ಜಯ ಸಿ ಸುವರ್ಣ ಅಭಿಮಾನಿಗಳು, ಮುಂಬಯಿ ಬಿಲ್ಲವರು, ಮತ್ತು ಶ್ರೀ ನಾರಾಯಣ ಗುರು ಭಜನಾ ಮಂಡಲ್ (ರಿ) ಮುಂಬಯಿ ಇವರ ಜಂಟಿ ಆಶ್ರಯದಲ್ಲಿ, ಮೀರಾ ರೋಡ್ನ ಜಯ ಸಿ ಸುವರ್ಣ ಅಭಿಮಾನಿಗಳು ಹಾಗೂ ಮೀರಾ ರೋಡ್ ಬಿಲ್ಲವರ ಸಹಯೋಗದೊಂದಿಗೆ ಬರುವ ದಿನಾಂಕ 06.09.2026 ಭಾನುವಾರದಂದು ಶ್ರೀ ನಾರಾಯಣ ಗುರುಗಳ 172 ನೇ ಜನ್ಮ ದಿನಾಚರಣೆ ಹಾಗೂ ಶ್ರೀ ನಾರಾಯಣ ಗುರು ಭಜನಾ ಮಂಡಲ್ ಮೀರಾ ರೋಡ್ ಘಟಕದ ಉದ್ಘಾಟನಾ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ. ಮೀರಾ ರೋಡ್ ಪೂರ್ವ ಪೂನಂ ಸಾಗರ್ ಕಾಂಪ್ಲೆಕ್ಸ್ ನ ಶ್ರೀ ರಾಧಾಕೃಷ್ಣ ಸಭಾಗ್ರಹದಲ್ಲಿ ನಡೆಯಲಿರುವ ಈ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹೋತ್ಸವವು ಅಪರಾಹ್ನ 3.30 ರಿಂದ ಸಂಜೆ 6.00 ರ ತನಕ ಭಕ್ತಿಪೂರ್ವಕ ಭಜನೆ ಕುಣಿತ ಭಜನೆಯೊಂದಿಗೆ ಪ್ರಾರಂಭಗೊಳ್ಳಲಿದ್ದು, ಸಂಜೆ 6.05 ಕ್ಕೆ ಶ್ರೀ ಗುರುಗಳಿಗೆ ಮಹಾ ಆರತಿ ನೆರವೇರಲಿದೆ.
ತದನಂತರ ಸಂಜೆ 6.30 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 8.00 ಕ್ಕೆ ಆಗಮಿಸಿದ ಸಮಸ್ತ ಭಕ್ತಾದಿಗಳಿಗೆ ಮಹಾ ಅನ್ನ ಪ್ರಸಾದ ವಿತರಣೆ ನಡೆಯಲಿದೆ. ಭಾರತ್ ಬ್ಯಾಂಕಿನ ಕಾರ್ಯ ಕಾರ್ಯಧ್ಯಕ್ಷರು, ಜಯ ಸಿ ಸುವರ್ಣ ಅಭಿಮಾನಿಗಳ ಸಂಘಟನೆಯ ಅಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ, ಶ್ರೀ ನಾರಾಯಣ ಗುರು ಭಜನಾ ಮಂಡಲ್ ಮೀರಾ ರೋಡ್ ಘಟಕವನ್ನು ಉದ್ಘಾಟನೆ ಮಾಡಲಿರುವರು.
ಅಂತರರಾಷ್ಟ್ರೀಯ ಖ್ಯಾತಿಯ ಜ್ಯೋತಿಷಿ , ವಾಸ್ತುತಜ್ಞ ಅಶೋಕ್ ಪುರೋಹಿತ್ ಆಶೀರ್ವಚನ ನೀಡಲಿರುವರು.
ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಗೌರವ ಕಾರ್ಯದರ್ಶಿ ಕಳತ್ತೂರು ವಿಶ್ವನಾಥ್ ಶೆಟ್ಟಿ, ಬಂಟ್ಸ್ ಫೋರಂ ಮೀರಾ- ಭಾಯಂದರ ನ ಅಧ್ಯಕ್ಷ ಉದಯ ಶೆಟ್ಟಿ ಮಲ್ಲರು ಬೀಡು ಮುಖ್ಯ ಅತಿಥಿಗಳಾಗಿರುವರು.
ಉದ್ಯಮಿ ಸಮಾಜಸೇವಕ ಪ್ರಮೋದ್ ಶೆಟ್ಟಿ ನೀರಿ, ವೈ ಆರ್ ಕೆ ಅಸೋಸಿಯೇಟ್ ನ ಯೋಗೇಶ್ ಪೂಜಾರಿ ಸಿಎ, ಭಾರತ್ ಬ್ಯಾಂಕ್ ನಿರ್ದೇಶಕ ಗಂಗಾಧರ್ ಜೆ ಪೂಜಾರಿ, ಹೋಟೆಲ್ ಉದ್ಯಮಿ ಸಮಾಜಸೇವಕ ರಂಗಪ್ಪ ಗೌಡ, ಹೋಟೆಲ್ ಉದ್ಯಮಿ ಯಶವಂತ್ ಪೂಜಾರಿ ಗೌರವ ಅತಿಥಿಗಳಾಗಿರುವರು.
ಜಯ ಸಿ ಸುವರ್ಣ ಅಭಿಮಾನಿಗಳು ಇದರ ಗೌರವ ಕಾರ್ಯದರ್ಶಿ ಮೋಹನ್ ಜಿ ಪೂಜಾರಿ, ಶ್ರೀ ನಾರಾಯಣ ಗುರು ಭಜನಾ ಮಂಡಲ ಮುಂಬೈ ಯ ಅಧ್ಯಕ್ಷ ಅಶೋಕ್ ಕೆ ಎನ್ ಸಸಿಹಿತ್ಲು . ಗೌರವ ಕಾರ್ಯದರ್ಶಿ ಕೇಶವ ಎಸ್ ಪೂಜಾರಿ, ಗೌರವ ಕೋಶಾಧಿಕಾರಿ ಸಬಿತಾ ಜಿ ಪೂಜಾರಿ ಹಾಗೂ ಮೀರಾ ರೋಡ್ ಬಿಲ್ಲವರ ಪದಾಧಿಕಾರಿಗಳು ಮತ್ತು ಪ್ರಮುಖರಾದ ಹರೀಶ್ ಸುವರ್ಣ, ಎ ಕೆ ಹರೀಶ್, ಅನಿಲ್ ಪೂಜಾರಿ, ಸುಭಾಷ್ ಮಾಬಿಯಾನ್, ಗಣೇಶ್ ಕೆ ಪೂಜಾರಿ, ಅಶೋಕ್ ಕರ್ಕೇರ, ದಯಾನಂದ್ ಸುವರ್ಣ, ಬಿ ಎಸ್ ಕೋಟ್ಯಾನ್, ಶೈಲೇಶ್ ಪೂಜಾರಿ, ಗಣೇಶ್ ಬಂಗೇರ, ದಿನೇಶ್ ಅಂಚನ್, ಲೀಲಾ ಗಣೇಶ್, ಪೂರ್ಣಿಮಾ ಅಂಚನ್,ಕವಿತಾ ಅಶೋಕ್ ಪೂಜಾರಿ, ಭಾಸ್ಕರ್ ಪೂಜಾರಿ, ಸುರೇಶ್ ಪೂಜಾರಿ, ದೇವರಾಜ್ ಪೂಜಾರಿ, ಉಮೇಶ್ ಬಾರ್ಕುರು, ಮೋಹನ್ ಕುಮಾರ್, ಹರೀಶ್ ಬಂಗೇರ, ಪ್ರಭಾಕರ್ ಡಿ ಸಾಲ್ಯಾನ್ ಮತ್ತು ರಾಜಕುಮಾರ್ ಪೂಜಾರಿ ಇವರೆಲ್ಲರೂ ಜಂಟಿಯಾಗಿ ಈ ಶುಭ ಸಮಾರಂಭಕ್ಕೆ ಕರೆ ನೀಡಿದ್ದು, ಜಯ ಸಿ ಸುವರ್ಣ ಅಭಿಮಾನಿಗಳು ಹಾಗೂ ಗುರುಭಕ್ತರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ.




