November 3, 2026
Mumbai News Kannada
ಮಹಾರಾಷ್ಟ್ರ

ಓಲ್ಡ್ ಮಾಂಕ್, ರಾಯಲ್ ಚಾಲೆಂಜ್, ಆಂಟಿಕ್ವಿಟಿ, ಬ್ಯಾಗ್‌ಪೈಪರ್ ಹಾಗೂ ಓಲ್ಡ್ ಕ್ಯಾಸ್ಕ್‌ಗೆ FSSAI ಶಾಕ್: ರಮ್-ವಿಸ್ಕಿ ಅಂದುಕೊಂಡು ಕುಡಿದಿದ್ದಕ್ಕೆ ಬಿತ್ತು ಬ್ಯಾನ್ ಮಾರ್ಕ್!!!!,



ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ಓಲ್ಡ್ ಮಾಂಕ್, ರಾಯಲ್ ಚಾಲೆಂಜ್, ಆಂಟಿಕ್ವಿಟಿ ಬ್ಲೂ ಹಾಗೂ ಬ್ಯಾಗ್‌ಪೈಪರ್ ಸೇರಿದಂತೆ ಹಲವು ಪ್ರಮುಖ ಮದ್ಯದ ಬ್ರ್ಯಾಂಡ್‌ಗಳ ಪ್ರಮುಖ ಆವೃತ್ತಿಗಳ ಉತ್ಪಾದನೆ ಮತ್ತು ಮಾರಾಟದ ಮೇಲೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ಕಟ್ಟುನಿಟ್ಟಿನ ನಿಷೇಧ ಹೇರಿದೆ. ಮದ್ಯ ಪ್ರಿಯರಲ್ಲಿ ಅಪಾರ ಬೇಡಿಕೆ ಹೊಂದಿರುವ ಈ ಮದ್ಯಗಳಲ್ಲಿ ನೈಸರ್ಗಿಕವಾಗಿ ಪರಿಮಳ ಮತ್ತು ರುಚಿ ಬರುವಂತೆ ಮಾಡುವ ಬದಲು, ಕೃತಕ ಫ್ಲೇವರ್‌ಗಳನ್ನು ಸೇರಿಸಿ ಮಾರಾಟ ಮಾಡುತ್ತಿರುವುದು ಪ್ರಯೋಗಾಲಯದ ತಪಾಸಣೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

ವಿಶೇಷವಾಗಿ ಮೋಹನ್ ರಾಕಿ ಸ್ಪ್ರಿಂಗ್‌ವಾಟರ್ ಘಟಕದಲ್ಲಿ ತಯಾರಾಗುವ ಓಲ್ಡ್ ಮಾಂಕ್‌ನ ಮೂರು ಆವೃತ್ತಿಗಳು, ಡಿಯಾಜಿಯೋ ಇಂಡಿಯಾದ ಯುನೈಟೆಡ್ ಸ್ಪಿರಿಟ್ಸ್ ಮಾಲೀಕತ್ವದ ರಾಯಲ್ ಚಾಲೆಂಜ್ ಮತ್ತು ಆಂಟಿಕ್ವಿಟಿ ಬ್ಲೂ ವಿಸ್ಕಿ, ಹಾಗೂ ಇನ್‌ಬ್ರೂ ಬೆವರೇಜಸ್ ಸಂಸ್ಥೆಯ ಬ್ಯಾಗ್‌ಪೈಪರ್ ಡೆಲಕ್ಸ್ ವಿಸ್ಕಿ ಮತ್ತು ಓಲ್ಡ್ ಕ್ಯಾಸ್ಕ್ ಡೆಲಕ್ಸ್ XXX ರಮ್‌ಗಳನ್ನು ಮುಖ್ಯವಾಗಿ ನಿಷೇಧಿಸಲಾಗಿದೆ. ಈ ಮದ್ಯಗಳ ತಯಾರಿಕೆಯಲ್ಲಿ ಯಾವುದೇ ಸಾಂಪ್ರದಾಯಿಕ ಪರಿಪಕ್ವತೆ (Maturation) ಪ್ರಕ್ರಿಯೆ ಅನುಸರಿಸದೆ, ಕೇವಲ ಸಾಧಾರಣ ಸ್ಪಿರಿಟ್‌ಗೆ ಕೃತಕವಾಗಿ ರಮ್ ಹಾಗೂ ವಿಸ್ಕಿಯ ಫ್ಲೇವರ್‌ಗಳನ್ನು ಸೇರಿಸಿ ಮಾರುಕಟ್ಟೆಗೆ ಬಿಡಲಾಗುತ್ತಿತ್ತು. ಇದು ಅಂತಾರಾಷ್ಟ್ರೀಯ ಆಹಾರ ಗುಣಮಟ್ಟ ಮತ್ತು ನಿಯಮಗಳಿಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

ಇದಲ್ಲದೆ, ಈ ಬ್ರ್ಯಾಂಡ್‌ಗಳು ತಮ್ಮ ಮದ್ಯದ ಬಾಟಲಿಗಳ ಲೇಬಲ್ ಮೇಲೆ ಗ್ರಾಹಕರಿಗೆ ತಪ್ಪು ಮಾಹಿತಿ ನೀಡುತ್ತಿರುವುದು ಕಂಡುಬಂದಿದೆ. ಉದಾಹರಣೆಗೆ, ಓಲ್ಡ್ ಮಾಂಕ್ ತನ್ನ ಬಾಟಲಿಗಳ ಮೇಲೆ ‘7 ವರ್ಷಗಳ ಹಳೆಯ ಮದ್ಯ’ (7 Years Aged Rum) ಎಂದು ನಮೂದಿಸಿ, ವಾಸ್ತವದಲ್ಲಿ ಶೇಕಡಾ 5 ಕ್ಕಿಂತ ಕಡಿಮೆ ಹಳೆಯ ಸ್ಪಿರಿಟ್ ಬಳಸಿ ಜನರನ್ನು ದಾರಿತಪ್ಪಿಸುತ್ತಿತ್ತು ಎಂದು FSSAI ಬಹಿರಂಗಪಡಿಸಿದೆ. ಲೇಬಲ್‌ನಲ್ಲಿ ಕೃತಕ ಫ್ಲೇವರ್ ಬಳಸಿರುವ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸದಿರುವುದು ಮತ್ತು ನಿಯಮಾವಳಿಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ.

ಇನ್ನು ಈಗಾಗಲೇ ಎಂಆರ್‌ಪಿ ಔಟ್‌ಲೆಟ್‌ಗಳು, ಬಾರ್ ಹಾಗೂ ಮದ್ಯದ ಮಳಿಗೆಗಳಲ್ಲಿ ದಾಸ್ತಾನಿರುವ ಬಾಟಲಿಗಳಿಗೆ ಸಂಬಂಧಿಸಿದಂತೆ ಪ್ರಾಧಿಕಾರವು ಸಣ್ಣ ಅವಕಾಶ ನೀಡಿದೆ. ಪ್ರಸ್ತುತ ಇರುವ ದಾಸ್ತಾನಿನ ಬಾಟಲಿಗಳ ಮೇಲೆ ಇದು “ಕೃತಕ ಫ್ಲೇವರ್ ಹೊಂದಿರುವ ಮದ್ಯ” ಎಂಬ ನೈಜ ಮಾಹಿತಿಯನ್ನು ಸ್ಪಷ್ಟವಾಗಿ ನಮೂದಿಸಿ ಮಾರಾಟ ಮಾಡಲು ಸೂಚಿಸಲಾಗಿದ್ದು, ತಕ್ಷಣದಿಂದ ಉತ್ಪಾದನೆಯಾಗುವ ಯಾವುದೇ ಮದ್ಯದಲ್ಲಿ ಇಂತಹ ಕೃತಕ ಫ್ಲೇವರ್‌ಗಳನ್ನು ಬಳಸುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.

ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಮದ್ಯಪ್ರಿಯರಿಂದ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ತರಹೇವಾರಿ ಮೀಮ್ಸ್‌ಗಳು ವೈರಲ್ ಆಗುತ್ತಿವೆ. ಕೆಲವು ಮದ್ಯಪ್ರಿಯರು ತಮ್ಮ ನೆಚ್ಚಿನ ಬ್ರ್ಯಾಂಡ್ ಸಿಗುವುದಿಲ್ಲವೆಂದು ಬೇಸರ ವ್ಯಕ್ತಪಡಿಸಿದರೆ, ಇನ್ನು ಕೆಲವರು ಇಷ್ಟು ದಿನ ಕೃತಕ ಫ್ಲೇವರ್ ಕುಡಿದು ಮೋಸ ಹೋಗಿದ್ದೆವು, ಇನ್ಮುಂದೆ ಅಸಲಿ ಹಾಗೂ ಗುಣಮಟ್ಟದ ಮದ್ಯ ಲಭ್ಯವಾಗಲಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.



Related posts

ನಾಸಿಕ್ ಕುಂಭಮೇಳ 2026-27: ಭವ್ಯ ಮತ್ತು ದೈವಿಕ ಲೋಗೋ ಅನಾವರಣ

Mumbai News Desk

ಬೊಯಿಸರ್ ಸಾರ್ವಜನಿಕ ಗಣೇಶೋತ್ಸವ ಮಂಡಲದ 100 ನೆಯ ವರ್ಷದ ಸಂಭ್ರಮಾಚರಣೆ.

Mumbai News Desk

ಶ್ರೀ ರಾಮಚಂದ್ರಾಪುರ ಮಠದ ಭಾರತ ಮಂಡಲ, ಕೊಲಾಡಿನ ಅಮೃತಧಾರಾ ಗೋಶಾಲೆಯ ಪರಿಸರದಲ್ಲಿ ವನಮಹೋತ್ಸವ

Mumbai News Desk

ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಅಧಿಕಾರ ಸ್ವೀಕಾರ

Mumbai News Desk

ಕಲಬೆರಕೆ ಮತ್ತು ಅಸ್ವಚ್ಛತೆಗೆ ಸಿಂಹಸ್ವಪ್ನ: ತುಕಾರಾಮ್ ಮುಂಢೆ ದಾಳಿಯಿಂದ ಬದಲಾದ ಮಹಾರಾಷ್ಟ್ರದ ಆಹಾರ ಕ್ಷೇತ್ರ

Mumbai News Desk

ಮಹಾರಾಷ್ಟ್ರ ಮತಾಂತರ ವಿರೋಧಿ ಕರಡು ಕಾನೂನು 2026ಕ್ಕೆ ಸಚಿವ ಸಂಪುಟದ ಅನುಮೋದನೆ: ತಪ್ಪಿತಸ್ಥರಿಗೆ 7 ವರ್ಷ ಜೈಲು ಮತ್ತು 5 ಲಕ್ಷ ರೂ. ದಂಡದ ಪ್ರಸ್ತಾಪ.

Mumbai News Desk