27 C
Mumbai
September 4, 2026
Mumbai News Kannada
ಮುಂಬಯಿ

ಬಿಲ್ಲವರ ಅಸೋಸಿಯೇಶನ್ ಇದರ ವಸಯಿ ಸ್ಥಳೀಯ ಕಚೇರಿಯ ವತಿಯಿಂದ ವಿಜ್ರಂಭಣೆಯ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತ್ಯೋತ್ಸವ ಆಚರಣೆ





ವರದಿ : ಉಮೇಶ್ ಕೆ. ಅಂಚನ್

ವಸಯಿ, ಸೆ.4:ಬಿಲ್ಲವರ ಅಸೋಸಿಯೇಶನ್ ಇದರ ವಸಯಿ ಸ್ಥಳೀಯ ಕಚೇರಿಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತ್ಯೋತ್ಸವವನ್ನು ವಸಯಿ ಪಶ್ಚಿಮದ ಶ್ರೀ ಸ್ವಾಮಿನಾರಾಯಣ ಮಂದಿರದ ಸಭಾಗ್ರಹದಲ್ಲಿ ಆದಿತ್ಯವಾರ ಅ.30ರಂದು ವಿಜ್ರಂಭಣೆಯಿಂದ ಆಚರಿಸಲಾಯಿತು.


ಆರಂಭದಲ್ಲಿ ಕಚೇರಿಯಲ್ಲಿ ಗುರುದೇವರಿಗೆ ಅರ್ಚನೆ, ಅಭಿಷೇಕ ನಡೆಯಿತು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷ ಮೋಹನ್ ಸಿ.ಕೋಟ್ಯಾನ್, ಸ್ಥಳೀಯ ಕಚೇರಿಯ ಗೌರವಕಾರ್ಯಾಧ್ಯಕ್ಷ ಕೆ.ಬಿ.ಪೂಜಾರಿ, ಕಾರ್ಯಾಧ್ಯಕ್ಷ ಕರುಣಾಕರ ಜಿ.ಅಮೀನ್, ಉಪ ಕಾರ್ಯಾಧ್ಯಕ್ಷರುಗಳಾದ ದಯಾನಂದ ಪೂಜಾರಿ ಮತ್ತು ರವೀಂದ್ರ .ಪಿ , ಕಾರ್ಯದರ್ಶಿ ಚಂದ್ರಶೇಖರ ಎನ್.ಸಾಲ್ಯಾನ್, ಕೋಶಾಧಿಕಾರಿ ನಳಿನಿ ಪೂಜಾರಿ, ಜೊತೆ ಕಾರ್ಯದರ್ಶಿ ಜಗನ್ನಾಥ್ ಅಂಚನ್ , ಜೊತೆ ಕೋಶಾಧಿಕಾರಿ ಅಂಬರೀಷ್ ಪೂಜಾರಿ ಹಾಗೂ ಸಾರ್ವಜನಿಕ ಶನೀಶ್ವರ ಸೇವಾ ಸಮಿತಿ ವಸಯಿಯ ಅಧ್ಯಕ್ಷ ಕೆ.ಟಿ.ಬಂಗೇರ ಮೊದಲಾದವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಓಂ ನಮೋ ನಾರಾಯಣಾಯ ಶಿವಾಯ ಜಪ ಯಜ್ಞ, ಭಜನೆ, ಮಹಿಳಾ ವಿಭಾಗದ ಸದಸ್ಯೆಯರಿಂದ ಕುಣಿತ ಭಜನೆ, ಮಂಗಳಾರತಿ ನಡೆದು ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಭದ್ರಗಿರಿ ಅಚ್ಯುತದಾಸರ ‘ನಾರಾಯಣ ಗುರು’ ಹರಿಕಥೆಯ ಧ್ವನಿಸುರುಳಿಯನ್ನು ನೆರೆದ ಜನಸ್ತೋಮದೆದುರು ಬಿತ್ತರಿಸಲಾಯಿತು. ನಾರಾಯಣ ಗುರುಗಳ ಭಾವಚಿತ್ರ ಹಾಗೂ ಸಂದೇಶಗಳನ್ನೊಳಗೊಂಡ ಬ್ಯಾನರುಗಳನ್ನು ಪ್ರದರ್ಶಿಸಲಾಗಿತ್ತು.


ಧಾರ್ಮಿಕ ಕಾರ್ಯಕ್ರಮದಲ್ಲಿ ಕೇಂದ್ರ ಕಚೇರಿಯ ಜೊತೆ ಕಾರ್ಯದರ್ಶಿ ಕೇಶವ್ ಕೋಟ್ಯಾನ್, ಸಾಮಾಜಿಕ ಮತ್ತು ಧಾರ್ಮಿಕ ಉಪಸಮಿತಿಯ ಕಾರ್ಯಾಧ್ಯಕ್ಷ ಧರ್ಮಪಾಲ್ ಅಂಚನ್, ಡಾ.ಶೋಭಾ ಕೋಟ್ಯಾನ್, ವಿನೀತ್ ಕೆಮಿಕಲ್ಸ್ ನ ಮಾಲೀಕರಾದ ವಿಶ್ವನಾಥ ಶೆಟ್ಟಿ ಮಟ್ಟು, ವಸಯಿ ಕರ್ನಾಟಕ ಸಂಘದ ಅಧ್ಯಕ್ಷ ಶಂಕರ್ ಆಳ್ವ ಹಾಗೂ ಪರಿಸರದ ಸಂಘಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಸ್ಥಳೀಯ ಕಚೇರಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಗುರು ಭಕ್ತರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸ್ಥಳೀಯ ಕಚೇರಿಯ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವಿಭಾಗದ ಹಾಗೂ ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.



Related posts

ಭಾರತ್ ಬ್ಯಾಂಕ್ ಇದರ ಭಾಯಂದರ್ ಶಾಖಾ ಪ್ರಭಂದಕರಾದ ಪ್ರವೀಣ್ ಎಂ. ಬಂಗೇರ ಸೇವಾ ನಿವೃತಿ

Mumbai News Desk

ದಿ ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್‌ ಬದ್ಲಾಪುರದ ಮೋಯಾ ನಗರಿಯಲ್ಲಿ ಗಣ-ಹೋಮ, ಸಾಮೂಹಿಕ ಸತ್ಯನಾರಾಯಣ ಮಹಾಪೂಜೆ

Mumbai News Desk

ಭಾರತ್ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Mumbai News Desk

ಶ್ರೀ ಅಯ್ಯಪ್ಪ ಭಕ್ತ ಮಂಡಳಿ, ಶ್ರೀ ಲಕ್ಷ್ಮೀ ನಾರಾಯಣ ಭಜನಾ ಸಮಿತಿ ಮೀರಾ ರೋಡ್ ಶ್ರೀ ಅಯ್ಯಪ್ಪ ಸ್ವಾಮಿ 29ನೇ ಮಹಾಪೂಜೆ

Mumbai News Desk

ಶ್ರೀ ಮೂಕಾಂಬಿಕ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ : ಮಹಾ ಶಿವರಾತ್ರಿಯ ಅಂಗವಾಗಿ ಏಕಹಾ ಭಜನೆ

Mumbai News Desk

ಕರ್ನಾಟಕ ಸಂಘ ಡೊಂಬಿವಲಿ : ಲಲಿತ ಕಲಾ ಹಾಗೂ ಮಹಿಳಾ ವಿಭಾಗದ ವತಿಯಿಂದ ಸಂಭ್ರಮದ ನಾಡಹಬ್ಬ.

Mumbai News Desk