31 C
Mumbai
October 8, 2026
Mumbai News Kannada
ಪ್ರಕಟಣೆ

ಆಗಸ್ಟ್‌ 29 : ಮುಂಬಯಿ ಕನ್ನಡ ಸಂಘದ 85ನೇ ವಾರ್ಷಿಕ ಮಹಾಸಭೆ



ಕಳೆದ ಎಂಟು ದಶಕಗಳಿಗೂ ಹೆಚ್ಚು ಕಾಲದಿಂದ  ಮುಂಬಯಿಯಲ್ಲಿ
ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ  ಕಾರ್ಯಕ್ರಮಗಳನ್ನು
ಜರಗಿಸುತ್ತಾ ಕನ್ನಡದ ಪರಿಚಾರಿಕೆಯಲ್ಲಿ ತೊಡಗಿಕೊಂಡಿದ್ದು 
ಮುಂಬಯಿ ಕನ್ನಡಿಗರ ಗೌರವಾದರಗಳಿಗೆ ಪಾತ್ರವಾಗಿರುವ ಮಾಟುಂಗಾ [ಪೂರ್ವ]ದ ಮುಂಬಯಿ ಕನ್ನಡ ಸಂಘದ
85ನೇ ವಾರ್ಷಿಕ ಮಹಾಸಭೆಯು ಇದೇ ಬರುವ ಆಗಸ್ಟ್‌ 29 ರಂದು ಸಂಜೆ ಗಂಟೆ 5-00ಕ್ಕೆ ಜರಗಲಿದೆ.  ದಾದರ್‌ ಪೂರ್ವದ ನಪ್ಪೂ ರೋಡ್‌ನಲ್ಲಿರುವ  2-ಸಾಯಿ ವಿಸಾವ ಕೋ-ಆಪರೇಟಿವ್‌ ಸೊಸಾಯಿಟಿಯಲ್ಲಿರುವ ಸಂಘದ
ಸದ್ಯದ ಕಾರ್ಯಾಲಯಲ್ಲಿ  ಜರಗುವ ಈ ಮಹಾಸಭೆಯ ಅಧ್ಯಕ್ಷತೆಯನ್ನು
ಸಂಘದ ಅಧ್ಯಕ್ಷರಾದ ಗುರುರಾಜ ಎಸ್‌.ನಾಯಕ್‌ ಅವರು ವಹಿಸಲಿದ್ದಾರೆ.

ಈ
ಮಹಾ ಸಭೆಯಲ್ಲಿ ಇತರ ವಿಷಯಗಳ ಜೊತೆಗೆ ಗತ ವರ್ಷದ ವರದಿ ಮತ್ತು ಲೆಕ್ಕಪತ್ರಗಳ ಮಂಡನೆ ಮತ್ತು ಮಂಜೂರು
ಮಾಡುವುದಲ್ಲದೆ   2026-27ರ ಸಲುವಾಗಿ ಲೆಕ್ಕ ಪರಿಶೋಧಕರನ್ನು ನೇಮಿಸಲಾಗುವುದು.
 ಈ ಮಹಾಸಭೆಯಲ್ಲಿ ಮುಂಬಯಿ, ಪುಣೆ, ಬೆಂಗಳೂರು  ಹಾಗೂ ಇತರ ಕಡೆಗಳಲ್ಲಿ ನೆಲಸಿರುವ ಸಂಘದ ಸದಸ್ಯರು ಅಧಿಕ
ಸಂಖ್ಯೆಲ್ಲಿ ಹಾಜರಿದ್ದು ಸಂಘದ ಮುಂದಿನ ಯೋಜನೆಗಳ ಬಗ್ಗೆ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಬೇಕಾಗಿ
ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸೋಮನಾಥ ಎಸ್‌. ಕರ್ಕೇರ 
ಮತ್ತು ಗೌರವ ಜೊತೆ ಕಾರ್ಯದರ್ಶಿ ರಾಮಚಂದ್ರ ಭಟ್‌ ವಿನಂತಿಸಿಕೊಂಡಿದ್ದಾರೆ.

–ಸೋಮನಾಥ
ಎಸ್‌. ಕರ್ಕೇರ, ಮುಂಬಯಿ



Related posts

ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ (ಪೂ ) ಜುಲೈ 8ಕ್ಕೆ ಬ್ರಹ್ಮಕಲಶದ ವಾರ್ಷಿಕೋತ್ಸವದ ನಿಮಿತ್ತ ಆದರ್ಶ ಪೂಜೆ.

Mumbai News Desk

ಭಾಂಡುಪ್ ಶ್ರೀ ಶನೀಶ್ವರ ಭಕ್ತ ವೃಂದ ಮಿತ್ರ ಮಂಡಳಿ ಡಿ. 6 ರಂದು 47ನೇ ವಾರ್ಷಿಕ ಮಹಾಪೂಜೋತ್ಸವ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿಡಿ. 3 ರಂದು 35 ನೇ ವಾರ್ಷಿಕ ಮಹಾಸಭೆ

Mumbai News Desk

ಮಹತೋಭಾರ ಶನೀಶ್ವರ ದೇವಸ್ಥಾನ ಮಲಾಡ್ ಪೂರ್ವ. ಮೇ27:- ಶನಿ ಜಯಂತಿ ಉತ್ಸವ .ತಿಲದೀಪೋತ್ಸವ.

Mumbai News Desk

ಡೊಂಬಿವಲಿಯಲ್ಲಿ ಜುಲೈ 19ರಂದು ‘ಚಕ್ರವ್ಯೂಹ’ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ

Mumbai News Desk

ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ ಪಡುತೋನ್ಸೆ, ಹೂಡೆ : ಎ. 18,19ರಂದು ವಾರ್ಷಿಕ ಭಜನಾ ಮಂಗಲೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Mumbai News Desk