
ಭಾಂಡುಪ್ ಪಶ್ಚಿಮದ ಬ್ಯಾಂಕ್ ಆಫ್ ಬರೋಡ ಸ್ಟಾಪ್ ಕ್ವಾರ್ಟರ್ಸ್ ನ ಹತ್ತಿರದ ಶ್ರೀ ಶನೀಶ್ವರ ಭಕ್ತ ವೃಂದ ಮಿತ್ರ ಮಂಡಳಿಯ ಪಿಂಪಾಲೇಶ್ವರ ಮಹಾದೇವ ಮಂದಿರ,
ಅಶ್ವತ ಮರದಡಿಯಲ್ಲಿ ನೆಲೆಯಾಗಿ ನಿಂತ ನೀಲಕಂಠ ಮಹೇಶ್ವರನ ಈ ಮಂದಿರವು ಪಿಂಪಲೇಶ್ವರ ಮಂದಿರ ಎಂದೇ ಹೆಸರುವಾಸಿಯಾಗಿರುವುದು ಸರಿ ಸುಮಾರು ಆರು ದಶಕಗಳ ಇತಿಹಾಸ ಹೊಂದಿರುವ ಈ ದೇವಸ್ಥಾನದಲ್ಲಿ ಶಿವಲಿಂಗ, ಪಾರ್ವತಿ ದೇವಿ, ಶ್ರೀ ಗಣಪತಿ, ಶ್ರೀ ಆಂಜನೇಯ, ಶ್ರೀ ಸಾಯಿಬಾಬಾ, ಶ್ರೀ ಶನೇಶ್ವರ ದೇವ, ಶ್ರೀದೇವಿ, ಶ್ರೀ ಸುಬ್ರಮಣ್ಯ ವಾಸುಕಿ ದೇವರಿಗಳಿಗೆ ದಿನನಿತ್ಯ ಬ್ರಾಹ್ಮಣ ವರ್ಗದವರಿಂದ ಪೂಜಾ ಕೈಂಕರ್ಯಗಳು ನಿರಂತರ ಶ್ರೀ ದುರ್ಗಾದೇವಿ ಅನಾದಿ ಕಾಲದಿಂದ ನಡೆಯುತ್ತಾ ಬಂದಿದೆ.
ಸರ್ವ ಭಕ್ತಾದಿಗಳ ದುರಿತ ಕಷ್ಟಗಳನ್ನು ನಿವಾರಿಸುತ್ತಾ ಬಂದಿರುವ ಪಿಂಪಲೇಶ್ವರ ಮಂದಿರವು 1960 ರಲ್ಲಿ ಸ್ಥಾಪನೆಗೊಂಡು ಅವತ್ತಿನಿಂದಲೂ ಮಂದಿರದಲ್ಲಿ ಪ್ರತಿವರ್ಷ ಮಹಾಶಿವರಾತ್ರಿಯ ಹಬ್ಬವನ್ನು ಬಹು ವಿಜೃಂಭಣೆಯಿಂದ ನೆರವೇರಿಸುತ್ತಾ ಬಂದಿರುವುದು. ಶ್ರೀ ಕ್ಷೇತ್ರದಲ್ಲಿ ಶ್ರೀ ಶನಿ ದೇವರ ರಜತಬಿಂಬವು ತುಳು ಕನ್ನಡಿಗರಿಂದ ಸ್ಥಾಪಿಸಲ್ಪಟ್ಟು ಭಕ್ತವೃಂದವರಿಂದ ನಿರಂತರ ಪೂಜಾ ಸೇವೆಗಳು ಭಜನೆ ಕೀರ್ತನೆ ಹಾಗೂ ಯಜ್ಞಯಾಗಾದಿಗಳು ಹಾಗೂ ಐದನೇ ಶನಿವಾರ ಮಂಗಳೋತ್ಸವ ಸೇವೆಯು ಹಾಗೇ ಶನಿ ದರ್ಶನದ ಪೂಜೆಯು ನೆರವೇರುತ್ತಾ ಬಂದಿರುವುದು.
ಶ್ರೀ ಕ್ಷೇತ್ರದಲ್ಲಿರುವ ದೇವರ ಅದ್ಭುತ ಶಕ್ತಿಗಳ ಭಕ್ತಾದಿಗಳ ಕಷ್ಟಕಾರ್ಪಣ್ಯಗಳನ್ನು ಪರಿಹರಿಸುತ್ತಾ ಬಂದಿರುವುದೇ ಈ ಕ್ಷೇತ್ರದ ಪ್ರಸಿದ್ದಿಗೆ ಕಾರಣ, ಸರಿ ಸುಮಾರು 6 ದಶಕಗಳನ್ನು ಕಂಡಿರುವ ಶ್ರೀ ಪಿಂಪಲೇಶ್ವರ ದೇವಸ್ಥಾನದ ಕಟ್ಟಡವು, ಅದರ ಅಡಿಪಾಯ ಹಾಗೂ ಅದರ ಮೇಲ್ಬಾವಣೆಗಳು ಶಿಥಿಲಗೊಂಡಿರುವ ಕಾರಣ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವುದೆಂದು ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರ ಸಭೆಯಲ್ಲಿ ನಿರ್ಧರಿಸಲಾಯಿತು. ದೇವಸ್ಥಾನದ ಉತ್ಕನನಾದ ಸಮಯದಲ್ಲಿ ನಾಗರೂಪದಲ್ಲಿ ಸುಬ್ರಹ್ಮಣ್ಯ ವಾಸುಕಿದೇವರ ಹಾಗೂ ಆಂಜನೇಯ ದೇವರ ವಿಗ್ರಹವನ್ನು ತೆಗೆಯುವ ಸಮಯದಲ್ಲಿ ಮಂದಿರದ ಆವರಣದಲ್ಲಿ ಒಂದು ವಾನರ ಹಾಗೂ ಒಂದು ನಾಗರಹಾವು ಕಂಡು ಬಂತು, ಅದಲ್ಲದೆ ಶ್ರೀ ವಿಶ್ಲೇಶ್ವರ ದೇವರ ಮೂರ್ತಿಯನ್ನು ತೆರವು ಮಾಡುವಾಗ ಒಂದು ಸಣ್ಣ ಮೂಷಿಕದ ಗುಂಪು ಶ್ರೀ ವಿಶ್ವೇಶ್ವರ ದೇವರ ಮೂರ್ತಿಯ ಕೈಯಲ್ಲಿ ಮೈಯಲ್ಲಿ ಬಂದು ಕುಳಿತಿತ್ತು. ಶ್ರೀ ಶನೇಶ್ವರ ದೇವರ ಗುಡಿಯನ್ನು ಕಟ್ಟುವಾಗ ಅದರ ಮೇಲೆ ಒಂದು ಕಾಗೆ ಬಂದು ಕುಳಿತು, ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೇವರ ಅನುಗ್ರಹ ಇರುವುದನ್ನು ಸಾಕ್ಷಾತ್ಕಾರಗೊಳಿಸಿತು. ಮುಂದೊಂದು ದಿನ ನಮ್ಮಿ ಶ್ರೀ ಪಿಂಪಲೇಶ್ವರ ದೇವಸ್ಥಾನವು ಕಾರ್ಣಿಕದ ಕ್ಷೇತ್ರವೆನಿಸಿ ತೀರ್ಥಕ್ಷೇತ್ರವಾಗಿ ಕೀರ್ತಿ ಗಳಿಸುವುದು ಎಂಬ ನಂಬಿಕೆ. ಅಂತೇಯೆ ಮುಂಬಾಯಿ ಮಹಾನಗರದಲ್ಲಿ ಅರ್ಚಕನ ಕಾಯದಲ್ಲಿ ಆವೇಶ ಬರಿತವಾಗಿ ಅಭಯ ನೀಡಿ ಆದಂತಾಹ ತಪ್ಪನ್ನು ತಿದ್ದಿ ಹೇಳಿ ಭಕ್ತರ ಕಷ್ಟವನ್ನು ಪರಿಹರಿಸಿ ಮಾತನಾಡುವ ದೇವರೆಂದೆ ಪ್ರಖ್ಯಾತ ಪಡೆದ ಮತ್ತು ಮುಂಬಾಯಿ ನಗರದಲ್ಲಿಯೆ ಪ್ರಥಮ ಹೆಗ್ಗಳಿಕೆಗೆ ಹೆಸರುವಾಸಿಯಾಗಿದೆ.

ಈ ಮಂದಿರಕ್ಕೆ ಬಂದು ತನ್ನ ಕಷ್ಟ ಮತ್ತು ಚಿಂತೆಯನ್ನು ಶ್ರೀ ಶನಿ ದೇವರಲ್ಲಿ ಅಂತರಂಗದಲ್ಲಿ ಪ್ರಾರ್ಥಿಸಿದರೂ ಶ್ರೀ ಶನಿ ದೇವರು ಸಕಲ ಕಂಟಕವನ್ನು ದೂರ ಮಾಡಿ ರಕ್ಷಕವಚ ನೀಡಿ ಅನುಗ್ರಹ ಮಾಡಿ ಸದಾ ರಕ್ಷಣೆ ಮಾಡುತ್ತಾ ಬಂದಂತಹ ಭಾಂಡುತ್ ಕ್ಷೇತ್ರದಲ್ಲಿ ಮೆರೆಯುವಂತ ದೇವಸ್ಥಾನವೇ ಇದಾಗಿದೆ.
ಇದೀಗ ಫೆಬ್ರವರಿ 19 ರ ಸೋಮವಾರ ದಿಂದ ಫೆಬ್ರವರಿ 24 ರ ಶನಿವಾರದ ವರಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಮಂದಿರದ ಜೀರ್ಣೋದ್ಧಾರದ ಭವ್ಯ ಉದ್ಘಾಟನ ಸಮಾರಂಭ ಅಷ್ಟಬಂಧ ಬ್ರಹ್ಮಕಲಶೋತ್ಸವ ಕುಂಬಾಭಿಷೇಕ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ.
ಕಾರ್ಯಸೂಚಿ :
ಆದಿತ್ಯವಾರ ತಾ. 11 ಫೆಬ್ರವರಿ 2024 ಮದ್ಯಾಹ್ನ 3.30 ರಿಂದ ಬಟ್ಟಿಪಾಡ ಶ್ರೀ ಶನೀಶ್ವರ ಮಂದಿರದಿಂದ ಭವ್ಯವಾದ ಮೆರವಣಿಗೆ ನಡೆಯಲಿದೆ.
ಸೋಮವಾರ ತಾ. 19 ಫೆಬ್ರವರಿ 2024
ಮಧ್ಯಾಹ್ನ ಗಂಟೆ 4.30 ರಿಂದ : ಗಣಪತಿ ಪೂಜೆ, ವಾಸ್ತು ಪೂಜೆ, ತೋರಣ ಪ್ರತಿಷ್ಠೆ, ಉಗ್ರಾಣ ಪೂಜೆ, ಹೋಮ,ಪ್ರಸಾದ ವಿತರಣೆ
ರಾತ್ರಿ 7 ರಿಂದ 9ರ ತನಕ: ಧಾರ್ಮಿಕ ಕಾರ್ಯಕ್ರಮ -ಭಜನೆ (ಶ್ರೀ ಕೃಷ್ಣ ಪ್ರಸಾದಿತ ಭಜನಾ ಮಂಡಳಿ, ಶ್ರೀ ನಿತ್ಯಾನಂದ ಮಂದಿರ, ಭಾಂಡುಪ್ ಇವರಿಂದ)
ಮಂಗಳವಾರ ತಾ. 20 ಫೆಬ್ರವರಿ 2024:
ಬೆಳಿಗ್ಗೆ ಗಂಟೆ 5.30 ರಿಂದ : ಗಣಪತಿ ಪೂಜೆ, ಹೋಮ, ಗಂಗಾ ಪೂಜೆ, ಕಲಶ ಸ್ಥಾಪನೆ, 1 ನೇ ಕಾಳ ಪೂಜೆ, ಹೋಮ ಪೂಜೆ, ಆರತಿ, ಪ್ರಸಾದ ವಿತರಣೆ.
ಮಧ್ಯಾಹ್ನ ಗಂಟೆ 5.00 ರಿಂದ : ಧನ್ಯಾದಿ ವಾಸಂ, ಜಲಾದಿ ವಾಸಂ, ಶಯನಾದಿ ವಾಸಂ, ಪುಷ್ಪಾದಿ ವಾಸಂ, ಕನಕಾದಿ ವಾಸಂ, ಅಭಿಷೇಕ, 2 ನೇ ಕಾಳ ಪೂಜೆ, ಹೋಮ ಪೂಜೆ, ಆರತಿ, ಪ್ರಸಾದ ವಿತರಣೆ.
ರಾತ್ರಿ 7 ರಿಂದ 9ರ ತನಕ : ಧಾರ್ಮಿಕ ಕಾರ್ಯಕ್ರಮ – ಭಜನೆ, ರಾಜೀವಿ ಶ್ರೀಧರ ಹಳೆಯಂಗಡಿ ಇವರ ಸೌಜನ್ಯದಿಂದ (ಹರಿ ಕಿರ್ತನ, ವಿದ್ವಾನ್ ಖೈರಬೆಟ್ಟು ವಿಶ್ವನಾಥ ಭಟ್ (ವಿಶ್ವೇಸ ದಾಸ) (ಹಾರ್ಮೋನಿಯಮ್ : ಶೇಕರ ಸಸಿಹಿತ್ಲು)
ಬುಧವಾರ ತಾ. 21 ಫೆಬ್ರವರಿ 2024:
ಬೆಳಿಗ್ಗೆ ಗಂಟೆ 5.30 ರಿಂದ : 3 ನೇ ಕಾಳ ಪೂಜೆ, ಹೋಮ ಪೂಜೆ, ಆರತಿ,
ಮಧ್ಯಾಹ್ನ ಗಂಟೆ 5.00 ರಿಂದ : 4ನೇ ಕಾಳ ಪೂಜೆ, ಹೋಮ ಪೂಜೆ, ಆರತಿ, ಪ್ರಸಾದ ವಿತರಣೆ
ರಾತ್ರಿ 7 ರಿಂದ 9ರ ತನಕ : ಧಾರ್ಮಿಕ ಕಾರ್ಯಕ್ರಮ – ಭಜನೆ
ಗುರುವಾರ ತಾ. 22 ಫೆಬ್ರವರಿ 2024 :
ಬೆಳಿಗ್ಗೆ ಗಂಟೆ 5.30 ರಿಂದ : 5 ನೇ ಕಳ ಪೂಜೆ, ಹೋಮ, ಪೂರ್ಣಾಹುತಿ, ಪುನರ್ ಪೂಜೆ, ಸ್ಪರ್ಶಾಹುತಿ, ನದಿ ಸಂದಾನಂ, ನೇತ್ರ ಉನ್ಮೀಲನಂ, ಮಹಾ ಪೂರ್ಣಾಹುತಿ, ಕಲಷ ಯಾತ್ರಾ ಧನಂ.
ಬೆಳಿಗ್ಗೆ 8.00 ರಿಂದ10.30 ರ ತನಕ : ವಿಮಾನ ಆಭಿಷೇಕ, ಎಲ್ಲಾ ದೇವರಿಗೆ ಕುಂಬಾಭಿಷೇಕ ಹಾಗೂ ಅಲಂಕಾರ, ನೈವೆದ್ಯ, ದೀಪಾರಾಧನೆ, ಮಹಾ ಭಂಡಾರ.
ಮಧ್ಯಾಹ್ನ 12.00 ರಿಂದ : ಅನ್ನ ಸಂತರ್ಪಣೆ (ಮಹಾ ಭಂಡಾರ : ಶ್ರೀ ಗಂಗಾಧರ ಕರ್ಕೇರ ಹಾಗೂ ಕುಟುಂಬಸ್ತರು, (ಬ್ಯಾಂಕ್ ಆಫ್ ಬರೊಡ-ರಿಟಾಯರ್ಡ್), ಇವರಿಂದ)
ರಾತ್ರಿ 7 ರಿಂದ 9ರ ತನಕ : ಧಾರ್ಮಿಕ ಕಾರ್ಯಕ್ರಮ – ಭಜನೆ (ಸಾಯಿಬಾಬಾ ಗುರುಪೂಜೆ, ಮಂಡಳಿಯವರಿಂದ)
ಶುಕ್ರವಾರ ತಾ. 23 ಫೆಬ್ರವರಿ 2024 :
ಬೆಳಿಗ್ಗೆ 8 ರಿಂದ : ಭಗವತಿ ಸೇವಾ ದುರ್ಗಾ ನಮಸ್ಕಾರ (ಶ್ರೀ ಲಕ್ಷ್ಮೀನಾರಾಯಣ ಭಟ್ ಶ್ರೀ ನಿತ್ಯಾನಂದ ಮಂದಿರ ಭಾಂಡುಪ್) ಇವರ ನೇತ್ರುತ್ವದಲ್ಲಿ,
ಸಂಜೆ 6.30 ರಿಂದ : ನಾಗ ಪೂಜೆ, ಆಸ್ತೇಶಬಲಿ (ಶ್ರೀ ಲಕ್ಷ್ಮೀನಾರಾಯಣ ಭಟ್ ಶ್ರೀ ನಿತ್ಯಾನಂದ ಮಂದಿರ ಭಾಂಡುಪ್) ಇವರ ನೇತ್ರುತ್ವದಲ್ಲಿ
ಶನಿವಾರ ತಾ. 24 ಫೆಬ್ರವರಿ 2024:
ಬೆಳಿಗ್ಗೆ 9 ರಿಂದ 11 ರ ವರೆಗೆ : ಶ್ರೀಸತ್ಯನಾರಾಯಣ ಮಹಾಪೂಜೆ, ತದನಂತರ ತೀರ್ಥ ಪ್ರಸಾದ ವಿತರಣೆ
ಮಧ್ಯಾಹ್ನ 12 ರಿಂದ ರಾತ್ರಿ 9 : ಶ್ರೀ ಶನಿ ಮಹಾಪೂಜೆ,
ಸಂಜೆ 8 ರಿಂದ : ಅನ್ನ ಸಂತರ್ಪಣೆ (ಮಹಾ ಪ್ರಸಾದ)
132 ಕಲಶ ಸ್ಥಾಪನೆ (1 ಕಲಶ ರೂ. 1001/-)ಭಕ್ತರು ಆಸಕ್ತಿಯುಳ್ಳವರು ದಯವಿಟ್ಟು ರಸೀದಿಯೊಂದಿಗೆ ಪಾವತಿಸ ಬೇಕಾಗಿ ವಿನಂತಿ.
ಹೊರೆಕಾಣಿಕೆ ಕೊಡಲಿಚ್ಛಿಸುವವರು ತಾ.10-02-2024ರ ತನಕ ದೇವಸ್ಥಾನಕ್ಕೆ ತಲುಪಿಸಬೇಕಾಗಿ ವಿನಂತಿ.

ಶ್ರೀದೇವರ ಪ್ರಸಾದ ಸ್ವೀಕರಿಸಿ ನಮ್ಮೊಂದಿಗೆ ನಿಮ್ಮ ಉಪಸ್ಥಿತಿಯು ಈ ಪವಿತ್ರ ಕಾರ್ಯಕ್ರಮಕ್ಕೆ ಅಪಾರ ಸಂತೋಷ ಮತ್ತು ಪವೀತ್ರತೆಯನ್ನು ಸೇರಿಸುತ್ತದೆ. ದಯಟ್ಟು ನಮ್ಮೊಂದಿಗೆ ಭಕ್ತಾದಿಗಳು ಕೈಗೂಡಿಸಿ ದೈವಿಕ ಅನುಗ್ರಹದ ಭಾಗವಾಗಿರಿ ಎಂದು ಗೌರವ ಅಧ್ಯಕ್ಷರಾದ ಶ್ಯಾಮ್ ಪ್ಯಾರೆ ಯಾದವ್, ಅಧ್ಯಕ್ಷರಾದ ಕಿಶೋರ್ ಅರ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಕೆ ಸಾಲ್ಯಾನ್ ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.




