31.4 C
Mumbai
June 10, 2026
Mumbai News Kannada
ಪ್ರಕಟಣೆ

ಮಾ.15, ತುಳುನಾಡ ಸೇವಾಸಮಾಜ ಮೀರಾಬಾಯಂದರ್ ವತಿಯಿಂದ ಸಂಸ್ಥಾಪಕ ದಿನಾಚರಣೆ, ವಿಶ್ವ ಮಹಿಳಾ ದಿನಾಚರಣೆ ಹಾಗೂ ಅರಸಿನ ಕುಂಕುಮ ಕಾರ್ಯಕ್ರಮ.





ಮೀರಾರೋಡ್,ಮಾ.10: ಮೀರಾಭಾಯಂದರ್ ಪರಿಸರದಲ್ಲಿ ಕಳೆದ 25 ವರ್ಷಗಳಿಂದ ವಿವಿಧ ಸಾಮಾಜಿಕ, ವೈದ್ಯಕೀಯ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯಲ್ಲಿ ಕಾರ್ಯನಿರತವಾಗಿರುವ ತುಳುನಾಡ ಸೇವಾ ಸಮಾಜವು ಮಾ.15ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಸ್ಥಾಪಕ ದಿನಾಚರಣೆ, ವಿಶ್ವ ಮಹಿಳಾ ದಿನಾಚರಣೆ ಹಾಗೂ ಅರಸಿನ ಕುಂಕುಮ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದೆ.


ಈ ಕಾರ್ಯಕ್ರಮವು ಮೀರಾ ರೋಡ್ ಪೂರ್ವ ಸಾಯಿ ಬಾಬಾ ನಗರದ ಸೈಂಟ್ ಥೋಮಸ್ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಾಯಂಕಾಲ ಗಂಟೆ 3ರಿಂದ ಆರಂಭಗೊಳ್ಳಲಿದೆ.
ಆರಂಭದಲ್ಲಿ ಭಜನೆ, ಮಕ್ಕಳು ಮತ್ತು ಮಹಿಳೆಯರಿಂದ ನೃತ್ಯ ವೈವಿಧ್ಯ, ಸಂಗೀತ ರಸಮಂಜರಿ, ಚಿಣ್ಣರ ಬಿಂಬದ ಮೀರಾ ರೋಡ್ ವಿಭಾಗದ ಮಕ್ಕಳಿಂದ ಕಿರುನಾಟಕ ಹಾಗೂ ಗೀತಾ ಆರ್.ಎಲ್.ಭಟ್ ಬಳಗದವರಿಂದ ಭೀಷ್ಮವಿಜಯ ಯಕ್ಷಗಾನ ತಾಳಮದ್ದಳೆ ಸಾದರ ಗೊಳ್ಳಲಿದೆ.
ಕನ್ನಡ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ ಇವರು ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶುಭಾರಂಬ್ ಬಿಲ್ಡರ್ಸ್ ಇದರ ಸಿ.ಎಮ್.ಡಿ ಅರವಿಂದ್ ಎಂ ಶೆಟ್ಟಿ, ರೈ ಸುಮತಿ ಎಜ್ಯುಕೇಶನ್ ಟ್ರಸ್ಟ್ ಕಾರ್ಯಾಧ್ಯಕ್ಷ ಅರುಣೋದಯ ಎಸ್.ರೈ ಬೆಳಿಯೂರುಗುತ್ತು, ಹೋಟೇಲು ಉದ್ಯಮಿ ಜಯ.ಕೆ ಪೂಜಾರಿ, ಬಂಟರ ಸಂಘದ ಮೀರಾಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಕೊಟ್ರಪಾಡಿ, ನವತರುಣ ಮಿತ್ರ ಮಂಡಳಿಯ ಅಧ್ಯಕ್ಷ ಯೋಗೀಶ್ ಗಾಣಿಗ, ಬಂಟರ ಸಂಘದ ಮೀರಾಭಾಯಂದರ್ ಪ್ರಾದೇಶಿಕ ಸಮಿತಿಯ ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ಧಕಟ್ಟೆ , ಸಮಾಜ ರತ್ನ ಕೆ.ಟಿ.ಶಂಕರ್ ಶೆಟ್ಟಿ,ವಿರಾರ್, ಸಿ.ಎ. ಪ್ರಕಾಶ್ ಶೆಟ್ಟಿ , ಭೂಮಿ ಎಂಟರ್ಪ್ರೈಸಸ್ ಮಾಲಕ ಗಿರೀಶ್ ಶೆಟ್ಟಿ ಸೂಡ, ಹಾಗೂ ರಾಜಕೀಯ ನೇತಾರ ಸಂಪತ್ ಶೆಟ್ಟಿ ಪಂಜದ ಗುತ್ತು ಆಗಮಿಸಲಿರುವರು.
ಈ ಸಂದರ್ಭದಲ್ಲಿ ಸಮಾಜಸೇವಕ ಪುಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರೋಹಿತ್ ಶೆಟ್ಟಿ ಹಾಗೂ ಸ್ತ್ರೀಶಕ್ತಿ ಫೌಂಡೇಶನ್ ಅಧ್ಯಕ್ಷೆ ಶಾಲಿನಿ ಎಸ್.ಶೆಟ್ಟಿಯವರನ್ನು ಸನ್ಮಾನಿಸಲಾಗುವುದು.
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ತುಳು ಕನ್ನಡಿಗರು ಉಪಸ್ಥಿತರಿರಬೇಕಾಗಿ ಸಂಸ್ಥೆಯ ಗೌರವಾಧ್ಯಕ್ಷ ಶಂಭು ಕೆ.ಶೆಟ್ಟಿ, ಅಧ್ಯಕ್ಷ ಡಾ.ರವಿರಾಜ್ ಸುವರ್ಣ, ಸಂಚಾಲಕ ಜಯಪ್ರಕಾಶ್ ಪೂಜಾರಿ, ಉಪಾಧ್ಯಕ್ಷರುಗಳಾದ ವಸಂತ್ ಶೆಟ್ಟಿ, ನಾರಾಯಣ ಪುತ್ತಿಗೆ, ಕಾರ್ಯದರ್ಶಿ ಶೋಭಾ ವಿ.ಉಡುಪ, ಕೋಶಾಧಿಕಾರಿ ರವೀಂದ್ರ ಶೆಟ್ಟಿ ಸೂಡ, ಜೊತೆ ಕಾರ್ಯದರ್ಶಿ ಶೈಲೇಶ್ ಉದ್ಯಾವರ್, ಜೊತೆ ಕೋಶಾಧಿಕಾರಿ ರಾಜೇಶ್ ಶೆಟ್ಟಿ ಕಾಪು,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಮಿತಾ ಎಸ್.ಶೆಟ್ಟಿ, ಉಪಕಾರ್ಯಾಧ್ಯಕ್ಷೆಯರುಗಳಾದ ಭಾರತಿ ಉಡುಪ, ವಸಂತಿ ಕೆ.ಶೆಟ್ಟಿ, ಸಂಚಾಲಕಿ ಕುಶಲ ಎಸ್.ಶೆಟ್ಟಿ, ಕಾರ್ಯದರ್ಶಿ ಸುನೀತಾ ಎ.ಸುವರ್ಣ, ಕೋಶಾಧಿಕಾರಿ ರೇಖಾ ಪೂಜಾರಿ , ಜೊತೆ ಕಾರ್ಯದರ್ಶಿಗಳಾದ ವಾಣಿ ಡಿ.ಶೆಟ್ಟಿ, ಜಯಲಕ್ಷ್ಮಿ ಸುವರ್ಣ, ಜೊತೆ ಕೋಶಾಧಿಕಾರಿಗಳಾದ ಸುಲೋಚನಾ ಮಾಬಿಯಾನ್,ಅನುಪಮಾ ಅಂಚನ್ ,ಮುಖ್ಯ ಸಲಹೆಗಾರ ವಿಜಯ್ ಶೆಟ್ಟಿ ಹೊಸಾಡು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾದ ಜೋಗಿ ಬಿಲ್ಲವ, ಪುರುಷೋತ್ತಮ ಕೋಟ್ಯಾನ್, ರವೀಂದ್ರ ಶೆಟ್ಟಿ ಕಾಪು, ಅರುಣ್ ನೊರೋನಾ, ಪುರುಷೋತ್ತಮ ಶೆಟ್ಟಿ, ಜಯಕರ್ ಶೆಟ್ಟಿ, ಗಂಗಾಧರ ಆರ್.ಶೇರಿಗಾರ್ ಮತ್ತು ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಭಂಡಾರಿ ಸೇವಾ ಸಂಘ ಮುಂಬಯಿ : ಡಿ. 8ರಂದು “ಪಾಂಚಜನ್ಯ ” ವಾರ್ಷಿಕ ಕುಟುಂಬ ಕೂಟ

Mumbai News Desk

ಭಾಯಂದರ್ ಶ್ರೀ ಅಯ್ಯಪ್ಪ ಆರಾಧನಾ ಭಕ್ತ ಮಂಡಲ.ಅ.17ರಂದು ಪೂಜಾ ದೇವರುಗಳ ರಜತ ಬಿಂಬ ಪ್ರತಿಷ್ಟಾಪನೆ, ಸತ್ಯನಾರಾಯಣ ಪೂಜೆ

Mumbai News Desk

ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ: ಅ. 11 ಮತ್ತು 12ರಂದು 48ನೇ ವಾರ್ಷಿಕ ಏಕಾಹ ಭಜನಾ ಮಂಗಲೋತ್ಸವ

Mumbai News Desk

ಬೊರಿವಿಲಿ ಶ್ರೀ ಮಹೀಷಮರ್ದಿನಿ ದೇವಸ್ಥಾನ ದಲ್ಲಿ ಶ್ರೀ ರಾಮ ಪ್ರತಿಷ್ಠಾ ಮಹೋತ್ಸವ

Mumbai News Desk

ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ ಪೂರ್ವ : ಸೆ. 22ರಿಂದ ಅ. 2ರ ತನಕ 61ನೇ ವರ್ಷದ ನವರಾತ್ರಿ ಉತ್ಸವ

Mumbai News Desk

ಕುಮಾರ  ಕ್ಷತ್ರಿಯ ಸಂಘ  ಮುಂಬಯಿ: ಫೆಬ್ರವರಿ 11 : 58 ನೇ ವಾರ್ಷಿಕ ಮಹಾಸಭೆ , ಸತ್ಯನಾರಾಯಣ ಮಹಾಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk