೆ





ಕಾಪು ಮೊಗವೀರ ಮಹಿಳಾ ಮಂಡಳಿ ಮುಂಬಯಿ ಇವರು ಆಯೋಜಿಸಿದ ಅರಿಶಿನ ಕುಂಕುಮ ಕಾರ್ಯಕ್ರಮವು  ಜನವರಿ 18 ರಂದು ಅಂಧೇರಿ ಪಶ್ಚಿಮದ ಮೊಗವೀರ ಭವನದಲ್ಲಿ ಜರಗಿತು. ಮಂಡಳಿಯ ಕಾರ್ಯದರ್ಶಿ ಹೇಮ ಕೋಟ್ಯಾನ್ ರವರು ಎಲ್ಲಾ ಸದಸ್ಯರುಗಳನ್ನು ಆತ್ಮೀಯವಾಗಿ ಕಾರ್ಯ ಕ್ರಮಕ್ಕೆ ಸ್ವಾಗತಿಸಿದರು.

ತಾರಾ ಕೋಟ್ಯಾನ್, ಯಶೋಧ ಕಾಂಚನ್, ಶಾಂತ ಕರ್ಕೇರ, ಸುನಂದಾ ಬಂಗೇರ, ವೀರಾವತಿ ಸುವರ್ಣ ರವರು ದೀಪ ಬೆಳಗಿಸಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಮಂಡಳಿಯ ಸದಸ್ಯರು ಪ್ರಾರ್ಥನೆ ಮಾಡಿದರು. ಪ್ರಸ್ತುತ ವರ್ಷದಲ್ಲಿ ಸದಸ್ಯರ ಕುಟುಂಬಗಳಲ್ಲಿ  ಸ್ವರ್ಗವಾಸಿಯಾದ ಪುಣ್ಯ ಆತ್ಮಗಳಿಗೆ ಚಿರಶಾಂತಿ ಸಿಗಲೆಂದು ಎರಡು ನಿಮಿಷ ಮೌನ ಪ್ರಾರ್ಥನೆಯನ್ನು ಸಲ್ಲಿಸಿ ಅಂದಿನ ಸಭೆಯನ್ನು ಪ್ರಾರಂಭಿಸಲಾಯಿತು. ಬಳಿಕ ಮಂಡಳಿಯ ಸದಸ್ಯರಿಂದ ಭಜನಾ ಸಂಕೀರ್ತನೆ ಹಾಗೂ ಕುಣಿತ ಭಜನೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ಸುಸಂದರ್ಭದಲ್ಲಿ ಹಿರಿಯ ಸದಸ್ಯರಾದ ವೀರಾವತಿ ಸುವರ್ಣ, ತಾರಾ ಕೋಟ್ಯಾನ್, ಶಾಂತ ಕರ್ಕೇರ, ಆವಂತಿ ಪುತ್ರನ್, ಶೀಲಾ ಪುತ್ರನ್  ಹಾಗೂ ಮೊಗವೀರ ವ್ಯವಸ್ಥಾಪಕ ಮಂಡಳಿ ನವಿ ಮುಂಬಯಿ ಶಾಖೆಯ ಅಧ್ಯಕ್ಷೆ ಜಾನಕಿ ಬಂಗೇರರವರನ್ನು ಸನ್ಮಾನಿಸಲಾಯಿತು. ಮಂಡಳಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಸೇರ್ಪಡೆ ಮಾಡಿದ ಶ್ರೀಮತಿ ಸುಚರಿತರವರನ್ನು ಸನ್ಮಾನಿಸಲಾಯಿತು. ನಂತರ ಸದಸ್ಯೆಯರು ಪರಸ್ಪರ ಹಳದಿ ಕುಂಕುಮ ಹಚ್ಚಿ ಕೊಳ್ಳುವ ಮೂಲಕ ಪರಸ್ಪರರನ್ನು ಅಭಿನಂದಿಸಿ ಸಂಭ್ರಮಿಸಿದರು. ಈ ನಿಮಿತ್ತ ಎಲ್ಲರಿಗೂ ಆಕರ್ಷಕ ಉಡುಗೊರೆಯನ್ನು ” ಚೋಳ ಗುರಿಕಾರ ‘ ಮನೆಯ ಸದಸ್ಯರ ವತಿಯಿಂದ ನೀಡಲಾಯಿತು.

ತದನಂತರ ಅಧ್ಯಕ್ಷೆ ತುಳಸಿ ಸಾಲ್ಯಾನ್ ರವರು ಮಂಡಳಿಯನ್ನು  Society Registration Act, 1860 ರ ಅಡಿಯಲ್ಲಿ  ನೋಂದಣಿ ಮಾಡಿರುವ ಶುಭಸಮಾಚಾರವನ್ನು ಸದಸ್ಯರಿಗೆಲ್ಲ ಬಹಿರಂಗಪಡಿಸಿದರು. ನಂತರ ಈ ವರ್ಷದಲ್ಲಿ ಮಂಡಳಿಯ ಸಂಖ್ಯೆ 29 ರಿಂದ 100 ಕ್ಕೆ ತಲುಪಿದ ಬಗ್ಗೆ ತಿಳಿಸಿ ಆ ನಿಮಿತ್ತ ಕೇಕ್ ಕತ್ತರಿಸಿ ಈ ದಿನವನ್ನು ನೋಂದಣಿ ದಿನವಾಗಿ  ಆಚರಿಸಿ ಎಲ್ಲರಿಗೂ ಸಿಹಿ ಹಂಚಲಾಯಿತು. ಹೊಸ ಸದಸ್ಯರನ್ನು ಅಭಿನಂದಿಸಲಾಯಿತು.

ಸದಸ್ಯರು ಹಳದಿ ಕುಂಕುಮ ಹಾಗೂ ಮಂಡಳಿಯ ಯಶಸ್ಸಿನ ಬಗ್ಗೆ ತಮ್ಮ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾ ಮಂಡಳಿಗೆ ತಮ್ಮ ಬೆಂಬಲವನ್ನು ಸೂಚಿಸಿದರು . ಮಂಡಳಿಯ ನೋಂದಣಿಗಾಗಿ ಮುಂದಾಳತ್ವ ವಹಿಸಿ ಮುತುವರ್ಜಿ ತೋರಿದ ಅಧ್ಯಕ್ಷೆ ತುಳಸಿ ಸಾಲ್ಯಾನ್ ರವರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ಮಂಡಳಿಯ ನೋಂದಣಿ ಕಾರ್ಯದಲ್ಲಿ ಸಹಕರಿಸಿದ ಎಲ್ಲಾ ಸದಸ್ಯರಿಗೂ ಅಧ್ಯಕ್ಷೆ ತುಳಸಿ ಸಾಲ್ಯಾನ್ ರವರು ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸಿದರು. ನೋಂದಾವಣೆ ನಿಯಮದ ಪ್ರಕಾರ ಮಹಿಳಾ ಮಂಡಳಿಯ ಸಮಿತಿಗೆ ಮೂವರು ಹೊಸ ಸದಸ್ಯರನ್ನು ಸೇರ್ಪಡೆ ಮಾಡಲಾಯಿತು.

ವೇದಿಕೆಯಲ್ಲಿ ಮಂಡಳಿಯ ಸದಸ್ಯರಾದ ತುಳಸಿ ಸಾಲ್ಯಾನ್  ಹೇಮ ಕೋಟ್ಯಾನ್, ರೋಹಿಣಿ ಕರುಣಾಕರ್, ಪ್ರತಿಮಾ ಭಾಸ್ಕರ್, ಭಾಮಿನಿ ಮೆಂಡನ್, ತಾರಾ ಕೋಟ್ಯಾನ್, ಪ್ರಫುಲ್ಲ ಸದಾನಂದ್, ಧನಲಕ್ಷ್ಮಿ ಸಾಲ್ಯಾನ್, ಶೋಭಾ ಮೆಂಡನ್ ರವರು ಉಪಸ್ತಿತರಿದ್ದರು. ಉಷಾ ಕರ್ಕೇರ ಹಾಗೂ ವಿನೋದ ಕೋಟ್ಯಾನ್ ಅವರು ತಮ್ಮ ಇಂಪಾದ ಹಾಡಿನಿಂದ ಸದಸ್ಯರನ್ನು ಮನರಂಜಿಸಿದರು. ಸದಸ್ಯರು ಬಿಡಿಸಿದ್ದ ರಂಗೋಲಿ ಎಲ್ಲರ ಮನಸೆಳೆಯಿತು. ಚಂದ್ರಿಕಾ ಸಾಲ್ಯಾನ್ ರವರು ಮುತ್ತೈದೆಯರು ಹೇಗಿರಬೇಕೆಂಬ ಕವನವನ್ನು ಹಾಡಿದರು.

 ನಂತರ ಶ್ರೀಯಾನ್ ಸದನ ಮನೆಯ ಮಹಿಳೆಯರ ಪ್ರಾಯೋಜಕತ್ವದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಭೋಜನ ವಿರಾಮದ ಬಳಿಕ ವಾರ್ಷಿಕ ಮಹಾಸಭೆ ಆರಂಭವಾಯಿತು. ಕೋಶಾಧಿಕಾರಿ ಪ್ರತಿಮಾ ಭಾಸ್ಕರ್ ರವರು ಕಳೆದ ವರ್ಷದ ಮಂಡಳಿಯ ಉಳಿತಾಯ ಹಾಗೂ ಖರ್ಚಿನ ವಿವರವನ್ನು ಸಭೆಯಲ್ಲಿ ಮಂಡಿಸಿದರು. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಮಂಡಳಿಯ ಎಲ್ಲಾ ಸದಸ್ಯರಿಗೂ ಅಧ್ಯಕ್ಷೆ ತುಳಸಿ ಸಾಲ್ಯಾನ್ ರವರು ಧನ್ಯವಾದ ತಿಳಿಸಿದರು. ಕೋಶಾಧಿಕಾರಿ  ಪ್ರತಿಮಾ ಭಾಸ್ಕರ್ ರವರು ಕಾರ್ಯಕ್ರಮವನ್ನು ತುಂಬಾ ಅಚ್ಚು ಕಟ್ಟಾಗಿ ಹಾಗೂ ಸುಂದರವಾಗಿ ನಿರೂಪಿಸಿದರು.



Related posts

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ಸಮಾಜದ ವಿದ್ಯಾರ್ಥಿಗಳಿಗಾಗಿ ಪುಸ್ತಕ ಹಾಗೂ ಶಾಲಾ ಪರಿಕರಗಳ ವಿತರಣೆ ಕಾರ್ಯಕ್ರಮ

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ; ಆಷಾಢ ಹಬ್ಬ ಆಚರಣೆ,

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ರಕ್ಷಿತ್ ಸತೀಶ್ ಶೆಟ್ಟಿ ಗೆ ಶೇ. 93.60 ಅಂಕ.

Mumbai News Desk

ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ  ಶ್ರೀಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ -ಮೊಸರು ಕುಡಿಕೆ ಸಂಭ್ರಮ, ಭಕ್ತಿ ಸಂಗೀತ ಕಾಠ್ಯಕ್ರಮ,

Mumbai News Desk

ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಅಶ್ರಯದಲ್ಲಿ ಉಚಿತ ನೇತ್ರ ಪರೀಕ್ಷೆ ಹಾಗೂ ರಕ್ತದಾನ ಶಿಬಿರ

Mumbai News Desk

ಕುಮಾರ ಕ್ಷತ್ರಿಯ ಸಂಘ ಮುಂಬೈ ಅರವತ್ತನೇ ವಾರ್ಷಿಕ ಸತ್ಯನಾರಾಯಣ ಮಹಾ ಪೂಜೆ ವಾರ್ಷಿಕ ಮಹಾಸಭೆ ವಿದ್ಯಾರ್ಥಿ ವೇತನ ವಿತರಣೆ

Mumbai News Desk