31 C
Mumbai
September 11, 2026
Mumbai News Kannada
ತುಳುನಾಡು

“ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ತಳಮಟ್ಟದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಹೆಜಮಾಡಿಯಲ್ಲಿ ಮಹತ್ವದ ಸಭೆ – ಡಿಜಿಟಲ್ ಮೀಡಿಯಾ ಆರಂಭ ಮತ್ತು ನೂತನ ಸದಸ್ಯರ ಸೇರ್ಪಡೆ”






ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ವತಿಯಿಂದ ದಿನಾಂಕ 08-06-2026 ರಂದು ಹೆಜಮಾಡಿ ಬಿಲ್ಲವ ಸಂಘದಲ್ಲಿ ಆಯೋಜಿಸಲಾದ ಸಭೆಯು ಮಾಜಿ ಸಚಿವರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಶ್ರೀ ವಿನಯ್ ಕುಮಾರ್ ಸೊರಕೆ ಅವರ ಸಮ್ಮುಖದಲ್ಲಿ ಹಾಗೂ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಪ್ರಬೋಧ್ ಚಂದ್ರ ಹೆಜಮಾಡಿ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನೆರವೇರಿತು. ಈ ಸಭೆಯಲ್ಲಿ ಪಕ್ಷ ಸಂಘಟನೆ, ಎಸ್.ಐ.ಆರ್. (SIR) ಪ್ರಕ್ರಿಯೆ, ಮತದಾರರ ಪಟ್ಟಿ ಪರಿಷ್ಕರಣೆ, ಬಿ.ಎಲ್.ಎ.-2 ಸದಸ್ಯರ ಜವಾಬ್ದಾರಿಗಳು, ಬೂತ್ ಮಟ್ಟದ ಸಿದ್ಧತೆಗಳು ಹಾಗೂ ಮುಂಬರುವ ಚುನಾವಣೆಗಳ ಕುರಿತು ಸಮಗ್ರ ಚರ್ಚೆ ನಡೆಯಿತು.
ಶ್ರೀ ವಿನಯ್ ಕುಮಾರ್ ಸೊರಕೆ ಅವರಿಂದ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧಿಕೃತ ಡಿಜಿಟಲ್ ಮೀಡಿಯಾ (Facebook & Instagram) ಲಾಂಚ್ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆ ಅವರ ಸಮ್ಮುಖದಲ್ಲಿ, ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಬೋಧ್ ಚಂದ್ರ ಹೆಜಮಾಡಿ, ಹೆಜಮಾಡಿ ಗ್ರಾಮೀಣ ಹಿಂದುಳಿದ ವರ್ಗಗಳ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ವಿಶಾಲ್ ವಿ. ಬಂಗೇರ ಹಾಗೂ ಹೆಜಮಾಡಿ ಗ್ರಾಮೀಣ ಮಹಿಳಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯವರಾದ ಶ್ರೀಮತಿ ದೀಕ್ಷಾ ಕೆ. ಅವರ ನೇತೃತ್ವದಲ್ಲಿ ಶ್ರೀಮತಿ ರೋಹಿಣಿ ಎ. ಮೆಂಡನ್, ಶ್ರೀ ರಿತೇಶ್ ಸುವರ್ಣ ಹಾಗೂ ಶ್ರೀಮತಿ ಸೌಮ್ಯಾ ರಿತೇಶ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನೂತನ ಸೇರ್ಪಡೆಯಾದವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಭೆಯಲ್ಲಿ ಕಾಪು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ಅಧ್ಯಕ್ಷರಾದ ವೈ. ಸುಕುಮಾರ್, ಕೆಪಿಸಿಸಿ ಕೋ-ಆರ್ಡಿನೇಟರ್ ಅಬ್ದುಲ್ ಅಝೀಜ್ ಹೆಜಮಾಡಿ, ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಭಾಸ್ ಜಿ. ಸಾಲಿಯಾನ್ ಹಾಗೂ ಕುಸುಮ ಸಾಲಿಯಾನ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರಜ್ವಲ್ ಎಸ್. ಸಾಲಿಯಾನ್, ಕಾರ್ಯದರ್ಶಿಗಳಾದ ಕೇಶವ್ ಸಿ. ಸಾಲಿಯಾನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜಯಶ್ರೀ ಶರತ್, ತೇಜಪಾಲ್ ಸುವರ್ಣ, ವಿಕ್ರಮ್ ರಾಜ್ ಸುವರ್ಣ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಷರೀಫ್ ಹೆಜಮಾಡಿ, ಪಂಚಾಯತ್ ಮಾಜಿ ಸದಸ್ಯರಾದ ನಿರ್ಮಲ, ಫಾರಿಧ್, ರೋಷನ್ ಕೋಡಿ, ಪದ್ಮನಾಭ ಸುವರ್ಣ, ಕಬೀರ್, ಮಾಧವ ಸನಿಲ್, ಉಮೇಶ್ ಕೋಟ್ಯಾನ್ ನಡಿಕುದೂರು, ವಿದ್ಯಾ, ಹಸನ್ ಕೋಡಿ, ಅಬ್ದುಲ್ ರಝಾಕ್, ಅಬ್ದುಲ್ ಹಮೀದ್, ರೀನಾ, ವಿನುತ ಡಿ’ಸೋಜಾ, ರಾಜು ಹೆಜಮಾಡಿ, ಎಸ್.ಸಿ./ಎಸ್.ಟಿ. ಘಟಕದ ಅಧ್ಯಕ್ಷರಾದ ಶೇಖರ್ ಕಿಟ್ಟ ಸುವರ್ಣ, ಇಂಟಕ್ ಘಟಕದ ಅಧ್ಯಕ್ಷರಾದ ರಮೇಶ್ ಸುವರ್ಣ, ಸನಾ ಇಬ್ರಾಹಿಂ, ಮೊಹಮ್ಮದ್ ಸಿರಾಜ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



Related posts

ಪೊಲಿಪು ಕಾಂಚನ್ ಮೂಲಸ್ಥಾನ – ನಾಗರ ಪಂಚಮಿ ಆಚರಣೆ, ವಾರ್ಷಿಕ ಮಹಾಸಭೆ,ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ

Mumbai News Desk

ಮೂಲ್ಕಿ : ಕೊಳಚಿ ಕಂಬಳ ಶ್ರೀ ಬೊಬ್ಬರ್ಯ ದೈವಸ್ಥಾನದ ಪುನರ್ ನಿರ್ಮಾಣಕ್ಕೆ ಶಿಲನ್ಯಾಸ

Mumbai News Desk

ತೋಕೂರು ಮದ್ದೇರಿ ದೈವಸ್ಥಾನದ ಗೌ.ಅಧ್ಯಕ್ಷರಾಗಿ ಪದ್ಮನಾಭ ಆಚಾರ್ಯ, ಅಧ್ಯಕ್ಷರಾಗಿ ಹರಿಪ್ರಸಾದ್ ಜಿ. ಶೆಟ್ಟಿ ಆಯ್ಕೆ

Mumbai News Desk

ಮುಲ್ಕಿ : ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠದಲ್ಲಿ ‘ವನ ಮಹೋತ್ಸವ’ ದಿನಾಚರಣೆ, ಹಸಿರು ಕ್ರಾಂತಿಗೆ ಕರೆ

Mumbai News Desk

ತೊಕ್ಕೊಟ್ಟಿನಲ್ಲಿ ಶ್ರೀ ಸಾಯಿ ಪರಿವಾರ್ ಟ್ರಸ್ಟ್‌ನಿಂದ ವಿಜೃಂಭಣೆಯ ಗುರುಪೂರ್ಣಿಮೆ ಕಾರ್ಯಕ್ರಮ: ಯಕ್ಷಗಾನ ಕಲಾವಿದ ಅಶ್ವಥ್ ಮಂಜನಾಡಿ ಅವರಿಗೆ ಸನ್ಮಾನ ಹಾಗೂ ನೂತನ ವೆಬ್‌ಸೈಟ್ ಲೋಕಾರ್ಪಣೆ

Mumbai News Desk

ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕಾಪು : ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಮುಹೂರ್ತ, ಅ. 29ರ ತನಕ ಸ್ವರ್ಣ ಸಮರ್ಪಣೆಗೆ ಭಕ್ತರಿಗೆ ಅವಕಾಶ

Mumbai News Desk