32 C
Mumbai
October 4, 2026
Mumbai News Kannada
ಸುದ್ದಿ

ಸಚಿವ ಸ್ಥಾನದಿಂದ ಉಪಸಭಾಧ್ಯಕ್ಷರ ಹುದ್ದೆಗೆ ಮಂಕಾಳ ವೈದ್ಯರ ಗೌರವಯುತ ಪಯಣ



ಕರ್ನಾಟಕ ಉತ್ತರ ಕನ್ನಡ ಜಿಲ್ಲೆ ಭಟ್ಕಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ನಿಂದ ಶಾಸಕರಾಗಿ ಆಯ್ಕೆಯಾಗಿರುವ ಮಾಂಕಾಳ ಸುಬ್ಬ ವೈದ್ಯ ಅವರನ್ನು ಕರ್ನಾಟಕ ಸರಕಾರದ ಸದನದಲ್ಲಿ ತಾರೀಕು 18/8/2026 ಮಂಗಳವಾರದಂದು ಸದನವು ಅವಿರೋದವಾಗಿ ಆಯ್ಕೆ ಮಾಡಿದರು. ಮಂಕಾಳ ವೈದ್ಯ ಅವರು ಮುರ್ಡೇಶ್ವರದಲ್ಲಿ ಹುಟ್ಟಿ ಬಸ್ತಿ ಕಾಯ್ಕಿಣಿ ಯಲ್ಲಿ ಬೆಳೆದವರು. ಮಂಕಾಳ ಅವರು ತನ್ನ ಊರಿನಲ್ಲಿಯೇ ವ್ಯಾಸಂಗ ಮಾಡಿದ್ದು ಮೀನುಗಾರಿಕೆ ಕೃಷಿಯ ಜತೆಗೆ ಉದ್ಯಮವನ್ನು ನಡೆಸುತ್ತಿದ್ದಾರೆ. 2015 ರಲ್ಲಿ ಸ್ಥಳೀಯ ಪಂಚಾಯತ್ ಚುನಾವಣೆಗೆ ಸ್ಪರ್ದಿಸುವ ಮೂಲಕ ರಾಜಕಾರಣ ಪ್ರವೇಶಿಸುವ ಅವರು 2013-18 ರ ವರೆಗೆ ಪಕ್ಷೇತರ ಶಾಸಕರಾಗಿದ್ದರು. ನಂತರ 2013 ರಲ್ಲಿ ಕಾಂಗ್ರೆಸ್ ನಿಂದ ಸಚಿವರಾಗಿದ್ದರು.

ಅವರು ತಾರೀಕು 19/8/2026 ರಂದು ಬುಧವಾರ ದಂದು ಪರಮ ಪೂಜ್ಯ ಬ್ರಹ್ಮ ಶ್ರೀ ಶ್ರೀ ನಾರಾಯಣ ಗುರು ಹಾಗೂ ಶ್ರೀ ಶ್ರೀ ಶ್ರೀ ಅತ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಅನುಗ್ರಹದಿಂದ “1008”ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಧೀಶರು ದಿನಾಂಕ 29/7/2026 ಬುಧವಾರ ಗುರುಪೂರ್ಣಿಮೆಯಂದು ಬೈಂದೂರು ತಾಲೂಕಿನ ಗೊಳಿಹೊಳೆ ಗ್ರಾಮದ ಬಳಿ ಶಿಲೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ತಮ್ಮ ಆತ್ಮ್ಹೋನ್ನತಿ ಹಾಗೂ ಲೋಕ ಕಲ್ಯಾಣರ್ಥವಾಗಿ ಚಾತುರ್ಮಾಸ್ಯ ವೃತಚಾರಣೆಯನ್ನು ಆರಂಭಿಸಿದ್ದಾರೆ . ಈ ಚಾತುರ್ಮಾಸ್ಯ ದಿನಾಚರಣೆಯು ದಿನಾಂಕ 29/7/2026 ಪ್ರಾರಂಭಗೊಂಡು 14/9/2026 ಸೋಮವಾರದವರೆಗೆ 48 ದಿನಗಳ ಪರ್ಯಂತ ಜರಗಲಿದ್ದ ಸ್ಥಳಕ್ಕೆ ಹೋಗಿ ಪರಮ ಪೂಜ್ಯ ಶ್ರೀಗಳನ್ನು ಬೇಟಿ ಮಾಡಿ ಆಶೀರ್ವಾದ ಪಡೆದರು.


ಇವರೊಂದಿಗೆ ಮಾಂಕಾಳ ವೈದ್ಯ ಮಗಳು ಬೀನಾ ವೈದ್ಯ ಹಾಗೂ ಬೈಂದೂರು ವಿಧಾನಸಭಾ ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆ , ರಾಜು ಪೂಜಾರಿ ಬೈಂದೂರು ಮಾಜಿ ಅಧ್ಯಕ್ಷರು ಜಿಲ್ಲಾ ಪಂಚಾಯತಿ ಉಡುಪಿ, ಮುಂಬಯಿ ರಾಯಗಡ ಜಿಲ್ಲೆಯ ರಸಾಯನಿ ತಾಲೂಕಿನ ಸಮಾಜ ಸೇವಕ ಯಾದವ ಸುವರ್ಣ (ಪಡೀಲ್ ) ಜೈರಾಮ್ ಕೆ ಪೂಜಾರಿ , ಜಯ ಸಿ ಪೂಜಾರಿ ಶ್ರೀನಿವಾಸ್ ಶೆಟ್ಟಿ, ಕೃಷ್ಣ ಪೂಜಾರಿ ಉಪಸ್ಥಿತರಿದ್ದರು.

ಜಯ ಸಿ ಪೂಜಾರಿ
ಕೆಳಾರ್ಕಳ ಬೆಟ್ಟು.



Related posts

ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾಗಿ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ,   ಮಹಿಳಾ ವೇದಿಕೆಯ ಅಧ್ಯಕ್ಷರಾಗಿ ಸರೋಜ ಶೆಟ್ಟಿ ಆಯ್ಕೆ.

Mumbai News Desk

ದೇಗುಲಗಳು ಸರಕಾರದ ವಶದಿಂದ ಮುಕ್ತಗೊಳ್ಳಲಿ : ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ

Mumbai News Desk

ನಮೋ ಮೊಯರ್ ಗ್ಲೋಬಲ್ ಫೌಂಡೇಶನ್ ವತಿಯಿಂದ ಹೊರ ರಾಜ್ಯದಲ್ಲೂ ಅಸಾಯಕರಿಗೆ ಸಹಾಯ ಹಸ್ತ

Mumbai News Desk

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಜಯಕರ ಸುವರ್ಣ ನಿಧನ

Mumbai News Desk

ಗೊರೆಗಾಂವ್ ಶ್ರೀ ಶಾಂತಾದುರ್ಗಾದೇವಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಧಾರ್ಮಿಕ ಸಭೆ

Mumbai News Desk

ಬೆಂಗಳೂರು – ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಅಧಿಕೃತ ಚಾಲನೆ

Mumbai News Desk