October 16, 2026
Mumbai News Kannada
ತುಳುನಾಡು

ಉಡುಪಿಯ ಸರ್ವತೋಮುಖ ಅಭಿವೃದ್ಧಿಗೆ ಮಹತ್ವದ ಮುನ್ನುಡಿ: ‘ವಿಷನ್ 20-30-35’ ಚಿಂತನ ಮಂಥನದಲ್ಲಿ ಗಣ್ಯರ ಮಹತ್ವದ ಸಲಹೆಗಳು



ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಉಡುಪಿ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ವತಿಯಿಂದ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಆಂಡ್ ಆರ್ಕಿಟೆಕ್ಟ್ಸ್, ಕ್ರೆಡಾಯ್ ಹಾಗೂ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ- ಉಡುಪಿ ಸಹಯೋಗದಲ್ಲಿ ಜುಲೈ 12 ರಂದು ನಗರದಲ್ಲಿ ‘ಉಡುಪಿ ವಿಷನ್ 20-30-35’ ಚಿಂತನ ಮಂಥನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಹಲವು ಪ್ರಮುಖ ವಿಚಾರಗಳನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಉದ್ಯಮಿಗಳು ಮುಕ್ತವಾಗಿ ಮಂಡಿಸಿದರು.
ಕಾರ್ಯಕ್ರಮದ ಪ್ರೊಮೋಗೆ ರಿಮೋಟ್ ಕಂಟ್ರೋಲ್ ಮೂಲಕ ಚಾಲನೆ ನೀಡಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು, ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ಸೇರಿಸಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ ಎಂದರು. ಇದರಿಂದ ಹೆಚ್ಚಿನ ಅನುದಾನ ತಂದು, ಪ್ರಸ್ತುತ ಇರುವ ಮಾರ್ಗದಲ್ಲಿ ಹೆಚ್ಚುವರಿ ಹಳಿಗಳನ್ನು ಅಳವಡಿಸಿ ದ್ವಿಪಥಗೊಳಿಸುವ ಮೂಲಕ ಹೆಚ್ಚಿನ ರೈಲುಗಳನ್ನು ಓಡಿಸಲು ಸಾಧ್ಯವಿದೆ ಎಂದು ಅವರು ತಿಳಿಸಿದರು. ಅಲ್ಲದೆ, ರಾಜ್ಯದ ಕರಾವಳಿ ತೀರವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲು ಸರ್ಕಾರದ ಜೊತೆಗೂಡಿ ನಾವೆಲ್ಲರೂ ಗಂಭೀರ ಚಿಂತನೆ ನಡೆಸುತ್ತಿದ್ದೇವೆ ಎಂದು ಅವರು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು, ಗೋವಾಕ್ಕೆ ತೆರಳುವ ಪ್ರವಾಸಿಗರು ಕರ್ನಾಟಕಕ್ಕೂ ಭೇಟಿ ನೀಡಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕರಾವಳಿ ಭಾಗದಲ್ಲಿ ಹೋಮ್‌ಸ್ಟೇಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಜಿಲ್ಲೆಯ ಪ್ರವಾಸೋದ್ಯಮ ಮತ್ತು ಆರ್ಥಿಕ ಪ್ರಗತಿಗೆ ರೈಲ್ವೆ ಹಾಗೂ ವಿಮಾನ ಸಂಪರ್ಕಗಳು ಬಹಳಷ್ಟು ಅಗತ್ಯವಾಗಿದ್ದು, ಫಿಶರೀಸ್ ಹಾರ್ಬರ್ ಜೊತೆಗೆ ವಾಟರ್… ಸ್ಪೋರ್ಟ್ಸ್ ಚಟುವಟಿಕೆಗಳನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಶಾಸಕ ಸುನಿಲ್ ಕುಮಾರ್ ಅವರು ಮಾತನಾಡಿ, ಕೊಣಾಜೆಯಿಂದ ಮಣಿಪಾಲದವರೆಗೆ ಮೆಟ್ರೋ ರೈಲು ಆರಂಭಿಸಬೇಕೆಂಬ ಪ್ರಸ್ತಾವನೆಯನ್ನು ಈ ಹಿಂದೆ ಸಲ್ಲಿಸಲಾಗಿತ್ತು. ಈ ಮೆಟ್ರೋ ವ್ಯವಸ್ಥೆಯಿಂದ ಕರಾವಳಿ ನಗರ ವೇಗವಾಗಿ ಬೆಳೆಯುವುದಲ್ಲದೆ, ಸಾರ್ವಜನಿಕರ ಪ್ರಯಾಣದ ಸಮಯವೂ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದರು. ಇದರೊಂದಿಗೆ, ಪಡುಬಿದ್ರಿಯಲ್ಲಿ ಲಭ್ಯವಿರುವ ಜಾಗದಲ್ಲಿ ಅಂತರರಾಷ್ಟ್ರೀಯ ಮಟ್ಟದ ಸ್ಟೇಡಿಯಂ ಮತ್ತು ಸುಸಜ್ಜಿತ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿರ್ಮಿಸಬೇಕು ಎಂದು ಅವರು ಪ್ರತಿಪಾದಿಸಿದರು.
ಮತ್ತೊಬ್ಬ ಶಾಸಕ ಯಶ್‌ಪಾಲ್ ಸುವರ್ಣ ಅವರು ಮಾತನಾಡಿ, ಉಡುಪಿ ಜಿಲ್ಲೆಯು ರಾಜ್ಯಕ್ಕೆ ಸಾಕಷ್ಟು ಸಂಖ್ಯೆಯ ವೈದ್ಯರು ಹಾಗೂ ಎಂಜಿನಿಯರ್‌ಗಳನ್ನು ನೀಡಿದ್ದರೂ, ಅವರ ಸೇವೆ ಸ್ಥಳೀಯವಾಗಿ ಜಿಲ್ಲೆಗೆ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಅವರ ಜ್ಞಾನ ಮತ್ತು ಸೇವೆ ಜಿಲ್ಲೆಗೆ ಸಿಕ್ಕರೆ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ. ಆದ್ದರಿಂದ ಜಿಲ್ಲೆಗೆ ಪ್ರತ್ಯೇಕ ಮೆಡಿಕಲ್ ಕಾಲೇಜು ಹಾಗೂ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಅಗತ್ಯವಿದೆ ಎಂದು ಒತ್ತಾಯಿಸಿದರು. ಜಿ. ಪಂ. ಸಿಇಒ ಪ್ರತೀಕ್ ಬಾಯಲ್ ಅವರು ಮಾತನಾಡಿ, ಉಡುಪಿ ಜಿಲ್ಲೆಯು ರಾಜ್ಯದ ಆರ್ಥಿಕತೆಗೆ ಸಾಕಷ್ಟು ದೊಡ್ಡ ಕೊಡುಗೆ ನೀಡುತ್ತಿದೆ. ಆದರೆ, ಜನರು ಹೊಸ ಯೋಚನೆಗಳೊಂದಿಗೆ ಬೆಳೆಯಬೇಕಾಗಿದ್ದು, ಕಾಲಕ್ಕೆ ತಕ್ಕಂತೆ ಅಗತ್ಯ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಮಹತ್ವದ ಚಿಂತನ ಮಂಥನ ಸಭೆಯಲ್ಲಿ ಶಾಸಕರುಗಳಾದ ಗುರುರಾಜ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ, guರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಸಮನ್ವಯಕಾರರಾದ ಜಯಕರ ಶೆಟ್ಟಿ ಇಂದ್ರಾಳಿ, ಡಾ. ಎ.ಪಿ. ಆಚಾರ್, ಡಾ. ಶಿವಾನಂದ ನಾಯಕ್, ಸುರೇಂದ್ರ ನಾಯಕ್, ಪ್ರಸಾದ್ ಉಪಾಧ್ಯ, ಕಿರಣ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.



Related posts

ಸಾಲ್ಯಾನ್ ಮೂಲಸ್ಥಾನ ಕದಿಕೆ, ಹಳೆಯಂಗಡಿ – ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ, ಪ್ರೋತ್ಸಾಹ ಧನ ವಿತರಣೆ.

Mumbai News Desk

ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಾರಥಿಯಾಗಿ ಚಂದ್ರಶೇಖರ ಸುವರ್ಣ

Mumbai News Desk

ಬಿರುವೆರ್‌ ಕಾಪು ಸೇವಾ ಸಮಿತಿ ವತಿಯಿಂದ ಆಟಿ ಕಷಾಯ ವಿತರಣೆ

Mumbai News Desk

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ 48ನೇ ವಾರದ ಭಜನಾ ಸಂಕೀರ್ತನೆ, ಮಂಗಳೋತ್ಸವ

Mumbai News Desk

ಮುಲ್ಕಿ : ಸಾಧಕರ ಅರಸು ಕಂಬಳ ಪ್ರಶಸ್ತಿ 2025 ಪ್ರಕಟ – ಹರಿಶ್ಚಂದ್ರ ಪಿ ಸಾಲ್ಯಾನ್ ರವರಿಗೆ ಸಾಹಿತ್ಯ ಕ್ಷೇತ್ರ ಪ್ರಶಸ್ತಿ

Mumbai News Desk

ಹೊಸ ಅಂಗಣ ಮಾಸಪತ್ರಿಕೆಯ ದಶಮಾನೋತ್ಸವ ಸಂಭ್ರಮ ‘ವಿಶೇಷ ಸಂಚಿಕೆ’ ಹಾಗೂ ಹರಿಶ್ಚಂದ್ರ ಟಿ. ಸಾಲ್ಯಾನ್‌ರ 25ನೇ ಕೃತಿ ‘ತುಳುನಾಡ ಮದುವೆ’ ಬಿಡುಗಡೆ

Mumbai News Desk