ಮುಂಬಯಿ : ಶ್ರೀ ರಜಕ ಸಂಘ ಮುಂಬಯಿಯ 87ನೇ ವಾರ್ಷಿಕ ಮಹಾಸಭೆಯು ಜುಲೈ 12ರಂದು ಬೆಳಿಗ್ಗೆ 9.30ರಿಂದ ಅಂಧೇರಿ ಪಶ್ಚಿಮದಲ್ಲಿರುವ ಮೊಗವೀರ ಭವನ (MVM), ಪೀರ ದೇಸಾಯಿ ರಸ್ತೆ, ಅಂಬೋಲಿ ಇಲ್ಲಿ ಸಂಘದ ಅಧ್ಯಕ್ಷ ಸಿಎ ವಿಜಯ್ ಕುಂದರ್ ರವರ ಅಧ್ಯಕ್ಷತೆಯಲ್ಲಿ ಜರಗಲಿದೆ.
ಈ ಸಂಧರ್ಭ 2025-2026 ಶೈಕ್ಷಣಿಕ ಸಾಲಿನ ಎಚ್ ಎಸ್ ಸಿ ಮತ್ತು ಎಸ್ ಎಸ್ ಸಿ ಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಸಮಾಜ ಬಾಂಧವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಗುವುದು.
ಮುಂಬಯಿಯಲ್ಲಿ ನೆಲೆಸಿರುವ ರಜಕ ಬಾಂಧವರೆಲ್ಲರೂ ಮಹಾಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಆಡಳಿತ ಮಂಡಳಿಯ ಪರವಾಗಿ ಕಾರ್ಯದರ್ಶಿ ಸುಮಿತ್ರಾ ಪಲಿಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
——





