September 6, 2026
Mumbai News Kannada
ಮುಂಬಯಿ

ಕುಮಾರ ಕ್ಷತ್ರಿಯ ಸಂಘ ಮುಂಬೈ ಅರವತ್ತನೇ ವಾರ್ಷಿಕ ಸತ್ಯನಾರಾಯಣ ಮಹಾ ಪೂಜೆ ವಾರ್ಷಿಕ ಮಹಾಸಭೆ ವಿದ್ಯಾರ್ಥಿ ವೇತನ ವಿತರಣೆ





ಯುವಕರಲ್ಲಿ ಸಾಮಾಜಿಕ ಬದ್ಧತೆ ಕಳಕಳಿ ಅಗತ್ಯ : ಎಂ.ಡಿ. ರಾವ್ 

ಚಿತ್ರ, ವರದಿ : ರಮೇಶ್ ಉದ್ಯಾವರ 

ಮುಂಬಯಿ, ಫೆ. 24:   ಮಹಾ ನಗರದಲ್ಲಿರುವ ಪ್ರತಿಷ್ಠಿತ ಜಾತೀಯ ಸಂಸ್ಥೆಯಲ್ಲೊಂದಾದ ಕುಮಾರ ಕ್ಷತ್ರಿಯ ಸಂಘದ  ವತಿಯಿಂದ ಬೆಳಿಗ್ಗೆ ಗಣಹೋಮ,60ನೇ ವಾರ್ಷಿಕ  ಶ್ರೀ ಸತ್ಯ ನಾರಾಯಣ ಮಹಾಪೂಜೆಯು ಫೆ. 22ರಂದು ಸಾಂತಕ್ರೂಜ್ ಪೂರ್ವದ ಪೇಜಾವರ ಮಠ ಮಧ್ವಭವನ ವಿಶ್ವೇಶತೀರ್ಥ ಸಭಾಗೃಹದಲ್ಲಿ. ಸಂಘದ ಅಧ್ಯಕ್ಷ ಎಂ.ಡಿ. ರಾವ್ ಹಾಗೂ ಧರ್ಮ ಪತ್ನಿ ಪ್ರಭಾ ಎಂ ರಾವ್ ಮತ್ತು  ಕಾರ್ಯನಿರತ ಅಧ್ಶಕ್ಷರಾದ ಶಾಲು ಎಂ. ರಾವ್ ಅವರ ನೇತೃತ್ವದಲ್ಲಿ ಪುರೋಹಿತರಾದ ಹರಿ ಭಟ್ ರವರ ಧಾರ್ಮಿಕ ವಿಧಿ ವಿಧಾನದೊಂದಿಗೆ ನೆರವೇರಿತು. ಬಳಿಕ ಮಹಿಳೆಯರಿಂದ ಹಳದಿ ಕುಂಕುಮ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.   

   ಮಧ್ಯಾಹ್ನ ಜರುಗಿದ ಕುಮಾರ ಕ್ಷತ್ರಿಯ ಸಂಘ, ಮುಂಬಯಿಯ ಅಧ್ಯಕ್ಷ ಎಂ ಡಿ ರಾವ್ ಹಾಗೂ ಕಾರ್ಯನಿರತ ಅಧ್ಯಕ್ಷರಾದ   ಶಾಲು ಎಂ. ರಾವ್ ಇವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆಯು ಯಶಸ್ವಿಯಾಗಿ ನೆರವೇರಿತು. 

     ಆರಂಭದಲ್ಲಿ ಮಹಿಳಾ ಬಳಗದ ಸದಸ್ಯರು ಗಣೇಶ  ಸ್ತುತಿಯನ್ನು ಸಾದರ ಪಡಿಸಿದರು. ಕಳೆದ ವರ್ಷ ದಿವಂಗತರಾದ  ಸಮಾಜದ ಮಹನೀಯರಿಗೆ ಮೌನ ಪ್ರಾರ್ಥನೆ ಸಲ್ಲಿಸಿದರು. ಸಂಘದ ಅಧ್ಯಕ್ಷ ಎಂ. ಡಿ. ರಾವ್  ಬಂದ ಎಲ್ಲ ಮಹನೀಯರನ್ನು ಸ್ವಾಗತಿಸಿದರು. 

ವಾರ್ಷಿಕ ಲೆಕ್ಕ ಪತ್ರವನ್ನು ಸಂಘದ‌ ಕೋಶಾಧಿಕಾರಿ ಶಾಂತಾರಾಮ್ ಜೆ. ಮಾಂಗಾಡ್ ಸಭೆಯಲ್ಲಿ ಮಂಡಿಸಿದರು.

ಬಳಿಕ ಇದೇ ಸಂದರ್ಭದಲ್ಲಿ ಸಮಾಜ ಬಾಂಧವರ   ಮಕ್ಕಳು ಶಾಲಾ ಕಾಲೇಜಿನಲ್ಲಿ ಉತ್ತೀರ್ಣರಾದ ಪ್ರತಿಭಾವಂತ ಮಕ್ಕಳಿಗೆ  ವಿದ್ಯಾರ್ಥಿ ವೇತನವನ್ನು  ನೀಡಿ ಸತ್ಕರಿಸಲಾಯಿತು. 

ನಂತರ ಅಧ್ಯಕ್ಷರಾದ ಎಂ ಡಿ.ರಾವ್ ಪೂಜೆಗೆ ಆಗಮಿಸಿದ ಎಲ್ಲಾ ಗಣ್ಯರಿಗೆ ಹೃತ್ಪೂರ್ವಕ ವಂದನೆ ಸಲ್ಲಿಸಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು   ಸಮಾಜದ ಯುವಜನರಲ್ಲಿ ಸಾಮಾಜಿಕ ಕಳಕಳಿ ಬದ್ಧತೆ ಒಕ್ಕೂಟ ಪ್ರಜ್ಞೆ ಬೆಳೆಸುವ ಉದ್ದೇಶ ಮುಖ್ಯವಾಗಿದ್ದು ಅಂತಹ ಯುವಕರನ್ನು ಮುಖ್ಯ ವಾಹಿನಿಗೆ ತರಬೇಕಾದರೆ ನಮ್ಮಲ್ಲಿ ಸಂಘಟನೆಯ ಸ್ವಂತ ಕಚೇರಿಯ ಮುಖ್ಯ. ಇಂತಹ ಕೇಂದ್ರ ಬಿಂದು ಜಾಗದಲ್ಲಿ ನಾವೆಲ್ಲ ಒಂದೆಡೆ ಸೇರುವ ಮೂಲಕ ನಮ್ಮ ಕಾರ್ಯಕ್ರಮಗಳು ಉತ್ಸವಾಗಿ ಪರಿವರ್ತನೆ ಗೊಳ್ಳಲು ಸಾಧ್ಯ. ಸಾಮರಸ್ಯದ ಪ್ರತೀಕವಾಗಿ ಅರಿತು ಬಾಳುವ ಮೂಲಕ ಕಾಲದ ಜೊತೆಗೆ ಸಂಘಟನೆ ಗೆ ಯುವಶಕ್ತಿಗಳು ಕೊಡುಗೆಯಾಗಬೇಕು.  ಸಹಬಾಳ್ವೆ ಸದಾಶಯ ಧ್ಯೇಯದೊಂದಿಗೆ ಆತ್ಮಪ್ರಜ್ಜೆ ಸಾಂಸ್ಕೃತಿಕ ಬದುಕಿನೊಂದಿಗೆ ಬಾಳುವ ಮೂಲಕ ಸಂಸ್ಥೆಯನ್ನು ಮತ್ತಷ್ಟು ಒಗ್ಗಟ್ಟಾಗಿ ಬೆಳೆಸೋಣ ಎಂದು ಹೇಳಿ ತಮ್ಮ ದಾಂಪತ್ಯ ಜೀವನದ 50ನೇ ಸಂವತ್ಸರದಲ್ಲಿ ಜರಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಬದುಕಿನ ಭಾವನಾತ್ಮಕ ಸಿಹಿ ಕಹಿ ಘಟನೆಗಳನ್ನು ಸದಸ್ಯರೊಂದಿಗೆ ಹಂಚಿಕೊಂಡರು.

ಕಾರ್ಯನಿರತ ಅಧ್ಯಕ್ಷ ರಾದ ಶಾಲು ಎಂ ರಾವ್ ಮಾತನಾಡಿ ನಮ್ಮ ಕಾರ್ಯ ಚಟುವಟಿಕೆಗಳು ಗುರಿ ಮುಟ್ಟಬೇಕಾದರೆ ಅದಕ್ಕೆ ಒಂದು ಸಮೀಕರಣದ ವ್ಯವಸ್ಥೆ ಬೇಕು. ಅದಕ್ಕೆ ಪೂರಕವಾಗಿ . ಮಹಾನಗರದಲ್ಲಿ ಸಮಾಜ ಬಾಂಧವರಿಗೆ ಸಂಬಂಧಿಸಿದ ಕಾರ್ಯಕ್ರಮಗಳ ರೂಪುರೇಷೆಗೆ ಕಚೇರಿಯ ಕೇಂದ್ರ ಬಿಂದು ಅಗತ್ಯ . ಆ ಮೂಲಕ ನಮ್ಮ ಕಾರ್ಯಕ್ರಮಗಳು ವಿಸ್ತರಿಸಲು ಸಾಧ್ಯ ಜೊತೆಗೆ ಹೊಸ ಪೀಳಿಗೆ ನಮ್ಮ ಸಂಸ್ಥೆಯನ್ನು ಮುಂದೆ ಕೊಂಡೊಯ್ಯಲು ಸಾಧ್ಯ. ಈ ಮಹತ್ವ ಕಾರ್ಯದ ಕೆಲಸಕ್ಕೆ ಎಲ್ಲರೂ ಕೈಜೋಡಿಸುವಂತೆ ವಿನಂತಿಸಿದ ಅವರು ಸಂಘದ ಕಾರ್ಯದರ್ಶಿ ಉಮಾನಾಥ್ ರಾವ್ ಮತ್ತು. ಕೋಶಾಧಿಕಾರಿ   ಶಾಂತಾರಾಮ್  ಮಾಂಗಡ್ ರವರ ಸಂಘದ  ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು.

    ಈ ಸಂದರ್ಭದಲ್ಲಿ ಲಘು ಉಪಹಾರ ಹಾಗೂ ಮಧ್ಯಾಹ್ನ ಪ್ರೀತಿ ಭೊಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಕುಮಾರ ಕ್ಷತ್ರಿಯ ಸಂಘ ಮುಂಬಯಿಯ ಉಪಾಧ್ಯಕ್ಷ  ಕೆ ಮಾಧವ ರಾವ್, ಗೌ. ಪ್ರ. ಕಾರ್ಯದರ್ಶಿ    ಉಮಾನಾಥ ವಿ. ರಾವ್, ಕೋಶಾಧಿಕಾರಿ ಶಾಂತಾರಾಮ್ ಜೆ. ಮಾಂಗಾಡ್, ಜೊತೆ ಕಾರ್ಯದರ್ಶಿ ಸುರೇಂದ್ರ ಎಚ್. ಎ. ಜೊತೆ ಕೋಶಾಧಿಕಾರಿ ಸಾಗರ  ಪಿ. ರಾವ್ ಮತ್ತು  ಸಮಿತಿ ಸದಸ್ಯರಾದ  ರವಿ ಎಸ್. ಕಲ್ನಾಡ್, 
ಪ್ರಶಾಂತ್ ಆರ್ ರಾವ್,  ಅನುಪ್ ರಾವ್ ಅನಿಲ್ ಜಿ ರಾವ್,  ಪ್ರಶಾಂತ್ ಪಿ ನಾಥ್, ರಾಮದಾಸ್ ರಾವ್, ತರುಣ್ ಎಸ್ ರಾವ್, ಜಯೇಶ್ ಚಂದ್ರಗಿರಿ, ಸಂತೋಷ್ ವಿ ರಾವ್, ಇಂದುಮತಿ ಎ ರಾವ್ ಕವಿತಾ  ರೋಹನ್ ವಿಶಾಲಾಕ್ಷಿ ಎ ಚಂದ್ರಗಿರಿ   ಪವಿತಾ ಎಸ್ ರಾವ್, ಬೀನಾ ಎಸ್ ರಾವ್,  ರೇಖಾ ಸಾವಂತ್, ರಮ್ಯಾ ಎಸ್ ಮಾಂಗಡ್ ಮತ್ತು ಸಮಾಜ ಬಾಂಧವರೆಲ್ಲರೂ ಉಪಸ್ಥಿತಿತರಿದ್ದರು.

 ಕಾರ್ಯಕ್ರಮದ ನಿರೂಪಣೆ ಸಂಘದ  ಕವಿತಾ ರೋಹನ್ ಕಾರ್ಯಕ್ರಮ ನಿರೂಪಣೆಯಲ್ಲಿ ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಗೌ. ಪ್ರ. ಕಾರ್ಯದರ್ಶಿ ಉಮನಾಥ್ ವಿ. ರಾವ್  ಧನ್ಯವಾದ ಅರ್ಪಿಸಿದರು.



Related posts

ಮುಂಬಯಿ : ಹೋಟೆಲ್ ಉದ್ಯಮಿಗೆ ಕೊಲೆ ಬೆದರಿಕೆ ಗ್ಯಾಂಗ್ ಸ್ಟರ್ ಡಿ. ಕೆ ರಾವ್ ಬಂಧನ

Mumbai News Desk

ಬಂಟರ ಸಂಘ ಮುಂಬಯಿಯ ಡೊಂಬಿವಲಿ ಪ್ರಾದೇಶಿಕ ಸಮೀತಿಯ ಮಹಿಳಾ ವಿಭಾಗದ ವತಿಯಿಂದ ಅರಷಿಣ ಕುಂಕುಮ ಹಾಗೂ ಆರೋಗ್ಯಕುರಿತು ವಿಚಾರ ಸಂಕಿರಣ.

Mumbai News Desk

ಗೋರೆಗಾಂವ್: ಶ್ರದ್ಧಾ-ಭಕ್ತಿಯಿಂದ ಜರುಗಿದ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ 61ನೇ ವಾರ್ಷಿಕೋತ್ಸವ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಮೇಘನಾ ಉಮೇಶ್ ಪೂಜಾರಿ ಗೆ ಶೇ 90.40 ಅಂಕ.

Mumbai News Desk

ಚಿಣ್ಣರ ಬಿಂಬ: ನೈರುತ್ಯ ವಲಯದ ಮಕ್ಕಳ ಉತ್ಸವದ ಸಮಾರೋಪ ಸಮಾರಂಭ

Mumbai News Desk

ತುಳುಕೂಟ ಫೌಂಡೇಶನ್ (ರಿ) ನಾಲಾಸೋಪಾರ ಹಾಗೂ ಶ್ರೀದೇವಿ ಯಕ್ಷ ಕಲಾ ನಿಲಯದ ವಾರ್ಷಿಕೋತ್ಸವ, ಸಮಾರೋಪ,

Mumbai News Desk