29 C
Mumbai
September 24, 2026
Mumbai News Kannada
ಪ್ರಕಟಣೆ

ಡೋಂಬಿವಲಿ ಶ್ರೀ ಜಗದಂಬಾ ಮಂದಿರದಲ್ಲಿ ಆ ಆಗಸ್ಟ್ 17ರಂದು ‘ನಾಗರ ಪಂಚಮಿ ಮಹೋತ್ಸವ’



ಡೋಂಬಿವಲಿ: ಇಲ್ಲಿನ ಶ್ರೀ ಜಗದಂಬಾ ಮಂದಿರದಲ್ಲಿ ‘ಯಕ್ಷಕಲಾ ಸಂಸ್ಥೆ (ರಿ.)’ ಸ್ಥಾಪಕತ್ವದಲ್ಲಿ ಹಾಗೂ ‘ಶ್ರೀ ಜಗದಂಬಾ ಚಾರಿಟೇಬಲ್ ಟ್ರಸ್ಟ್ (ರಿ.)’ ಸಂಯೋಜನೆಯಲ್ಲಿ 2026ರ ಆಗಸ್ಟ್ 17ರ ಸೋಮವಾರದಂದು ‘ಪವಿತ್ರ ನಾಗರ ಪಂಚಮಿ ಮಹೋತ್ಸವ’ವು ಅತ್ಯಂತ ಭಕ್ತಿ, ವೈದಿಕ ಸಂಪ್ರದಾಯ ಹಾಗೂ ಧಾರ್ಮಿಕ ವೈಭವದೊಂದಿಗೆ ನೆರವೇರಲಿದೆ.

ಪೂಜಾ ಕಾರ್ಯಕ್ರಮಗಳ ವಿವರ:

  • ಬೆಳಿಗ್ಗೆ 7.00 ಗಂಟೆಗೆ: ನಿತ್ಯ ಪೂಜೆ
  • ಬೆಳಿಗ್ಗೆ 8.30 ರಿಂದ: ನಾಗ ತನು ಅಭಿಷೇಕ
  • ಬೆಳಿಗ್ಗೆ 11.00 ಗಂಟೆಗೆ: ಆಶ್ಲೇಷ ಬಲಿ
  • ಮಧ್ಯಾಹ್ನ 12.00 ಗಂಟೆಗೆ: ಮಹಾ ಮಂಗಳಾರತಿ
  • ಮಧ್ಯಾಹ್ನ 12.30 ಕ್ಕೆ: ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ

ದೇವಾಲಯದಲ್ಲಿ ಪೂಜೆಗೆ ಅಗತ್ಯವಾದ ಸೀಯಾಳ (ಎಳೆನೀರು) ಹಾಗೂ ಹಾಲಿನ ವ್ಯವಸ್ಥೆಯನ್ನು ಮಾಡಲಾಗಿದೆ. ನಾಗ ತನು ಅಭಿಷೇಕ ಹಾಗೂ ಆಶ್ಲೇಷ ಬಲಿ ಸೇವೆಯನ್ನು ಸಮರ್ಪಿಸಲು ಬಯಸುವ ಭಕ್ತರು ಪ್ರಧಾನ ಅರ್ಚಕರು ಶ್ರೀ ಜಗದೀಶ್ ಭಟ್ (+91 76193 97125) ಅಥವಾ ಕೋಶಾಧಿಕಾರಿ ಶ್ರೀ ಹರೀಶ್ ಕೋಟ್ಯಾನ್ (+91 90046 62484) ಅವರನ್ನು ಸಂಪರ್ಕಿಸಬಹುದಾಗಿದೆ.

ಈ ಪುಣ್ಯೋತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಜಗದಂಬೆ, ಮಹಾಗಣಪತಿ, ನವಗ್ರಹ ಹಾಗೂ ನಾಗದೇವರ ದಿವ್ಯ ಆಶೀರ್ವಾದವನ್ನು ಪಡೆದು ತಮ್ಮ ಜೀವನವನ್ನು ಧನ್ಯಗೊಳಿಸಬೇಕಾಗಿ ಶ್ರೀ ಜಗದಂಬಾ ಮಂದಿರದ ಗೌರವಾಧ್ಯಕ್ಷರು, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಸಮಸ್ತ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಶ್ರೀ ಜಗದಂಬಾ ಮಂದಿರ, ಡೊಂಬಿವಲಿ (ಪ.): ಸೆ. 28ಕ್ಕೆ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಯಕ್ಷಗಾನ.

Mumbai News Desk

ಶ್ರೀ ಸೀತಾರಾಮ ಭಜನಾ ಮಂದಿರ,ಹೆಜಮಾಡಿ, ಜುಲೈ 16ರಿಂದ “ಕುಮಾರವ್ಯಾಸ ಭಾರತ”, ಕಥಾ ವಾಚನ.

Mumbai News Desk

ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ ಪೂರ್ವ : ಸೆ. 22ರಿಂದ ಅ. 2ರ ತನಕ 61ನೇ ವರ್ಷದ ನವರಾತ್ರಿ ಉತ್ಸವ

Mumbai News Desk

ಚಿತ್ರಕಲಾವಿದ ಜಯ್ ಸಾಲಿಯನ್ ಅವರಿಗೆ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಗೌರವ

Mumbai News Desk

ಡೊಂಬಿವಲಿ: ಫೆ. 28ರಂದು ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ ಮತ್ತು ಭಜನಾ ಸ್ಪರ್ಧೆ

Mumbai News Desk

ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ: ಅ. 11 ಮತ್ತು 12ರಂದು 48ನೇ ವಾರ್ಷಿಕ ಏಕಾಹ ಭಜನಾ ಮಂಗಲೋತ್ಸವ

Mumbai News Desk