30 C
Mumbai
April 24, 2026
Mumbai News Kannada
ಪ್ರಕಟಣೆ

ಬಂಟರ ಸಂಘ ಮುಂಬಯಿ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿ, ಮಾ. 8ಕ್ಕೆ , ಸಮಾಜ ಕಲ್ಯಾಣ ಸಮಿತಿ ವತಿಯಿಂದ ಆರ್ಥಿಕ ಸಹಾಯದ ಅರ್ಜಿ ವಿತರಣೆ,





   ಮೀರಾ ರೋಡ್:  ಬಂಟರ ಸಂಘ ಮುಂಬಯಿ ಇದರ ಸಮಾಜ ಕಲ್ಯಾಣ ಸಮಿತಿಯ ಆಶ್ರಯದಲ್ಲಿ ಕೊಡಲ್ಪಡುವ ಧನ ಸಹಾಯವು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಮಾಜದ ಬಂಟ ಬಂಧುಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ವಾರ್ಷಿಕ ವಿಧವಾ ವೇತನ, ಮತ್ತು ಮಾನಸಿಕ ಅಸ್ವಸ್ಥೆಯಲ್ಲಿರುವ ಯಾ ವಿಕಲಾಂಗ ಚೇತನರಿಗೆ ಆರ್ಥಿಕ ನೆರವು ವಿತರಣೆ ಕಾರ್ಯಕ್ರಮ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ್ ಶೆಟ್ಟಿಯವರ ನೇತೃತ್ವದಲ್ಲಿಜೂನ್ ತಿಂಗಳಲ್ಲಿ ನಡೆಯಲಿದೆ.

ಈ ಪ್ರಯುಕ್ತ ಅರ್ಜಿ ವಿತರಣೆಯು ಬಂಟರ ಸಂಘ ಮುಂಬಯಿ ಇದರ ಮೀರಾ -ಭಾಯಂದರ್ ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾ‌ರ್ ರವೀಂದ್ರ ಶೆಟ್ಟಿಯವರ ಸಮಕ್ಷಮದಲ್ಲಿ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸಂಪತ್ ಶೆಟ್ಟಿ ಪಂಜದಗುತ್ತು ಇವರ ಮುಂದಾಳತ್ವದಲ್ಲಿ ಮಾ. 8ರ ರವಿವಾರದಂದು ಹೋಟೆಲ್ ಸ್ವಸ್ತಿಕ್, ಅಂಬರ್ ಪ್ಲಾಜಾ, ವಿಜಯ ಪಾರ್ಕ್ ಮೀರಾ ರೋಡ್ ಇಲ್ಲಿ ಸಂಜೆ ಗಂಟೆ 4 ರಿಂದ 6 ರ ತನಕ ನಡೆಯಲಿರುವುದು.

ಆ ಪ್ರಯುಕ್ತ ಇದರ ಪ್ರಯೋಜನವನ್ನು ಪಡೆಯಲಿಚ್ಚಿಸುವ ಸಮಾಜ ಬಾಂಧವರು ಸಮಯಕ್ಕೆ ಸರಿಯಾಗಿ ಹಾಜರಿದ್ದು ಸಹಾಯ ಧನ ವಿತರಣೆಯ ಲಾಭವನ್ನು ಪಡೆದುಕೊಳ್ಳಬಹುದು. ಅರ್ಜಿಯನ್ನು ಪಡೆಯಲಿಚ್ಛಿಸುವ ಸಮಾಜ ಬಾಂಧವರು ತಮ್ಮ ಗುರುತು ಪತ್ರ ,ಆಧಾರ್ ಕಾರ್ಡ್ ಪ್ರತಿಯೊಂದಿಗೆ ಮನೆಯ ವಿದ್ಯುತ್ ಬಿಲ್ ಪ್ರತಿ, ಮಕ್ಕಳ ಇತ್ತೀಚಿನ ಶಾಲಾ ದಾಖಲೆ (ಮಾರ್ಕ್ಸ್ ಕಾರ್ಡ್), ಭಾವ ಚಿತ್ರ, ವಿಧವಾ ವೇತನ ಮತ್ತು ವಿಕಲಾಂಗ ಚೇತನದ ಲಾಭ ಪಡೆಯಲಿಚ್ಛಿಸುವ ಸಮಾಜ ಬಾಂಧವರು ಸಂಬಂಧ ಪಟ್ಟ ದಾಖಲೆಗಳನ್ನು ಕಡ್ಡಾಯವಾಗಿ ಲಗತ್ತೀಕರಿಸ ಬೇಕು. ಅರ್ಜಿ ಪಡೆಯಲಿಚ್ಚಿಸುವ ಅರ್ಜಿದಾರರು ಬಂಟರ ಸಂಘ ಮುಂಬಯಿ ಇದರ ಸದಸ್ಯತ್ವವನ್ನು ಹೊಂದಿರಬೇಕು. ಮಾತ್ರವಲ್ಲದೆ ಸದಸ್ಯತನದ ಪ್ರತಿಯನ್ನು ಅರ್ಜಿಯಲ್ಲಿ ಲಗತ್ತೀಕರಿಸ ತಕ್ಕದ್ದು, ಅರ್ಜಿಯನ್ನು ಕೇವಲ ವಿದ್ಯಾರ್ಥಿಗಳಿಗೆ, ವಿಧವೆಯರಿಗೆ, ವಿಕಲಾಂಗ ಚೇತನರಿಗೆ ಸ್ವತಃ ಯಾ ಅವರವರ ಮಾತಾ ಪಿತಾ ಯಾ ಪೋಷಕರಿಗೆ ಮಾತ್ರ ನೀಡಲಾಗುವುದು.

ಹೆಚ್ಚಿನ ವಿವರಗಳಿಗಾಗಿ ಮೀರಾ-ಭಾಯಾಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ  ರವೀಂದ್ರ ಶೆಟ್ಟಿ ಕೊಟ್ಟಪಾಡಿಗುತ್ತು ( 9967325878), ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸಂಪತ್ ಶೆಟ್ಟಿ ಪಂಜದಗುತ್ತು (. 9223481670), ಕಾರ್ಯಾದರ್ಶಿ ಕಿಶೋರ್ ಕುಮಾರ್ ಕುತ್ಯಾರ್ (ಮೊ. ನಂ. 9930090328),  ಸಂಚಾಲಕ ಶಿವಪ್ರಸಾದ್ ಶೆಟ್ಟಿ ಮಾಣಿ ಗುತ್ತು ( 9819040608), ಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ ವಸಂತಿ ಎಸ್ ಶೆಟ್ಟಿ (9892097549) ಇವರುಗಳನ್ನು ಸಂಪರ್ಕಿಸಬಹುದು.



Related posts

ಕುಲಾಲ ಸಂಘ ಮುಂಬಯಿ, ಮಾ.8ಕ್ಕೆ ಕುಲಾಲ ಭವನ ಮಂಗಳೂರು, ಇದರ ಬ್ಯಾಂಕ್ವೆಟ್ ಹಾಲ್ ಗೆ ಮುಹೂರ್ತ.

Mumbai News Desk

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ, ಶಹಾಡ್ : ಫೆ. 26ಕ್ಕೆ ಅಖಂಡ ಭಜನೆ

Mumbai News Desk

ಶ್ರೀ ಬಾಲಾಜಿ ಸನ್ನಿಧಿ ಪಲಿಮಾರ್ ಮಠ ಜ. 26ರಂದು ವಾರ್ಷಿಕ ಏಕಾಹ ಭಜನಾ ಕಾರ್ಯಕ್ರಮ

Mumbai News Desk

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ , ಮಹಿಳಾ ವಿಭಾಗ: ಜು 28ರಂದು ಆಶಾಡ ಹಬ್ಬ ಆಚರಣೆ,

Mumbai News Desk

ಮಾರ್ಚ್ 2 ಕ್ಕೆ ಭಯಂದರ್ ನಲ್ಲಿ ನಡೆಯುವ ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಾಯಿ ಈಶ್ವರ್ ಗುರೂಜಿ ಭಾಗಿ.

Mumbai News Desk

ಜ.11. ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ 64ನೇ ವಾರ್ಷಿಕೋತ್ಸವ ಮತ್ತು ಪಾರಿತೋಷಕ ವಿತರಣಾ ಸಮಾರಂಭ

Mumbai News Desk