29 C
Mumbai
October 5, 2026
Mumbai News Kannada
ಮುಂಬಯಿ

ಸಿರಿನಾಡ ವೆಲ್ಫೇರ್ ಅಸೋಸಿಯೇಷನ್‌ನ ಯುವ ವಿಭಾಗದ ಆಯೋಜನೆಯಲ್ಲಿ ವೃದ್ಧಾಶ್ರಮ ಭೇಟಿ



ಸಿರಿನಾಡ ವೆಲ್ಫೇರ್ ಅಸೋಸಿಯೇಷನ್‌ನ ಯುವ ವಿಭಾಗದ ಆಯೋಜನೆಯಲ್ಲಿ, ಸಂಘದ ಸದಸ್ಯರ ಸಹಕಾರದೊಂದಿಗೆ ಡೊಂಬಿವಲಿ ಪಶ್ಚಿಮದ ಗಾರ್ಗಿ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಮಧ್ಯಾಹ್ನ ಹಾಗೂ ಸಂಜೆಯ ಊಟದ ವ್ಯವಸ್ಥೆ ಮಾಡಲಾಯಿತು. ಜೊತೆಗೆ ವಯೋವೃದ್ಧರಿಗೆ ಬೇಕಾಗುವ ದವಸ-ಧಾನ್ಯ ಹಾಗೂ ಔಷಧೋಪಚಾರದ ಸಾಮಗ್ರಿಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಬಾಲಪ್ರತಿಭೆ ವಿಹಾ ವಿನೋದ್ ಕರ್ಕೇರ ಇವರ ನೃತ್ಯ ಹಾಗೂ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನೆರವೇರಿತು. ವೃದ್ಧಾಶ್ರಮದ ಸಂಚಾಲಕಿಯನ್ನು ಯುವ ವಿಭಾಗದ ಉಪಾಧ್ಯಕ್ಷ ಗುರುರಾಜ್ ಸುವರ್ಣ, ಕಾರ್ಯದರ್ಶಿ ಸುಮಾ ವಿ. ಕರ್ಕೇರ ಹಾಗೂ ಕೋಶಾಧಿಕಾರಿ ಶ್ರುತಿ ಕರ್ಕೇರ ಸನ್ಮಾನಿಸಿದರು. ಸುಮಾ ವಿ. ಕರ್ಕೇರ ಕಾರ್ಯಕ್ರಮವನ್ನು ನಿರೂಪಿಸಿ, ಸಹಭಾಗಿಯಾದ ಹಾಗೂ ಸಹಕರಿಸಿದ ಸರ್ವರಿಗೂ ವಂದಿಸಿದರು. ಸಂಘದ ಸದಸ್ಯರ ಭೇಟಿ ಹಾಗೂ ಸಹಕಾರದಿಂದ ತೃಪ್ತಿಪಟ್ಟ ವಯೋವೃದ್ಧರು ಸದಸ್ಯರನ್ನು ಹರಸಿ ಆಶೀರ್ವದಿಸಿದರು.

ಸಿರಿನಾಡ ವೆಲ್ಫೇರ್ ಅಸೋಸಿಯೇಷನ್‌ನ ರಜತ ಮಹೋತ್ಸವದ ಸರಣಿ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಆರ್. ಕೆ. ಸುವರ್ಣ, ಉಪಾಧ್ಯಕ್ಷ ಅಶೋಕ್ ಅಮೀನ್, ಗೌರವ ಪ್ರಧಾನ ಕಾರ್ಯದರ್ಶಿ ಅಜೆಕಾರು ಜಯ ಶೆಟ್ಟಿ, ಜೊತೆ ಕಾರ್ಯದರ್ಶಿ ಶೋಭಾ ಟಿ. ಪೂಜಾರಿ, ಜೊತೆ ಕೋಶಾಧಿಕಾರಿ ಕೆ. ಕೆ. ಸಾಲಿಯಾನ್, ಕಾರ್ಯಕಾರಿ ಸಮಿತಿಯ ಸದಸ್ಯರು, ಯುವ ವಿಭಾಗದ ಉಪಾಧ್ಯಕ್ಷ ಗುರುರಾಜ್ ಸುವರ್ಣ, ವಿನೋದ್ ಕರ್ಕೇರ, ಶ್ರುತಿ ಕರ್ಕೇರ, ಯುವ ವಿಭಾಗದ ಸದಸ್ಯರು, ಮಹಿಳಾ ವಿಭಾಗದ ಸದಸ್ಯರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.



Related posts

ಜ್ಞಾನ ವಿಕಾಸ ಮಂಡಳ ಶಿಕ್ಷಣ ಸಂಸ್ಥೆ ಕಲ್ವಾ : ನೂತನ ಅಧ್ಯಕ್ಷರಾಗಿ ವಿ ಎನ್ ಹೆಗಡೆ ಮರು ಆಯ್ಕೆ.

Mumbai News Desk

ಕನ್ನಡ ಸಂಘ, ಸಯನ್ ಇದರ ಆಟಿಡೊಂಜಿ ದಿನ

Mumbai News Desk

ಜಗಜ್ಯೋತಿ ಕಲಾವೃಂದ, ಮುಂಬಯಿ ಇದರ 38 ನೇ ವಾರ್ಷಿಕೋತ್ಸವ ಮತ್ತು ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಕಥಾ ಹಾಗೂ ಕಾವ್ಯ ಪ್ರಶಸ್ತಿ ಪ್ರದಾನ

Mumbai News Desk

ಶ್ರೀ ಉಮಾ ಮಹೇಶ್ವರಿ ದೇವಸ್ಥಾನ ಜರಿಮರಿಯಲ್ಲಿ ರಾಮ ನಾಮ ಜಪ ಯಜ್ಞ ಸಂಪನ್ನ.

Mumbai News Desk

ಬಿಲ್ಲವರ ಎಸೋಸಿಯೇಷನ್ ಮುಂಬೈ ಜೋಗೇಶ್ವರಿ ಸ್ಥಳೀಯ ಕಚೇರಿ ವತಿಯಿಂದ ಶ್ರೀ ಶನೇಶ್ವರ ಗ್ರಂಥ ಪಾರಾಯಣ

Mumbai News Desk

ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಕುರ್ಲಾ ಪಶ್ಚಿಮ ಶಾಖೆಯಲ್ಲಿ 48 ನೇ ಸಂಸ್ಥಾಪನಾ ದಿನ ಹಾಗೂ 13ನೇ ವಾರ್ಷಿಕೋತ್ಸವದ ವೈಭವದ ಆಚರಣೆ

Mumbai News Desk