ಭಾಯಾಂದರ್: ನಮ ಜವನೆರ್ (ರಿ) ಮೀರಾ ಭಾಯಾಂದರ್ ಕಳೆದ ಹದಿಮೂರು ವರ್ಷಗಳಿಂದ ಮೀರಾ-ಭಯಾಂಧರ್ ಪರಿಸರದ ತುಳು-ಕನ್ನಡಿಗರಿಗಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸುತ್ತಾ ಬಂದಿದೆ. ಈ ಆಚರಣೆಯ ಪ್ರಯುಕ್ತ ಪ್ರತಿ ವರ್ಷ ಮುದ್ದು ಕೃಷ್ಣ – ಮುದ್ದು ರಾಧೆ, ರಾಧಾ-ಕೃಷ್ಣ, ಯಶೋಧ-ಕೃಷ್ಣ, ಯಕ್ಷ ನೃತ್ಯ, ಮೊಸರು ಕುಡಿಕೆ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸುತ್ತಾ ಬಂದಿದ್ದೇವೆ. ಜುಲೈ 26 ರಂದು ಶ್ರೀ ಲಕ್ಷ್ಮಿ ನಾರಾಯಣ ಭಜನಾ ಮಂದಿರ, ಭಾರತಿ ಪಾರ್ಕ್, ಮೀರಾ ರೋಡ್ ಇಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ವರ್ಷವೂ ಸೆಪ್ಟೆಂಬರ್ 5 ರ ಶನಿವಾರದಂದು ಅಪರಾಹ್ನ 2:00 ಗಂಟೆಯಿಂದ 2026 ರ ಸಾಲಿನ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು “ಮೇವಾರ್ ವಾಟಿಕಾ, ಮೆಕ್ಡೊನಾಲ್ಡ್ಸ್ ಎದುರುಗಡೆ, ಮೀರಾ ಭಾಯಾಂದರ್ ರೋಡ್, ಮೀರಾ ರೋಡ್ ಪೂರ್ವ” ಇಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಈ ವರ್ಷ ವಿಶೇಷ ಆಕರ್ಷಣೆಯಾಗಿ “ರಾಧಾ-ಕೃಷ್ಣ” ಹಾಗೂ “ಶ್ರೀ ಕೃಷ್ಣ ಲೀಲೋತ್ಸವ” ಸ್ಪರ್ಧೆಯನ್ನು ನಡೆಸಲಾಗುವುದು ಎಂದು ನಿರ್ಧರಿಸಲಾಯಿತು.
ಸ್ಪರ್ಧೆಯ ವಿವರಗಳು:
- ಮುದ್ದು ಕೃಷ್ಣ (ವಯೋಮಿತಿ: 0 ಯಿಂದ 3 ವರ್ಷ)
- ಮುದ್ದು ರಾಧೆ (ವಯೋಮಿತಿ: 0 ಯಿಂದ 3 ವರ್ಷ)
- ಮುದ್ದು ಕೃಷ್ಣ (ವಯೋಮಿತಿ: 3 ರಿಂದ 7 ವರ್ಷ)
- ಮುದ್ದು ರಾಧೆ (ವಯೋಮಿತಿ: 3 ರಿಂದ 7 ವರ್ಷ)
- ರಾಧಾ-ಕೃಷ್ಣ ನೃತ್ಯ (ವಯೋಮಿತಿ: 7 ರಿಂದ 12 ವರ್ಷ)
- ಶ್ರೀ ಕೃಷ್ಣ ಲೀಲೋತ್ಸವ ನೃತ್ಯ ರೂಪಕ (ವಯೋಮಿತಿ: 12 ರಿಂದ 20 ವರ್ಷ)
ಸ್ಪರ್ಧೆಯಲ್ಲಿ ಹೆಸರು ನೋಂದಾಯಿಸಲು ಸಂಪರ್ಕಿಸಬೇಕಾದ ವಿವರ:
- ಮುದ್ದು ಕೃಷ್ಣ ಹಾಗೂ ಮುದ್ದು ರಾಧೆ (ವಯೋಮಿತಿ: 0 ಯಿಂದ 3 ವರ್ಷ):
ಜಯಶ್ರೀ ಶೆಟ್ಟಿ – 8767925138, ಶಾಂತ ಆಚಾರ್ಯ – 9969636557, ಸುಜಾತ ಕೋಟ್ಯಾನ್ – 8169200035, ಶೀಲಾ ಶೆಟ್ಟಿ – 9867198455. - ಮುದ್ದು ಕೃಷ್ಣ ಹಾಗೂ ಮುದ್ದು ರಾಧೆ (ವಯೋಮಿತಿ: 3 ರಿಂದ 7 ವರ್ಷ):
ಸುನಿಲ್ ಶೆಟ್ಟಿ – 9930789098, ಶಕುಂತಲಾ ಶೆಟ್ಟಿ – 9867458630, ಸುಜಾತ ಶೆಟ್ಟಿ – 7977294274, ಲೀಲಾ ಗಣೇಶ್ – 9870717397, ಪ್ರಿಯಾಂಕ ಪೂಜಾರಿ – 9594274859. - ರಾಧಾ-ಕೃಷ್ಣ ನೃತ್ಯ (ವಯೋಮಿತಿ: 7 ರಿಂದ 12 ವರ್ಷ):
ಗುಣಪಾಲ್ ಶೆಟ್ಟಿ – 9987063675, ಆರತಿ ಶೆಟ್ಟಿ – 9702745982, ಸುಮಂಗಲ ಶೆಟ್ಟಿ ಕಣಂಜಾರ್ – 9920931608, ವಿಜಯಲಕ್ಷ್ಮಿ ಶೆಟ್ಟಿ – 7715040222. - ಶ್ರೀ ಕೃಷ್ಣ ಲೀಲೋತ್ಸವ ನೃತ್ಯ ರೂಪಕ (ವಯೋಮಿತಿ: 12 ರಿಂದ 20 ವರ್ಷ):
ಸುಧೀಶ್ ಶೆಟ್ಟಿ – 9833439593, ಮಲ್ಲಿಕಾ ಆರ್. ಶೆಟ್ಟಿ – 8828381018, ಶರಣ್ಯ ಸಾಲಿಯಾನ್ – 9972903836.
ಬಹುಮಾನಗಳ ವಿವರ:
ಪ್ರತಿ ವಿಭಾಗದಲ್ಲಿ ವಿಜೇತರಾದ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ ನೀಡಲಾಗುವುದು. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪಾರಿತೋಷಕ ನೀಡಿ ಪುರಸ್ಕರಿಸಲಾಗುವುದು.
- ಮುದ್ದು ರಾಧೆ ಹಾಗೂ ಮುದ್ದು ಕೃಷ್ಣ ಸ್ಪರ್ಧೆ:
- ಪ್ರಥಮ: ರೂ. 3,333/-
- ದ್ವಿತೀಯ: ರೂ. 2,222/-
- ತೃತೀಯ: ರೂ. 1,555/-
- ರಾಧಾ-ಕೃಷ್ಣ ಸ್ಪರ್ಧೆ:
- ಪ್ರಥಮ: ರೂ. 4,444/-
- ದ್ವಿತೀಯ: ರೂ. 3,333/-
- ತೃತೀಯ: ರೂ. 2,222/-
- ಕೃಷ್ಣ ಲೀಲೋತ್ಸವ ಸ್ಪರ್ಧೆ:
- ಪ್ರಥಮ: ರೂ. 9,999/-
- ದ್ವಿತೀಯ: ರೂ. 6,666/-
- ತೃತೀಯ: ರೂ. 4,444/-
ಗಮನಿಸಿ: ಈ ಮೇಲಿನ ಎಲ್ಲಾ ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಲು 25/08/2026 ಕೊನೆಯ ದಿನಾಂಕ.
ಪೂರ್ವಭಾವಿ ಸಭೆಯು ಪ್ರಾರ್ಥನೆಯೊಂದಿಗೆ ಆರಂಭಗೊಂಡು, ಕಾರ್ಯಕ್ರಮದ ನಿರ್ವಾಹಕರಾದ ರಮಾನಂದ್ ಶೆಟ್ಟಿ ಅವರು ಈ ವರ್ಷದ ಹೊಸ ಸ್ಪರ್ಧೆಗಳ ಬಗ್ಗೆ ವಿವರಿಸಿದರು ಹಾಗೂ ಅಶೋಕ್ ವಳದೂರು ಅವರು ಸ್ಪರ್ಧೆಯ ನಿಯಮಾವಳಿಯನ್ನು ಸ್ಪಷ್ಟಪಡಿಸಿದರು.
ನಮ ಜವನೆರ್ (ರಿ) ಇದರ ಅಧ್ಯಕ್ಷರಾದ ಚೇತನ್ ಶೆಟ್ಟಿ ಮೂಡುಬಿದಿರೆ ಮಾತನಾಡಿ, “ಪ್ರತಿ ವರ್ಷದಂತೆ ಈ ವರ್ಷವೂ ಹೊಸ ಸ್ಪರ್ಧೆಯೊಂದಿಗೆ ಕಾರ್ಯಕ್ರಮವನ್ನು ಸಂಯೋಜಿಸುತ್ತಿದ್ದೇವೆ, ಜೊತೆಯಾಗಿ ನಾವೆಲ್ಲಾ ಇದರ ಯಶಸ್ಸಿಗಾಗಿ ಶ್ರಮಿಸೋಣ” ಎಂದು ವಿನಂತಿಸಿದರು. ಉಪಾಧ್ಯಕ್ಷರಾದ ಬಾಲಚಂದ್ರ ರೈ ತಳೇಕಲ ಹಾಗೂ ಕೋಶಾಧಿಕಾರಿ ಸದಾನಂದ ಸಾಲ್ಯಾನ್ ಪಾದೂರು ಸಲಹೆ-ಸೂಚನೆಗಳನ್ನು ನೀಡಿದರು. ಕಾರ್ಯದರ್ಶಿ ಶ್ರೀಮತಿ ಆಶಾಲತಾ ಪಿ. ಶೆಟ್ಟಿ ಸ್ವಾಗತಿಸಿ ವಂದಿಸಿದರು.
ಸಭೆಯಲ್ಲಿ ಸುಮತಿ ಆರ್. ಶೆಟ್ಟಿ, ಸುಭಾಷ್ ಶೆಟ್ಟಿ, ಗುಣಪಾಲ್ ಶೆಟ್ಟಿ, ಸುಧೀಶ್ ಶೆಟ್ಟಿ, ಅಶೋಕ್ ಟಿ. ಪೂಜಾರಿ, ಶಕುಂತಲಾ ಶೆಟ್ಟಿ, ಸುಮತಿ ಡಿ. ಶೆಟ್ಟಿ, ಆರತಿ ಶೆಟ್ಟಿ, ಅನುಷಾ ಶೆಟ್ಟಿ, ಸುಮಂಗಲ ಕಣಂಜಾರ್, ಮೋಹಿತ್ ಎಂ. ಸಾಲ್ಯಾನ್, ವಿಜಯಲಕ್ಷ್ಮಿ ಶೆಟ್ಟಿ, ಪ್ರಿಯಾಂಕ ಪೂಜಾರಿ, ವಿಜಯ ಶೆಟ್ಟಿಗಾರ್, ಮಲ್ಲಿಕಾ ಆರ್. ಶೆಟ್ಟಿ, ಶೀಲಾ ಶೆಟ್ಟಿ, ಸಂಧ್ಯಾ ಶೆಟ್ಟಿ, ಶರಣ್ಯ ಮೋಹಿತ್ ಸಾಲ್ಯಾನ್, ಹರೀಶ್ ಪಲಿಮಾರ್, ಪ್ರತೀಕ್ಷಾ ಸಾಲಿಯಾನ್, ರವಿ ಪುತ್ರನ್ ಮತ್ತಿತರರು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ ಮೇಲ್ವಿಚಾರಕರಾದ ರಮಾನಂದ ಶೆಟ್ಟಿ (99875 05882) ಹಾಗೂ ಅಶೋಕ್ ವಳದೂರು (9820363221) ಅವರನ್ನು ಸಂಪರ್ಕಿಸಲು ಕೋರಲಾಗಿದೆ. ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಸಂಚಾಲಕರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.




