ಮಂಗಳೂರು: ಕರಾವಳಿಯ ಸಸಿಹಿತ್ಲು ಗ್ರಾಮದಲ್ಲಿ ಹುಟ್ಟಿ ಬೆಳೆದು, ತಮ್ಮದೇ ಪ್ರತಿಭೆಯಿಂದ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಪತ್ರಕರ್ತ, ನಾಟಕಕಾರ ಪರಮಾನಂದ ಸಾಲ್ಯಾನ್ ಅವರು ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಕಲಾಭಿಮಾನಿಗಳ ಮತ್ತು ಸಾರ್ವಜನಿಕರ ಸಹಾಯ ಹಸ್ತವನ್ನು ಎದುರು ನೋಡುತ್ತಿದ್ದಾರೆ.
ಕಲಾಜಗತ್ತಿನ ಸವ್ಯಸಾಚಿ:ನೂರಕ್ಕೂ ಅಧಿಕ ನಾಟಕಗಳನ್ನು ರಚಿಸಿರುವ ಇವರು, ‘ಶಿವಧೂತೆ ಬಬ್ಬರ್ಯೆ’ ಕೃತಿಯ ಮೂಲಕ ಮನೆಮಾತಾದವರು. ‘ರಂಗ ಸುದರ್ಶನ’ ಖ್ಯಾತಿಯ ಇವರು ರೂಪಕ ರಚನೆಕಾರರಾಗಿ, ಸಂಘಟಕರಾಗಿ ಹಾಗೂ ತುಳು-ಕನ್ನಡ ಕಾರ್ಯಕ್ರಮಗಳ ನಿರೂಪಕರಾಗಿ ಕಲಾಮಾತೆಯ ಸೇವೆ ಸಲ್ಲಿಸಿದ್ದಾರೆ. ಸಾಧನೆಯ ಹಾದಿಯಲ್ಲಿ ವೈಯಕ್ತಿಕ ಬದುಕು ಹಾಗೂ ಆರೋಗ್ಯದ ಕಡೆಗೆ ಗಮನ ನೀಡದೆ ಕಲೆಯನ್ನೇ ಉಸಿರಾಗಿಸಿಕೊಂಡಿದ್ದ ಇವರು, ಇದೀಗ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಪ್ರಸ್ತುತ ವಾರಕ್ಕೆ ಮೂರು ಬಾರಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದು, ಚಿಕಿತ್ಸಾ ವೆಚ್ಚ ಭರಿಸಲು ಆರ್ಥಿಕ ಸಂಕಷ್ಟ ಎದುರಾಗಿದೆ.ಸಹಾಯ ಹಸ್ತಕ್ಕೆ ಮನವಿ:ಸಸಿಹಿತ್ಲು ಸಾರಾಂತಾಯ ಗರೋಡಿ ಹಾಗೂ ಭಗವತಿ ತಾಯಿಯ ಪರಮ ಭಕ್ತರಾಗಿರುವ ಪರಮಾನಂದ ಅವರು ಮತ್ತೆ ಗುಣಮುಖರಾಗಿ ಕಲಾಕ್ಷೇತ್ರಕ್ಕೆ ಮರಳುವ ಆತ್ಮವಿಶ್ವಾಸ ಹೊಂದಿದ್ದಾರೆ. ಇವರ ಚಿಕಿತ್ಸೆಗೆ ನೆರವಾಗಲು ತುಳು-ಕನ್ನಡ ಬಾಂಧವರು ಹಾಗೂ ಕಲಾಭಿಮಾನಿಗಳು ಉದಾರವಾಗಿ ಸಹಾಯ ಮಾಡಬೇಕೆಂದು ಪದ್ಮನಾಭ ಸಸಿಹಿತ್ಲು ಹಾಗೂ ಅಶೋಕ್ ಸಸಿಹಿತ್ಲು ವಿನಂತಿಸಿದ್ದಾರೆ.
ನೆರವು ನೀಡಲು ಬ್ಯಾಂಕ್ ಖಾತೆ ವಿವರಗಳು:
ಹೆಸರು: Paramananda V Salian
ಖಾತೆ ಸಂಖ್ಯೆ: 01172200035207
ಬ್ಯಾಂಕ್: ಕೆನರಾ ಬ್ಯಾಂಕ್, ಹಳೆಯಂಗಡಿ (Canara Bank, Haleangady)
IFSC ಕೋಡ್: CNRB0000637
GPay ಸಂಖ್ಯೆ: 8618287563
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಪದ್ಮನಾಭ ಸಸಿಹಿತ್ಲು: 9867981099
ಅಶೋಕ್ ಸಸಿಹಿತ್ಲು: 9892821404




