July 22, 2026
Mumbai News Kannada
ಮುಂಬಯಿ

ನಾನಿಲ್ತಾರ್ ಅಭಿಮಾನಿ ಬಳಗ ಮುಂಡ್ಕೂರು : ನಾನಿಲ್ತಾರ್ನಲ್ಲಿ  ಸ್ನೇಹ ಸಮ್ಮಿಲನದ ಆಮಂತ್ರಣ ಪತ್ರಿಕೆ ಬಿಡುಗಡೆ







ಕಾರ್ಯಕ್ರಮದ ಯಶಸ್ವಿಗೆ ಸಮಾಜ ಬಾಂಧವರು ಸಹಕರಿಸಿ: ಹರೀಶ್ ಮೂಲ್ಯ

ಮುಂಬಯಿ: ಮುಂಬೈಯಲ್ಲಿ   ನೆಲೆಸಿರುವ ಮುಂಡ್ಕೂರು ಗ್ರಾಮದ ನಾನಿಲ್ತಾರ್ ಪರಿಸರ ಕುಲಾಲ ಸಮಾಜ ಬಾಂಧವರು ಒಗ್ಗಟ್ಟಾಗಿ ಸುಮಾರು 17 ವರ್ಷಗಳ ಹಿಂದೆ ಪ್ರಾರಂಭಿಸಿದ ನಾನಿಲ್ತಾರ್ ಅಭಿಮಾನಿ ಬಳಗ ಮುಂಡ್ಕೂರು ಮುಂಬೈಯ ಇದರ  ಆಶ್ರಯದಲ್ಲಿ ನಾನಿಲ್ತಾರ್ ಕುಲಾಲ ಸಂಘದ ಸಹಕಾರದೊಂದಿಗೆ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಾನಿಲ್ತಾರ್ ಕುಲಾಲ ಭವನದಲ್ಲಿಮೇ 5 ರಂದು  ಆಯೋಜಿಸಿಕೊಂಡಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಗೊರೆಗಾಂವ್ ಪೂರ್ವದ ಪ್ರಜ್ಞ ಶಾಲೆಯ ಸಭಾಂಗಣದಲ್ಲಿ ಬಿಡುಗಡೆಗೊಳಿಸಲಾಯಿತು.ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದ  ನಾನಿಲ್ತಾರ್ ಅಭಿಮಾನಿ ಬಳಗದ ಅಧ್ಯಕ್ಷ ಹರೀಶ್ ಮೂಲ್ಯ ಮಾತನಾಡಿ ಊರಿನಲ್ಲಿ ನಿರ್ಮಾಣಗೊಂಡಿರುವ ನಾನಿಲ್ತಾರ್ ಕುಲಾಲ ಪರಿಸರದ ಜನರಿಗೆ ಹೆಚ್ಚು ಅನುಕೂಲವಾಗುವ ಬೇಕೆನ್ನುವ ಉದ್ದೇಶದಿಂದ ಜನರೇಟರ್ ನ್ನು ನೀಡುವ ಮೂಲಕ ಮನೋರಂಜನೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿಕೊಂಡಿದ್ದೇವೆ. ಈ ಕಾರ್ಯಕ್ರಮಕ್ಕೆ ಮುಂಬೈಯಲ್ಲಿರುವ ನಾನಿಲ್ತಾರ್ ಪರಿಸರದ ಕುಲಾಲ್ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿಸಿಕೊಂಡರು.

ಬಳಗದ ಸಂಚಾಲ ಕೃಷ್ಣ ಮೂಲ್ಯ ಕಾರ್ಯಕ್ರಮದ ಪೂರ್ಣ ಮಾಹಿತಿಯನ್ನು ತಿಳಿಸಿದರು. ಕಾರ್ಯದರ್ಶಿ ದಿನೇಶ್ ಬಂಗೇರ ಖಾರ್ ದಾಂಡ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.ಸಭೆಯಲ್ಲಿ ಕೋಶಾಧಿಕಾರಿ ರೋಹಿದಾಸ್ ಬಂಜನ್, ಜೊತೆ ಕಾರ್ಯದರ್ಶಿ ಲೋಕೇಶ್ ಮೂಲ್ಯ, ಜೊತೆ ಕೋಶಾಧಿಕಾರಿ ವಿಶ್ವನಾಥ್ ಕುಂದರ್, ಮತ್ತಿತರ ಮಹಿಳಾ ಸದಸ್ಯರು ಉಪಸ್ಥರಿದ್ದರು.



Related posts

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ, ಡೊಂಬಿವಿಲಿ ಸಮಿತಿಯ ವಾರ್ಷಿಕೋತ್ಸವ, ಸ್ಮರಣ ಸಂಚಿಕೆ ಬಿಡುಗಡೆ,

Mumbai News Desk

ಶ್ರೀ ಮಹಾವಿಷ್ಣು ಮಂದಿರ , ಡೊಂಬಿವಲಿ , ವಾರ್ಷಿಕ ಭಜನಾ ಮಂಗಲೋತ್ಸವ ಹಾಗೂ ಏಕಾಹ ಭಜನೆ.

Mumbai News Desk

ಗೋರೆಗಾಂವ್ ಶ್ರೀ ಶಾಂತ ದುರ್ಗಾ ದೇವಿ ದೇವಸ್ಥಾನ, ಬ್ರಹ್ಮಕಲಶೋತ್ಸವ ವೈದಿಕ ವಿಧಿ ವಿಧಾನಗಳಿಗೆ ಚಾಲನೆ 

Mumbai News Desk

SSC ಪರೀಕ್ಷೆ ಯಲ್ಲಿ ನಿಶಾನ್ ಜಗದೀಶ್ ಶೆಟ್ಟಿ 96.20(97) ಶೇಕಡಾ ಅಂಕ

Mumbai News Desk

ಮುಂಬಯಿ: ಬಿಲ್ಲವರ ಅಸೋಸಿಯೇಷನ್ ವತಿಯಿಂದ ಸಾಹಿತ್ಯ, ಯಕ್ಷಗಾನ ಪ್ರಶಸ್ತಿ ಪ್ರದಾನ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಕಾರ್ತಿಕ್ ಅರವಿಂದ್ ಪದ್ಮಶಾಲಿ ಗೆ ಶೇ 96 ಅಂಕ.

Mumbai News Desk