September 5, 2026
Mumbai News Kannada
ಮುಂಬಯಿ

ನವಿ ಮುಂಬೈಯಲ್ಲಿ ಪುತ್ತಿಗೆ ಶ್ರೀಗಳ 53ನೇ ಚಾತುರ್ಮಾಸ್ಯ ವ್ರತ: ಸಮಾಲೋಚನಾ ಸಭೆ ಹಾಗೂ ಸಮಿತಿ ರಚನೆ





ಚಿತ್ರ ವರದಿ: ದಿನೇಶ್ ಕುಲಾಲ್ 

ನವಿ ಮುಂಬೈ: ಉಡುಪಿಯ ಅಷ್ಟಮಠಗಳಲ್ಲಿ ಒಂದಾಗಿರುವ ಪುತ್ತಿಗೆ ಮಠದ  ಪೂಜ್ಯ ಸುಗುಣೆಂದ್ರ ಶ್ರೀಪಾದರು 53ನೇ ಹಾಗೂ ಮುಂಬೈಯಲ್ಲಿ 8ನೇ ಚಾತುರ್ಮಾತ್ಸ್ಯ  ಈ ಬಾರಿ ನವಿ ಮುಂಬೈಯಲ್ಲಿ ನಡೆಯಲಿದ್ದು ಇದರ ಬಗ್ಗೆ ಸಮಾಲೋಚನಾ ಸಭೆ*ಜುಲೈ 18ನೇ ಜೂಲೈ ಶನಿವಾರ ನವಿಮುಂಬೈ ವಾಶಿಯ ನೂತನ ಶಾಖೆ ಪುತ್ತಿಗೆ ಮಠದ ಸಭಾಂಗಣದಲ್ಲಿ ಪೂಜ್ಯ ಶ್ರೀಪಾದರ ಮಾರ್ಗದರ್ಶನದಲ್ಲಿ ನಡೆಯಿತು. 

ಸ್ವಾಮೀಜಿಯವರು ಭಕ್ತರಿಗೆ  ಆಶೀರ್ವಚನ ನೀಡುತ್ತಾ ಮುಂಬೈ ಎಂದರೆ ಲಕ್ಷ್ಮಿಯ ನೆಲೆ ನಿಂತ ನಗರ ನಮ್ಮೂರಿನ ಯಾವುದೇ ಧರ್ಮ ಕಾರ್ಯಗಳು ನಡೆಯಬೇಕಿದ್ದರೆ ಅದಕ್ಕೆ ಮೂಲ ಕಾರಣ ಈ ಲಕ್ಷ್ಮಿ ನೆಲೆ ನಿಂತ ಮುಂಬೈಯ ಅವರಿಂದ ಸಾಧ್ಯವಾಗಿದೆ, ಜಗತ್ತಿನಲ್ಲಿ ಧಾರ್ಮಿಕ ಕಾರ್ಯಕ್ಕೆ ಮಾಡಬೇಕು  ಎನ್ನುವ ಉದ್ದೇಶದಿಂದ ಸನಾತನ ಧರ್ಮಕಾರಿಗಳನ್ನು ಜಗತ್ತಿನಾದ್ಯಂತ ನಡೆಸುತ್ತಾ ಬಂದಿದ್ದೇನೆ  ಜಗತ್ತಿನ ಪ್ರಮುಖ ದೇಶಗಳಲ್ಲಿ ಪುತ್ತಿಗೆಮಠ ಪ್ರಾರಂಭಗೊಂಡಿದೆ, ಜಗತ್ತಿನಲ್ಲಿ ಧಾರ್ಮಿಕತೆ ಜಾಗೃತವಾಗಬೇಕು ಮೂಲ ಉದ್ದೇಶವಾಗಿದೆ, ಹಿಂದೂ ಧರ್ಮ ಸನಾತನ ಧರ್ಮ ಅದು ಜಾಗೃತಿಗೊಂಡಾಗ, ಅದರ ಪರಿಚಯ ಮತ್ತು ಬೆಳವಣಿಗೆ ಆದಾಗ ಉಳಿದೆಲ್ಲ ಧರ್ಮಗಳ, ಹಿಂದೂ ಧರ್ಮ ಶ್ರೇಷ್ಠವಾಗಿದೆ, ಅತ್ಯಂತ ಮೌಲ್ಯಗಳಿರುವ ಧರ್ಮ, ಆದರೆ ಹಿಂದೂ  ಧರ್ಮದವರಿಂದಲೇ ಧರ್ಮ ಕುಂಠಿತವಾಗುತ್ತಿದೆ. ನಮ್ಮ ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯ ನಾವೆಲ್ಲರೂ ಮಾಡಬೇಕು, ಚಾತುರ್ಮಾಸ ದ ಮೂಲಕ ಮುಂಬೈ ಮತ್ತು ನವಿ ಮುಂಬೈಯಲ್ಲಿ ಧರ್ಮ ಕಾರ್ಯದ ಜಾಗೃತಿ ಮೂಡಿಸುವ ಸೇವೆ ಭಕ್ತರಲ್ಲರು ಸಹಕಾರ ನೀಡಬೇಕು ಎಂದು ನುಡಿದರು. 

ಈ ಸಂದರ್ಭದಲ್ಲಿ ಉಪಸ್ತರಿಂದ ಈ ಸಂದರ್ಭದಲ್ಲಿ ವಿದ್ವಾನ್  ಪ್ರಹಲ್ಲಾದ ಆಚಾರ್ಯ ನಾಗರ ಹಳ್ಳಿ, ಅದುಮಾರು ಮಠದ ರಾಜೇಶ್ ರಾವ್,ಎನ್ ಆರ್ ರಾವ್, ಪ್ರಕಾಶ್ ಆಚಾರ್ಯ, ಸಿಎ ಸುಧೀರ್ ಶೆಟ್ಟಿ, ಶಿವರಾಮ ಜಿ ಶೆಟ್ಟಿ , ಅಣ್ಣಿ ಸಿ ಶೆಟ್ಟಿ, ಗೋಪಾಲ್  ವೈ ಶೆಟ್ಟಿ, ಗುರುಪ್ರಸಾದ್ ಭಟ್ ಮತ್ತಿತರರು ನವಿ ಮುಂಬೈಯಲ್ಲಿ ಚಾತುರ್ಮಾಸ ನಡೆಯುವಲ್ಲಿ ನಮ್ಮೆಲ್ಲರ ಸಹಕಾರವಿದೆ ಎಂದರು.

ಈ ಸಂದರ್ಭದಲ್ಲಿ ಚಾತುರ್ಮಾತ್ಸ್ಯ ಸಮಿತಿಯ ಅಧ್ಯಕ್ಷರಾಗಿ  ಶಿವರಾಮ ಶೆಟ್ಟಿ ಅಜೆಕಾರ್, ಎಲ್ಲರ ಅಪೇಕ್ಷೆಯಮೇರೆಗೆ ಆಯ್ಕೆ ಮಾಡಲಾಗಿದ್ದು, ಗೌರವಾಧ್ಯಕ್ಷರಾಗಿ ವಿದ್ವಾನ್  ಪ್ರಹಲ್ಲಾದ ಆಚಾರ್ಯ ನಾಗರ ಹಳ್ಳಿ, ಕರ್ನಾಟಕದ ನಿವೃತ್ತ ನ್ಯಾಯಾಧೀಶರಾದ ದಿನೇಶ್ ಕುಮಾರ್, ಮುಂಬೈಯ ಪ್ರಸಿದ್ಧ ಗೋಕುಲದ ಅಧ್ಯಕ್ಷರಾದ  ಡಾ ಸುರೇಶ ರಾವ್*, ಹಾಗೂ ಪ್ರಸಿದ್ಧ ಚಾರ್ಟೆಡ್ ಅಕೌಂಟೆಂಟ್  ಏನ್ ಆರ್ ರಾವ್ ಇವರುಗಳನ್ನು ನೇಮಿಸಲಾಯಿತು.

ಸ್ವಾಮೀಜಿಯವರ ಭಕ್ತರಾಗಿರುವ ಉದ್ಯಮಿ  ಬಿ ಆರ್ ಶೆಟ್ಟಿ,  ಘಂನ್ಸೋಲಿ ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಅಣ್ಣಿ ಶೆಟ್ಟಿ , ಬಂಟ್ಸ್ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ , ಸುರೇಶ ಕಾಂಚನ್, ಹಾಗೂ ಹರೀಶ್ ಅಮೀನ್, ಸೂರ್ಯಕಾಂತ್ ಜಯ ಸುವರ್ಣ ಉಪಾಧ್ಯಕ್ಷರುಗಳಾಗಿ ನೇಮಿಸಲಾಯಿತು,ಕಾರ್ಯಧ್ಯಕ್ಷರಾಗಿ ಕಳತ್ತೂರು  ಗೋಪಾಲ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾಗಿ,. ಪತ್ರಕರ್ತರಾದ  ದಿನೇಶ್ ಕುಲಾಲ್, ಜೊತೆ ಕಾರ್ಯದರ್ಶಿಗಳಾಗಿ ವಿದ್ವಾನ್ ಶ್ರೀ ರಾಘವೇಂದ್ರ ಜಮದಗ್ನಿ, ಹಾಗೂ ವಿದ್ವಾನ್ ಶ್ರೀ ಗುರುಪ್ರಸಾದ್ ಘಂನ್ಸೋಲಿ ಆಯ್ಕೆ ಮಾಡಲಾಯಿತು, 
ಕಜಾಂಜಿಗಳಾಗಿ  ಸಂತೋಷ್ ಸಿ ಶೆಟ್ಟಿ, ಸಹ ಕಜಾಂಜಿಗಳಾಗಿ  ಗುರುಪ್ರಸಾದ್ ಭಟ್ , ಹಾಗೂ ಪ್ರಧಾನ ಸಂಚಾಲಕರಾಗಿ  ಸುಧೀರ್ ಆರ್ ಎಲ್ ಶೆಟ್ಟಿ ನೇಮಕಗೊಂಡರು, 

ಕಾರ್ಯಕ್ರಮವನ್ನು ಬೆಂಗಳೂರು ಗೋವರ್ಧನ ಕ್ಷೇತ್ರದ ಮೇಲ್ವಿಚಾರಕರಾದ ಏ ಬಿ ಕುಂಜಾರ್  ಕಾರ್ಯಕ್ರಮ ನಿರೂಪಣೆ ಮಾಡಿದರು, ದಿನೇಶ್ ಕುಲಾಲ್ ಧನ್ಯವಾದ ನೀಡಿದರು.

ಆಗಸ್ಟ್ 10ನೇ  ಪೂಜ್ಯ ಶ್ರೀಪಾದರ ಚಾತುರ್ಮಾತ್ಸ್ಯ ಪ್ರಯುಕ್ತ ನವಿ ಮುಂಬೈ ಪುರಪ್ರವೇಶ ನಡೆಯಲಿದ್ದು, ತಾ 12ಕ್ಕೆ ಶ್ರೀಪಾದರು ಚಾತುರ್ಮಾಸ್ಯ ವೃತ ಕೈಗೊಳ್ಳಲಿದ್ದಾರೆ, 
ತಾ 15 ಆಗಸ್ಟ್ ನವ ಮುಂಬೈಯಲ್ಲಿ ಇರುವ ಪುತ್ತಿಗೆ ಮಠದ ನೂತನ ಶಾಖೆ ಲೋಕಾರ್ಪಣೆಗೊಳ್ಳಲಿದೆ.

ಸಭೆಯಲ್ಲಿ ಕುರ್ಲಾ ಬಂಟರ ಭವನದ ಶ್ರೀ ಮಹಾವಿಷ್ಣು ಮಂದಿರದ ಪ್ರಧಾನ ಅರ್ಚಕ ನಾಗೇಂದ್ರ ಭಟ್,

ನಾಗರಾಜ ಉಡುಪ, ಮಿತ್ರಾ ಶೆಟ್ಟಿ , ಶೇಖರ್ ಶಾಂತಿ.
ರವಿಂದ್ರರ ಶಾಂತಿ.ರಾಜೇಶ್ ಗೌಡ,ಉಮೇಶ ಅಂಚನ್, ಮತ್ತಿತರರು ಪಾಲ್ಗೊಂಡಿದ್ದರು.



Related posts

ಮಲಾಡ್ ಕನ್ನಡ ಸಂಘದ ವತಿಯಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ

Mumbai News Desk

ಮಲಾಡ್ ಶ್ರೀಮಹತೋಭಾರ ಶನೀಶ್ವರ ದೇವಸ್ಥಾನದಲ್ಲಿ ವಿವಿಧ ಶನಿಮಂದಿರದವರಿಂದ ಶ್ರೀ ಶನಿ ಗ್ರಂಥ ಪಾರಾಯಣ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ  ನಿಧಿ ಸಂತೋಷ್ ಶೆಟ್ಟಿ, ಗೆ ಶೇ 91.80 ಅಂಕ.

Mumbai News Desk

ಕನ್ನಡ ಸಂಘ ಸಾಂತಾಕ್ರೂಜ್ ನ ಶೈಕ್ಷಣಿಕ ಆರ್ಥಿಕ ನೆರವು ವಿತರಣಾ, ದತ್ತು ಸ್ವೀಕರ,

Mumbai News Desk

ಮರಾಠ ಕೋಟಾ ಬೇಡಿಕೆಗೆ ಸರ್ಕಾರದ ಒಪ್ಪಿಗೆ, ಪ್ರತಿಭಟನೆ ಅಂತ್ಯ

Mumbai News Desk

ಮೀರಾ ರೋಡ್   ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 34ನೇ ವಾರ್ಷಿಕ ಮಹಾಪೂಜೆ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ,

Mumbai News Desk