July 22, 2026
Mumbai News Kannada
ತುಳುನಾಡು

ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತೀ ಗರೋಡಿ ತೋನ್ಸೆ, ಇದರ ಜೀರ್ಣೋದ್ಧಾರಕ್ಕೆ ಭವ್ಯ ನಾಂದಿ: ಶಿಲಾನ್ಯಾಸ, ಮುಷ್ಟಿ ಕಾಣಿಕೆ ಸಮರ್ಪಣೆ ಸಂಪನ್ನ







ಉಡುಪಿ ತೋನ್ಸೆಯ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿಯ ಸಂಪೂರ್ಣ ಪುನರ್ ನವೀಕರಣದ ಅಂಗವಾಗಿ ಆಯೋಜಿಸಲಾಗಿದ್ದ ಶಿಲಾನ್ಯಾಸ ಮತ್ತು ಮೃತ್ತಿಕಾ ಪೂಜಾ ಕಾರ್ಯಕ್ರಮವು ಏಪ್ರಿಲ್ 1ರ ಬುಧವಾರದಂದು ಅತ್ಯಂತ ಭಕ್ತಿ ಸೌರಭದೊಂದಿಗೆ ಸಂಪನ್ನಗೊಂಡಿತು.
ಪುತ್ತೂರು ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ಹಾಗೂ ವಾಸ್ತು ತಜ್ಞ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಅವರ ಮಾರ್ಗದರ್ಶನದಲ್ಲಿ, ಬೆಳಿಗ್ಗೆ ಒದಗಿದ ವೃಷಭ ಲಗ್ನ ಶುಭ ಮುಹೂರ್ತದಲ್ಲಿ ಗರಡಿಯ ನವೀಕರಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಿ, ಮುಷ್ಟಿ ಕಾಣಿಕೆ ಸಮರ್ಪಿಸಲಾಯಿತು.


ಈ ಸಂದರ್ಭದಲ್ಲಿ ಮುಂಬೈಯ ಉದ್ಯಮಿಗಳು, ಸಂಘಟಕರುಗಳು, ಶಾಸಕರು, ಊರಿನ ರಾಜಕೀಯ, ಧಾರ್ಮಿಕ ಮುಂದಾಳುಗಳು, ಸಮಾಜದ ಗಣ್ಯರು, ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷರು, ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ನಾಲ್ಕು ಕರೆ ಗುರಿಕಾರರು ಮತ್ತು ಗುರಿಕಾರರು, ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಗರೋಡಿ ಸೇವಾ ಟ್ರಸ್ಟ್ ಮುಂಬೈಯ ಅಧ್ಯಕ್ಷರು ಮತ್ತು ಸದಸ್ಯರು, ಮಹಿಳಾ ಘಟಕದ ಅಧ್ಯಕ್ಷರು ಮತ್ತು ಸದಸ್ಯರು, ಅರ್ಚಕರು,ಕ್ಷೇತ್ರದ ಭಕ್ತರು, ತೋನ್ಸೆ ಗ್ರಾಮಸ್ಥರು ಉಪಸ್ಥಿತರಿದ್ದರು.

ತೋನ್ಸೆ ಗ್ರಾಮದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿರುವ ಈ ಗರೋಡಿಯು, ಊರ-ಪರವೂರ ಭಕ್ತಾದಿಗಳ ಸಹಕಾರ ಹಾಗೂ ದೈವದ ಸಂಕಲ್ಪದಂತೆ ಶೀಘ್ರದಲ್ಲೇ ನವ ಕಳೆಯನ್ನು ಪಡೆದು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿ ಕೇಂದ್ರವಾಗಿ ಪುನರ್ ಪ್ರತಿಷ್ಠಾಪನೆಗೊಳ್ಳಲಿ ಎಂಬ ಆಶಯದೊಂದಿಗೆ ಶಿಲಾನ್ಯಾಸ ಕಾರ್ಯಕ್ರಮವು ಸಂಪನ್ನಗೊಂಡಿತು.


ಸಮಾಜದ ಗಣ್ಯರ ಉಪಸ್ಥಿತಿ ಹಾಗೂ ಭಕ್ತರ ಅಪಾರ ಸೌರಭದ ನಡುವೆ ಜರುಗಿದ ಈ ಶಿಲಾನ್ಯಾಸ ಕಾರ್ಯಕ್ರಮವು, ತೋನ್ಸೆ ಗರೋಡಿಯ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯಕ್ಕೆ ಮುನ್ನುಡಿ ಬರೆದಂತಾಗಿದೆ. ಮುಂಬರುವ ದಿನಗಳಲ್ಲಿ ಜೀರ್ಣೋದ್ಧಾರ ಕಾರ್ಯವು ಸಕಲ ವಿಧಿವಿಧಾನಗಳೊಂದಿಗೆ ಯಶಸ್ವಿಯಾಗಿ ನೆರವೇರಲು ಈ ಕಾರ್ಯಕ್ರಮವು ದೈವೀ ಪ್ರೇರಣೆಯನ್ನು ನೀಡಿದೆ.



Related posts

ಮುಲ್ಕಿ : ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠದಲ್ಲಿ ‘ವನ ಮಹೋತ್ಸವ’ ದಿನಾಚರಣೆ, ಹಸಿರು ಕ್ರಾಂತಿಗೆ ಕರೆ

Mumbai News Desk

ಹೊಸ ಅಂಗಣ ಪತ್ರಿಕೆಯ ತಿಂಗಳ ಬೆಳಕು ಹಾಗೂ ಸಾಧಕರ ಗೌರವಾರ್ಪಣೆ: ಕಾರ್ಮಿಕರು ಶ್ರಮ ಮತ್ತು ಪರೋಪಕಾರಿ ಜೀವನದ ನಿಜವಾದ ಸಾಧಕರು – ಡಾ.ಹರಿಕೃಷ್ಣ ಪುನರೂರು

Mumbai News Desk

ಶ್ರೀ ಬಪ್ಪನಾಡು ಸೌಹರ್ದ ಸಹಕಾರಿ ಸಂಘ(ನಿ)ಇದರ ವಾರ್ಷಿಕ ಮಹಾಸಭೆಯಲ್ಲಿ ಹರಿಶ್ಚಂದ್ರ ಪಿ. ಸಾಲಿಯಾನ್‌ರವರಿಗೆ ಸನ್ಮಾನ

Mumbai News Desk

ಬನ್ನಂಜೆ ಬಿಲ್ಲವರ ಸೇವಾ ಸಂಘ: ವಿದ್ಯಾರ್ಥಿ ವೇತನ ವಿತರಣೆ, ಸಾಧಕರಿಗೆ ಸನ್ಮಾನ.

Mumbai News Desk

ಮಂಗಳೂರು : ಮೂಲತ್ವ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

Mumbai News Desk

ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕಿ ಮತ್ತು ನಟಿ ರೂಪ ಐಯ್ಯರ್ : ನವದುರ್ಗಾ ಲೇಖನ ಯಜ್ಞ ಸಂಕಲ್ಪ

Mumbai News Desk