
ಸ್ವಾತಂತ್ರ್ಯೋತ್ಸವದ ಪವಿತ್ರ ಸಂದರ್ಭವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಶ್ರೀ ದುರ್ಗಾ ಮ್ಯೂಸಿಕಲ್ ಮೀಟ್, ಮಣಿಪಾಲ ಹಾಗೂ ಅಂಬಲ್ಪಾಡಿ, ಸಂತೆಕಟ್ಟೆ ಲಯನ್ಸ್ ಕ್ಲಬ್ ಕಲ್ಯಾಣಪುರ, ಲಯನ್ಸ್ ಕ್ಲಬ್ ಕೆಮ್ಮಣ್ಣು, ಶ್ರೀ ಗಜಾನನ ಬಿಲ್ಲವ ಸೇವಾ ಸಂಘ (ರಿ.), ತೋನ್ಸೆ–ಹೂಡೆ ಹಾಗೂ ಶ್ರೀ ದೇವಿ ಮಹಿಳಾ ಘಟಕ, ತೋನ್ಸೆ–ಹೂಡೆ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅಮರ ವೀರ ಗೀತ ಗಾಯನ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭವು 15/08/2026ರ ಶನಿವಾರ ಸಂಜೆ 4.30ಕ್ಕೆ ಹೂಡೆಯ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಸಂಭ್ರಮಭರಿತವಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಅನಿಲ್ ಕುಮಾರ್ ಅವರು ಅಮರ ವೀರ ಗೀತ ಗಾಯನ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಯೋಜಕರು ಇಂತಹ ಅರ್ಥಪೂರ್ಣ ಹಾಗೂ ದೇಶಭಕ್ತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ಇಂತಹ ಕಾರ್ಯಕ್ರಮಗಳು ಯುವಜನರಲ್ಲಿ ದೇಶಪ್ರೇಮ ಹಾಗೂ ರಾಷ್ಟ್ರಾಭಿಮಾನವನ್ನು ಬೆಳೆಸಲು ಸಹಕಾರಿಯಾಗುವುದರಿಂದ ಮುಂದೆಯೂ ಇವುಗಳನ್ನು ನಿರಂತರವಾಗಿ ಆಯೋಜಿಸಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೇಜಸ್ವಿನಿ ಅನಿಲ್ ರಾಜ್, ಮುಖ್ಯಸ್ಥರು, ಶ್ರೀ ದುರ್ಗಾ ಮ್ಯೂಸಿಕಲ್ ಮೀಟ್, ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರತನ್ ಡಿ. ಸುವರ್ಣ, ಅಧ್ಯಕ್ಷರು, ಶ್ರೀ ಗಜಾನನ ಬಿಲ್ಲವ ಸೇವಾ ಸಂಘ (ರಿ.), ತೋನ್ಸೆ–ಹೂಡೆ; ವಿಲ್ಸನ್ ಫೆರ್ನಾಂಡಿಸ್, ಅಧ್ಯಕ್ಷರು, ಲಯನ್ಸ್ ಕ್ಲಬ್ ಕಲ್ಯಾಣಪುರ; ಅಡ್ವೊಕೇಟ್ ಎಡ್ವರ್ಡ್ ಲೋಬೋ, ಅಧ್ಯಕ್ಷರು, ಲಯನ್ಸ್ ಕ್ಲಬ್ ಸಂತೆಕಟ್ಟೆ; ಜಗದೀಶ್ ಕೆಮ್ಮಣ್ಣು, ಅಧ್ಯಕ್ಷರು, ಲಯನ್ಸ್ ಕ್ಲಬ್ ಕೆಮ್ಮಣ್ಣು; ಸಹದೇವಿ ಜೆ. ಕೋಟ್ಯಾನ್, ಅಧ್ಯಕ್ಷರು, ಶ್ರೀ ದೇವಿ ಮಹಿಳಾ ಘಟಕ, ತೋನ್ಸೆ–ಹೂಡೆ; ಇಂದಿರಾ ಪಿ. ಅಂಚನ್, ಉಪಾಧ್ಯಕ್ಷರು, ಶ್ರೀ ಗಜಾನನ ಬಿಲ್ಲವ ಸೇವಾ ಸಂಘ (ರಿ.), ತೋನ್ಸೆ–ಹೂಡೆ; ಸತೀಶ್ ಶೆಟ್ಟಿ, ಅಧ್ಯಕ್ಷರು, ಗಣಪತಿ ವ್ಯವಸಾಯ ಸಹಕಾರಿ ಸಂಘ (ರಿ.), ಕೆಮ್ಮಣ್ಣು ಹಾಗೂ ನಂದ ಕಿಶೋರ್, ಕಾರ್ಯದರ್ಶಿ, ಲಯನ್ಸ್ ಕ್ಲಬ್ ಸಂತೆಕಟ್ಟೆ ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಸುಧಾಕರ್ ಕೋಟ್ಯಾನ್, ಕಾರ್ಯದರ್ಶಿ, ಲಯನ್ಸ್ ಕ್ಲಬ್ ಕೆಮ್ಮಣ್ಣು ಹಾಗೂ ಸತೀಶ್ ಅಂಚನ್, ಕಾರ್ಯದರ್ಶಿ, ಶ್ರೀ ಗಜಾನನ ಬಿಲ್ಲವ ಸೇವಾ ಸಂಘ (ರಿ.), ತೋನ್ಸೆ–ಹೂಡೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿರುವ ರತನ್ ಡಿ. ಸುವರ್ಣ, ಅಧ್ಯಕ್ಷರು, ಶ್ರೀ ಗಜಾನನ ಬಿಲ್ಲವ ಸೇವಾ ಸಂಘ (ರಿ.), ತೋನ್ಸೆ–ಹೂಡೆ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಸಂಯೋಜನೆಗೆ ವಿಶೇಷವಾಗಿ ಸಹಕರಿಸಿದ ನವೀನ್ ಕುಮಾರ್ ಗುಳಿಬೆಟ್ಟು, ಕೋಶಾಧಿಕಾರಿ, ಶ್ರೀ ಗಜಾನನ ಬಿಲ್ಲವ ಸೇವಾ ಸಂಘ (ರಿ.), ತೋನ್ಸೆ–ಹೂಡೆ ಅವರನ್ನು ಅಧ್ಯಕ್ಷರು ಪುಷ್ಪಗುಚ್ಛ ನೀಡಿ ಸತ್ಕರಿಸಿದರು.
ಇದೇ ಸಂದರ್ಭದಲ್ಲಿ ಗಣ್ಯರಾದ ಜನಾರ್ದನ ಕೋಟ್ಯಾನ್, ಕೃಷ್ಣದಾಸ್ ಮಟ್ಟಿ, ಶ್ರೀಮತಿ ಸುನಂದಾ ಸುವರ್ಣ ಹಾಗೂ ಯೂಟ್ಯೂಬರ್ ಕರುಣಾಕರ ಬಿ. ಪೂಜಾರಿ ಅವರನ್ನು ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು.
ದೇಶಭಕ್ತಿ, ಸಂಗೀತ ಹಾಗೂ ಸಾಮಾಜಿಕ ಒಗ್ಗಟ್ಟಿನ ಸೊಗಡನ್ನು ಸಾರಿದ ಈ ಕಾರ್ಯಕ್ರಮವನ್ನು ವಿಜಯಲಕ್ಷ್ಮಿ ಪ್ರದೀಪ್ ಅವರು ಅಚ್ಚುಕಟ್ಟಾಗಿ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸುಧಾಕರ್ ಕೋಟ್ಯಾನ್ ಅವರು ಧನ್ಯವಾದ ಅರ್ಪಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಹಾಗೂ ಕಾರ್ಯಕ್ರಮಕ್ಕಾಗಿ ನಾರಾಯಣ ಗುರು ಸಭಾಭವನವನ್ನು ಒದಗಿಸಿ ಸಹಕರಿಸಿದ ಶ್ರೀ ಗಜಾನನ ಬಿಲ್ಲವ ಸೇವಾ ಸಂಘದ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಅಮರ ವೀರ ಗೀತ ಗಾಯನ ಸ್ಪರ್ಧೆಯ ವಿಜೇತರ ಯಾದಿ :
ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ಅಮರ ವೀರ ಗೀತ ಗಾಯನ ಸ್ಪರ್ಧೆಯಲ್ಲಿ ವಿವಿಧ ವಯೋಮಾನದ ಪ್ರತಿಭಾವಂತ ಸ್ಪರ್ಧಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಗಾಯನ ಪ್ರತಿಭೆಯನ್ನು ಅನಾವರಣಗೊಳಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ಪ್ರತಿಭೆಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
6 ರಿಂದ 12 ವರ್ಷಗಳ ವಿಭಾಗದಲ್ಲಿ ಮೈಥಿಲಿ ಆಚಾರ್ಯ ಪ್ರಥಮ, ಬನವಿ ಎಸ್ ದ್ವಿತೀಯ ಹಾಗೂ ಅಶ್ವಿ ಶೆಟ್ಟಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
12 ರಿಂದ 18 ವರ್ಷಗಳ ವಿಭಾಗದಲ್ಲಿ ಮೇಧಿನಿ ಭಟ್ ಪ್ರಥಮ, ಪೂರ್ವಿ ಜಗನ್ನಾಥ್ ದ್ವಿತೀಯ ಹಾಗೂ ಸಾನ್ವಿ ಎಂ ಸುವರ್ಣ ತೃತೀಯ ಸ್ಥಾನವನ್ನು ಅಲಂಕರಿಸಿದ್ದಾರೆ.
ತೀರ್ಪುಗಾರರ ಮೆಚ್ಚುಗೆ ಬಹುಮಾನಕ್ಕೆ ಅದ್ವಿತ್ ಆಚಾರ್ಯ, ಶ್ರೀನಕ್ಷ, ಆದ್ಯ ಹಾಗೂ ಅದಿತಿ ಆಯ್ಕೆಯಾಗಿದ್ದಾರೆ.




