30 C
Mumbai
August 22, 2026
Mumbai News Kannada
ಮುಂಬಯಿ

ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಕುರ್ಲಾ ಪಶ್ಚಿಮ ಶಾಖೆಯಲ್ಲಿ 48 ನೇ ಸಂಸ್ಥಾಪನಾ ದಿನ ಹಾಗೂ 13ನೇ ವಾರ್ಷಿಕೋತ್ಸವದ ವೈಭವದ ಆಚರಣೆ





​ದೇಶದ ಪ್ರತಿಷ್ಠಿತ ಮಲ್ಟಿ ಸ್ಟೇಟ್ ಷೆಡ್ಯೂಲ್ಡ್ ಕೋ-ಆಪರೇಟಿವ್ ಬ್ಯಾಂಕುಗಳಲ್ಲಿ ಒಂದಾಗಿ ಬೆಳೆದು ನಿಂತಿರುವ ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬೈ) ಲಿಮಿಟೆಡ್‌ನ ಕುರ್ಲಾ ಪಶ್ಚಿಮ ಶಾಖೆಯಲ್ಲಿ ಆಚರಣೆಯ ಕಳೆ ಕಟ್ಟಿತ್ತು. ಬ್ಯಾಂಕಿನ 48 ನೇ ಸಂಸ್ಥಾಪನಾ ದಿನ ಹಾಗೂ ಕುರ್ಲಾ ಪಶ್ಚಿಮ ಶಾಖೆಯ 13ನೇ ವಾರ್ಷಿಕ ದಿನಾಚರಣೆಯನ್ನು ಆಗಸ್ಟ್ 21, 2026ರಂದು ಅತ್ಯಂತ ಸಂಭ್ರಮ, ಸಡಗರ ಹಾಗೂ ವೈಭವದಿಂದ ಆಚರಿಸಲಾಯಿತು.
​ಈ ಸುಸಂದರ್ಭದಲ್ಲಿ ಬ್ಯಾಂಕಿನ ಅಭಿವೃದ್ಧಿಯ ಬೆನ್ನೆಲುಬಾಗಿರುವ ಗೌರವಾನ್ವಿತ ಗ್ರಾಹಕರ ಸಮ್ಮುಖದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಬ್ಯಾಂಕಿನ ಪ್ರತಿಷ್ಠಿತ ಗ್ರಾಹಕರುಗಳಾದ ಜಯಂತಿ ಲಾಲ್ ಜೇಟ್ವಾ, ವಿಜಯ್ ಕುಮಾರ್ ಪಾಲ್, ಸುಂದರ್ ನಾಯ್ಡು, ನವೀನ್ ಪೂಜಾರಿ, ಶ್ರೀಮತಿ ತ್ರಿವೇಣಿ ಎಸ್. ನಾಯ್ಡು, ಸಂತೋಷ್ ಸಾಳುಂಕೆ, ಶಿವಾಜಿ ಶೆಟ್ಟಿ, ರತ್ನಾಕರ್ ಶೆಟ್ಟಿ, ವಿಜಯ್ ಶೆಟ್ಟಿ ಹಾಗೂ ದೀಪಾ ಬೆಳಗಿ ಅವರು ಒಟ್ಟಾಗಿ ಕೇಕ್ ಕತ್ತರಿಸುವ ಮೂಲಕ ಆಚರಣೆಗೆ ಚಾಲನೆ ನೀಡಿದರು. ಬ್ಯಾಂಕ್ ನೀಡುತ್ತಿರುವ ಅತ್ಯುತ್ತಮ ಸೇವೆ, ಆಧುನಿಕ ಸೌಲಭ್ಯಗಳು ಹಾಗೂ ಸಿಬ್ಬಂದಿಯ ಗ್ರಾಹಕ ಸ್ನೇಹಿ ನಡವಳಿಕೆಗೆ ಮನಸೋತು ಅತ್ಯಂತ ಸಂತಸ ವ್ಯಕ್ತಪಡಿಸಿದ ಅತಿಥಿಗಳು, ಬ್ಯಾಂಕ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹೃದಯಪೂರ್ವಕವಾಗಿ ಶುಭಹಾರೈಸಿದರು.


​ಕಾರ್ಯಕ್ರಮದ ಯಶಸ್ಸಿನ ಹಿಂದೆ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಶ್ರಮ ಎದ್ದು ಕಾಣುತ್ತಿತ್ತು. ಶಾಖೆಯ ಮುಖ್ಯಸ್ಥರಾದ ಮೋಹನ್ ದಾಸ್ ಎಚ್. ಪೂಜಾರಿ ಹಾಗೂ ಉಪಶಾಖ ಮುಖ್ಯಸ್ಥೆ ಆಶಾ ಆರ್. ಕೋಟ್ಯಾನ್ ಅವರ ನೇತೃತ್ವದಲ್ಲಿ ಇಡೀ ಕಾರ್ಯಕ್ರಮವು ಸುಸೂತ್ರವಾಗಿ ನೆರವೇರಿತು.
​ಈ ಶುಭ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳಾದ ಲಕ್ಷ್ಮಿ ಎನ್. ಪೂಜಾರಿ, ಆಕಾಂಕ್ಷ ಆರ್. ಬೂಸಾಲ್, ಕಿರಿಯ ಅಧಿಕಾರಿಗಳಾದ ರಶ್ಮಿ ಪಿ. ಪೂಜಾರಿ, ಮೋನಿಷಾ ಪಿ. ಪೂಜಾರಿ, ಉಪ ಕಿರಿಯ ಅಧಿಕಾರಿ ಸುಶ್ಮಿತಾ ಎಂ. ಪೂಜಾರಿ, ಸಹಾಯಕ ಕಿರಿಯ ಅಧಿಕಾರಿ ದೀಕ್ಷಿತ್ ಎಚ್. ಪೂಜಾರಿ ಹಾಗೂ ಸಿಬ್ಬಂದಿ ಹರೀಶ್ ಪೂಜಾರಿ ಉಪಸ್ಥಿತರಿದ್ದು, ಆಗಮಿಸಿದ ಗ್ರಾಹಕರನ್ನು ಆದರದಿಂದ ಸತ್ಕರಿಸಿ ಕಾರ್ಯಕ್ರಮದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಿದರು.



Related posts

ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಗೆ ಎಸ್. ಎಸ್. ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ

Mumbai News Desk

ಶ್ರೀ ಜೈ ಭವಾನಿ ಶನೀಶ್ವರ ದೇವಸ್ಥಾನ, ಡೊಂಬಿವಲಿಯ ನೂತನ ಅಧ್ಯಕ್ಷರಾಗಿ ಸೂರಜ್ ಡಿ. ಸಪಲಿಗ ಆಯ್ಕೆ 

Mumbai News Desk

ಸಾಫಲ್ಯ ಸೇವಾ ಸಂಘ ಮುಂಬಯಿ (ರಿ ) ಮಹಿಳಾ ವಿಭಾಗದ ವತಿಯಿಂದ ಖಾರ್ ಘರ್ ನಲ್ಲಿರುವ ಗಿರಿಜಾ ವೆಲ್ಫೇರ್ ಅನಾಥಾಶ್ರಮಕ್ಕೆ ಭೇಟಿ

Mumbai News Desk

ಬಂಟರ ಸಂಘ,  ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಆಟಿದ ಪೊರ್ಲ ತಿರ್ಲ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೇಳೈವಿಸಿದ ಜಾನಪದ ಸಂಸ್ಕೃತಿ

Mumbai News Desk

ಪ್ರಭಾತ್ ಕಾಲೋನಿ ಪರಿಸರದಲ್ಲಿ ಜೂನ್ 5ರಂದು ವೃಕ್ಷಾರೋಪಣ ಕಾರ್ಯಕ್ರಮ

Mumbai News Desk

ಮೀರಾ- ಬಾಯಂದರ್ ನ  ರೈ  ಸುಮತಿ  ಎಜ್ಯುಕೇಶನ್ ಟ್ರಸ್ಟ್(ರಿ)   ನ ಸೈಂಟ್  ಆಗ್ನೆಸ್ ಇಂಗ್ಲಿಷ್ ಹೈ ಸ್ಕೂಲ್ ಗೆ  100% ಫಲಿತಾಂಶ.

Mumbai News Desk