July 12, 2026
Mumbai News Kannada
ಮುಂಬಯಿ

ನಾನಿಲ್ತಾರ್ ಅಭಿಮಾನಿ ಬಳಗ ಮುಂಡ್ಕೂರು-ಮುಂಬಯಿ: 18ನೇ ವರ್ಷದ ವರಮಹಾಲಕ್ಷ್ಮೀ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ








​ಮುಂಬಯಿ: ಇಲ್ಲಿನ ‘ನಾನಿಲ್ತಾರ್ ಅಭಿಮಾನಿ ಬಳಗ ಮುಂಡ್ಕೂರು-ಮುಂಬಯಿ’ ಇದರ 18ನೇ ವರ್ಷದ ವಾರ್ಷಿಕ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ಆಮಂತ್ರಣ ಪತ್ರಿಕೆಯನ್ನು ಜುಲೈ 12 ರಂದು ಗೋರೆಗಾಂವ್ ಪೂರ್ವದ ಪ್ರಜ್ಞಾ ಶಾಲೆಯಲ್ಲಿ ಬಿಡುಗಡೆಗೊಳಿಸಲಾಯಿತು. ಅಭಿಮಾನಿ ಬಳಗದ ಅಧ್ಯಕ್ಷರಾದ ಹರೀಶ್ ಡಿ. ಮೂಲ್ಯ ಅವರು ಆಮಂತ್ರಣ ಪತ್ರಿಕೆಯನ್ನು ಉದ್ಘಾಟಿಸಿದರು.
​ಬಳಿಕ ಮಾತನಾಡಿದ ಅಧ್ಯಕ್ಷರು, “ಪ್ರತಿ ವರ್ಷದಂತೆ ಈ ವರ್ಷವೂ ಪೂಜಾ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಲು ಸರ್ವರೂ ಒಗ್ಗಟ್ಟಿನಿಂದ ಸಹಕಾರ ನೀಡಬೇಕು” ಎಂದು ವಿನಂತಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಸಂಚಾಲಕರಾದ ಕೃಷ್ಣ ಎಸ್. ಮೂಲ್ಯ ನಾಲಾಸೋಪಾರ ಅವರು ಎಲ್ಲರನ್ನೂ ಸ್ವಾಗತಿಸಿದರು.

​ಈ ಸಂದರ್ಭದಲ್ಲಿ ಬಳಗದ ಉಪಾಧ್ಯಕ್ಷರಾದ ದಿನೇಶ್ ಮೂಲ್ಯ ಅಂಧೇರಿ, ಕಾರ್ಯದರ್ಶಿ ದಿನೇಶ್ ಬಂಗೇರ ಖಾರ್‌ದಾಂಡ, ಜೊತೆ ಕಾರ್ಯದರ್ಶಿಗಳಾದ ಲೋಕೇಶ್ ಸಾಲ್ಯಾನ್ ಗೋರೆಗಾಂವ್ ಮತ್ತು ಸದಾಶಿವ ಮೂಲ್ಯ ವಿರಾರ್, ಜೊತೆ ಕೋಶಾಧಿಕಾರಿಗಳಾದ ವಿಶ್ವನಾಥ ಕುಂದರ್ ಅಂಧೇರಿ ಮತ್ತು ಶಶಿಕಾಂತ್ ಮೂಲ್ಯ ವಿರಾರ್ ಉಪಸ್ಥಿತರಿದ್ದರು.
​ಅಲ್ಲದೆ, ಸಲಹೆಗಾರರಾದ ರುಕ್ಕಿಣಿ ಯಶೋಧರ್ ಸಾಲ್ಯಾನ್ ಸಾಕಿನಾಕ, ಸರೋಜಾ ಎಚ್. ಮೂಲ್ಯ ಅಂಧೇರಿ, ಅರ್ಚನಾ ಎಸ್. ಕುಲಾಲ್ ವಸಾಯಿ, ನಳಿನಿ ಎನ್. ಬಂಜನ್ ವಿರಾರ್, ಕೇಶವ್ ಬಂಜನ್ ಜೋಗೇಶ್ವರಿ, ಜ್ಯೋತಿ ಡಿ. ಸಾಲ್ಯಾನ್ ಗೋರೆಗಾಂವ್, ದಿವ್ಯಾ ಎಲ್. ಸಾಲ್ಯಾನ್ ಗೋರೆಗಾಂವ್ ಸೇರಿದಂತೆ ಪದಾಧಿಕಾರಿಗಳು ಹಾಗೂ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.


​ಆಗಸ್ಟ್ 30 ರಂದು ಮಹಾಪೂಜೆ:
​ಈ ವರ್ಷದ 18ನೇ ವಾರ್ಷಿಕ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆಗಸ್ಟ್ 30 ರಂದು ಬೆಳಿಗ್ಗೆ 8:00 ಗಂಟೆಯಿಂದ ಸಂಜೆ 4:30 ರವರೆಗೆ ವಿಲೇಪಾರ್ಲೆ ಪೂರ್ವದ ಮಾಲ್ವಿಯ ರಸ್ತೆಯ ಗೋಮಂತಕ್ ಚೌಕ್‌ನಲ್ಲಿರುವ ‘ಗೋಮಂತಕ್ ಸೇವಾ ಸಂಘ’ದ ಸಭಾಂಗಣದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವೈಭವದಿಂದ ಜರಗಲಿರುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Related posts

ಸಾಂತಾಕ್ರೂಜ್ ಕನ್ನಡ ಸಂಘದ 68ನೇ ವಾರ್ಷಿಕ ಮಹಾಸಭೆ: ಸಮಾಜ ಸೇವೆಗೆ ನಿಸ್ವಾರ್ಥ ಮನೋಭಾವದ ಕರೆ

Mumbai News Desk

ಬಂಟ್ಸ್ ಫೋರಮ್ ಮೀರಾ ಭಾಯಂದರಿನ ಬಂಟರಕೂಟ-2026 ಕಾರ್ಯಕ್ರಮದ ಪೂರ್ವಭಾವಿ ಸಭೆ.

Mumbai News Desk

ಕಾಲಘೋಡ ಶ್ರೀ ಸಾಯಿಬಾಬಾ ಪೂಜಾ ಸಮಿತಿಯ 53ನೇ ವಾರ್ಷಿಕ ಮಹಾಪೂಜೆ

Mumbai News Desk

ಬಂಟರ ಸಂಘ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯಿಂದ ಉಚಿತ ವೈದ್ಯಕೀಯ ಶಿಬಿರ

Mumbai News Desk

ಬಂಟರ ಸಂಘ, ಮುಂಬಯಿ, ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಮಹಿಳಾ‌ ವಿಭಾಗ- ಆಟಿದ ಪೊರ್ಲ್ ತಿರ್ಲ್ ಕಾರ್ಯಕ್ರಮ

Mumbai News Desk

*ಶ್ರೀ ದುರ್ಗಾಪರಮೇಶ್ವರಿ – ಶನೀಶ್ವರ ದೇವಸ್ಥಾನ* , ರಾವಲ್ಪಾಡ, ದಹಿಸರ್, ಪೂರ್ವ *ಮುದ್ದು ಕೃಷ್ಣ ಸ್ಪರ್ಧೆ* .ಬಹುಮಾನ ವಿತರಣೆ.

Mumbai News Desk