ಚಿತ್ರಾಪು ಬಿಲ್ಲವರ ಸಂಘ (ರಿ) ಮುಂಬಯಿ ಇದರ 81 ನೇ ಮಹಾಸಭೆಯು ದಿನಾಂಕ 30/8/2026 ರಂದು ಭಾನುವಾರ ಬೆಳಿಗ್ಗೆ 10:30 ಕ್ಕೆ ಬಿಲ್ಲವರ ಭವನ ಸಂತರಾಕ್ರೂಜ್ ಇಲ್ಲಿ ಅಧ್ಯಕ್ಷರಾದ ರಾಜು ಎಸ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗೌರವ ಅಧ್ಯಕ್ಷರಾದ ಲಕ್ಷ್ಮಣ್ ಸಿ ಪೂಜಾರಿ ಹಾಗೂ ಇತರ ಸದಸ್ಯರ ಉಪಸ್ಥಿತಿಯಲ್ಲಿ ನಮ್ಮ ಆರಾಧ್ಯ ದೇವರಾದ ಶ್ರೀ ವಿಠೋಬ ರುಕುಮಾಯಿ ಇವರ ಭಾವಚಿತ್ರಕ್ಕೆ ಹೂ ಅರ್ಪಣೆ ಮಾಡಿ ದೀಪ ಬೆಳಗಿಸಿ ಮಹಾಸಭಗೆ ಚಾಲನೆ ನೀಡಲಾಯಿತು .

ಗೌರವ ಕಾರ್ಯದರ್ಶಿಯಾದ ಉಮೇಶ್ ಕೋಟ್ಯಾನ್ ಗತ ವರ್ಷದ ವರದಿಯನ್ನು ಸಭೆಯ ಮುಂದೆ ಸಾದಾರಪಡಿಸಿದರು ,ನಂತರ ಅದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಗೌರವ ಕೋಶಾಧಿಕಾರಿಯಾದ ಸೋಮನಾಥ್ ಪೂಜಾರಿ ಅವರು 1-4-25 ರಿಂದ 31-3-26 ರವರೆಗಿನ ಲೆಕ್ಕ ಪರಿಶೋಧಕರಿಂದ ಪರಿಶೀಲಿಸಲ್ಪಟ್ಟ ಲೆಕ್ಕಪತ್ರವನ್ನು ಸಭೆಯ ಮುಂದೆ ಮಂಡಿಸಿದರು. ಕೆಲವು ಸೂಚನೆಗಳ ನಂತರ, ಮಹಾಸಭೆಯು ಅದನ್ನು ಸರ್ವಾನುಮತದಿಂದ ಅಂಗೀಕರಿಸಿತು.
ಲೆಕ್ಕ ಪರಿಶೋಧಕರಾಗಿ 2026-2027 ರ ಅವಧಿಗೆ ಕೆ . ಆರ್. ಶ್ರೀನಿವಾಸ ಅಂಡ್ ಅಸೋಸಿಯೇಟ್ಸ್
ಇವರನ್ನು ಸರ್ವಾನುಮತದಿಂದ ನೇಮಿಸಲಾಯಿತು.

ಸಂಘದ ಹಿರಿಯ ಸದಸ್ಯರಾದ ಕಲಾವತಿ ಅನಿಲ್ ಬಂಗೇರ ಇವರನ್ನು ಈ ಮಹಾಸಭೆಯಲ್ಲಿ ಗೌರವ ಅಧ್ಯಕ್ಷರು, ಅಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳು ಶಾಲು , ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಾರಿ ಪೋಷಕ ವಿತರಣೆ, ಹಾಗೂ ಊರಿನ ಸದಸ್ಯರ 9 ಮಕ್ಕಳಿಗೆ ಪಾರಿತೋಷಕ ಹಾಗೂ ಪ್ರೋತ್ಸಾಹಕ ಹಾಗೂ ನಗದು ನೀಡಿ ಪ್ರೋತ್ಸಾಹಿಸಲಾಯಿತು.
ಊರಿನಲ್ಲಿ ಮುಂದೆ ನಡೆಯುವ ಬೃಹತ್ ಕಳಸೋತ್ಸವದ ಬಗ್ಗೆ ಗೌರವ ಅಧ್ಯಕ್ಷರಾದ ಲಕ್ಷ್ಮಣ್ ಸಿ ಪೂಜಾರಿ ಅವರು ಮಾತನಾಡುತ್ತಾ ಬರುವ ಮೇ ತಿಂಗಳು 2027 ರಲ್ಲಿ ಬ್ರಹ್ಮ ಕಳಸೋತ್ಸವ ಮಾಡಲು ನಿರ್ಧರಿಸಲಾಗಿದೆ, ಸುಮಾರು ರೂ. 50,00,000/- ಗಳ ಬಜೆಟ್ ಅಂದಾಜಿಸಲಾಗಿದೆ ಎಂದರು. ಆದುದರಿಂದ ಎಲ್ಲಾ ಚಿತ್ರಾಪು ಗ್ರಾಮದ ಮುಂಬಯಿ ಮತ್ತು ಊರಿನ ಸದಸ್ಯರು ತಮ್ಮ ತನು ಮನ ಧನದಿಂದ ನಿಧಿ ಸಂಗ್ರಹಿಸಿ , ಕಡಿಮೆ ಖರ್ಚು ಮಾಡಿ ಉಳಿದ ಹಣವನ್ನು ವಿದ್ಯಾರ್ಥಿಗಳಿಗೆ ಸಹಾಯ ಧನ ಹಾಗೂ ಮೆಡಿಕಲ್ ಗೆ ಖರ್ಚು ಮಾಡುವ ತಮ್ಮ ಚಿಂತನೆಯನ್ನು ವ್ಯಕ್ತಪಡಿಸಿದರು.
ಸಂಘದ ಹಿರಿಯ ಸದಸ್ಯರಾದ ಚಿತ್ರಾಪು ಕೆ ಎಂ ಕೋಟ್ಯಾನ್, ಶೇಖರ್ ಚಿತ್ರಾಪು, ವಿಜಯ್ ಮುಲ್ಕಿ ಇವರುಗಳು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

ಗೌರವ ಕೋಶಾಧಿಕಾರಿಯಾದ ಸೋಮನಾಥ್ ಪೂಜಾರಿ ಹಾಗೂ ಉಮೇಶ್ ಕೋಟ್ಯಾನ್ ಅವರು ಸಂದರ್ಭೋಚಿತವಾಗಿ ಮಾತನಾಡಿದರು.
ಅಧ್ಯಕ್ಷರ ಭಾಷಣದಲ್ಲಿ ಸಂಘದ ಅಧ್ಯಕ್ಷರಾದ ರಾಜು ಎಸ್ ಪೂಜಾರಿ ಅವರು ಈ ಬಾರಿಯ ವಾರ್ಷಿಕ ಸಭೆಯಲ್ಲಿ ಹೆಚ್ಚು ಸದಸ್ಯರು ಉಪಸ್ಥಿತರಿರುವುದು ಸಂತಸವಾಗಿದೆ ಎಂದರಲ್ಲದೆ ಬರುವ ವರ್ಷ ನಡೆಯುವ ಬ್ರಹ್ಮ ಕಲಾಸೋತ್ಸವಕ್ಕೆ ಎಲ್ಲಾ ಮುಂಬೈ ಸದಸ್ಯರು ಹೆಚ್ಚಿನ ನಿಧಿ ಸಂಗ್ರಹ ಮಾಡಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಯಶಸ್ಸು ಗಳಿಸಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಗೌರವ ಪ್ರಧಾನ ಕಾರ್ಯದರ್ಶಿಯಾದ ಉಮೇಶ್ ಕೋಟ್ಯಾನ್ ಅವರು ಈ ಸಭೆಗೆ ಅಧ್ಯಕ್ಷತೆ ವಹಿಸಿದ ರಾಜು ಎಸ್ ಪೂಜಾರಿ, ಗೌರವಾಧ್ಯಕ್ಷರಾದ ಲಕ್ಷ್ಮಣ್ ಸಿ ಪೂಜಾರಿ ಮತ್ತು ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಹಿರಿಯ ಸದಸ್ಯರಿಗೆ, ಸಭೆಯನ್ನು ನಡೆಸಲು ಸ್ಥಳಾವಕಾಶವನ್ನು ನೀಡಿದ ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಪದಾಧಿಕಾರಿಗಳಿಗೆ, ವರದಿಗಾರರಿಗೆ ಹಾಗೂ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದರು.




