September 6, 2026
Mumbai News Kannada
ಪ್ರಕಟಣೆ

ದಶಂಬರ 20ರಂದು ಒಡಿಯೂರು ಶ್ರೀ ಸಂಸ್ಥಾನದಲ್ಲಿಶ್ರೀ ದತ್ತ ಜಯಂತಿ ಮಹೋತ್ಸವ – ಶ್ರೀ ದತ್ತ ಮಹಾಯಾಗ ಸಪ್ತಾಹ ಆರಂಭ






ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ದಶಂಬರ 20ರಿಂದ 26ರ ತನಕ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಈ ಸುಸಂದರ್ಭ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಇವರಿಂದ ಶ್ರೀಮದ್ಭಾಗವತ ಪ್ರವಚನ ಸಪ್ತಾಹ ಹಾಗೂ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹವು ನಡೆಯಲಿದೆ. ದಶಂಬರ 20ರಂದು ಬೆಳಗ್ಗೆ ಘಂಟೆ 9.00ರಿಂದ ಶ್ರೀ ಗಣಪತಿ ಹವನ, ನಾಗತಂಬಿಲ, ಶ್ರೀ ದತ್ತ ಮಹಾಯಾಗ ಸಪ್ತಾಹ ಆರಂಭ, ಘಂಟೆ 9.30ರಿಂದ ಪೂಜ್ಯ ಶ್ರೀಗಳವರ ದಿವ್ಯೋಪಸ್ಥಿತಿಯಲ್ಲಿ ಶ್ರೀ ದತ್ತಮಾಲಾಧಾರಣೆ. ಘಂಟೆ 10.30ಕ್ಕೆ ಶ್ರೀಮದ್ಭಾಗವತ ಪ್ರವಚನ ಸಪ್ತಾಹ ಉದ್ಘಾಟನೆ. ಮಧ್ಯಾಹ್ನ ಘಂಟೆ 12.30ರಿಂದ ಮಹಾಪೂಜೆ, ಮಹಾಸಂತರ್ಪಣೆ.
ಅಪರಾಹ್ಣ 2.00ಘಂಟೆಗೆ ‘ಆದಿನಾರಾಯಣ ದರ್ಶನ’ ಯಕ್ಷಗಾನ ತಾಳಮದ್ದಳೆ, ಸಂಜೆ ಘಂಟೆ 6.00ರಿಂದ ಶ್ರೀ ದತ್ತಾಂಜನೇಯ ದೇವರ ಪಲ್ಲಕ್ಕಿ ಉತ್ಸವ, ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ. ಸಂಜೆ ಗಂಟೆ 6.30ರಿಂದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ ರಾಜಾಂಗಣದ ಮುಂಭಾಗ ‘ಭಾರತ ಜನನಿ’ ಯಕ್ಷಗಾನ ಬಯಲಾಟವಿದೆ.
ದಶಂಬರ 20ರಿಂದ 26ರ ತನಕ ಪ್ರತಿದಿನ ಬೆಳಿಗ್ಗೆ ವೇದ-ಗುರುಚರಿತ್ರೆ ಪಾರಾಯಣ. ಘಂಟೆ 10.30ರಿಂದ ಶ್ರೀಮದ್ಭಾಗವತ ಪ್ರವಚನ, ಮಧ್ಯಾಹ್ನ ಘಂಟೆ 12.30ಕ್ಕೆ ಮಹಾಪೂಜೆ, ಮಹಾಸಂತರ್ಪಣೆ, ಅಪರಾಹ್ಣ ಘಂಟೆ 2.00ರಿಂದ ಯಕ್ಷಗಾನ ತಾಳಮದ್ದಳೆ ರಾತ್ರಿ ಘಂಟೆ 7.00ರಿಂದ ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ ಸೇವೆ ಜರಗಲಿದೆ.



Related posts

ಕನ್ನಡಿಗರ ಸ್ನೇಹ ಬಳಗ ಸಂಸ್ಥಾ (R) ವತಿಯಿಂದ ಫೆ. 26 ರಂದು ಶಿವ ಭಕ್ತಾದಿಗಳಿಗೆ ಹಣ್ಣು ಹಂಪಲು ವಿತರಣೆ.

Mumbai News Desk

ಜ. 12. ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ : ಕೋಟಿ -ಚೆನ್ನಯ ಕ್ರೀಡೋತ್ಸವ

Mumbai News Desk

ಶ್ರೀ ಕ್ಷೇತ್ರ ದತ್ತ ಜಗದಂಬಾ ದೇವಸ್ಥಾನ, ‘ಬಾಪ್ಟಿಸ್ಟ್‌ವಾಡಿ’ ಅಂಧೇರಿ ಪೂರ್ವ : ಪುನರ್ ನಿರ್ಮಾಣ, ಹೊಸ ಮೂರ್ತಿ ಸ್ಥಾಪನೆ ಹಾಗೂ ಬ್ರಹ್ಮ ಕಲಶೋತ್ಸವ ನಿಮಿತ್ತ ಮನವಿ ಪತ್ರ ಬಿಡುಗಡೆ

Mumbai News Desk

ಕಾಂತೇಶ್ವರ ದೇವಸ್ಥಾನ ಕಾಂತಾವರ ಜ14ರಿಂದ 23  ವರ್ಷಾವಧಿ ಜಾತ್ರೆ ರಥೋತ್ಸವ,

Mumbai News Desk

ಡಿ. 8 ಗೋರೆಗಾಂವ್ ಪೂರ್ವ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ವಜ್ರ ಮಹೋತ್ಸವ ಉದ್ಘಾಟನಾ ಸಮಾರಂಭದ, ಆಮಂತ್ರಣ ಪತ್ರಿಕೆ ಬಿಡುಗಡೆ, ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್, ಜ. 12 ರಂದು 88 ನೇ ವಾರ್ಷಿಕೋತ್ಸವ,

Mumbai News Desk