September 7, 2026
Mumbai News Kannada
ತುಳುನಾಡು

ಸ್ಯಾಬ್ರ ಕಟ್ಟೆ: ನಿವೃತ ಹಿರಿಯ ಬ್ಯಾಂಕ್ ಅಧಿಕಾರಿ ಗಳಿಗೆ ಸನ್ಮಾನ





ಬ್ಯಾಂಕಿಂಗ್ ಕ್ಷೇತ್ರದಲ್ಲಿ 32 ವರ್ಷಗಳ ಸುದೀರ್ಘ, ನಿಷ್ಠಾವಂತ ಹಾಗೂ ಜನಸ್ನೇಹಿ ಸೇವೆಯನ್ನು ಸಲ್ಲಿಸಿರುವ ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ನಿವೃತ ರಾದ ಹಿರಿಯ ಬ್ಯಾಂಕ್ ಅಧಿಕಾರಿ ಗಳಾದ ಕರುಣಾಕರ್ ದಾಸ್ ಮತ್ತು ಪ್ರಬೋಧ್ ಚಂದ್ರ ಹೆಜಮಾಡಿ ಅವರನ್ನು ಸೌತ್ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ (SCDCC Bank), ಸಾಹೇಬರಕಟ್ಟೆ ಶಾಖೆ ವತಿಯಿಂದ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ. ಪ್ರದೀಪ್ ಬಲ್ಲಾಳ್, ಅಧ್ಯಕ್ಷರು, ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘ, ಶಿರಿಯಾರ ವಹಿಸಿದ್ದರು. ಶರತ್ ಕುಮಾರ್ ಶೆಟ್ಟಿ, ನಿರ್ದೇಶಕರು, ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘ, ಕೆ. ರಾಜಾರಾಮ್ ಶೆಟ್ಟಿ, ಸಹಕಾರಿ ಸಂಘಗಳ ವಲಯ ಮೇಲ್ವಿಚಾರಕರು, ಉಡುಪಿ ತಾಲೂಕು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ವರದರಾಜ ಶೆಟ್ಟಿ, ಸಹಾಯಕ ಮಹಾ ಪ್ರಬಂಧಕರು, ಉಡುಪಿ ಮುಖ್ಯ ಶಾಖೆ ಅವರು ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರಲ್ಲದೆ, ಕಾರ್ಯಕ್ರಮದ ನಿರೂಪಣೆಯನ್ನು ನಿರ್ವಹಿಸಿದರು. ಮಲ್ಯಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಶಾಖಾ ವ್ಯವಸ್ಥಾಪಕರು, ಸಾಹೇಬರಕಟ್ಟೆ ಶಾಖೆ ಅವರು ವಂದನಾರ್ಪಣೆ ಸಲ್ಲಿಸಿದರು.

ಈ ಸಂದರ್ಭದಲ್ಲಿ *ಜೀವನ್ ಕುಮಾರ ಶೆಟ್ಟಿ, ಶಾಖಾ ವ್ಯವಸ್ಥಾಪಕರು, ಬ್ರಹ್ಮಾವರ ಶಾಖೆ, ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ *ಚಂದ್ರಶೇಖರ್ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ, ಸುಭಾಷ್ ಶೆಟ್ಟಿ, ವಿಜಯ ಪೂಜಾರಿ ಹಾಗೂ ರಾಮಕೃಷ್ಣ ಶೆಟ್ಟಿ, ಸಾಹೇಬರಕಟ್ಟೆ ಶಾಖೆಯ ಸಿಬ್ಬಂದಿಗಳಾದ ಭಾಸ್ಕರ ಶೆಟ್ಟಿ, ಗುರುಪ್ರಸಾದ್ ಶೆಟ್ಟಿ, ಮಿಥುನ್ ಮೊಗವೀರ, ಸಚಿನ್, ಧನುಷ್ ಕುಮಾರ್, ಆಶೀಶ್ ಹೆಗ್ಡೆ ಹಾಗೂಉಪಸ್ಥಿತರಿದ್ದರು.

ಸನ್ಮಾನ ಸ್ವೀಕರಿಸಿದ ಕರುಣಾಕರ್ ಮತ್ತು ಪ್ರಭೋದ್ ಚಂದ್ರ ಹೆಜ್ಮಾಡಿ ಅವರು ತಮ್ಮ 32 ವರ್ಷಗಳ ಸೇವೆಯನ್ನು ಗುರುತಿಸಿ ಗೌರವಿಸಿದ ಎಸ್‌ಸಿಡಿಸಿಸಿ ಬ್ಯಾಂಕ್ ನ ಸಹೋದ್ಯೋಗಿಗಳು ಹಾಗೂ ಸಾಹೇಬರಕಟ್ಟೆ ಶಾಖೆಯ ಸಿಬ್ಬಂದಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮವು ಆತ್ಮೀಯ ಹಾಗೂ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು.



Related posts

ಶ್ರದ್ದಾ ಭಕ್ತಿಯಿಂದ ನೆರೆದ ಜನ ಸಾಗರದೊಂದಿಗೆ ಸಸಿಹಿತ್ಲು ಶ್ರೀ ಭಗವತೀ ದೇವಿಗೆ ಅದ್ದೂರಿಯ ಬ್ರಹ್ಮಕಲಶೋತ್ಸವ

Mumbai News Desk

ಲಯನ್ಸ್ ಕ್ಲಬ್ ಕೆಮ್ಮಣ್ಣು ಅಸ್ತಿತ್ವಕ್ಕೆ : ಸ್ಥಾಪಕ ಅಧ್ಯಕ್ಷರಾಗಿ ಜಗದೀಶ್ ಕೆಮ್ಮಣ್ಣು ಹಾಗೂ ಪದಾಧಿಕಾರಿಗಳ ಆಯ್ಕೆ

Mumbai News Desk

ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತೀ ಗರೋಡಿ ತೋನ್ಸೆ, ಇದರ ಜೀರ್ಣೋದ್ಧಾರಕ್ಕೆ ಭವ್ಯ ನಾಂದಿ: ಶಿಲಾನ್ಯಾಸ, ಮುಷ್ಟಿ ಕಾಣಿಕೆ ಸಮರ್ಪಣೆ ಸಂಪನ್ನ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು: ಮೂರನೇ ಸ್ಥನ್ಯಪಾನ ಕೊಠಡಿ ಉದ್ಘಾಟನೆ

Mumbai News Desk

ಮೂಲ್ಕಿ ಬ್ರಹ್ಮಶ್ರೀ ನಾರಾಯಣಗುರು ಜನ್ಮದಿನದ ಪ್ರಯುಕ್ತ ಭವ್ಯ ಶೋಭಾಯಾತ್ರೆ

Mumbai News Desk

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ದಲ್ಲಿ ಬ್ರಹ್ಮಕಲಶೋತ್ಸವ; ಶುಭಾರಂಭ

Mumbai News Desk