August 28, 2026
Mumbai News Kannada
ಪ್ರಕಟಣೆ

ಪಲಿಮಾರು ಹೊಸಾಗ್ಮೆಯಲ್ಲಿ ಜುಲೈ 16 ರಿಂದ ‘ಕುಮಾರವ್ಯಾಸ ಭಾರತ’ ಕಥಾ ವಾಚನ ಮತ್ತು ಪ್ರವಚನ ಕಾರ್ಯಕ್ರಮ





ಹೆಜಮಾಡಿಯ ಪಲಿಮಾರು ಹೊಸಾಗ್ಮೆ ಶ್ರೀ ಸೀತಾರಾಮ ಭಜನಾ ಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಳೆಗಾಲದ ಕರ್ಕಾಟಕ ಮಾಸದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ಪರಾಭವ ನಾಮ ಸಂವತ್ಸರದ ಆಷಾಢ ಶುಕ್ಲ ಪಕ್ಷಕ್ಕೆ ಒದಗಿಬರುವ ಜುಲೈ 16, 2026ರ ಗುರುವಾರದಿಂದ ಈ ಪುಣ್ಯ ಕಥಾ ವಾಚನ ಮತ್ತು ಪ್ರವಚನ ಕಾರ್ಯಕ್ರಮವು ಆರಂಭಗೊಳ್ಳಲಿದೆ.
ಈ ವರ್ಷದ ಕಾರ್ಯಕ್ರಮದಲ್ಲಿ ಸುಪ್ರಸಿದ್ಧ ಮಹಾಕಾವ್ಯ ‘ಕುಮಾರವ್ಯಾಸ ಭಾರತ’ದ ಕಥಾ ವಾಚನ ನಡೆಯಲಿದ್ದು, ಪ್ರತಿದಿನ ಸಾಯಂಕಾಲ 4:00 ಗಂಟೆಯಿಂದ 6:00 ಗಂಟೆಯವರೆಗೆ ಭಕ್ತಾದಿಗಳಿಗೆ ಶ್ರವಣ ಭಾಗ್ಯ ಸಿಗಲಿದೆ. ಸುರತ್ಕಲ್‌ನ ಪ್ರಸಿದ್ಧ ವಾಚಕರಾದ ಶ್ರೀ ಜಯ ದೇವಾಡಿಗ ಸುರತ್ಕಲ್, ಅವರು ಕಾವ್ಯ ವಾಚನ ಮಾಡಲಿದ್ದಾರೆ. ಇದರೊಂದಿಗೆ ಪಡುಬಿದ್ರಿಯ ಶ್ರೀ ಭಾಸ್ಕರ್ ಕೆ. ಮತ್ತು ಎರ್ಮಾಳಿನ ಶ್ರೀ ಮನೋಹರ್ ಕುಂದರ್ ಅವರು ಕಥೆಯ ಮರ್ಮ ಹಾಗೂ ಜೀವನ ಸಂದೇಶಗಳನ್ನು ಒಳಗೊಂಡ ಪ್ರವಚನವನ್ನು ನೀಡಲಿದ್ದಾರೆ.
1934ರಲ್ಲಿ ಸ್ಥಾಪನೆಗೊಂಡು ಸುದೀರ್ಘ ಇತಿಹಾಸ ಹೊಂದಿರುವ ಶ್ರೀ ಸೀತಾರಾಮ ಭಜನಾ ಮಂದಿರದಲ್ಲಿ ನಡೆಯುವ ಈ ಧಾರ್ಮಿಕ ಕಾರ್ಯಕ್ರಮವನ್ನು ಪಲಿಮಾರು ಮೊಗವೀರ ಸಭಾ (ರಿ.) ಪಲಿಮಾರು, ಪಲಿಮಾರು ಮೊಗವೀರ ಸಭಾ ಮುಂಬಯಿ, ಪಲಿಮಾರು ಮೊಗವೀರ ಮಹಿಳಾ ಸಭಾ ಹಾಗೂ ಪಲಿಮಾರು ಶ್ರೀ ಸೀತಾರಾಮ ಸೇವಾ ಸಮಿತಿಯವರು ಜಂಟಿಯಾಗಿ ಆಯೋಜಿಸಿದ್ದಾರೆ. ಈ ಪುಣ್ಯಪ್ರದ ಕಥಾ ಶ್ರವಣ ಕಾರ್ಯಕ್ರಮದಲ್ಲಿ ಪರಿಸರದ ಸಮಸ್ತ ಭಕ್ತಾಭಿಮಾನಿಗಳು ಪ್ರತಿದಿನ ಸಕಾಲದಲ್ಲಿ ಪಾಲ್ಗೊಂಡು, ಶ್ರೀ ಸೀತಾರಾಮ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.



Related posts

ಆಗಸ್ಟ್ 9 ರಂದು ಶ್ರೀ ಜಗದಂಬ ಮಂದಿರ(ರಿ), ದಲ್ಲಿ ನಾಗರ ಪಂಚಮಿ ಉತ್ಸವ

Mumbai News Desk

ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ: ಮಾರ್ಚ್ 8ರಂದು ಇತಿಹಾಸ ಪ್ರಸಿದ್ಧ ಗಂಗಾರತಿ ವೈಭವ

Mumbai News Desk

ಬೊಯಿಸರ್ : ಜುಲೈ ತಾ.10 ರಂದು ಸ್ವಾಮಿ ನಿತ್ಯನಂದ ಮಂದಿರದಲ್ಲಿ ಗುರುಪೂರ್ಣಿಮೆ ಆಚರಣೆ

Mumbai News Desk

ವಿಜಯಕುಮಾರ್ ಕೊಡಿಯಾಲ್ ಬೈಲ್ ರಿಗೆ ರಂಗಚಾವಡಿ ಪ್ರಶಸ್ತಿ

Mumbai News Desk

ಗೋರೆಗಾಂವ್ ಕರ್ನಾಟಕ ಸಂಘ -ಜುಲೈ19ರಂದು 68ನೇ ವಾರ್ಷಿಕ ಮಹಾ ಸಭೆ.

Mumbai News Desk

ಮೇ 12 :ರವಿನಾಥ್ ಶೆಟ್ಟಿ ತೋನ್ಸೆ ನೇತೃತ್ವದಲ್ಲಿ ಗುಜರಾತ್ ಭರೂಚ್ ಶ್ರೀ ಗುಮನ್ ದೇವ್ ಮಂದಿರದಲ್ಲಿ ಶ್ರೀ ಬಾಲಾಜಿ ವೆಂಕಟೇಶ್ವರ ಸ್ವಾಮಿ ಪ್ರಾಣಪ್ರತಿಷ್ಠೆ , ಬ್ರಹ್ಮಕಲಶೋತ್ಸವ , ಶ್ರೀನಿವಾಸ ಕಲ್ಯಾಣ. 

Mumbai News Desk