July 23, 2026
Mumbai News Kannada
ಸುದ್ದಿ

ವಿಶ್ವ ಬಂಟರ ಸಮ್ಮೇಳನದ ಖರ್ಚು ವೆಚ್ಚಗಳ ಸಭೆ







ವಿಶ್ವದ ಬಂಟರೆಲ್ಲರನ್ನು ಒಂದೆಡೆ ಸೇರಿಸಿದ ತೃಪ್ತಿ ಇದೆ: ಐಕಳ ಹರೀಶ್ ಶೆಟ್ಟಿ

ಮುಲ್ಕಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಉಡುಪಿಯಲ್ಲಿ ನಡೆದ ವಿಶ್ವ ಬಂಟರ ಸಮ್ಮೇಳನ 2023 ಇದರ ಖರ್ಚು ವೆಚ್ಚಗಳ ಕುರಿತು ಮುಲ್ಕಿಯಲ್ಲಿರುವ ಶ್ರೀ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿರುವ ಶ್ರೀ ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಛೇರಿಯಲ್ಲಿ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವಹಿಸಿದ್ದರು. ವಿಶ್ವದ ಬಂಟರೆಲ್ಲರನ್ನು ಒಂದೇ ಚಪ್ಪರದಡಿಯಲ್ಲಿ ಸಮ್ಮೇಳನದ ಮೂಲಕ ಒಟ್ಟುಗೂಡಿಸಿದ ತೃಪ್ತಿ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಇದೆ. ಉಡುಪಿಯಲ್ಲಿ ಎರಡು ದಿನಗಳ ಕಾಲ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಕಲೋತ್ಸವದ ಮೂಲಕ ಕ್ರೀಡಾಳುಗಳನ್ನು ಮತ್ತು ಕಲಾವಿದರನ್ನು ಒಟ್ಟು ಸೇರಿಸಿ ನೀಡಿದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಮಾಜದ ಎಲ್ಲರೂ ಸಹಕಾರ ನೀಡಿದ್ದಾರೆ ಎಂದರು. 

ಮುಂದಿನ ದಿನಗಳಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ವಿವಿಧ ಯೋಜನೆಗಳಲ್ಲಿ ಸಮಾಜದ ಪರ  ಕಾರ್ಯಕ್ರಮಗಳನ್ನು ಮಾಡುವುದಾಗಿ ಐಕಳ ಹರೀಶ್ ಶೆಟ್ಟಿ ತಿಳಿಸಿದರು. ಸಮಾಜವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ದಾನಿಗಳು ಒಕ್ಕೂಟದ ಜೊತೆಗೆ ಕೈಜೋಡಿಸ ಬೇಕೆಂದರು. 

           ಸಭೆಯಲ್ಲಿ ಉಪಾಧ್ಯಕ್ಷರಾದ  ಕರ್ನಿರೆ ವಿಶ್ವನಾಥ್ ಶೆಟ್ಟಿ, ಗೌರವ ಕಾರ್ಯದರ್ಶಿ  ಜಯಕರ್ ಶೆಟ್ಟಿ ಇಂದ್ರಾಳಿ,  ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ, ಜೊತೆ -ಕಾರ್ಯದರ್ಶಿ ಚಂದ್ರಹಾಸ ಡಿ. ಶೆಟ್ಟಿ ರಂಗೋಲಿ, ವಿಶ್ವ ಬಂಟರ ಸಮ್ಮೇಳನ 2023ರ ವಿವಿಧ ಸಮಿತಿಗಳ ಸಂಚಾಲಕರು, ಸಹ -ಸಂಚಾಲಕರು ಹಾಗೂ ಕಾರ್ಯಕಾರಿ ಸಮಿತಿ ಸರ್ವ-ಸದಸ್ಯರುಗಳು, ಒಕ್ಕೂಟದ ಮಾಜಿ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ಆಡಳಿತಾಧಿಕಾರಿ  ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್, ಸಿಬ್ಬಂದಿಗಳು  ಉಪಸ್ಥಿತರಿದ್ದರು.



Related posts

ಮುಂಬೈ ಮೇಯರ್ ಪಟ್ಟ ಅಲಂಕರಿಸಿದ್ದ ಮೊದಲ ಬಿಜೆಪಿ ನಾಯಕ ಕನ್ನಡಿಗ ಡಾ. ಪ್ರಭಾಕರ್ ಪೈ

Mumbai News Desk

ಮಜ್ ಗಾಂವ್ ನ ರಾಜ್ ಕಮಲ್ ಟೈಲರ್ಸ್ ನ ಮಾಲಕ ದೇವಪ್ಪ ಪೂಜಾರಿ ನಿಧನ

Mumbai News Desk

ಬಂಟರ ಸಂಘ ಬಂಟವಾಳ  ಯುವ ವಿಭಾಗದ    ಹಬ್ಬ ದೀಪಾವಳಿ ಸಂಭ್ರಮದ  ಬೊಲ್ಪುದ ಐಸಿರಿ-೨ . ಬಂಟರ   ಸಂಸ್ಕೃತಿಯನ್ನು ಬಿಂಬಿಸಿದೆ:  ಐಕಳ ಹರೀಶ್ ಶೆಟ್ಟಿ

Mumbai News Desk

ನಿಡ್ಲೆ ಗೋವಿಂದ ಭಟ್ ಮತ್ತು ಪುತ್ತಿಗೆ ಕುಮಾರ ಗೌಡ ರಿಗೆ ಕಾಂತಾವರ ಯಕ್ಷದೇಗುಲ ಪ್ರಶಸ್ತಿ

Mumbai News Desk

ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ನ ಹಿರಿಯ ನಾಯಕ ಸುರೇಶ್ ಕಲ್ಮಾಡಿ ನಿಧನ

Mumbai News Desk

ಶಶಿರೇಖಾ ಆನಂದ ಶೆಟ್ಟಿ ಓಪನ್ ಏರ್ ಗಾರ್ಡನ್ ಗೆ ಶಿಲಾನ್ಯಾಸ* ಉತ್ತಮ ನಾಯಕತ್ವ ಇದ್ದರೆ ಎಲ್ಲವೂ ಸಾಧ್ಯ: ತೋನ್ಸೆ ಆನಂದ ಶೆಟ್ಟಿ*

Mumbai News Desk