30 C
Mumbai
September 27, 2026
Mumbai News Kannada
ಸುದ್ದಿ

ಉಡುಪಿಯಲ್ಲಿ ನಡೆಯಲಿರುವ ‘ದೇವಾಡಿಗ ಮಹಾಧಿವೇಶನ 2026’: ಪಾವಂಜೆಯಲ್ಲಿ ಪೂರ್ವಭಾವಿ ಸಭೆ ಸಂಪನ್ನ



 ಬಗ್ಗೆ ಪೂರ್ವಬಾವಿ ಸಭೆಯು ದೇವಾಡಿಗ ಸಮಾಜ ಸೇವಾ ಸಂಘ (ರಿ)ಪಾವಂಜೆಯಲ್ಲಿನಡೆಯಿತು. 
ಸಭೆಯ ಅಧ್ಯಕ್ಷತೆಯನ್ನು ವಿಶ್ವ ದೇವಾಡಿಗ ಮಹಾ ಮಂಡಳದ ಅಧ್ಯಕ್ಷರಾದ  ಧರ್ಮಪಾಲ್ ಯು. ದೇವಾಡಿಗ ವಹಿಸಿದ್ದರು.ಅವರು ಈ ಅಧಿವೇಶನದ ಅಗತ್ಯತೆ ಇದರಿಂದ ಆಗುವ ಪ್ರಯೋಜನವನ್ನು ವಿವರಿಸುತ್ತಾ ಎಲ್ಲರ ಸಹಕಾರವನ್ನು ಯಾಚಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮುಂಬೈ ಸಂಘದ ಅಧ್ಯಕ್ಷ  ರವಿ ಎಸ್. ದೇವಾಡಿಗರು ಹಣ ಬಲ ಒಂದಿದ್ದರೆ ಸಾಲದು ಜನ ಬಲ ಮುಖ್ಯವಾಗಿ ಬೇಕಾಗಿದೆ ಇದನ್ನು ನಿಮ್ಮಲ್ಲಿ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. 
ಸಂಘಟನಾ ಕಾರ್ಯದರ್ಶಿ  ಜನಾರ್ದನ ಪಡುಪಣಂಬೂರು ಮಾತನಾಡುತ್ತಾ ಸಂಘಟನೆ ದೃಢವಾಗಿ ಕೆಲಸ ಮಾಡಲು ವಿವಿಧ ಉಪ ಸಮಿತಿಗಳನ್ನು ಮಾಡಬೇಕಾದ ಅಗತ್ಯತೆಯನ್ನು ತಿಳಿಸಿದರು. ಉಡುಪಿ ನಗರ ಸಭೆ ಮಾಜಿ ಸದಸ್ಯ  ವಿಜಯ ಕೊಡವೂರುರವರು ಗ್ರಾಮ ಸಭೆಗಳನ್ನು ರಚಿಸಿ ತಳಮಟ್ಟದಿಂದಲೇ ಪುಷ್ಟಿಕರಿಸುವ ಬಗ್ಗೆ ವಿವರಿಸಿದರು. ಪಾವಂಜೆ ಸಂಘದ ಮಹಿಳಾ ವೇದಿಕೆ ಅಧ್ಯಕ್ಷೆ  ವಿಜಯಲಕ್ಷ್ಮಿ ಜನಾರ್ದನ್ ಉಪಸ್ಥಿತರಿದ್ದರು.

 ಸಭೆಯಲ್ಲಿ ಉಡುಪಿ, ಉದ್ಯಾವರ, ಕಟಪಾಡಿ, ಕಾಪು, ಉಚ್ಚಿಲ, ಪಡುಬಿದ್ರೆ, ಎರ್ಮಾಳು, ಎಲ್ಲೂರು, ಬಂಟಕಲ್ಲು, ಪಲಿಮಾರು, ಬೆಲ್ಮನ್,ಹೆಜಮಾಡಿ, ಮೂಲ್ಕಿ, ಪಾವಂಜೆ ಸಂಘಗಳ ಅಧ್ಯಕ್ಷರು  ಪದಾಧಿಕಾರಿಗಳು ಭಾಗವಹಿಸಿದರು.
 ಪಾವಂಜೆ ಸಂಘದ ಅಧ್ಯಕ್ಷ  ಅಣ್ಣಪ್ಪ ದೇವಾಡಿಗ ಪಕ್ಷಿಕೆರೆ, ಉಡುಪಿ ಸಂಘದ ಅಧ್ಯಕ್ಷ  ರತ್ನಾಕರ್ ಜಿ ಎಸ್., ಮಂಗಳೂರು ಸಂಘದ ಅಧ್ಯಕ್ಷ ಅಶೋಕ್ ಮೊಯಿಲಿ ಹಾಗೂ ಮೇಲೆ ತಿಳಿಸಲಾದ ಎಲ್ಲಾ ಸಂಘದ ಅಧ್ಯಕ್ಷರುಗಳು ತಮ್ಮ ತಮ್ಮ ಅನಿಸಿಕೆಗಳನ್ನು ಮಂಡಿಸಿದರು.

 ಪ್ರಾರಂಭದಲ್ಲಿ ಮಹಿಳಾ ವೇದಿಕೆ ಉಪಾಧ್ಯಕ್ಷೆ  ಜಯಶ್ರೀ ಯಾದವ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.ಶ್ರೀ ಏಕನಾಥೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಉಪಾಧ್ಯಕ್ಷ  ಯಾದವ ದೇವಾಡಿಗ ಸ್ವಾಗತಿಸಿದರು, ವಿಶ್ವ ದೇವಾಡಿಗ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ  ಗಣೇಶ್ ದೇವಾಡಿಗ ಅಂಬಲಪಾಡಿ ಪ್ರಸ್ತಾವಿಕ ಮಾತುಗಳನ್ನು ಮಂದಿಸಿದರು ಕೊನೆಯಲ್ಲಿ ಪಾವಂಜೆ ಸಂಘದ ಉಪಾಧ್ಯಕ್ಷ ಶ್ರೀ ಸತೀಶ್ ಇಂದಿರಾನಗರ ಧನ್ಯವಾದಗಳನ್ನು ಸಮರ್ಪಿಸಿದರು. ಸಂಘದ ನಿಕಟಪೂರ್ವ ಅಧ್ಯಕ್ಷ  ರಾಮದಾಸ್ ಪಾವಂಜೆ ಕಾರ್ಯಕ್ರಮ ನಿರೂಪಿಸಿದರು.



Related posts

ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ಗೆ ಬೆಂಕಿ – 20 ಪ್ರಯಾಣಿಕರು ಸಜೀವ ದಹನ

Mumbai News Desk

ಕರ್ನಾಟಕ ಮೀನುಗಾರಿಕಾ ನಿಗಮದ ಅಧ್ಯಕ್ಷರಾಗಿ ಮಾಲಾ ನಾರಾಯಣ ರಾವ್ ನಿಯುಕ್ತಿ

Mumbai News Desk

ವಸಯಿ ತಾಲೂಕ ಹೋಟೆಲ್ ಎಸೋಸಿಯೇಶನಿಂದ  ಪ್ರತಿಭಟನೆ

Mumbai News Desk

ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಎಂ.ಎಸ್‌ ಉಮೇಶ್‌ ವಿಧಿವಶ

Mumbai News Desk

ಹೆಜಮಾಡಿ ದೊಡ್ಡಮನೆ ರಾಮೋಲಾ ಜೆ. ಹೆಜಮಾಡಿ ನಿಧನ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (05/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk