28 C
Mumbai
September 19, 2026
Mumbai News Kannada
ಸುದ್ದಿ

ಅಂಬರ್‌ನಾಥ್‌ನ ಬಿಲ್ಡರ್ ಜಗದೀಶ್ ರಾಮ ಬಂಜನ್ ಅವರಿಗೆ ಲೋಕಮತ್ ಪ್ರಶಸ್ತಿ,





   

ಮುಂಬೈ: ಅಂಬರ್‌ನಾಥ್‌ನಲ್ಲಿ ಬಹು ಅಂತಸ್ತಿನ ಕಟ್ಟಡ ನಿರ್ಮಾಣದ ಮೂಲಕ ಉದ್ಯಮಿಯಾಗಿ ಪ್ರಸಿದ್ಧಿ ಪಡೆದಿರುವ ಕುಲಾಲ ಸಮಾಜದ ದಾನಿ ಜಗದೀಶ್ ರಾಮ ಬಂಜನ್ ಅವರಿಗೆ ಲೋಕಮತ್ 2026 ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಅಂಬರ್‌ನಾಥ್‌ನ ಈಶ್ವರ್ ರಿಯಾಲಿಟಿ ಸಂಸ್ಥೆಯ ಸಿಇಒ ಆಗಿರುವ ಜಗದೀಶ್ ಬಂಜನ್ ಅವರಿಗೆ ಈ ಪ್ರಶಸ್ತಿಯನ್ನು ಮಹಾರಾಷ್ಟ್ರದ ಮಾಹಿತಿ ತಂತ್ರಜ್ಞಾನ ಸಚಿವ ಆಶಿಷ್ ಶೇಲಾರ್, ಕೈಗಾರಿಕಾ ಸಚಿವ ಉದಯ್ ಸಾಮಂತ್, ಸಾರ್ವಜನಿಕ ಆರೋಗ್ಯ ಸಚಿವ ಪ್ರಕಾಶ್ ಆಬಿತ್ಕರ್ ಹಾಗೂ ಎಂಎಂಆರ್‌ಡಿಎ ಆಯುಕ್ತ ಡಾ. ಸಂಜಯ್ ಮುಖರ್ಜಿ ಅವರ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು. 

ಕಟ್ಟಡ ನಿರ್ಮಾಣದ ಪುನರ್ ಅಭಿವೃದ್ಧಿ ಯೋಜನೆಯಲ್ಲಿ ಶ್ರೇಷ್ಠತೆ ಸಾಧಿಸಿದ ಹಿನ್ನೆಲೆಯಲ್ಲಿ ಈ ಗೌರವ ನೀಡಲಾಗಿದೆ.

ಜಗದೀಶ್ ಬಂಜನ್ ಅವರು ಅಂಬರ್‌ನಾಥ್‌ನಲ್ಲಿ “ಜೈದೀಪ್ ಕನ್ಸ್ಟ್ರಕ್ಷನ್” ಸಂಸ್ಥೆಯ ಮೂಲಕ ತಮ್ಮ ವ್ಯವಹಾರ ಆರಂಭಿಸಿ, ಕ್ರಮೇಣ ಬಹು ಅಂತಸ್ತಿನ ಕಟ್ಟಡಗಳನ್ನು ನಿರ್ಮಿಸಿ ಜನಪ್ರಿಯತೆ ಗಳಿಸಿದ್ದಾರೆ. ಎಂಎಂಆರ್‌ಡಿಎ ಸಹಕಾರದೊಂದಿಗೆ ಪುನರ್ ಅಭಿವೃದ್ಧಿ ಯೋಜನೆಗಳಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ.

ಸಾಮಾಜಿಕ ಸೇವೆಯಲ್ಲಿಯೂ ಅವರು ಮುಂದಿದ್ದಾರೆ. ತಮ್ಮ ಆದಾಯದ ಬಹುಪಾಲನ್ನು ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಗಳಿಗೆ ಮೀಸಲಿಡುತ್ತಾ ಬಂದಿದ್ದಾರೆ. ಮುಂಬೈ ಕುಲಾಲ ಸಂಘದ ಮಂಗಳೂರು ಕುಲಾಲ ಭವನ ನಿರ್ಮಾಣಕ್ಕೆ, ವಿಶೇಷವಾಗಿ “ಶ್ರೀಮತಿ ನಮೃತಾ ಜಗದೀಶ್ ಬಂಜನ್ ಬ್ಯಾಂಕ್ವೇಟ್ ಹಾಲ್” ನಿರ್ಮಾಣಕ್ಕೆ ಅವರು ದೇಣಿಗೆ ನೀಡಿದ್ದಾರೆ. ಜೊತೆಗೆ ಕುಲಾಲ ಸಂಘದ ಥಾಣೆ-ಬಿಂವಡಿ ಸಮಿತಿಯ ಯೋಜನೆಗಳು, ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ಅನಾರೋಗ್ಯದಲ್ಲಿರುವವರಿಗೆ ಆರ್ಥಿಕ ನೆರವು ನೀಡುತ್ತಿದ್ದಾರೆ.

ಜಗದೀಶ್ ಬಂಜನ್ ಅವರ ಪತ್ನಿ ನಮೃತಾ ಬಂಜನ್ ಹಾಗೂ ಇಬ್ಬರು ಪುತ್ರಿಯರು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ.

Show quoted text



Related posts

ಕುಲಾಲ ಪ್ರತಿಷ್ಠಾನ (ರಿ) ಮಂಗಳೂರು ಆಶ್ರಯದಲ್ಲಿ ತುಳು ನಾಟಕ ಪ್ರದರ್ಶನ   ಸಾಧಕರಿಗೆ ಸನ್ಮಾನ

Mumbai News Desk

ಕುಲಾಲ ಸಂಘ ಮುಂಬಯಿಯ ಮುಖವಾಣಿ “ಅಮೂಲ್ಯ” ದ ಬೆಳ್ಳಿ ಹಬ್ಬ ಸಮಾರೋಪ . ವಿಶೇಷ ಸಂಚಿಕೆ ಲೋಕಾರ್ಪಣೆ.

Mumbai News Desk

2023-24ರ ಎಚ್ ಎಸ್ ಸಿ ಪರೀಕ್ಷೆಯಲ್ಲಿ ಶ್ರಾವಣಿ ರಾಜೇಶ್ ಕೋಟ್ಯಾನ್ ಗೆ ಶೇ 94.50 ಅಂಕ.

Mumbai News Desk

ಮುಂಬೈ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಭವ್ಯ ಸ್ವಾಗತ

Mumbai News Desk

ಇಂದು ಭಾರತ್ ಬಂದ್ : ದೇಶಾದ್ಯಂತ ವ್ಯಾಪಕ ಪ್ರತಿಭಟನೆ! ಏನೇನಿರುತ್ತೆ, ಏನಿರಲ್ಲ?: ಇಲ್ಲಿದೆ ಸಂಪೂರ್ಣ ಮಾಹಿತಿ

Mumbai News Desk

ಸಂಘರ್ಷ ಪೀಡಿತ ಕೊಲ್ಲಿ ರಾಷ್ಟ್ರಗಳಲ್ಲಿನ ಭಾರತೀಯರ ಸುರಕ್ಷತೆಗೆ ಕ್ರಮ: ಸಚಿವ ಜೈಶಂಕರ್ ಭರವಸೆ

Mumbai News Desk