
ಮುಂಬೈ : ಸಂತಾಕ್ರೂಜ್ ಪೂರ್ವದ ಪ್ರಭಾತ ಕಾಲೋನಿಯಲ್ಲಿರುವ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವು 14/08/2026ರಂದು ಬಿಲ್ಲವರ ಅಸೋಸಿಯೇಶನ್ ಇದರ ಉಪಾಧ್ಯಕ್ಷರಾದ ಮೋಹನ್ ಸಿ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮೋಹನ್ ಸಿ ಕೋಟ್ಯಾನ್ ಅವರು ಮಾತನಾಡುತ್ತ ಮಕ್ಕಳೇ ನಾಳಿನ ಪ್ರಜೆಗಳು. ನಿಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ತಾಯಿ -ತಂದೆಯರ ಪಾತ್ರ ಮಹತ್ವ
ದ್ದಾಗಿದೆ.ತಾಯ್ತಂದೆಯರೆಂದರೆ ನಿಮ್ಮ ಪಾಲಿಗೆ ದೇವರು.ತಾವೆಲ್ಲರೂ ಅವರನ್ನು ಪೂಜಿಸಬೇಕು.
ಅಷ್ಟೇ ಅಲ್ಲದೇ ಬದುಕನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದದ್ದು.ಗುರುವಿಗೆ ಶರಣರಾಗಬೇಕು.ಅವರಿಂದ ಉತ್ತಮ ಶಿಕ್ಷಣ ಪಡೆದು ಉತ್ತಮವಾದ ಉದ್ಯೋಗ ಪಡೆದುಕೊಳ್ಳಬಹುದು. ಕಲಿಕೆಯ ಕುಶಲತೆಯಿಂದ ಉತ್ತಮವಾದ ಹುದ್ದೆಯನ್ನು ಅಲಂಕರಿಸುವ ಪ್ರಯತ್ನ ಮಾಡಿದರೆ ಅದುವೇ ನೈಜ ಸ್ವಾತಂತ್ರ್ಯ. ಅಂತಹ ಶಿಕ್ಷಣ ಸ್ವಾತಂತ್ರ್ಯ ಪಡೆದರೆ ಯಾರ ಮೇಲೆ ಅವಲಂಬನೆಯನ್ನು ಇಟ್ಟುಕೊಳ್ಳದೆ ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ತಮ್ಮ ಬದುಕಿನ ಮಾರ್ಗವು ಪ್ರಗತಿಯ ಪಥದಲ್ಲಿ ಸಾಗಿದರೆ ದೇಶದ ಪ್ರಗತಿಯು ತನ್ನಷ್ಟಕ್ಕೆ ತಾನೇ ಮುಂದುವರೆಯಲು ಸಾಧ್ಯವಾಗುತ್ತದೆ. ಎಂದು ವಿದ್ಯಾರ್ಥಿಗಳಿಗೆ ಉತ್ತಮ ಸಂದೇಶ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿರುವ ಮಾತೃ ಸಂಸ್ಥೆಯ ಕೋಶಾಧಿಕಾರಿ ಮತ್ತು ಶಾಲಾ ಸಮಿತಿಯ ಕಾರ್ಯಧ್ಯಕ್ಷ ಶ್ರೀ ರವಿ ಸನಿಲ್ ಅವರು ಮಾತನಾಡುತ್ತಾ ಸ್ವಾತಂತ್ರ್ಯ ಅಂದರೆ ಸ್ವೇಚ್ಚಾಚಾರವಲ್ಲ. ನಾವು ಉತ್ತಮವಾದ ಸಂಸ್ಕಾರ -ಸಂಸ್ಕೃತಿ ಪಡೆದುಕೊಳ್ಳಬೇಕು. ಅಂತಹ ಸುಸಂಸ್ಕೃತಿ ನಿಮ್ಮದಾಗಿಸಿಕೊಳ್ಳಿ.ನಿಮ್ಮನ್ನು ಸಾಕಿ ಸಲುಹಿ ದೊಡ್ಡವರನ್ನಾಗಿ ಮಾಡಿದವರ ತಾಯಿ-ತಂದೆಯರೇ ನಿಮ್ಮ ಮೊದಲ ದೇವರು. ಅವರನ್ನು ದೇವರಂತೆ ಅರಿತು ಪೂಜಿಸಬೇಕು. ಅವರ ಆಶೀರ್ವಾದಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ.ಮೊಬೈಲ್ ಅನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು. ಮಿತವಾಗಿ ಬಳಸಿ ಓದಿನ ಕಡೆಗೆ ಗಮನ ಹರಿಸಿ ಉತ್ತಮ ವಿದ್ಯಾಭ್ಯಾಸ ಪಡೆದುಕೊಳ್ಳಿ.ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಗುರಿಯನ್ನು ತಲುಪಲು ಪ್ರಯತ್ನ ಪಟ್ಟರೆ ನಮ್ಮ ದೇಶವು ಕೂಡಾ ಅಭಿವೃದ್ಧಿ ಹೊಂದುವಲ್ಲಿ ಸಂದೇಹವಿಲ್ಲ. ಉತ್ತಮವಾದ ಸಂಸ್ಕೃತಿಯನ್ನು ಪಡೆದು ಭವಿಷ್ಯದ ಕನಸು ನನಸಾಗಲಿ ಎಂದು ಮಕ್ಕಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಬಡಿಗೇರರು ಮಾತನಾಡುತ್ತ ನಮ್ಮ ದೇಶಕ್ಕೆ ಸ್ವಾತಂತ್ರ್ಯವು ಸುಲಭವಾಗಿ ಸಿಗಲಿಲ್ಲ. ಇದರ ಹಿಂದೆ ಅನೇಕ ಮಹಾ ಪುರುಷರ ಹೋರಾಟದ ಪ್ರತಿಫಲವಾಗಿ ನಮ್ಮ ದೇಶಕ್ಕೆ15 ಆಗಷ್ಟ 1947ರಂದು ಸ್ವಾತಂತ್ರ್ಯ ಸಿಕ್ಕಿದೆ.ಅಂತಹ ಮಹಾ ಪುರುಷರ ನೆನೆಪಿಸುವುದೇ ಶುಭ ದಿನವಾಗಿದೆ.ಸ್ವಾತಂತ್ರ್ಯ ದಿನಾಚರಣೆ ಎಂದರೆ,ಸಂಭ್ರಮದ ದಿನಾಚರಣೆ.ಈ ಪವಿತ್ರವಾದ ಶ್ರಾವಣ ಮಾಸದಲ್ಲಿಯೇ ಭಗವಾನ ಶ್ರೀ ಕೃಷ್ಣ,ಮಹಾತ್ಮಾ ಬಸವೇಶ್ವರರಂತಹ ಅನೇಕ ಮಹಾ ಪುರುಷರು ಜನ್ಮವೆತ್ತಿದ್ದಾರೆ.ಇಂತಹ ಪವಿತ್ರವಾದ ದಿನದಲ್ಲಿಯೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ಸೌಭಾಗ್ಯ.ಅನಕ್ಷರತೆಯೇ ಬಂಧನ. ಸಾಕ್ಷರತೆಯೇ ಸ್ವಾತಂತ್ರ್ಯ. ಇಂತಹ ಸ್ವಾತಂತ್ರ್ಯವನ್ನು ತಮ್ಮದಾಗಿಸಿಕೊಂಡ ಜ್ಯೋತಿಭಾ ಪುಲೆ ಮತ್ತು ಸಾವಿತ್ರಿ ಬಾಯಿ ದಂಪತಿಗಳು ಪುಣೆಯಲ್ಲಿ ಮೊದಲು ರಾತ್ರಿ ಶಾಲೆಯನ್ನು ಸ್ಥಾಪನೆ ಮಾಡುವುದರ ಮೂಲಕ ಬಡಮಕ್ಕಳಿಗೆ ಶಿಕ್ಷಣದ ಸ್ವಾತಂತ್ರ್ಯವನ್ನು ತಂದು ಕೊಟ್ಟರು.ಅಂತಹ ಮಹಾ ಪುರುಷರನ್ನು ನೆನಪು ಮಾಡುವುದೇ ಸ್ವಾತಂತ್ರ್ಯದ ಉಸಿರು. ಎಂದು ತಿಳಿಸುತ್ತ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ 2026ರ ಮಾರ್ಚ ತಿಂಗಳಿಲ್ಲಿ ನಡೆದ ಎಸ್ ಎಸ್ ಸಿ ಪರೀಕ್ಷೆ ಯಲ್ಲಿ ಉತ್ತಿರ್ಣರಾದ ವಿದ್ಯಾರ್ಥಿಗಳಾದ ಸಂಗೀತಾ ಚಂದ್ರು ಚವಾನ, (ಪ್ರಥಮ) ರಾಧಿಕಾ ಮಲ್ಲಿಕಾರ್ಜುನ ಭಾವಿಮನಿ (ದ್ವಿತೀಯ) ರಾಜು ಡಪ್ಪಿನೂರ (ತೃತೀಯ) ಸ್ಥಾನ ಪಡೆದ ಹಿನ್ನಲೆಯಲ್ಲಿ ಇವರಿಗೆ ಬಿಲ್ಲವರ ಅಸೋಸಿಯೇಶನ್ ಇದರ ಉಪಾಧ್ಯಕ್ಷ ಮೋಹನ ಸಿ. ಕೋಟ್ಯಾನ್ ಮತ್ತು ಶಾಲಾ ಸಮಿತಿಯ ಕಾರ್ಯಧ್ಯಕ್ಷ ರವಿ ಎಸ್ ಸನಿಲ್ ಅವರು ನೆನಪಿನ ಕಾಣಿಕೆ ಮತ್ತು ಹೂಗುಚ್ಚ ನೀಡಿ ಶುಭ ಹಾರೈಸಲಾಯಿತು.ಸ್ವಾತಂತ್ರ್ಯ
ದಿನಾಚರಣೆಯ ಕುರಿತು ವಿದ್ಯಾರ್ಥಿ-ವಿದ್ಯಾರ್ಥಿನಿಯ
ರಾದ ರಾಧಿಕಾ ಭಾವಿಮನಿ,ಸೋನು ಚವಾನ,
ಚಾಂದನಿ ಚವಾನ, ಸುಮನ್ ಫುಲೆ,ಪಲ್ಲವಿ ರಾಠೋಡ,ಭಾವನಾ ರಾಠೋಡ,ರೂಪಾ ಕಾಂಬಳೆ,
ನೈನಾ ರಾಠೋಡ, ತನ್ವಿ ರಾಠೋಡ, ಅನ್ಸ್ ಕಿಸಾನ್, ಭಾವಿಶ ಪೂಜಾರಿ,ಗಣೇಶ ಚವಾನ,ಭಾಷಣ ಮಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆಯನ್ನು ವಿದ್ಯಾರ್ಥಿನಿಯರಾದ ಪಲ್ಲವಿ ರಾಠೋಡ, ಚಾಂದಿನಿ ಚವಾನ, ಸುಮನ ಫುಲೆ,ಸುನೀತಾ ರಾಠೋಡರು ಮಾಡಿದರು.ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಬಡಿಗೇರ ಅವರು ಸ್ವಾಗತ
ಗೈದರು.ಶಿಕ್ಷಕಿಯರಾದ ವಿಮಲಾ ಡಿ.ಪೂಜಾರಿ ಅವರು ನಿರೂಪಣೆ ಮತ್ತು ವಂದನಾರ್ಪಣೆ ಮಾಡಿದರು. ರಾಷ್ಟ್ರಗೀತೆ ಹಾಡಲಾಯಿತು. ಕೊನೆಗೆ ಸಿಹಿ ಹಂಚಿ ಕಾರ್ಯಕ್ರಮವು ವಿರಾಮಗೊಳಿಸಲಾಯಿತು.
============================




