
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಕಿಲ್ಪಾಡಿ , ಮುಲ್ಕಿ ಇಲ್ಲಿ ಜೂನ್ 5ರಂದು ವನ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ 5ನೇ ತರಗತಿಯಿಂದ 10ನೇ ತರಗತಿಯ ವರೆಗಿನ ಮಕ್ಕಳಿಂದ ಶಾಲಾ ಅಂಗಳದ ಬದಿಯಲ್ಲಿ ಗಿಡಗಳನ್ನು ನೆಡಿಸಲಾಯಿತು. ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿಯಾದ ಶ ರಾಮದಾಸ್ ಕಾಮತ್ ರವರು ವನ ಮಹೋತ್ಸವವು ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ಜೀವನದ ಒಂದು ಭಾಗವಾಗಿರಬೇಕು ಎಂದು ಕರೆ ನೀಡಿದರು ಹಾಗೂ ಶಾಲಾ ಪ್ರಾಂಶುಪಾಲರಾದ ಕಾಮಾಕ್ಷಿ ಆರ್ ನಾಯಕ್ ಇವರು ಪ್ರಾಕೃತಿಕ ಸಮತೋಲನದ ಬಗ್ಗೆ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಮಣ್ಣಿನ ಮೇಲೆ ಆಗುವ ಪರಿಣಾಮದ ಕುರಿತು ಮಾತನಾಡಿದರು.

ವಿದ್ಯಾರ್ಥಿಗಳಿಂದ ಪರಿಸರ ಗೀತೆ ಹಾಗೂ ಪರಿಸರ ಮಾಲಿನ್ಯದಿಂದ ಆಗುವ ದುಷ್ಪರಿಣಾಮಗಳು ಹಾಗೂ ತಡೆಗಟ್ಟುವ ಬಗ್ಗೆ ಪ್ರಹಸನದ ಮೂಲಕ ತಿಳಿಯಪಡಿಸಲಾಯಿತು. ವಿದ್ಯಾರ್ಥಿಗಳಾದ ಕುಮಾರಿ ತನುಶ್ರೀ ಹಾಗೂ ಮಾಸ್ಟರ್ ಮನೋಜ್ ಇವರು ವನಮಹೋತ್ಸವದ ಕುರಿತು ಮಾತನಾಡಿದರು. ಕುಮಾರಿ ವಂಶಿಕ ಸ್ವಾಗತಿಸಿದರು, ಕುಮಾರಿ ವಿ ಪವಿತ್ರ ಕಾಮತ್ ವಂದಿಸಿದರು ಕುಮಾರಿ ಕಾಮಾಕ್ಷಿ ಕಾಮತ್ ಕಾರ್ಯಕ್ರಮವನ್ನು ನಿರೂಪಿಸಿದರು




