ಯುಗಾದಿ ನಿಮಿತ್ತ ಭಾವ ಸಂಗಮ ಮತ್ತು ಉಮಾಶಂಕರ ಪ್ರತಿಷ್ಠಾನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸ್ವರ್ಣಸಿರಿ ಕಾವ್ಯಝರಿ-೨೦೨೬ ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ.
ಷರೀಫ್ ಚಿಗಳ್ಳಿ, ಬೆಳಗಲಿ, ಹುಬ್ಬಳ್ಳಿ ಪ್ರಥಮ; ರಂಜಿತಾ ರಾಜು ಆಗೇರ ಶೆಟಗೇರಿ ಅಂಕೋಲಾ ದ್ವಿತೀಯ; ಡಾ.ಶಿವಕುಮಾರ ಸೂರ್ಯವಂಶ, ಕಲಬುರಗಿ ತೃತೀಯ ಸ್ಥಾನ ಪಡೆದಿದ್ದಾರೆ.
ಅದರೊಂದಿಗೆ ಮಮತಾ ಶಂಕರ ಬೆಳಗಾವಿ, ಶೃತಿ ಮಹಾದೇವ ಹೆಗ್ಡೆ ಯಕ್ಸಂಬಾ, ವೈ.ಕೆ.ಸಂಧ್ಯಾಶರ್ಮಾ, ವೈ.ಬಿ.ಹಾಲಭಾವಿ, ಡಾ.ರುಜುವಾನ್ ಕೆ ಅಂದನೂರು, ಶಶಿಕಲಾ ಕುಲಕರ್ಣಿ ನರೇಗಲ್ಲ ಮತ್ತು ಅನನ್ಯ ತುಷಿರಾ ಅವರ ಕವಿತೆಗಳು ಸಮಾಧಾನಕರ ಬಹುಮಾನಕ್ಕೆ ಪಾತ್ರವಾಗಿವೆ.
ಉಮಾಶಂಕರ ಪ್ರತಿಷ್ಠಾನದ ಗೌರವಾಧ್ಯಕ್ಷ, ನಿವೃತ್ತ ಶಿಕ್ಷಕ ಪಿ. ಶಂಕರರಾವ್, ತೀರ್ಪುಗಾರರಾಗಿದ್ದರು. ಬಹುಮಾನಿತರಿಗೆ ಪುಸ್ತಕ ಬಹುಮಾನ, ಡಿಜಿಟಲ್ ಪತ್ರ ಕಳಿಸಲಾಗುವುದು.ಭಾಗವಹಿಸಿದ ಎಲ್ಲರಿಗೂ ಡಿಜಿಟಲ್ ಪ್ರಮಾಣ ನೀಡಲಾಗುತ್ತದೆ. ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಭಾವ ಸಂಗಮ ಸಂಚಾಲಕ ರಾಜೇಂದ್ರ ಪಾಟೀಲ್ ತಿಳಿಸಿದ್ದಾರೆ.




