28.1 C
Mumbai
August 13, 2026
Mumbai News Kannada
ಮಹಾರಾಷ್ಟ್ರ

ನಾಸಿಕ್ ಕುಂಭಮೇಳ 2026-27: ಭವ್ಯ ಮತ್ತು ದೈವಿಕ ಲೋಗೋ ಅನಾವರಣ





ಆಧ್ಯಾತ್ಮಿಕತೆಯ ಮಹಾಸಂಗಮ ಎಂದೇ ಕರೆಯಲ್ಪಡುವ ನಾಸಿಕ್-ತ್ರಿಂಬಕೇಶ್ವರ ಕುಂಭಮೇಳಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಮುಂಬರುವ 2026-27ರ ಕುಂಭಮೇಳದ ಅಧಿಕೃತ ಲೋಗೋವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಇತ್ತೀಚೆಗೆ ಅನಾವರಣಗೊಳಿಸಿದರು.
ಈ ಬಾರಿ ಕುಂಭಮೇಳವನ್ನು ಅತ್ಯಂತ ವೈಭವೋಪೇತವಾಗಿ ಮತ್ತು ದೈವಿಕವಾಗಿ ಆಯೋಜಿಸಲು ಮಹಾರಾಷ್ಟ್ರ ಸರ್ಕಾರ ಸಂಕಲ್ಪ ಮಾಡಿದೆ. 13 ಪ್ರಮುಖ ಅಖಾಡಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಬಿಡುಗಡೆಯಾದ ಈ ಲೋಗೋ, ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ದೇಶಾದ್ಯಂತ ನಡೆಸಲಾದ ಲೋಗೋ ವಿನ್ಯಾಸ ಸ್ಪರ್ಧೆಯಲ್ಲಿ 3,000ಕ್ಕೂ ಹೆಚ್ಚು ವಿನ್ಯಾಸಗಳು ಬಂದಿದ್ದು, ಸುಮಿತ್ ಕೇಟ್ ಅವರು ವಿನ್ಯಾಸಗೊಳಿಸಿದ ಲೋಗೋ ಪ್ರಥಮ ಬಹುಮಾನದೊಂದಿಗೆ ಅಧಿಕೃತ ಲೋಗೋ ಆಗಿ ಆಯ್ಕೆಯಾಗಿದೆ.
ಈ ಲೋಗೋದಲ್ಲಿ ಶಿವನ ತ್ರಿಶೂಲ, ಪವಿತ್ರ ಗೋದಾವರಿ ನದಿ, ತ್ರ್ಯಂಬಕೇಶ್ವರ ದೇವಾಲಯ ಮತ್ತು ಐತಿಹಾಸಿಕ ಕಲಾರಾಮ ದೇವಾಲಯದ ಕಮಾನುಗಳನ್ನು ಅತ್ಯಂತ ಕಲಾತ್ಮಕವಾಗಿ ಸಂಯೋಜಿಸಲಾಗಿದೆ. ಕುಂಭಮೇಳಕ್ಕೆ ಬರುವ ಲಕ್ಷಾಂತರ ಭಕ್ತರು ಮತ್ತು ಸಾಧು-ಸಂತರಿಗೆ ವಿಶ್ವ ದರ್ಜೆಯ ಮೂಲಸೌಕರ್ಯ ಹಾಗೂ ಸೌಲಭ್ಯಗಳನ್ನು ಒದಗಿಸಲು ಸರ್ಕಾರವು ಈಗಾಗಲೇ ಸಮನ್ವಯ ಸಮಿತಿಗಳ ಮೂಲಕ ಕಾರ್ಯಪ್ರವೃತ್ತವಾಗಿದೆ.
ಕುಂಭಮೇಳದ ವೇಳಾಪಟ್ಟಿ:
ಸಿಂಹಸ್ಥ ಕುಂಭಮೇಳವು ಅಕ್ಟೋಬರ್ 31, 2026 ರಂದು ಅಧಿಕೃತವಾಗಿ ಪ್ರಾರಂಭವಾಗಲಿದ್ದು, ಜುಲೈ 24, 2028 ರವರೆಗೆ ಮುಂದುವರಿಯಲಿದೆ. ಈ ಮಹೋತ್ಸವದ ಅತ್ಯಂತ ಪ್ರಮುಖ ಘಟ್ಟವಾದ ‘ರಾಜ ಸ್ನಾನ’ ಅಥವಾ ಶಾಹಿ ಸ್ನಾನವು 2027 ರಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.



Related posts

ಬೊಯಿಸರ್   ಶ್ರೀ ಸೋಮೇಶ್ವರ ಮಂದಿರದಲ್ಲಿ 15ನೇ ವಾರ್ಷಿಕ ಮಹಾಪೂಜೆ, ಸಂಪನ್ನ,

Mumbai News Desk

ಮಹಾರಾಷ್ಟ್ರ: ಸಚಿವ ಸ್ಥಾನಕ್ಕೆ ಮಾಣಿಕ್ರಾವ್ ಕೊಕಾಟೆ ರಾಜೀನಾಮೆ!

Mumbai News Desk

ಮುಂಬೈನಲ್ಲಿ ಟೋಲ್ ಇಲ್ಲ; ಮಹಾರಾಷ್ಟ್ರ ಸರ್ಕಾರದಿಂದ ಘೋಷಣೆ; ಲಕ್ಷಾಂತರ ವಾಹನ ಸವಾರರಿಗೆ ಅನುಕೂಲ

Mumbai News Desk

ಬಿಜೆಪಿ ನಿರ್ಧಾರಕ್ಕೆ ನನ್ನ ಬೆಂಬಲವಿದೆ – ಮೌನ ಮುರಿದ ಏಕನಾಥ್ ಶಿಂಧೆ

Mumbai News Desk

ಮಹಾರಾಷ್ಟ್ರ ಮಂಡಳಿಯ ಎಚ್ಎಸ್ ಸಿ(HSC), ಎಸ್ ಎಸ್ ಸಿ (SSC),2026ರ ಪರೀಕ್ಷೆಯ ವೇಳಾ ಪಟ್ಟಿ ಬಿಡುಗಡೆ

Mumbai News Desk

ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಅಧಿಕಾರ ಸ್ವೀಕಾರ

Mumbai News Desk