September 3, 2026
Mumbai News Kannada
ಮುಂಬಯಿ

ಬಿಲ್ಲವರ ಅಸೋಸಿಯೇಶನ್ ಇದರ ಭಾಂಡುಪ್ ಸ್ಥಳೀಯ ಕಚೇರಿಯ ವತಿಯಿಂದ 172,ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ.





ಚಿತ್ರ ವರದಿ: ಉಮೇಶ್ ಕೆ . ಅಂಚನ್.

ಮುಂಬಯಿ, ಸೆ.1 .ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಭಾಂಡುಪ್ ಸ್ಥಳೀಯ ಕಚೇರಿಯ ವತಿಯಿಂದ 172ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉತ್ಸವವನ್ನು ಅ.30ರಂದು ಭಾಂಡುಪ್ ಪಶ್ಚಿಮದ ಸತ್ಯ ವಿಜಯ ವಸತಿ ಸಂಕೀರ್ಣದಲ್ಲಿರುವ ಸ್ಥಳೀಯ ಕಚೇರಿಯಲ್ಲಿ ವಿಜ್ರಂಭಣೆಯಿಂದ ಆಚರಿಸಲಾಯಿತು.


ಅಂದು ಬೆಳಿಗ್ಗೆ ಯೋಗೇಶ್ ಭಟ್ ಅವರ ಪೌರೋಹಿತ್ಯದಲ್ಲಿ ಗಣಹೋಮ , ಗುರುಮೂರ್ತಿ ಅಭಿಷೇಕ, ಗುರು ಪೂಜೆ ನಡೆಯಿತು.ಭುವಾಜಿಗಳಾದ ಜಯ ಸಿ.ಪೂಜಾರಿ, ಸೀತಾರಾಮ ಪೂಜಾರಿ ಪೂಜಾ ಕಾರ್ಯದಲ್ಲಿ ಸಹಕರಿಸಿದ್ದರು. ಸ್ಥಳೀಯ ಕಚೇರಿಯ ಕೋಶಾಧಿಕಾರಿ ಜಯಂತ್ ಪೂಜಾರಿ ದಂಪತಿಗಳು ಪೂಜಾವೃತ ಕೈಗೊಂಡಿದ್ದರು.ನಂತರ ಸಮಿತಿಯ ಸದಸ್ಯರಿಂದ, ನಾರಾಯಣ ಗುರು ಭಜನಾ ಮಂಡಳಿ ಹಾಗೂ ಶ್ರೀಕೃಷ್ಣ ಪ್ರಸಾದಿತ ಭಜನಾ ಮಂಡಳಿಯವರಿಂದ ಭಜನೆ , ಕುಣಿತ ಭಜನೆ, ಮಂಗಳಾರತಿ ನಡೆದು ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ದಾನಿಗಳನ್ನು ಗುರುಪ್ರಸಾದ ನೀಡಿ ಪದಾಧಿಕಾರಿಗಳು ಗೌರವಿಸಿದರು.


ಈ ಸಂದರ್ಭದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷ ಹರೀಶ್ ಜಿ.ಅಮೀನ್, ಉಪಾಧ್ಯಕ್ಷರುಗಳಾದ ಪುರುಷೋತ್ತಮ ಎಸ್.ಕೋಟ್ಯಾನ್, ಕೆ.ಸುರೇಶ್ ಕುಮಾರ್,ಗೌರವ ಕಾರ್ಯದರ್ಶಿ ಹರೀಶ್ ಜಿ.ಸಾಲ್ಯಾನ್,ಗೌರವ ಕೋಶಾಧಿಕಾರಿ ರವಿ ಸನಿಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೋಟ್ಯಾನ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಶಂಕರ್ ಪೂಜಾರಿ,ಸದಾನಂದ್ ಅಮೀನ್ ,ಯುವಾಭ್ಯುದಯ ಉಪಸಮಿತಿಯ ಕಾರ್ಯದರ್ಶಿ ಯೋಗೇಶ್ ಪೂಜಾರಿ, ಅಸೋಸಿಯೇಶನಿನ ಸ್ಥಳೀಯ ಸಮಿತಿಗಳ ಪದಾಧಿಕಾರಿಗಳು-ಸದಸ್ಯರು, ಪರಿಸರದ ಸಂಘಸಂಸ್ಥೆಗಳ ಪದಾಧಿಕಾರಿಗಳು, ರಾಜಕೀಯ ನೇತಾರರು,ಉದ್ಯಮಿಗಳು ಹಾಗೂ ಅಪಾರ ಸಂಖ್ಯೆಯ ಗುರು ಭಕ್ತರು ಉಪಸ್ಥಿತರಿದ್ದು ಗುರುಪ್ರಸಾದ ಸ್ವೀಕರಿಸಿದರು.
ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಜನಾರ್ಧನ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು . ಗೌ.ಕಾರ್ಯದರ್ಶಿ ಸದಾನಂದ್ ಪೂಜಾರಿ ವಂದಿಸಿದರು.

ಸ್ಥಳೀಯಸಮಿತಿಯಗೌರವಾಧ್ಯಕ್ಷ ಎಮ್.ಬಿ.ಸನಿಲ್,ಉಪಕಾರ್ಯಾದ್ಯಕ್ಷ ಶೇಖರ್ ಎಮ್.ಪೂಜಾರಿ, ಶಂಭು ಸನಿಲ್, ಕೋಶಾಧಿಕಾರಿ ಜಯಂತ್ ಪೂಜಾರಿ, ಜೊತೆ ಕೋಶಾಧಿಕಾರಿ ಅರವಿಂದ್ ಸಿ ಪೂಜಾರಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು, ವಿಶೇಷ ಆಮಂತ್ರಿತ ಸದಸ್ಯರು, ಮಹಿಳಾ ಹಾಗೂ ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.



Related posts

ಮಲಾಡ್ ಕನ್ನಡ ಸಂಘದ ವತಿಯಿಂದ ಯಕ್ಷಗಾನ ತಾಳಮದ್ದಳೆ ಸುಧನ್ವ ಮೋಕ್ಷ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಲಕ್ಷ್ ಜೆ.ಶೆಟ್ಟಿಗೆ ಶೇ.94.20 ಅಂಕ

Mumbai News Desk

ಬಿಲ್ಲವರ ಅಸೋಸಿಯೇಶನ್ ಭಾಯಂದರ್ ಸ್ಥಳೀಯ ಕಚೇರಿಯಲ್ಲಿ ವಿಜ್ರಂಭಣೆಯ ಶ್ರೀ ಸತ್ಯನಾರಾಯಣ ಮಹಾಪೂಜೆ.

Mumbai News Desk

ಶ್ರೀ ಮಹಾ ವಿಷ್ಣು ಮಂದಿರ ಡೊಂಬಿವಲಿ: ಮಹಿಳಾ ವಿಭಾಗದ ವತಿಯಿಂದ ಸಂಭ್ರಮದ ‘ಅರಿಶಿನ-ಕುಂಕುಮ’ ಕಾರ್ಯಕ್ರಮ

Mumbai News Desk

ದಿಶಾ ಸಾಲಿಯಾನ್ ಪ್ರಕರಣ: ಸಿಬಿಐ ತನಿಖೆಗೆ ಆದೇಶಿಸಿದ ಬಾಂಬೆ ಹೈಕೋರ್ಟ್

Mumbai News Desk

ಭಾರತ್ ಬ್ಯಾಂಕ್ ಗೊರೆಗಾಂವ್ ಪೂರ್ವ ಶಾಖೆಯ ಅಧಿಕಾರಿ ರಮೇಶ್ ಸಿ ಕೋಟ್ಯಾನ್ ಸೇವಾ ನಿವೃತ್ತಿ

Mumbai News Desk