28 C
Mumbai
September 19, 2026
Mumbai News Kannada
ಸುದ್ದಿ

ಉಡುಪಿ: ಬಜೆ ಮೊಗವೀರ ಸುವರ್ಣ ಮೂಲಸ್ಥಾನದ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ





ಬಜೆ ಮೊಗವೀರ ಸುವರ್ಣ ಮೂಲಸ್ಥಾನ, ಬಜೆ ಇದರ ವಾರ್ಷಿಕ ಮಹಾಸಭೆ, ಸನ್ಮಾನ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ಮೂಲಸ್ಥಾನದ ಅಧ್ಯಕ್ಷ ರಾದ ವೆಂಕಟರಮಣ ಕಿದಿಯೂರ್ ಅವರ ಅಧ್ಯಕ್ಷತೆಯಲ್ಲಿ ಉಡುಪಿಯ ಹೋಟೆಲ್ ಕಿದಿಯೂರ್ ಶ್ರೀ ಮಾಧವ ಕೃಷ್ಣ ಸಭಾಗೃಹದಲ್ಲಿ ಜೂನ್ 14ರ ರವಿವಾರ 3.30ಕ್ಕೆ ನಡೆಯಿತು.
ಪ್ರಾರಂಭದಲ್ಲಿ ವಿಜಯ ಸುವರ್ಣ ಕಡೆಕಾರ್ ಪ್ರಾರ್ಥನೆ ಗೈದರು.
ಅಧ್ಯಕ್ಷರು ಸರ್ವರಿಗೂ ಸ್ವಾಗತ ಬಯಸಿ, ಕಾರ್ಯಕ್ರಮದ ವಿವರಣೆ ನೀಡಿದರು.
ಪ್ರಧಾನ ಕಾರ್ಯದರ್ಶಿ ಮುರಲೀಧರ್ ಸುವರ್ಣ ಅವರು ಗತ ಮಹಾಸಭೆಯ ಟಿಪ್ಪಣಿ ಮತ್ತು ಸಭಾ ವಾರ್ಷಿಕ ವರದಿಯನ್ನು ಮಂಡಿಸಿದರು.
ಕೋಶಾಧಿಕಾರಿ ರಾಮ ಸುವರ್ಣ ಅವರು ವಾರ್ಷಿಕ ಲೆಕ್ಕ ಪತ್ರ ಹಾಗೂ 2026ರ ಮೂಲಸ್ಥಾನದ ವಾರ್ಷಿಕೋತ್ಸವದ ಆಯ ವ್ಯಯ ಪಟ್ಟಿಗಳನ್ನು ಓದಿದರು.
ಬಳಿಕ ಮೂಲಸ್ಥಾನದಲ್ಲಿ ಆರಾಧನೆಗೊಳ್ಳುತ್ತಿರುವ ದೈವಗಳ ಸೇವೆ ಮಾಡುತ್ತಿರುವ ಮುಕ್ಕಲ್ದಿ ಶ್ರೀ ಮಟ್ಟು ಸುವರ್ಣ ಅವರನ್ನು ಅವರ ವೈವಾಹಿಕ ಜೀವನದ 50 ವರ್ಷ ಪೂರೈಸಿದ ಬಗ್ಗೆ ಅಭಿನಂದಿಸಿ ಅವರನ್ನು ಅವರ ಪತ್ನಿ ಸಹಿತ ಸನ್ಮಾನ ಮಾಡಲಾಯಿತು.ಸಂಶೋಧನೆ ಕ್ಷೇತ್ರದಲ್ಲಿ ಆರ್ಕಿಟೆಕ್ಟ್ರಲ್ ನಲ್ಲಿ ಪಿ ಎಚ್ ಡಿ. ಮಾಡಿದ ಡಾ. ಹರ್ಷಲತಾ ಅನಂತಪದ್ಮನಾಭ ಅವರನ್ನು,ಪಿ ಯು ಸಿ ಪರೀಕ್ಷೆಯಲ್ಲಿ 600ರಲ್ಲಿ 598 ಅಂಕ ಪಡೆದು ಕರ್ನಾಟಕ ರಾಜ್ಯ ದಲ್ಲಿ 5 ನೇ ರೇಂಕ್ ಸಾಧನೆ ಗೈದ ಅಶ್ಮಿತ್ ಜೆ. ಸುವರ್ಣ ಅವರನ್ನು ಸನ್ಮಾನಿಸಲಾಯಿತು.
ಇದೆ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ. ಮತ್ತು ಪಿ ಯು ಸಿ 2026ರ ಶೈಕ್ಷಣಿಕ ವರ್ಷದಲ್ಲಿ ಪಾಸಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನಗದು ಬಹುಮಾನದಿಂದ ಪುರಸ್ಕಾರ ಮಾಡಲಾಯಿತು.
ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ಶಾಸಕರಾದ ಯಶಪಾಲ್ ಸುವರ್ಣ ಅವರು ಮೂಲಸ್ಥಾನದ ಅಭಿವೃದ್ಧಿ ಕಾರ್ಯಗಳು ಮುಂದುವರಿಯಬೇಕು ಅದಕ್ಕಾಗಿ ಎಲ್ಲರೂ ಸಹಕರಿಸಬೇಕು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸುಗುಣಗಳನ್ನು ಅಳವಡಿಸಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಮೂಲಸ್ಥಾನ ಮುಂಬಾಯಿ ಶಾಖೆಯ ಪ್ರಧಾನ ಕಾರ್ಯದರ್ಶಿ ಅಶೋಕ ಸುವರ್ಣ ಅವರು ಬಜೆ ಸುವರ್ಣ ಮೂಲಸ್ಥಾನದ ವಿಶೇಷತೆ, ಪಾವಿತ್ರ್ಯತೆ ಹಾಗೂ ಹಿಂದೆ ಇದ್ದ ಸ್ಥಿತಿ ಈಗಿನ ಸುಧಾರಣೆಗೆ ದುಡಿದವರ ಮನೋಗತಿ ಬಗ್ಗೆ ತಿಳಿಸಿದರು ಹಾಗೂ ಅವರ ಸೇವೆಯನ್ನು ಕೊಂಡಾಡಿದರು. ಅವರು ಮುಂಬೈ ಶಾಖೆಯ ಶತಮಾನೋತ್ಸವವು ನವಂಬರ್ 15ರಂದು ನಡೆಯಲಿದ್ದು ಅದಕ್ಕೆ ಸಹಕಾರ ನೀಡಬೇಕೆಂದು ಕೋರಿದರು.ಅಧ್ಯಕ್ಷರು ತಮ್ಮ ಭಾಷಣದಲ್ಲಿ ಸಮಿತಿಯ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿ ಸಹಕಾರಕ್ಕೆ ವಿನಂತಿಸಿದರು.
ಇದೇ ಸಂದರ್ಭದಲ್ಲಿ ಮುಂದಿನ 3 ವರ್ಷಗಳ ಅವಧಿಗೆ ಪ್ರಸಕ್ತ ಪದಾಧಿಕಾರಿಗಳೇ ಮುಂದುವರಿಯಲಿ ಎಂದು ಸಭೆಯಲ್ಲಿ ನಿರ್ಣಯ ಮಾಡಲಾಯಿತು.
ಸಭಿಕರ ಪೈಕಿ ಸುಭಾಸ್ ಮೆಂಡನ್, ಪ್ರಕಾಶ್ ಸುವರ್ಣ ಅವರು ಅಭಿಪ್ರಾಯ ಮಂಡಿಸಿದರು.

ವೇದಿಕೆಯಲ್ಲಿ ಸಲಹೆಗಾರರಾದ ಆನಂದ ಪಿ. ಸುವರ್ಣ, ಹಿರಿಯಣ್ಣ ಕಿದಿಯೂರು, ಉಪಾಧ್ಯಕ್ಷರುಗಳಾದ ಗೋವಿಂದದಾಸ ಕೆ.ಸುವರ್ಣ, ಧುರಿಣ್ ಕೆ ಸುವರ್ಣ, ಪುರಂದರ ಎ.ಸುವರ್ಣ, ನವೀನ್ ಎಸ್. ಕೆ.
ಮಹಿಳಾ ಸಮಿತಿಯ ಅಧ್ಯಕ್ಷೆ ರಾಧಾ ಸುವರ್ಣ,
ಕಾರ್ಯಕ್ರಮ ನಿರ್ವಹಣೆಯನ್ನು ಅಶೋಕ ಸುವರ್ಣ ಸಸಿತೋಟ ಮಾಡಿದರು.
ಜತೆ ಕಾರ್ಯದರ್ಶಿಗಳಾದ ಸುರೇಶ ಸುವರ್ಣ ಕಟಪಾಡಿ, ದೇವದಾಸ್ ಸುವರ್ಣ ಕಿದಿಯೂರ್, ಸಂಘಟನಾ ಕಾರ್ಯದರ್ಶಿ ಸುಜಿತ್ ಕುಮಾರ್ ಉಚ್ಚಿಲ ಮೊದಲಾದವರು ಸಹಕರಿಸಿದರು.ಮಹಿಳಾ ಸಮಿತಿಯ ಕಾರ್ಯದರ್ಶಿ ವಿಮಲಾ ದಯಾನಂದ ಅವರು ವಿದ್ಯಾರ್ಥಿಗಳ ಹೆಸರು ಓದಿದರು ಹಾಗೂ ಕೊನೆಗೆ ಧನ್ಯವಾದ ಅರ್ಪಿಸಿದರು.



Related posts

ಮಂಗಳೂರು : ತೊಕ್ಕೊಟ್ಟು ಫೈಓವರ್ ನಲ್ಲಿ ರೌಡಿಶೀಟರ್ ನ ಹತ್ಯೆ

Mumbai News Desk

ವೆಂಕಪ್ಪ ನಾರಾಯಣ ಶೆಟ್ಟಿ ನಿಧನ.

Mumbai News Desk

ಉಡುಪಿ : ಸುನಂದ ಕೇಶವ ಸನಿಲ್ ನಿಧನ

Mumbai News Desk

ಜೆ ಸಿ ಐ ಶಂಕರಪುರ ಇದರ 2024 ರ ಸಾಲಿನ ಅಧ್ಯಕ್ಷರಾಗಿ ಇನ್ನಂಜೆ ಹರೀಶ್ ಪೂಜಾರಿ ಆಯ್ಕೆ.

Mumbai News Desk

ಚುನಾವಣಾ ಹಿನ್ನಲೆಯಲ್ಲಿ ಮುಂಬಯಿಯಲ್ಲಿ ಐಎನ್ ಡಿಐ ಪತ್ರಿಕಾಗೋಷ್ಠಿ

Mumbai News Desk

ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2024 ಪ್ರಕಟ, 69 ಜನರಿಗೆ ರಾಜ್ಯೋತ್ಸವ , 109 ಜನರಿಗೆ ಸಾಧಕ ಪ್ರಶಸ್ತಿ, ಮುಂಬೈಯ ಸಮಾಜ ಸೇವಕ ಸದಾಶಿವ ಶೆಟ್ಟಿ ಕನ್ಯಾಡಿಗೆ ಸಾಧಕ ಪ್ರಶಸ್ತಿ.ರಾಜ್ಯೋತ್ಸವ ಪ್ರಶಸ್ತಿ 2024

Mumbai News Desk