26.3 C
Mumbai
March 7, 2026
Mumbai News Kannada
ಮುಂಬಯಿ

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ನವಿ ಮುಂಬಯಿ ಶಾಖೆಯು ನಡೆಸುತ್ತಿರುವ ಚಟುವಟಿಕೆಗಳು ಶಾಘನೀಯವಾಗಿದೆ : ಪ್ರೀತಿ ಎಚ್‌. ಶ್ರೀಯಾನ್‌.






ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ನವಿ ಮುಂಬಯಿ ಶಾಖೆಯು ಸದಾ ಚಟುವಟಿಕೆಯಲ್ಲಿ ನಿರತವಾಗಿದ್ದು ಇದು ಈ ಪರಿಸರದಲ್ಲಿ ದಿನೇ ದಿನೇ ಜನಪ್ರಿಯತೆ ಗಳಿಸುತ್ತಿರುವುದನ್ನು ಕಂಡು ನನಗೆ ಅತೀವ ಆನಂದವಾಗುತ್ತಿದೆ. ಶಾಖೆಯು ನಡೆಸುತ್ತಿರುವ ವಿವಿಧ ಕಾರ್ಯಕ್ರಮಗಳನ್ನು ನಾನು ನಿಕಟವಾಗಿ ಗಮನಿಸುತ್ತಾ ಬಂದಿದ್ದೇನೆ “ ಹೀಗಂದವರು ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ಪ್ರಧಾನ ಸಮಿತಿಯ ಜೊತೆ ಕಾರ್ಯದರ್ಶಿ ಪ್ರೀತಿ ಎಚ್‌, ಶ್ರೀಯಾನ್‌. ಅವರು ಶಾಖೆಯ ಮಹಿಳಾ ವಿಭಾಗದ ವತಿಯಿಂದ ಶನಿವಾರ ಜನವರಿ 31ರಂದು ಸಂಜೆ ಗಂಟೆ 4-00 ರಿಂದ ನ್ಯೂ ಪನ್ವೇಲ್‌ನ ಖಾಂದಾ ಕಾಲನಿಯ ಗಣೇಶ್‌ ಪ್ಲಾಜಾ ವಸತಿ ಸಂಕೀರ್ಣದ ಕ್ಲಬ್‌ ಹೌಸ್‌ನಲ್ಲಿ ಏರ್ಪಡಿಸಲಾದ ಅರಿಸಿನ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಿದ್ದರು. ಅವರು ಮುಂದುವರಿಯುತ್ತಾ ಮಂಡಳಿಯ ವತಿಯಿಂದ ತುಳು ಕನ್ನಡಿಗರಿಗಾಗಿ ಕೈಗೆಟಕುವ ದರದಲ್ಲಿ ಒದಗಿಸಲಾಗುತ್ತಿರುವ ಡಯಾಲಿಸಿಸ್‌ ಸೇವೆ, ವಿಧವೆಯರಿಗಾಗಿ ನೀಡಲಾಗುತ್ತಿರುವ ಸೌಲಭ್ಯಗಳು ಹಾಗೂ ಶೈಕ್ಷಣಿಕ ಸ್ಕಾಲರ್‌ಶಿಪ್‌ ಮುಂತಾದ ಸಮಾಜಮುಖಿ ಸೇವೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ನವಿ ಮುಂಬಯಿ ಶಾಖೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶದೊರೆತ ಬಗ್ಗೆ ತನಗೆ ಅತ್ಯಂತ ಆನಂದವಾಗಿದೆ ಎಂದ ಪ್ರೀತಿ ಎಚ್‌.ಶ್ರೀಯಾನ್‌ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಏರ್ಪಡಿಸಿದ ಸಲುವಾಗಿ ಮಹಿಳಾ ವಿಭಾಗದ ಸದಸ್ಯೆಯರನ್ನು ಅಭಿನಂದಿಸಿದರು.


ಮಹಿಳಾ ವಿಭಾಗದ ಚಯರ್‌ಪರ್ಸನ್‌ ಜಾನಕಿ ಬಂಗೇರರು ಅರಿಸಿನ ಕುಂಕುಮವು ಹಿಂದೂ ಧರ್ಮದಲ್ಲಿ ಪಾವಿತ್ರ್ಯ, ಶುಭ, ಸೌಭಾಗ್ಯ ಹಾಗೂ ಶಕ್ತಿಯ ಸಂಕೇತವಾಗಿದೆ . ಅದು ಶುದ್ಧತೆ ಮತ್ತು ಜ್ಞಾನದ ಪ್ರತೀಕವೂ ಆಗಿದೆ ಎನ್ನುತ್ತಾ ಅರಿಸಿನ ಕುಂಕುಮದ ಮಹತ್ವದ ಬಗ್ಗೆ ತಿಳಿಸಿದರು. ಅವರು ಕಾರ್ಯಕ್ರಮದ ಏರ್ಪಾಡಿಗಾಗಿ ದುಡಿದ ಮಹಿಳಾ ವಿಭಾಗದ ಎಲ್ಲಾ ಸದಸ್ಯೆಯರ ಉಪಕಾರವನ್ನು ಸ್ಮರಿಸಿದರು.
ಹರಿಣಾಕ್ಷಿ ಮೈಂದನ್‌, ಮಮತಾ ಸಾಲ್ಯಾನ್‌, ಸಾವಿತ್ರಿ ಬಂಗೇರ, ಹೇಮ ಕೋಟ್ಯಾನ್‌, ಬಬಿತಾ ಕಾಂಚನ್‌ ಪ್ರಾರ್ಥನೆ ಗೀತೆ ಹಾಡಿದರು. ಅಶ್ವಿನಿ ಕೋಟ್ಯಾನ್‌ ಅತಿಥಿ ಪರಿಚಯ ಮಾಡಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಶಾಖೆಯ ಜೊತೆ ಕಾರ್ಯದರ್ಶಿ ತೇಜಸ್ವಿ ಮಲ್ಪೆ ಕೊನೆಯಲ್ಲಿ ವಂದಿಸಿದರು. ಆ ಬಳಿಕ ಸದಸ್ಯೆಯರು ಪರಸ್ಪರ ಅರಿಸಿನ ಮತ್ತು ಕುಂಕುವನ್ನು ಹಚ್ಚಿಕೊಳ್ಳುವ ಮೂಲಕ ಸಂಭ್ರಮಿಸಿದರು.


ಈ ಶುಭ ಸಂಭ್ರಮದಲ್ಲಿ ಮಂಡಳಿಯ ಅಂಧೇರಿ ಪ್ರಧಾನ ಕಛೇರಿಯ ಮಹಿಳಾ ವಿಭಾಗದ ಚಯರ್‌ ಪರ್ಸನ್ ನಿವೇದಿತಾ ಸಾಲ್ಯಾನ್‌, ಕಾರ್ಯದರ್ಶಿ ರಾಜೇಶ್ವರಿ ಉಪೂರ್‌, ವೈಸ್‌ ಚಯರ್‌ಪರ್ಸನ್ ಸುರೇಖಾ ಪುತ್ರನ್‌, ಉಪ ಕಾರ್ಯದರ್ಶಿ ಶೈಲಜಾ ಮೆಂಡನ್‌, ಜೊತೆ ಕೋಶಾಧಿಕಾರಿ ಚಂದ್ರ ಮೆಂಡನ್‌ ಮತ್ತು ಸಮಿತಿ ಸದಸ್ಯೆ ಹರ್ಷಾ ಸಾಲ್ಯಾನ್‌, ಡೋಂಬಿವಿಲಿ ಶಾಖೆಯ ಮಹಿಳಾ ವಿಭಾಗದ ಚಯರ್‌ಪರ್ಸನ್‌ ಗೀತಾ ಮೆಂಡನ್‌, ಕಾರ್ಯದರ್ಶಿ ದಮಯಂತಿ ಕೋಟ್ಯಾನ್‌, ಜೊತೆ ಕಾರ್ಯದರ್ಶಿ ಶಶಿ ಮೆಂಡನ್‌, ಸಮಿತಿ ಸದಸ್ಯೆಯರಾದ ಸೕವಂತಿ ಮೆಂಡನ್‌, ಶೋಭಾ ಪುತ್ರನ್‌, ಶಾಂತಾ ಕುಂದರ್‌, ಸೌಮ್ಯ ಬಂಗೇರ, ಸುಜಾತಾ ಪುತ್ರನ್‌, ಜಯಂತಿ ಬಂಗೇರ ಹಾಗೂ ಜಯಶ್ರೀ ಸಾಲ್ಯಾನ್‌, ಮೀರಾ ಭಯಿಂದರ್‌ ಶಾಖೆಯ ಮಹಿಳಾ ವಿಭಾಗದ ಕಲಾವತಿ ತಿಂಗಳಾಯ, ಅಮೃತಾ ಸಾಲ್ಯಾನ್‌, ವಿದ್ಯಾ ಪುತ್ರನ್‌, ಅರ್ಚನಾ ಕಾಂಚನ್‌, ವಸಯಿ ತಾಲೂಕು ಮೊಗವೀರ ಸಂಘದ ಮಹಿಳಾ ವಿಭಾಗದ ಚಯರ್‌ಪರ್ಸನ್‌ ಪ್ರೇಮಾ ನಾಯ್ಕ್‌, ಯಶೋಧಾ ಬಂಗೇರ ಮತ್ತು ರಜನಿ ಕುಂದರ್‌, ನವಿ ಮುಂಬಯಿ ಶನೀಶ್ವರ ಮಂದಿರದ ಮಹಿಳಾ ವಿಭಾಗದ ಮಾಜೀ ಅಧ್ಯಕ್ಷೆ ಹಾಗೂ ರಂಗನಟಿ, ನಿರ್ದೇಶಕಿ, ಲೇಖಕಿ ತಾರಾ ಆರ್‌. ಬಂಗೇರ ಭಾಗವಹಿಸಿದ್ದರು. ಬಳಿಕ ನೆರೆದವರ ಸಲುವಾಗಿ ವಿವಿಧ ಸ್ಪರ್ಧ್ಗೆಗಳನ್ನು ನಡೆಸಲಾಗಿ, ಇದರಲ್ಲಿ ಉಷಾ ಕರ್ಕೇರ, ಮಮತಾ ಸಾಲ್ಯಾನ್‌, ಶಮ್ಮಿ ಪುತ್ರನ್‌ ಬಹುಮಾನ ಗಳಿಸಿದರು. ಮನರಂಜನೆಯ ಅಂಗವಾಗಿ ಎಲ್ಲರೂ ಹಾಡು ಕುಣಿತದಲ್ಲಿ ತೊಡಗಿಕೊಂಡು ಕಾರ್ಯಕ್ರಮವನ್ನು ಅವಿಸ್ಮರಣೀಯಗೊಳಿಸಿದರು. ಲಘು ಉಪಾಹಾರದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.
ವರದಿ: ಸೋಮನಾಥ ಎಸ್‌.ಕರ್ಕೇರ, 9819321186



Related posts

ಚಿತ್ರಾಪು ಬಿಲ್ಲವರ ಸಂಘ ಮುಂಬಯಿ : 79ನೇ ವಾರ್ಷಿಕ ಮಹಾಸಭೆ,

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಆಟಿಡೊಂಜೆ ಬಂಟರೆ ಕೂಟ

Mumbai News Desk

ಚಿಣ್ಣರಬಿಂಬ ವಿಕ್ರೋಲಿ ಶಿಬಿರದ ಮಕ್ಕಳ ಸಾಂಸ್ಕೃತಿಕ ಪ್ರತಿಭಾ ಸ್ಪರ್ಧೆ

Mumbai News Desk

ಕರ್ನಾಟಕ ವಿಶ್ವಕರ್ಮ ಎಸೋಸಿಯೇಶನ್ ಮುಂಬಯಿ, ಭಕ್ತಿ, ಸಡಗರದಿಂದ ಜರಗಿದ ವಿಶ್ವಕರ್ಮ ಮಹೋತ್ಸವ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ನಿಧೀಶ ಧನಂಜಯ ಪೂಜಾರಿಗೆ ಶೇ 89.20 ಅಂಕ.

Mumbai News Desk

ಡಾ. ಪ್ರಾಜ್ಞಾ ಸಾಲ್ಯಾನ್ . ಎಂ. ಡಿ. ಎಸ್. ನಲ್ಲಿ ಉನ್ನತ ಸಾಧನೆ

Mumbai News Desk