September 6, 2026
Mumbai News Kannada
ಮುಂಬಯಿ

ಬಿಲ್ಲವರ ಅಸೋಸಿಯೇಷನ್ ಮುಂಬೈ, ಡೊಂಬಿವಲಿ ಸ್ಥಳೀಯ ಕಚೇರಿ, ಶಾರದಾ ಪೂಜೆ ಆಚರಣೆ.





ಚಿತ್ರ ವರದಿ : ಧನಂಜಯ ಪೂಜಾರಿ

ಬಿಲ್ಲವರ ಅಸೋಸಿಯೇಷನ್, ಮುಂಬೈ
ಡೊಂಬಿವಲಿ ಸ್ಥಳೀಯ ಕಚೇರಿ, ಶಾರದಾ ಪೂಜೆ ಆಚರಣೆ.
ಬಿಲ್ಲವರ ಅಸೋಸಿಯೇಷನ್ , ಮುಂಬೈ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ರವಿವಾರ ದಿನಾಂಕ 17.10.2023 ರಂದು ಸಂಜೆ 3.00 ರಿಂದ ರಾತ್ರಿ 7.00 ರ ತನಕ ನವರಾತ್ರಿ ಹಬದ್ದ ನಿಮಿತ್ತ ಶಾರದಾ ಪೂಜೆಯು ಬಹಳ ವಿಜೃಂಭಣೆಯೊಂದಿಗೆ ನೆರವೇರಿತು. ಪ್ರಾರಂಭದಲ್ಲಿ ಪುರೋಹಿತ ಐತಪ್ಪ ಸುವರ್ಣರು ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ ಮಂಟಪವನ್ನು ವಿವಿಧ ಹೂ ಗಳಿಂದ ಅಲಂಕರಿಸಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಗುರು ಭಕ್ತರಿಂದ ಸಂಜೇ 4 ರಿಂದ ರಾತ್ರಿ 7 ರ ತನಕ ವಿಶೇಷ ಭಜನಾ ಕಾರ್ಯಕ್ರಮ ಜರಗಿತು. ತದನಂತರ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿತರಿಸಲಾಯಿತು. ತದನಂತರ ಮಹಿಳಾ ವಿಭಾಗ ಹಾಗು ಯುವ ವಿಭಾಗದ ವತಿಯಿಂದ ದಾಂಡಿಯಾ ರಾಸ್ ನ್ರಿತ್ಯ ಕಾರ್ಯಕ್ರಮ ಜರಗಿತು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ಶ್ರೀ ಚಂದ್ರಹಾಸ್ ಪಾಲನ್ , ಉಪ ಕಾರ್ಯಾಧ್ಯಕ್ಷರಾದ ಶ್ರೀ ಶ್ರೀಧರ್ ಅಮೀನ್ ಹಾಗು ಶ್ರೀ ಪುರಂಧರ್ ಪೂಜಾರಿ, ಸಹ ಕಾರ್ಯದರ್ಶಿ ಶ್ರೀ ಕೃಷ್ಣ ಪೂಜಾರಿ, ಗೌರವ ಕೋಶಾಧಿಕಾರಿ ಶ್ರೀ ಆನಂದ ಪೂಜಾರಿ, ಸಹ ಕೋಶಾಧಿಕಾರಿ ಶ್ರೀ ಜಗನಾಥ್ ಸನಿಲ್, ಶ್ರೀ ಮಂಜಪ್ಪ ಪೂಜಾರಿ, ಶ್ರೀ ಈಶ್ವರ್ ಕೋಟಿಯನ್, ಶ್ರೀ ತಿಲಕ್ ಸನಿಲ್, ಶ್ರೀ ಜಗದೀಶ್ ಕೋಟಿಯನ್, ಶ್ರೀ ಸೋಮನಾಥ್ ಪೂಜಾರಿ , ಶ್ರೀ ಅನ್ನು ಪೂಜಾರಿ ಇತರ ಸಮಿತಿ ಸದ್ಯಸರು,ಸ್ಥಳೀಯ ಸದ್ಯಸ್ಯರು,ಮಹಿಳಾ ವಿಭಾಗದ ಸದಸ್ಯರು,ಹಾಗು ಯುವಅಭುದಾಯ ಉಪ ಸಮಿತಿಯ ಸದ್ಯಸರುಗಳು ಕಾರ್ಯಕ್ರಮ ಯಶಶ್ವಿಯಾಗಲು ಸಹಕರಿಸಿದರು.



Related posts

ಮಹಾರಾಷ್ಟ್ರ ಮಾನವ ಸೇವಾ ಸಂಘ ದಹಿಸರ್ ಸ್ವಾಮಿ ವಿವೇಕಾನಂದರ 162ನೇ ಜನ್ಮ ದಿನಾಚರಣೆ

Mumbai News Desk

ರಾವಲ್ ಪಾಡ ಶ್ರೀ ದುರ್ಗಾಪರಮೇಶ್ವರೀ – ಶನೀಶ್ವರ ದೇವಸ್ಥಾನ ದ ವಾರ್ಷಿಕ  ಮಹಾಪೂಜೆ ,  ಧಾರ್ಮಿಕ ಸಭೆ,

Mumbai News Desk

ವರ್ಲಿ ಶ್ರೀ ಅಪ್ಪಾಜಿ ಬೀಡು ಫೌಂಡೇಶನ್: ರಮೇಶ್ ಗುರುಸ್ವಾಮಿ ಗೆ ನುಡಿ ನಮನ.

Mumbai News Desk

ದಿ ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್‌ ಬದ್ಲಾಪುರದ ಮೋಯಾ ನಗರಿಯಲ್ಲಿ ಗಣ-ಹೋಮ, ಸಾಮೂಹಿಕ ಸತ್ಯನಾರಾಯಣ ಮಹಾಪೂಜೆ

Mumbai News Desk

ಕಲ್ಯಾಣ್- ಉಲ್ಲಾಸನಗರ ಕನ್ನಡಿಗರಿಂದ ಮಾರಣಕಟ್ಟೆ ಮೇಳದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಯಕ್ಷಗಾನ ಪ್ರದರ್ಶನ’

Mumbai News Desk

ಪೌರಾಣಿಕ ವಾಚಕ ಸಮಿತಿ ಮುಂಬಯಿ: ಸುವರ್ಣ ಮಹೋತ್ಸವ ಸಮಾರಂಭಕ್ಕೆ ಚಾಲನೆ.

Mumbai News Desk