September 6, 2026
Mumbai News Kannada
ಪ್ರಕಟಣೆ

ಡಿ.10 ರಂದು ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಡೊಂಬಿವಲಿ ಇದರ 10ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ.





ಡೊಂಬಿ ವಲಿ ಪಶ್ಚಿಮ, ಟೇಲ್ಕಸ್ ವಾಡಿ ಯ ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಇದರ 10ನೇ ವರ್ಷದ ಅಯ್ಯಪ್ಪ ಸ್ವಾಮಿಯ ಪಡಿ ಪೂಜೆ ಮತ್ತು ಮಹಾಪೂಜೆ ಇದೇ ಬರುವ ದಿನಾಂಕ 10-12-2023 ಆದಿತ್ಯವಾರದಂದು ಶ್ರೀ ಶರತ್ ಗುರುಸ್ವಾಮಿ ಕುಡ್ಗಿಹಿತ್ಲು ಇವರ 17ನೇ ವರ್ಷದ ಶಬರಿಮಲೆ ಯಾತ್ರೆ ಹಾಗೂ ಇವರ ಮಾರ್ಗದರ್ಶನದಲ್ಲಿ
ನಡೆಯಲಿರುವುದು.

ಬೆಳಿಗ್ಗೆ ಗಂಟೆ 6:00 ಕ್ಕೆ ಗಣಹೋಮ, 8:00 ಕ್ಕೆ ಭಜನೆ, ಮಧ್ಯಾಹ್ನ ಗಂಟೆ 12:00 ಕ್ಕೆ ಪಡಿಪೂಜೆ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಲಿದೆ.

ಶ್ರೀ ಸ್ವಾಮಿಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಈ ವರ್ಷದ ಮಾಲಾಧಾರರಾದ ಶ್ರೀ ಶರತ್ ಗುರುಸ್ವಾಮಿ, ಶ್ರೀ ದಿನೇಶ್‌ ಸ್ವಾಮಿ, ಶ್ರೀ ಸುಬ್ರಹ್ಮಣ್ಯ ಸ್ವಾಮಿ, ಶ್ರೀ ಹರೀಶ್ ಸ್ವಾಮಿ, ಶ್ರೀ ಸುಧಾಕರ್ ಸ್ವಾಮಿ, ಶ್ರೀ ಸುರೇಶ್ ಸ್ವಾಮಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ವಿಶೇಷ ಸೂಚನೆ :

ಶ್ರೀ ಶಬರಿ ಆಯ್ಯಪ್ಪ ಭಜನಾಮಂಡಳಿ, ಡೊಂಬಿವಲಿ (ಪಶ್ಚಿಮ) ಇವರ ದಶಮಾನೋತ್ಸವದ ಸಲುವಾಗಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರವಿವಾರ ದಿನಾಂಕ 17/12/2023 ರಂದು ಅಪರಾಹ್ನ 3.30 ಕ್ಕೆ ಸರಿಯಾಗಿ ಲೇವಾಭವನ, ದತ್ತ ನಗರ, ಡೊಂಬಿವಲಿ (ಪೂರ್ವ) ಇಲ್ಲಿ ಸಿರಿಕಲಾ ಮೇಳ ಬೆಂಗಳೂರು ಹಾಗೂ ಅತಿಥಿ ಕಲಾವಿದರಿಂದ “ಕಂಸ ದಿಗ್ವಿಜಯ-ಕಂಸ ವಧೆ” ಎಂಬ ಕನ್ನಡ ಪೌರಾಣಿಕ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ. ಕಲಾಭಿಮಾನಿಗಳಾದ ತಾವೆಲ್ಲರು ಆಗಮಿಸಿ ಈ ಕಾರ್ಯಕ್ರಮವನ್ನು ಚಂದಗಾಣಿಸಿ ಕೋಡಬೇಕಾಗಿ ವಿನಂತಿ.

.

.

.



Related posts

ಗೋರೆಗಾಂವ್ ಆಶ್ರಮದಲ್ಲಿ ಜುಲೈ 28, 29ರಂದು ಗುರು ಪೂರ್ಣಿಮೆ: ಏಕಾಹ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಜೂನ್ 15: ಶ್ರೀ ಭುವನೇಶ್ವರಿ ಸೇವಾ ಸಮಿತಿ ಕೋಟೆ, ಮುಂಬಯಿ – 42ನೇ ವಾರ್ಷಿಕ ಮಹಾಪೂಜೆ

Mumbai News Desk

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ , ಮಹಿಳಾ ವಿಭಾಗ. ಜುಲೈ 20 ರಂದು ಆಶಾಡ ಹಬ್ಬ ಆಚರಣೆ, “ತುಳುವೆರೆನ ಆಟಿದ ಕಥೆ “ತುಳು ನಾಟಕ.

Mumbai News Desk

ಫೆ. 11 ರಂದು ಜಗಜ್ಯೋತಿ ಕಲಾವೃಂದ (ರಿ.) ಮುಂಬಯಿ 37ನೇ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ.

Mumbai News Desk

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ, ಜೋಗೇಶ್ವರಿ ಪೂರ್ವ – ಸೆ. 22ರಿಂದ ಶರನ್ನವರಾತ್ರಿ ಹಾಗೂ ವಿಜಯದಶಮಿ ಮಹೋತ್ಸವ

Mumbai News Desk

ಬ್ರಹ್ಮ ಶೀ ನಾರಾಯಣ ಗುರುಗಳ ದಂತ [ದಿವ್ಯ ದಂತ] ಪ್ರದರ್ಶನ

Mumbai News Desk